logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Hanuman Chalisa : ಶ್ರೀ ಹನುಮಾನ್‌ ಚಾಲೀಸಾ ಪಠಿಸುವಾಗ ಇವನ್ನು ಮರೆಯಬೇಡಿ

Hanuman Chalisa : ಶ್ರೀ ಹನುಮಾನ್‌ ಚಾಲೀಸಾ ಪಠಿಸುವಾಗ ಇವನ್ನು ಮರೆಯಬೇಡಿ

HT Kannada Desk HT Kannada

Jul 12, 2022 06:52 AM IST

google News

ಹನುಮಂತ

    • ಕಲಿಯುಗದ ಜಾಗೃತ ದೇವರಾದ ಭಗವಾನ್‌ ಹನುಮಂತನನ್ನು ಒಲಿಸಿಕೊಳ್ಳಲು ಹನುಮಾನ್ ಚಾಲೀಸಾ ಪಠಣವೇ ರಹದಾರಿ. ಆದರೆ, ಹನುಮಾನ್‌ ಚಾಲೀಸಾ ಪಠಿಸುವಾಗ ಕೆಲವು ವಿಚಾರಗಳನ್ನು ಮರೆಯಲೇಬಾರದು. ಅವುಗಳೇನು? ಇಲ್ಲಿದೆ ನೋಡಿ ವಿವರ. 
ಹನುಮಂತ
ಹನುಮಂತ (Livehindustan)

ಬದುಕಿನ ಕಷ್ಟ ಕಾರ್ಪಣ್ಯಗಳನ್ನು, ದುಃಖ ದುಮ್ಮಾನಗಳನ್ನು ದೂರ ಮಾಡುವುದಕ್ಕಾಗಿ ಅನೇಕರು ಶ್ರೀ ಹನುಮಾನ್ ಚಾಲೀಸಾವನ್ನು ನಿಯಿತವಾಗಿ ಓದುತ್ತಾರೆ. ಬಹುತೇಕರು ಹನುಮಾನ್ ಚಾಲೀಸಾವನ್ನು ಮಂಗಳವಾರ ಅಥವಾ ಶನಿವಾರ ಮಾತ್ರ ಓದುತ್ತಾರೆ. ಬಲ್ಲವರು ಕೂಡ ಶನಿ ದೆಸೆ ನಡೆಯುತ್ತಿರುವವರಿಗೆ ಇದನ್ನೇ ಹೇಳುತ್ತಾರೆ ಕೂಡ.

ಶ್ರೀ ಹನುಮಾನ್ ಚಾಲೀಸಾವನ್ನು ಓದುವುದಕ್ಕೆ ಒಂದು ಕ್ರಮ ಇದೆ. ಈ ಸರಿಯಾದ ಕ್ರಮ ಯಾವುದು ಎಂದು ಕೆಲವರಿಗಷ್ಟೇ ತಿಳಿದಿದೆ. ಅವರು ಉಳಿದವರನ್ನು ಜಾಗೃತಗೊಳಿಸುವ ಪ್ರಯತ್ನ ಮಾಡುತ್ತಾರೆ. ಸರಿಯಾದ ಕ್ರಮದಲ್ಲಿ ಶ್ರೀ ಹನುಮಾನ್‌ ಚಾಲೀಸಾ ಪಠಿಸುವುದರಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. ಅದು ಹೇಗೆ?

ಶ್ರೀ ಹನುಮಾನ್‌ ಚಾಲೀಸಾವನ್ನು ಪಠಿಸಲು ಆರಂಭಿಸುವುದಕ್ಕೆ ಮೊದಲು ಹನುಮಂತನನ್ನು ಮತ್ತು ಶ್ರೀರಾಮನನ್ನು ಆವಾಹನೆ ಮಾಡಿಕೊಳ್ಳಬೇಕು. ಈ ಶ್ರದ್ಧಾಭಕ್ತಿಯ ಕೆಲಸವನ್ನು ಅನೇಕರು ಮಾಡುವುದಿಲ್ಲ.

ಇನ್ನು ಬಹುತೇಕರು ಹನುಮಾನ್‌ ಚಾಲೀಸಾವನ್ನು ತಮಗೆ ತೋಚಿದ ಸಮಯದಲ್ಲಿ, ತಮಗೆ ಸಮಯ ಸಿಕ್ಕಾಗ ಪಠಿಸುತ್ತಾರೆ. ಇದು ಸರಿಯಲ್ಲ. ಶ್ರೀ ಹನುಮಾನ್‌ ಚಾಲೀಸಾ ಓದುವುದಕ್ಕೆಂದೇ ನಿಶ್ಚಿತ ಸಮಯವನ್ನು ನಿಗದಿ ಮಾಡಬೇಕು. ಅದೇ ಸಮಯಕ್ಕೆ ಶ್ರೀ ಹನುಮಾನ್‌ ಚಾಲೀಸಾ ಪಠಿಸುವುದನ್ನು ಶುರುಮಾಡಬೇಕು.

ಶ್ರೀ ಹನುಮಾನ್‌ ಚಾಲೀಸಾವನ್ನು ಎಲ್ಲೆಂದರೆ ಅಲ್ಲಿ ಕುಳಿತು ಪಠಿಸಬೇಡಿ. ಶುಚೀರ್ಭೂತರಾಗಿ ಮಡಿ ವಸ್ತ್ರ ತೊಟ್ಟು ಪವಿತ್ರ ಸ್ಥಳದಲ್ಲಿ ಅಂದರೆ ಮನೆಯ ಪೂಜಾ ಮಂದಿರದಲ್ಲಿ, ದೇವಸ್ಥಾನದಲ್ಲಿ ಪಠಿಸುವುದು ಕ್ಷೇಮಕರ.

ಕಷ್ಟ ಬಂದಾಗ ಮಾತ್ರವೇ ದೇವರನ್ನು ನೆನಪಾಗುತ್ತದೆ. ಮನುಷ್ಯ ಬದುಕಿನ ಸಹಜ ಪ್ರವೃತ್ತಿ ಇದು. ಆಗಲೇ ಶ್ರೀ ಹನುಮಾನ್‌ ಚಾಲೀಸಾವನ್ನು ಪಠಿಸುತ್ತಾರೆ. ಜೀವನ ಎಂದರೆ ಸುಖ ಮತ್ತು ದುಃಖಗಳ ಸಮ್ಮಿಳನ. ಆದ್ದರಿಂದ ಶ್ರೀ ಹನುಮಾನ್‌ ಚಾಲೀಸಾ ಪಠಿಸಲು ಕಷ್ಟವೇ ಇರಬೇಕು ಎಂದೇನೂ ಇಲ್ಲ.

ಹನುಮಾನ್ ಚಾಲೀಸಾದ ಜತೆಗೆ ದ್ವಿಪದಿಗಳಿವೆ. ಅವುಗಳನ್ನು ಅನೇಕರು ಪಠಿಸುತ್ತಾರೆಯೇ ಹೊರತು ಓದುವುದಿಲ್ಲ.

ಹನುಮಾನ್ ಚಾಲೀಸಾವನ್ನು ಪಠಿಸುವ ಮೊದಲು, ಹನುಮಂತನ ಚಿತ್ರ ಅಥವಾ ವಿಗ್ರಹವನ್ನು ಪವಿತ್ರ ಜಲದಿಂದ ಶುದ್ಧಿ ಮಾಡಬೇಕು. ಭಕ್ತಿ ಮತ್ತು ಅರ್ಪಣಾ ಭಾವದೊಂದಿಗೆ ಹಸಿದ ಹೊಟ್ಟೆಯಲ್ಲೇ ಹನುಮಾನ್‌ ಚಾಲೀಸಾ ಪಠಿಸಿ ಭಗವಂತನನ್ನು ಪೂಜಿಸಬೇಕು.

ನಿತ್ಯವೂ ಹನುಮಾನ್ ಚಾಲೀಸಾವನ್ನು 100 ಬಾರಿ ಪಠಿಸಬೇಕು. ನೂರು ಬಾರಿ ಪಠಿಸಲು ಸಾಧ್ಯವಾಗದೇ ಇದ್ದರೆ, 11 ಬಾರಿ ಪಠಿಸಿ. 11 ಬಾರಿ ಪಠಿಸಲು ಸಾಧ್ಯವಾಗದಿದ್ದರೆ 9 ಬಾರಿ ಪಠಿಸಿ. ನಿಮಗೆ 9 ಬಾರಿ ಕಷ್ಟವೆನಿಸಿದರೆ7 ಬಾರಿ ಪಠಿಸಿ. ಅದೂ ಸಾಧ್ಯವಾಗದಿದ್ದರೆ 5 ಬಾರಿ, ಇದೂ ಕಷ್ಟ ಎಂದೆನಿಸಿದರೆ 3 ಬಾರಿ ಪಠಿಸಿ. ಅಯ್ಯೋ 3 ಸಲನಾ ಎನ್ನುವ ಮನೋಭಾವ ಇದ್ದರೆ, ನಿತ್ಯ ಒಮ್ಮೆಯಾದರೂ ಚಾಲೀಸಾವನ್ನು ಪಠಿಸಿ. ಈ ರೀತಿ ಪಠಿಸುವಾಗ ಕನಿಷ್ಠ 40 ದಿನಗಳವರೆಗಾದರೂ ನಿತ್ಯ ನಿರಂತರ ಶ್ರೀ ಹನುಮಾನ್‌ ಚಾಲೀಸಾ ಪಠಿಸಬೇಕು.

ಹನುಮಾನ್ ಚಾಲೀಸಾವನ್ನು ಗಟ್ಟಿಯಾದ ಹಲವರು ಧ್ವನಿಯಲ್ಲಿ ನಿಖರವಾದ ಉಚ್ಚಾರಣೆಯೊಂದಿಗೆ ಪಠಿಸುತ್ತಾರೆ. ಇನ್ನು ಕೆಲವರು ತುಂಬಾ ಕಡಿಮೆ ಧ್ವನಿಯಲ್ಲಿ ಪಠಿಸುತ್ತಾರೆ. ಪ್ರತಿಯೊಬ್ಬರೂ ಈ ತಪ್ಪನ್ನು ಮಾಡುತ್ತಾರೆ. ಆದರೆ, ಯಾವಾಗಲೂ ಹನುಮಾನ್‌ ಚಾಲೀಸಾವನ್ನು ಮಧ್ಯಮ ಸ್ವರದಲ್ಲಿ ಪಠಿಸುವುದು ವಾಡಿಕೆ.

ಹನುಮಾನ್ ಚಾಲೀಸಾದ ಪಠಿಸುವ ವೇಳೆ, ಪುರುಷರು ಅನೇಕರು ಬ್ರಹ್ಮಚರ್ಯೆ, ಶುದ್ಧತೆ, ಶುಚಿತ್ವದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಮಹಿಳೆಯರು ಹನುಮಾನ್ ಚಾಲೀಸಾವನ್ನು ಪಠಿಸುತ್ತಿದ್ದರೆ, ಅವರು ಹನುಮಂತನ ವಿಗ್ರಹ ಅಥವಾ ಚಿತ್ರವನ್ನುಮುಟ್ಟದಂತೆ ವಿಶೇಷ ಕಾಳಜಿ ತೋರಬೇಕು.

ಅಲ್ಲಿ 'ತುಳಸಿದಾಸ್ ಸದಾ ಹರಿ ಚೇರಾ ಕಿಜೈ ನಾಥ ಹೃದಯ ಮಹಾ ಡೇರಾ' ಎಂದು ಬರೆಯಲಾಗಿದೆ. ಇಲ್ಲಿ ತುಳಸಿದಾಸರ ಹೆಸರಿಗೆ ಬದಲಿಗೆ ನಿಮ್ಮ ಹೆಸರನ್ನು ಉಚ್ಚರಿಸಬೇಕು. ಅನೇಕ ಜನರು ಈ ತಪ್ಪನ್ನು ಮಾಡುತ್ತಾರೆ/ ಅದಕ್ಕಾಗಿಯೇ ಅವರಿಗೆ ಪಠಣೆಯ ಫಲ ಪ್ರಾಪ್ತಿಯಾಗುವುದಿಲ್ಲ.

ಹನುಮಾನ್ ಚಾಲೀಸಾವನ್ನು ಪಠಿಸುವ ಮೊದಲು ಕೆಂಪು ನೂಲಿನ ಬತ್ತಿ ಇಟ್ಟು ದೀಪವನ್ನು ಬೆಳಗಿಸಬೇಕು. ದೀಪಕ್ಕೆ ಪರಿಶುದ್ಧ ದೀಪದ ಎಣ್ಣೆ ಅಥವಾ ಶುದ್ಧ ತುಪ್ಪ ಬಳಸಬೇಕು. ಮಡಿ ಬಟ್ಟೆ ತೊಟ್ಟು, ಮರದ ಮಣೆ (ಪೀಠ)ಯ ಮೇಲೆ ಕೆಂಪು ಬಟ್ಟೆ ಹಾಸಿ ಕುಳಿತು ಹನುಮಾನ್‌ ಚಾಲೀಸಾ ಪಠಿಸುವುದು ಸಂಪ್ರದಾಯ ಎನ್ನುತ್ತಾರೆ ಬಲ್ಲವರು.

ಶ್ರೀ ಹನುಮಾನ್‌ ಚಾಲೀಸಾ ಪಠಣೆಯ ಕುರಿತು ಸಂದೇಹಗಳಿದ್ದರೆ ತಮಗೆ ಪರಿಚಿತರಾದ ಪ್ರಾಜ್ಞರು, ಪುರೋಹಿತರ ಬಳಿ ಅವುಗಳನ್ನು ನಿವಾರಿಸಿಕೊಳ್ಳುವುದು ಯಾವುದಕ್ಕೂ ಕ್ಷೇಮಕರ. ಇಲ್ಲಿರುವಂಥದ್ದು ಪ್ರಾಥಮಿಕ ಮಾಹಿತಿಯಷ್ಟೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ