logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ducati Panigale V4 R: ರಸ್ತೆಗಿಳಿದ ಡುಕಾಟಿ ಪಾನಿಗಲ್‌ ವಿ4 ಆರ್‌ ಬೈಕ್‌, ದರ 69.99 ಲಕ್ಷ ರೂಪಾಯಿ, ಬುಕ್ಕಿಂಗ್‌ ಆರಂಭ, ಇಲ್ಲಿದೆ ವಿವರ

Ducati Panigale V4 R: ರಸ್ತೆಗಿಳಿದ ಡುಕಾಟಿ ಪಾನಿಗಲ್‌ ವಿ4 ಆರ್‌ ಬೈಕ್‌, ದರ 69.99 ಲಕ್ಷ ರೂಪಾಯಿ, ಬುಕ್ಕಿಂಗ್‌ ಆರಂಭ, ಇಲ್ಲಿದೆ ವಿವರ

Praveen Chandra B HT Kannada

Jan 09, 2024 08:07 PM IST

google News

Ducati Panigale V4 R: ರಸ್ತೆಗಿಳಿದ ಡುಕಾಟಿ ಪಾನಿಗಲ್‌ ವಿ4 ಆರ್‌ ಬೈಕ್‌, ದರ 69.99 ಲಕ್ಷ ರೂಪಾಯಿ

    • Ducati Panigale V4 R: ಡುಕಾಟಿ ಇಂಡಿಯಾವು ಪಾನಿಗಲ್‌ ವಿ4 ಆರ್‌ ಬೈಕನ್ನು ಭಾರತದ ರಸ್ತೆಗೆ ಪರಿಚಯಿಸಿದೆ. ಇದರ ಆರಂಭಿಕ ದರ 69.90 ಲಕ್ಷ ರೂಪಾಯಿ. 
Ducati Panigale V4 R: ರಸ್ತೆಗಿಳಿದ ಡುಕಾಟಿ ಪಾನಿಗಲ್‌ ವಿ4 ಆರ್‌ ಬೈಕ್‌, ದರ 69.99 ಲಕ್ಷ ರೂಪಾಯಿ
Ducati Panigale V4 R: ರಸ್ತೆಗಿಳಿದ ಡುಕಾಟಿ ಪಾನಿಗಲ್‌ ವಿ4 ಆರ್‌ ಬೈಕ್‌, ದರ 69.99 ಲಕ್ಷ ರೂಪಾಯಿ

ಡುಕಾಟಿ ಇಂಡಿಯಾವು ಪಾನಿಗಲ್‌ ವಿ4 ಆರ್‌ ಬೈಕನ್ನು ಭಾರತದ ರಸ್ತೆಗೆ ಪರಿಚಯಿಸಿದೆ. ಇದರ ಆರಂಭಿಕ ದರ 69.90 ಲಕ್ಷ ರೂಪಾಯಿ. ಇದು ಎಕ್ಸ್‌ ಶೋರೂಂ ದರ. ಭಾರತದ ಎಲ್ಲಾ ಡುಕಾಟಿ ಡೀಲರ್‌ಶಿಪ್‌ಗಳಲ್ಲಿ ನೂತನ ಬೈಕ್‌ ಬುಕ್ಕಿಂಗ್‌ ಆರಂಭವಾಗಿದ್ದು, ಆಸಕ್ತರು ಬುಕ್ಕಿಂಗ್‌ ಮಾಡಿಕೊಳ್ಳಬಹುದು. ಈಗಾಗಲೇ ಮೊದಲ ಐದು ಬೈಕ್‌ಗಳು ಭಾರತಕ್ಕೆ ಆಗಮಿಸಿವೆ. ವಿಶೇಷವೆಂದರೆ, ಈಗಾಗಲೇ ಈ ಐದು ಬೈಕ್‌ಗಳನ್ನು ಕಂಪನಿ ಮಾರಾಟ ಮಾಡಿದೆ. ಕಂಪನಿಯು ಈ ವರ್ಷ ಹಲವು ಬೈಕ್‌ಗಳನ್ನು ಲಾಂಚ್‌ ಮಾಡಲು ಉದ್ದೇಶಿಸಿದ್ದು, ಅವುಗಳಲ್ಲಿ ಈಗ ಲಾಂಚ್‌ ಆದ ಡುಕಾಟಿ ಪಾನಿಗಲ್‌ ವಿ4 ಆರ್‌ ಕೂಡ ಒಂದಾಗಿದೆ.

Panigale V4 R ಎಂಜಿನ್‌ ಹೇಗಿದೆ ಎಂದು ಮೊದಲು ನೋಡೋಣ. ಇದು 998 ಸಿಸಿಯ ಡೆಸ್ಮೊಸೆಡಿಸಿ ಸ್ಟ್ರಾಡಲ್‌ ಆರ್‌ ಎಂಜಿನ್‌ ಹೊಂದಿದೆ. ಇದು ಆರು ಗಿಯರ್‌ ಬಾಕ್ಸ್‌ ಹೊಂದಿದೆ. ಎಂಜಿನ್‌ 16,500 ಆರ್‌ಪಿಎಂ ಬಿಡುಗಡೆ ಮಾಡುತ್ತದೆ. ರೆಡ್‌ಲೈನ್‌ ಅನ್ನು ಇಷ್ಟು ಆರ್‌ಪಿಎಂಗೆ ನಿರ್ಬಂಧ ಮಾಡಲಾಗಿದೆ. ಈ ಎಂಜಿನ್‌ 15,500 ಆವರ್ತನಕ್ಕೆ 215 ಬಿಎಚ್‌ಪಿ ಮತ್ತು 12,000 ಆವರ್ತನಕ್ಕೆ 111.3 ಎನ್‌ಎಂ ಟಾರ್ಕ್‌ ಬಿಡುಗಡೆ ಮಾಡುತ್ತಿದೆ. ಬೈ ಡೈರೆಕ್ಷನಲ್‌ ಕ್ವಿಕ್‌ ಶಿಪ್ಟರ್‌ನ ಆರು ಸ್ಪೀಡ್‌ ಗಿಯರ್‌ ಬಾಕ್ಸ್‌ ಈ ಬೈಕ್‌ನಲ್ಲಿದೆ.

ಅತ್ಯುತ್ತಮ ರೇಸಿಂಗ್‌ ಎಕ್ಸಾಸ್ಟ್‌ ವ್ಯವಸ್ಥೆಯನ್ನು ಹೊಂದಿದೆ. ಈ ಬೈಕ್‌ ಖಾಲಿ ತೂಕ 167 ಕೆಜಿ ಇದೆ. ಮುಂಭಾಗದಲ್ಲಿ 43mm Ohlins NPX 25/30 ಸಸ್ಪೆನ್ಷನ್‌ ಇದೆ. ಹಿಂಭಾಗದಲ್ಲಿ Ohlins TTX 36 ಮೊನೊಶಾಕ್‌ ಸಸ್ಪೆನ್ಷನ್‌ ಇದೆ. ಇವೆರಡೂ ಪೂರ್ಣ ಪ್ರಮಾಣದಲ್ಲಿ ಹೊಂದಾಣಿಕೆ ಮಾಡಬಹುದಾದ ಸಸ್ಪೆನ್ಷನ್‌. ಟ್ವಿನ್‌ 320ಎಂಎಂ ಡಿಸ್ಕ್‌ ಬ್ರೇಕ್‌ ಇದರಲ್ಲಿದೆ.

ಡುಕಾಟಿಯಲ್ಲಿ ಹಲವು ಎಲೆಕ್ಟ್ರಾನಿಕ್‌ ಪ್ಯಾಕೇಜ್‌ಗಳಿವೆ. ಪಾನಿಗಲ್‌ ವಿ4 ಆರ್‌ನಲ್ಲಿ ಟ್ರಾಕ್ಷನ್‌ ಕಂಟ್ರೋಲ್‌, ರೈಡ್‌ ಬೈ ವೈರ್‌, ರೈಡಿಂಗ್‌ ಮೋಡ್‌, ಎಂಜಿನ್‌ ಬ್ರೇಕ್‌ ಕಂಟ್ರೋಲ್‌, ಪವರ್‌ ಮೋಡ್‌, ಕಾರ್ನರಿಂಗ್‌ ಎಬಿಎಸ್‌, ಲಾಂಚ್‌ ಕಂಟ್ರೋಲ್‌, ವೀಲೀ ಕಂಟ್ರೋಲ್‌, ಸ್ಲೈಡ್‌ ಕಂಟ್ರೋಲ್‌ ಇತ್ಯಾದಿ ಹಲವು ಫೀಚರ್‌ಗಳಿವೆ. ಬೈಕ್‌ನಲ್ಲಿ ಟಿಎಫ್‌ಟಿ ಸ್ಕ್ರೀನ್‌ ಇದ್ದು, ಬೈಕ್‌ನ ವಿವಿಧ ಫಂಕ್ಷನ್‌ಗಳ ವಿವರ ತೋರಿಸುತ್ತದೆ.

ಒಟ್ಟಾರೆ ದುಬಾರಿ ರೇಸಿಂಗ್‌ ಬೈಕ್‌ ಪ್ರಿಯರಿಗೆ ಸೂಕ್ತವಾಗುವಂತೆ ಈ ಬೈಕ್‌ ಭಾರತಕ್ಕೆ ಆಗಮಿಸಿದೆ. ಇದರ ಎಕ್ಸ್‌ ಶೋರೂಂ ದರ , ದರ 69.99 ಲಕ್ಷ ರೂಪಾಯಿ ಆಗಿದ್ದು, ಆನ್‌ರೋಡ್‌ ದರ ಇನ್ನೂ ಕೆಲವು ಲಕ್ಷ ರೂಪಾಯಿ ಹೆಚ್ಚಾಗಬಹುದು.

ಡುಕಾಟಿ ಪಾನಿಗಲ್‌ ವಿ4 ಆರ್‌

Honda Shine: 2023ರ ಹೊಸ ಹೋಂಡಾ ಶೈನ್‌ ಬೈಕ್‌ ಆಗಮನ

ಹೋಂಡಾ ಮೋಟಾರ್‌ಸೈಕಲ್‌ ಆಂಡ್‌ ಸ್ಕೂಟರ್‌ ಇಂಡಿಯಾವು 2023ರ ಶೈನ್‌ 125 ಬೈಕನ್ನು ಭಾರತದ ರಸ್ತೆಗೆ ಪರಿಚಯಿಸಿದೆ. ಇದು ಭಾರತದ ಜನಪ್ರಿಯ ಬೈಕಾಗಿದ್ದು, ಇದೀಗ ಹೊಸ ಆವೃತ್ತಿ ಶೈನ್‌ ಪ್ರಿಯರಿಗೆ ಇನ್ನಷ್ಟು ಖುಷಿ ತಂದಿದೆ. ಅತ್ಯುತ್ತಮ ಇಂಧನ ದಕ್ಷತೆ, ಅತ್ಯುತ್ತಮ ನಿರ್ವಹಣೆ ಇತ್ಯಾದಿ ಕಾರಣಗಳಿಂದ ಈ ಬೈಕ್‌ ಬಹುತೇಕರಿಗೆ ಇಷ್ಟವಾಗಿದೆ. ಮುಖ್ಯವಾಗಿ ನಗರದ ಜನರು ಶೈನ್‌ ಬೈಕನ್ನು ಇಷ್ಟಪಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿಯೂ ಶೈನ್‌ ಬೈಕ್‌ಗಳಿಗೆ ಬೇಡಿಕೆಯಿದೆ. ವಿಶೇಷವಾಗಿ 100 ಸಿಸಿ ಬೈಕ್‌ನಿಂದ 125 ಸಿಸಿಗೆ ಬೈಕನ್ನು ಅಪ್‌ಗ್ರೇಡ್‌ ಮಾಡಲು ಬಯಸುವವರು ಶೈನ್‌ ಆಯ್ಕೆ ಮಾಡಿಕೊಳ್ಳುವುದು ಹೆಚ್ಚು. ಇದೀಗ 2023 Honda Shine 125 ಲಾಂಚ್‌ ಆಗಿದ್ದು, ಇದರ ಕುರಿತು ಹೆಚ್ಚಿನ ವಿವರ ನೀಡಲಾಗಿದೆ. ಇಲ್ಲಿ ಕ್ಲಿಕ್‌ ಮಾಡಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ