logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today January 28: ಇಳಿಕೆ ಕಂಡ ಚಿನ್ನದ ದರ, ಬೆಳ್ಳಿ ಈಗಲೂ ಭಾರ: ಹೀಗಿದೆ ಶನಿವಾರದ ಆಭರಣ ವ್ಯಾಪಾರ..

Gold Price Today January 28: ಇಳಿಕೆ ಕಂಡ ಚಿನ್ನದ ದರ, ಬೆಳ್ಳಿ ಈಗಲೂ ಭಾರ: ಹೀಗಿದೆ ಶನಿವಾರದ ಆಭರಣ ವ್ಯಾಪಾರ..

HT Kannada Desk HT Kannada

Jan 28, 2023 06:07 AM IST

ಸಾಂದರ್ಭಿಕ ಚಿತ್ರ

    • ಇಂದು(ಜ.28-ಶನಿವಾರ) ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಲ್ಲಿ, ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಆದರೆ ಬೆಳ್ಳಿ ದರಗಳಲ್ಲಿ ಕೆಲವು ನಗರಗಳಲ್ಲಿ ತಟಸ್ಥ ಹಾಗೂ ಇನ್ನೂ ಕೆಲವು ನಗರಗಳಲ್ಲಿ ಇಳಿಕೆ ಕಂಡುಬಂದಿದೆ. ಇಂದಿನ ದರಪಟ್ಟಿಯ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ನವದೆಹಲಿ: ಇಂದು(ಜ.28-ಶನಿವಾರ) ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಲ್ಲಿ, ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಆದರೆ ಬೆಳ್ಳಿ ದರಗಳಲ್ಲಿ ಕೆಲವು ನಗರಗಳಲ್ಲಿ ತಟಸ್ಥ ಹಾಗೂ ಇನ್ನೂ ಕೆಲವು ನಗರಗಳಲ್ಲಿ ಇಳಿಕೆ ಕಂಡುಬಂದಿದೆ. ಇಂದಿನ ದರಪಟ್ಟಿಯ ಮಾಹಿತಿ ಇಲ್ಲಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಶನಿವಾರದ ಮಾರುಕಟ್ಟೆ ಪರಿಸ್ಥಿತಿಯನ್ನು ಅವಲೋಕಿಸಿದರೆ, ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ 5,727 ರೂ. ದಾಖಲಾಗಿದೆ. ನಿನ್ನೆ(ಜ.27-ಶುಕ್ರವಾರ) ಇದರ ಬೆಲೆ 5,793 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 66 ರೂ. ಇಳಿಕೆ ಕಂಡಿದೆ. ಅದರಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಚಿನ್ನದ ಬೆಲೆ 5,732 ರೂ. ನಿಗದಿಯಾಗಿದೆ. ನಿನ್ನೆ (ಜ.27-ಶುಕ್ರವಾರ) ಇದರ ಬೆಲೆ 5,798 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 66 ರೂ. ಇಳಿಕೆ ಕಂಡಿದೆ.

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆ 52,550 ರೂ. ಆಗಿದ್ದು, ನಿನ್ನೆ (ಜ.27-ಶುಕ್ರವಾರ) ಇದರ ಬೆಲೆ 53,150 ರೂ. ಆಗಿತ್ತು ಅಂದರೆ ಒಂದು ದಿನದಲ್ಲಿ 600 ರೂ. ಇಳಿಕೆ ಕಂಡಿದೆ. ಇನ್ನು 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 57,320 ರೂ. ಆಗಿದೆ. ನಿನ್ನೆ (ಜ.27-ಶುಕ್ರವಾರ) ಇದರ ಬೆಲೆ 57,980 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 660 ರೂ. ಇಳಿಕೆ ಕಂಡಿದೆ.

ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನದ ದರವನ್ನು ನೋಡುವುದಾದರೆ..(10 ಗ್ರಾಂ)

ನವದೆಹಲಿ: 52,650 ರೂ.(22 ಕ್ಯಾರಟ್‌) ಮತ್ತು 57,420 ರೂ. (24 ಕ್ಯಾರಟ್‌)

ಮುಂಬೈ: 52,500 ರೂ.(22 ಕ್ಯಾರಟ್‌) ಮತ್ತು 57,270 ರೂ. (24 ಕ್ಯಾರಟ್‌)

ಕೋಲ್ಕತ್ತಾ: 52,500 ರೂ.(22 ಕ್ಯಾರಟ್‌) ಮತ್ತು 57,270 ರೂ. (24 ಕ್ಯಾರಟ್‌)

ಚೆನ್ನೈ: 53,450 ರೂ.(22 ಕ್ಯಾರಟ್‌) ಮತ್ತು 58,310 ರೂ. (24 ಕ್ಯಾರಟ್‌)

ಹೈದರಾಬಾದ್:‌ 52,500 ರೂ.(22 ಕ್ಯಾರಟ್‌) ಮತ್ತು 57,270 ರೂ. (24 ಕ್ಯಾರಟ್‌)

ಇನ್ನು ಬೆಳ್ಳಿ ದರದತ್ತ ಗಮನಹರಿಸುವುದಾದರೆ, ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗ ರೂ. 72,600 ಆಗಿದೆ. ನಿನ್ನೆ (ಜ.27-ಶುಕ್ರವಾರ) ಒಂದು ಕೆಜಿ ಬೆಳ್ಳಿ ಬೆಲೆ 72,600 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ ಯಾವುದೇ ವ್ಯತ್ಯಾಸ ಕಂಡುಬದಂದಿಲ್ಲ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 74,600 ರೂ. ಆಗಿದ್ದು, ನಿನ್ನೆ (ಜ.27-ಶುಕ್ರವಾರ) ಒಂದು ಕೆಜಿ ಬೆಳ್ಳಿ ಬೆಲೆ 75,000 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 400 ರೂ. ಇಳಿಕೆ ಕಂಡುಬಂದಿದೆ.

ದೇಶದ ಮಹಾನಗರಗಳಲ್ಲಿ ಇಂದಿನ ಬೆಳ್ಳಿ ದರವನ್ನು ನೋಡುವುದಾದರೆ..

ನವದೆಹಲಿ: 72,600 ರೂ. (ಒಂದು ಕೆಜಿ)

ಮುಂಬೈ: 72,600 ರೂ. (ಒಂದು ಕೆಜಿ)

ಕೋಲ್ಕತ್ತಾ: 72,600 ರೂ. (ಒಂದು ಕೆಜಿ)

ಚೆನ್ನೈ: 74,600 ರೂ. (ಒಂದು ಕೆಜಿ)

ಹೈದರಾಬಾದ್:‌ 74,600 ರೂ. (ಒಂದು ಕೆಜಿ)

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ವ್ಯತ್ಯಾಸ ಮತ್ತು ದೇಶೀಯ ಬೇಡಿಕೆಗಳಿಗೆ ಅನುಗುಣವಾಗಿ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಚಿನ್ನದ ದರಕ್ಕೆ ಹೋಲಿಸಿದರೆ, ಬೆಳ್ಳಿ ದರಗಳಲ್ಲಿ ಕೆಲವು ನಗರಗಳಲ್ಲಿ ತಟಸ್ಥ ಮತ್ತು ಕೆಲವು ನಗರಗಳಲ್ಲಿ ಇಳಿಕೆ ಕಂಡುಬಂದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆ ಪರಿಸ್ಥಿತಿ, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ, ಚಿನ್ನ ಹಾಗೂ ಬೆಳ್ಳಿ ಮೇಲಿನ ದೈನಂದಿನ ಬೆಲೆಯನ್ನು ನಿರ್ಧಾರ ಮಾಡಲಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು