Happy Onam Wishes in Kannada: ಓಣಂ ಹಬ್ಬಕ್ಕೆ ನಿಮ್ಮವರಿಗೆ ವಿಶ್ ಮಾಡಲು ಇಲ್ಲಿವೆ ಶುಭ ಸಂದೇಶ
Sep 08, 2022 11:17 AM IST
ಓಣಂ ಶುಭಾಶಯ
- “ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು. ವಿಶೇಷವಾಗಿ ಕೇರಳದ ಜನರು ಮತ್ತು ಪ್ರಪಂಚದಾದ್ಯಂತ ನೆಲೆಯೂರಿರುವ ಮಲಯಾಳಿ ಸಮುದಾಯಕ್ಕೆ ಹಬ್ಬದ ಶುಭಾಶಯ. ಈ ಹಬ್ಬವು ಪ್ರಕೃತಿ ಮಾತೆಯ ಪ್ರಮುಖ ಪಾತ್ರವನ್ನು ಮತ್ತು ನಮ್ಮ ಶ್ರಮಜೀವಿಗಳ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಓಣಂ ನಮ್ಮ ಸಮಾಜದಲ್ಲಿ ಸಾಮರಸ್ಯದ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಲಿ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಓಣಂ ಹಬ್ಬವು ಮಲಯಾಳಿ ತಿಂಗಳ ಚಿಂಗಮ್‌ನಲ್ಲಿ ಬರುತ್ತದೆ. ಅಂದರೆ ಆಗಸ್ಟ್ ಹಾಗೂ ಸೆಪ್ಟಂಬರ್ ನಡುವೆ ಬರುವ ತಿಂಗಳೂ. ಇದು ಕೇರಳ ಸೇರಿದಂತೆ ವಿಶ್ವವ್ಯಾಪಿ ನೆಲೆಯೂರಿರುವ ಮಲಯಾಳಿಗರ ಪ್ರಮುಖ ಹಬ್ಬ. ಪೌರಾಣಿಕ ಹಿನ್ನೆಲೆಯುಳ್ಳ ಓಣಂ ಹಬ್ಬದಂದು ರಾಜ ಮಹಾಬಲಿಯ ಮನೆಗೆ ಬರುತ್ತಾನೆ ಎಂಬ ಪ್ರತೀತಿ ಇದೆ. ಇದೇ ಹಿನ್ನೆಲೆಯಲ್ಲಿ ಕೇರಳಿಗರು ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ.
ಓಣಂ ಹಬ್ಬವನ್ನು ನಾಲ್ಕು ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ, ಓಣಂ ಅನ್ನು ಸೆಪ್ಟೆಂಬರ್ 8ರಂದು ಆಚರಿಸಲಾಗುತ್ತದೆ. ಬೆಳೆದ ಬೆಳೆಗಳ ಸುಗ್ಗಿ ಕಾಲದಂದು ಈ ಹಬ್ಬವನ್ನು ಆಚರಿಸುವ ಪ್ರತೀತಿ ಇದೆ. ಓಣಂ ಹಬ್ಬದಂದು ವಿವಿಧ ಹೂಗಳಿಂದ ರಚಿಸುವ ಪೂಕಳಂ ಎಲ್ಲರಿಗೂ ನೆನಪಿಗೆ ಬರುತ್ತದೆ. ಓಣಂ ಅಂದರೆ, ಪೂಕಳಂ ರಚಿಸುವುದು ಸಾಮಾನ್ಯ. ಆಧುನಿಕ ಶೈಲಿಯನ್ನು ನೆಚ್ಚುವ ಜನ ಕೂಡಾ ಪೊಕಳಂನಲ್ಲಿ ಭಾಗಿಯಾಗುತ್ತಾರೆ.
ಈ ವಿಶೇಷ ಹಬ್ಬದಂದು ನಾಡಿನ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು. ವಿಶೇಷವಾಗಿ ಕೇರಳದ ಜನರು ಮತ್ತು ಪ್ರಪಂಚದಾದ್ಯಂತ ನೆಲೆಯೂರಿರುವ ಮಲಯಾಳಿ ಸಮುದಾಯಕ್ಕೆ ಹಬ್ಬದ ಶುಭಾಶಯ. ಈ ಹಬ್ಬವು ಪ್ರಕೃತಿ ಮಾತೆಯ ಪ್ರಮುಖ ಪಾತ್ರವನ್ನು ಮತ್ತು ನಮ್ಮ ಶ್ರಮಜೀವಿಗಳ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಓಣಂ ನಮ್ಮ ಸಮಾಜದಲ್ಲಿ ಸಾಮರಸ್ಯದ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಲಿ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಓಣಂ ಹಬ್ಬದಂದು ನೀವೂ ಕೂಡಾ ನಿಮ್ಮ ಆಪ್ತರು ಹಾಗೂ ನಿಮ್ಮವರಿಗೆ ಶುಭಾಶಯಗಳನ್ನು ತಿಳಿಸಿ. ನಿಮಗಾಗಿ ಕಲವು
ಓಣಂನ ಹಬ್ಬದ ಶುಭ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ಒಗ್ಗಟ್ಟಿನ ಹಬ್ಬ, ಆಚರಣೆ ಮತ್ತು ಸಂಭ್ರಮದ ಹಬ್ಬ ಓಣಂ. ಪ್ರತಿಯೊಬ್ಬರಿಗೂ ವಿಶೇಷ ಹಬ್ಬದ ಶುಭಾಶಯಗಳು.
ಓಣಂನ ಉತ್ಸಾಹವನ್ನು ನಿಮ್ಮ ಹೃದಯದಲ್ಲಿ ಇರಿಸಿ. ನಿಮ್ಮ ಮನೆ ಸಂತೋಷ, ಪ್ರೀತಿ ಮತ್ತು ಶಾಂತಿಯಿಂದ ತುಂಬಿರಲಿ. ಓಣಂ ಶುಭಾಶಯಗಳು.
ಓಣಂ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ತುಂಬಲಿ. ಅತ್ಯಂತ ಸಂಭ್ರಮದ ಹಾಗೂ ಅರ್ಥಪೂರ್ಣ ಓಣಂ ಆಚರಿಸಿ. ಹಬ್ಬದ ಶುಭಾಶಯಗಳು.
ಓಣಂನ ಬಣ್ಣಗಳು ಮತ್ತು ಹೊಳಪು ನಿಮ್ಮ ಮನೆ ಮತ್ತು ಜೀವನವನ್ನು ಹೊಸ ಶಕ್ತಿ ಮತ್ತು ಶಾಶ್ವತ ಸಂತೋಷದಿಂದ ತುಂಬಲಿ. ಓಣಂ ಹಬ್ಬದ ಶುಭಾಶಯಗಳು.
ಭಗವಂತ ಮಹಾಬಲಿ ನಿಮ್ಮನ್ನು ಆಶೀರ್ವದಿಸಲಿ ಮತ್ತು ನಿಮ್ಮ ಜೀವನದಲ್ಲಿ ಯಶಸ್ಸಿಗೆ ಮಾರ್ಗದರ್ಶನ ನೀಡಲಿ. ಓಣಂ ಶುಭಕಾಮನೆಗಳು.
ಓಣಂನ ಉತ್ಸಾಹವು ವರ್ಷವಿಡೀ ನಿಮ್ಮ ಹೃದಯ ಮತ್ತು ಮನೆಯಲ್ಲಿ ಉಳಿಯಲಿ. ಸಂತೋಷ ಮತ್ತು ಆಶೀರ್ವಾದದ ಓಣಂ ಆಚರಿಸಿ. ಎಲ್ಲರಿಗೂ ಒಳಿತಾಗಲಿ!
ಈ ಹಬ್ಬದ ಸಂದರ್ಭದಲ್ಲಿ ನಿಮ್ಮಿಂದ ಮತ್ತು ಹಬ್ಬದಿಂದ ದೂರವಿದ್ದೇನೆ. ಆದರೂ ನನ್ನ ಮನಸ್ಸು ನಿಮ್ಮೊಂದಿಗಿದೆ. ಹಬ್ಬದ ಶುಭಾಶಯಗಳು. ಸುರಕ್ಷಿತವಾಗಿರಿ!
ಈ ಹಬ್ಬದ ಸಂದರ್ಭದಲ್ಲಿ, ಓಣಂನ ಉತ್ಸಾಹವು ನಿಮ್ಮ ಮನೆ ಮತ್ತು ಹೃದಯವನ್ನು ಬಹಳಷ್ಟು ಪ್ರೀತಿ ಮತ್ತು ತೃಪ್ತಿಯಿಂದ ತುಂಬುತ್ತದೆ ಎಂದು ನಾನು ಭಾವಿಸುತ್ತೇನೆ. ಓಣಂ ಶುಭಾಶಯಗಳು!
ವಿಭಾಗ