LIC ADO Mains admit card 2023: ಐಬಿಪಿಎಸ್ ಎಲ್‌ಐಸಿ ಎಡಿಒ ಮುಖ್ಯಪರೀಕ್ಷೆಯ ಅಡ್ಮಿಟ್ ಕಾರ್ಡ್ ಬಿಡುಗಡೆ, ಡೌನ್‌ಲೋಡ್ ಮಾಡಿ
Apr 17, 2023 04:55 PM IST
LIC ADO Mains admit card 2023: ಐಬಿಪಿಎಸ್ ಎಲ್‌ಐಸಿ ಎಡಿಒ ಮುಖ್ಯಪರೀಕ್ಷೆಯ ಅಡ್ಮಿಟ್ ಕಾರ್ಡ್ ಬಿಡುಗಡೆ
- ಭಾರತೀಯ ಜೀವ ವಿಮಾ ನಿಗಮ (Life Insurance Corporation of India)ವು ಐಬಿಪಿಎಸ್ ಎಲ್‌ಐಸಿ ಎಡಿಒ ಮೇನ್ಸ್ ಎಕ್ಸಾಂ (IBPS LIC ADO Mains Exam )ನ ಅಡ್ಮಿಟ್ ಕಾರ್ಡ್ ಅನ್ನು ಸೋಮವಾರ ಬಿಡುಗಡೆ ಮಾಡಿದೆ.
ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮ (Life Insurance Corporation of India)ವು ಐಬಿಪಿಎಸ್ ಎಲ್‌ಐಸಿ ಎಡಿಒ ಮೇನ್ಸ್ ಎಕ್ಸಾಂ (IBPS LIC ADO Mains Exam ) ನ ಅಡ್ಮಿಟ್ ಕಾರ್ಡ್ ಅನ್ನು ಸೋಮವಾರ ಬಿಡುಗಡೆ ಮಾಡಿದೆ. ಎಲ್‌ಐಸಿ ಎಡಿಒ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಎಲ್‌ಐಸಿಯ ಈ ಮುಖ್ಯ ಪರೀಕ್ಷೆಯ ಕರೆಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಡ್ಮಿಟ್ ಕಾರ್ಡ್ ಪತ್ರವನ್ನು ibpsonline.ibps.in ಮತ್ತು www.licindia.in ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಐಬಿಪಿಎಸ್ ಎಲ್‌ಐಸಿ ಎಡಿಒ ಮೇನ್ಸ್ ಅಡ್ಮಿಟ್ ಕಾರ್ಡ್‌ನಲ್ಲಿ ಹಲವು ವಿವರಗಳು ಇರುತ್ತವೆ. ಪರೀಕ್ಷೆ ನಡೆಯುವ ಸಮಯ, ಪರೀಕ್ಷೆಗೆ ಹಾಜರಾಗಬೇಕಾದ ಸಮಯ, ಅಭ್ಯರ್ಥಿಗಳ ದಾಖಲಾತಿ ಸಂಖ್ಯೆ ಸೇರಿದಂತೆ ಹಲವು ವಿವರಗಳು ಇರುತ್ತವೆ. ಐಬಿಪಿಎಸ್ ಎಲ್‌ಐಸಿ ಎಡಿಒ ಹಂತ 2 ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್ 23ನೇ ಏಪ್ರಿಲ್ 2023 ರವರೆಗೆ ಸಕ್ರಿಯವಾಗಿರುತ್ತದೆ.
ಎಲ್‌ಐಸಿ ಮೇನ್ಸ್ ಫೇಸ್ 2 ಪರೀಕ್ಷೆಯನ್ನು ಹೊರಗಿನ ಅಭ್ಯರ್ಥಿಗಳು ಮತ್ತು ಎಲ್‌ಐಸಿ ಅಭ್ಯರ್ಥಿಗಳು ತೆಗೆದುಕೊಳ್ಳಬಹುದು. ಹೊರಗಿನ ಅಭ್ಯರ್ಥಿಗಳನ್ನು ಫೇಸ್ 1 ಪರೀಕ್ಷೆಯ ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಎಲ್‌ಐಸಿ ಉದ್ಯೋಗಿಗಳು ನೇರವಾಗಿ ಈ ಪರೀಕ್ಷೆ ಬರೆಯುತ್ತಾರೆ.
ಎಲ್‌ಐಸಿ ಎಡಿಒ ಮುಖ್ಯಪರೀಕ್ಷೆಯ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
- ಹಂತ-೧: ಮೊದಲನೆಯದಾಗಿ ಅಭ್ಯರ್ಥಿಗಳು ಎಲ್‌ಐಸಿ ಅಥವಾ ಐಬಿಪಿಎಸ್ ವೆಬ್‌ಸೈಟ್‌ಗೆ ಹೋಗಬೇಕು. ibpsonline.ibps.in ಮತ್ತು www.licindia.inಗೆ ಭೇಟಿ ನೀಡಿ.
- ಹಂತ- ೨: ಅಲ್ಲಿ ಕರಿಯರ್ ವಿಭಾಗವನ್ನು ಕ್ಲಿಕ್ ಮಾಡಿ.
- ಹಂತ-೩: ಅಲ್ಲಿ LIC ADO Mains Call Letter Download link ಅನ್ನು ಕ್ಲಿಕ್ ಮಾಡಿ.
- ಹಂತ-೪: ರಿಜಿಸ್ಟ್ರೇಷನ್ ಸಮಖ್ಯೆ/ರೋಲ್ ನಂಬರ್ ಮತ್ತು ಜನ್ಮದಿನಾಂಕ/ಪಾಸ್ವರ್ಡ್ ನೀಡಿ.
- ಹಂತ ೫: ಅಲ್ಲಿರುವ Captcha ನಮೂದಿಸಿ ಲಾಗಿನ್ ಬಟನ್ ಕ್ಲಿಕ್ ಮಾಡಿ.
- ಹಂತ ೬: ಪರದೆಯಲ್ಲಿ ಅಡ್ಮಿಟ್ ಕಾರ್ಡ್ ಕಾಣಿಸುತ್ತದೆ. ಡಿಜಿಟಲ್ ಕಾಪಿ ಡೌನ್‌ಲೋಡ್ ಮಾಡಿಕೊಳ್ಳಿ, ಪ್ರಿಂಟೌಟ್ ತೆಗೆದುಕೊಳ್ಳಿ.
ಎಸ್‌ಎಸ್‌ಸಿ ಸಿಜಿಎಲ್ ಅಧಿಸೂಚನೆ ಪ್ರಕಟ
ಸಿಬ್ಬಂದಿ ನೇಮಕಾತಿ ಆಯೋಗವು ಎಸ್‌ಎಸ್‌ಸಿ ಸಿಜಿಎಲ್ ಎಕ್ಸಾಂ 2023 ಅಧಿಸೂಚನೆ (SSC CGL Exam 2023 notification) ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಇಂದಿನಿಂದ ಅರ್ಜಿ ಸಲ್ಲಿಸಬಹುದು. ssc.nic.in ಅರ್ಜಿ ಸಲ್ಲಿಸಲು ಮೇ 4 ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅರ್ಜಿಯಲ್ಲಿ ಏನಾದರೂ ಬದಲಾವಣೆ ಮಾಡಬೇಕಿದ್ದರೆ ಮೇ 7ರಿಂದ 8ರವರೆಗೆ ಅವಕಾಶ ನೀಡಲಾಗಿದೆ. ಈ ನೇಮಕಾತಿ ಡ್ರೈವ್ ಮೂಲಕ ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 7,500 ಹುದ್ದೆಗಳನ್ನು ಭರ್ತಿ ಮಾಡುವ ನಿರೀಕ್ಷೆಯಿದೆ.