SSC CGL 2023: ಸಿಬ್ಬಂದಿ ನೇಮಕಾತಿ ಆಯೋಗದಿಂದ ಎಸ್‌ಎಸ್‌ಸಿ ಸಿಜಿಎಲ್ ಅಧಿಸೂಚನೆ ಪ್ರಕಟ, ಸುಮಾರು 7,500 ಹುದ್ದೆಗಳ ನೇಮಕ, ಅರ್ಜಿ ಸಲ್ಲಿಸಿ
ಸಿಬ್ಬಂದಿ ನೇಮಕಾತಿ ಆಯೋಗವು ಎಸ್‌ಎಸ್‌ಸಿ ಸಿಜಿಎಲ್ ಎಕ್ಸಾಂ 2023 ಅಧಿಸೂಚನೆ (SSC CGL Exam 2023 notification) ಪ್ರಕಟಿಸಿದೆ.
ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗವು ಎಸ್‌ಎಸ್‌ಸಿ ಸಿಜಿಎಲ್ ಎಕ್ಸಾಂ 2023 ಅಧಿಸೂಚನೆ (SSC CGL Exam 2023 notification) ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಇಂದಿನಿಂದ ಅರ್ಜಿ ಸಲ್ಲಿಸಬಹುದು. ssc.nic.in ಅರ್ಜಿ ಸಲ್ಲಿಸಲು ಮೇ 4 ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅರ್ಜಿಯಲ್ಲಿ ಏನಾದರೂ ಬದಲಾವಣೆ ಮಾಡಬೇಕಿದ್ದರೆ ಮೇ 7ರಿಂದ 8ರವರೆಗೆ ಅವಕಾಶ ನೀಡಲಾಗಿದೆ. ಈ ನೇಮಕಾತಿ ಡ್ರೈವ್ ಮೂಲಕ ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 7,500 ಹುದ್ದೆಗಳನ್ನು ಭರ್ತಿ ಮಾಡುವ ನಿರೀಕ್ಷೆಯಿದೆ.
ಪ್ರಮುಖ ದಿನಾಂಕಗಳು
- ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ದಿನಾಂಕಗಳು ಆನ್‌ಲೈನ್ ಅರ್ಜಿಗಳ ಸ್ವೀಕೃತಿಯ ಕೊನೆಯ ದಿನಾಂಕ ಮತ್ತು ಸಮಯ: 03-05-2023 (23:00) 03-04-2023 ರಿಂದ 03-05-2023
- ಆನ್‌ಲೈನ್ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಮತ್ತು ಸಮಯ ಕೊನೆಯ ದಿನಾಂಕ ಮತ್ತು ಸಮಯ ಆಫ್‌ಲೈನ್ ಚಲನ್ ಸೃಜಿಸಿಕೊಳ್ಳುವಿಕೆ: 04-05-2023 (23:00) 04-05-2023 (23:00)
- ಚಲನ್ ಮೂಲಕ ಪಾವತಿಸಲು ಕೊನೆಯ ದಿನಾಂಕ (ಬ್ಯಾಂಕ್‌ನ ಕೆಲಸದ ಸಮಯದಲ್ಲಿ) 05-05-2023
- ಅರ್ಜಿ ನಮೂನೆ ತಿದ್ದುಪಡಿಗಾಗಿ ವಿಂಡೋ (ಆನ್‌ಲೈನ್ ಪಾವತಿ ಸೇರಿದಂತೆ) 07-05-2023 ರಿಂದ 08-05-2023 (23:00)
- ಶ್ರೇಣಿ-I (ಕಂಪ್ಯೂಟರ್ ಆಧಾರಿತ ಪರೀಕ್ಷೆ) ಜುಲೈ, 2023
- ಶ್ರೇಣಿ-II (ಕಂಪ್ಯೂಟರ್ ಆಧಾರಿತ ಪರೀಕ್ಷೆ)
- ತಾತ್ಕಾಲಿಕ ವೇಳಾಪಟ್ಟಿ (ಕಂಪ್ಯೂಟರ್ ಆಧಾರಿತ ಪರೀಕ್ಷೆ) ನಂತರ ತಿಳಿಸಲಾಗುವುದು
ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು
ರಾಜ್ಯದ ವಿವಿಧೆಡೆ ಪರೀಕ್ಷಾ ಕೇಂದ್ರಗಳು ಇರಲಿವೆ. ಬೆಳಗಾವಿ (9002), ಬೆಂಗಳೂರು (9001), ಹುಬ್ಬಳ್ಳಿ (9011), ಕಲಬುರಗಿ (ಗುಲ್ಬರ್ಗ) (9005), ಮಂಗಳೂರು (9008), ಮೈಸೂರು (9009), ಶಿವಮೊಗ್ಗ (9010), ಉಡುಪಿ (9012)ಯಲ್ಲಿ ಪರೀಕ್ಷೆ ನಡೆಯಲಿದೆ. ಬ್ರಾಕೆಟ್‌ನಲ್ಲಿರುವುದು ಪರೀಕ್ಷಾ ಕೇಂದ್ರಕ್ಕೆ ನೀಡಲಾದ ಸಂಖ್ಯೆ.
ವಿದ್ಯಾರ್ಹತೆ ಏನು?
ಎಸ್‌ಎಸ್‌ಸಿ ಸಿಜಿಎಲ್ ಎಕ್ಸಾಂ 2023 ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವವರು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಅಂಗೀಕೃತ ವಿವಿಯಿಂದ ಪಡೆದ ಪದವಿಗೆ ಮಾತ್ರ ಮಾನ್ಯತೆ ಇರುತ್ತದೆ.
ಅರ್ಜಿ ಶುಲ್ಕ
100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ, ವಿಶೇಷ ಚೇತನ ಮತ್ತು ಮಾಜಿ ಸೈನಿಕರು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.
ಅರ್ಜಿ ಸಲ್ಲಿಕೆ ಹೇಗೆ?
- ಮೊದಲಿಗೆ ssc.nic.in ವೆಬ್‌ಸೈಟ್‌ಗೆ ಹೋಗಿ
- ಹೆಸರು ನೋಂದಾಯಿಸಿ ಆನ್‌ಲೈನ್ ಅರ್ಜಿ ನಮೂನೆ ಭರ್ತಿ ಮಾಡಿ
- ಅವಶ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕ ಪಾವತಿಸಿ
- ಅರ್ಜಿ ಸಲ್ಲಿಸಿ. ಭವಿಷ್ಯದ ರೆಫರೆನ್ಸ್‌ಗಾಗಿ ಪ್ರಿಂಟೌಟ್ ತೆಗೆದುಕೊಳ್ಳಿ
ಕಂಪ್ಯೂಟರ್ ಆಧರಿತ ಎರಡು ಹಂತದ ನೇಮಕಾತಿ ಪರೀಕ್ಷೆ ನಡೆಯಲಿದೆ. ಕೇಂದ್ರ ಸರಕಾರದ ವಿವಿಧ ಇಲಾಖೆಯಲ್ಲಿರುವ ಹುದ್ದೆಗಳನ್ನು ಪಡೆಯಲು ಈ ನೇಮಕಾತಿ ಪರೀಕ್ಷೆ ನಡೆಯಲಿದೆ.
ಈ ಕೆಳಗೆ ಅಧಿಸೂಚನೆ ನೀಡಲಾಗಿದ್ದು, ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಿ.