Honda Shine: 2023ರ ಹೊಸ ಹೋಂಡಾ ಶೈನ್‌ ಬೈಕ್‌ ಆಗಮನ, ಈ ಐದು ವಿಷಯಗಳನ್ನು ಗಮನಿಸಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Honda Shine: 2023ರ ಹೊಸ ಹೋಂಡಾ ಶೈನ್‌ ಬೈಕ್‌ ಆಗಮನ, ಈ ಐದು ವಿಷಯಗಳನ್ನು ಗಮನಿಸಿ

Honda Shine: 2023ರ ಹೊಸ ಹೋಂಡಾ ಶೈನ್‌ ಬೈಕ್‌ ಆಗಮನ, ಈ ಐದು ವಿಷಯಗಳನ್ನು ಗಮನಿಸಿ

Honda Shine 125 is BS6: ಹೋಂಡಾ ಮೋಟಾರ್‌ಸೈಕಲ್‌ ಆಂಡ್‌ ಸ್ಕೂಟರ್‌ ಇಂಡಿಯಾವು 2023ರ ಶೈನ್‌ 125 ಬೈಕನ್ನು ಭಾರತದ ರಸ್ತೆಗೆ ಪರಿಚಯಿಸಿದೆ.

Honda Shine: 2023ರ ಹೊಸ ಹೋಂಡಾ ಶೈನ್‌ ಬೈಕ್‌ ಆಗಮನ, ಈ ಐದು ವಿಷಯಗಳನ್ನು ಗಮನಿಸಿ
Honda Shine: 2023ರ ಹೊಸ ಹೋಂಡಾ ಶೈನ್‌ ಬೈಕ್‌ ಆಗಮನ, ಈ ಐದು ವಿಷಯಗಳನ್ನು ಗಮನಿಸಿ

ಹೋಂಡಾ ಮೋಟಾರ್‌ಸೈಕಲ್‌ ಆಂಡ್‌ ಸ್ಕೂಟರ್‌ ಇಂಡಿಯಾವು 2023ರ ಶೈನ್‌ 125 ಬೈಕನ್ನು ಭಾರತದ ರಸ್ತೆಗೆ ಪರಿಚಯಿಸಿದೆ. ಇದು ಭಾರತದ ಜನಪ್ರಿಯ ಬೈಕಾಗಿದ್ದು, ಇದೀಗ ಹೊಸ ಆವೃತ್ತಿ ಶೈನ್‌ ಪ್ರಿಯರಿಗೆ ಇನ್ನಷ್ಟು ಖುಷಿ ತಂದಿದೆ. ಅತ್ಯುತ್ತಮ ಇಂಧನ ದಕ್ಷತೆ, ಅತ್ಯುತ್ತಮ ನಿರ್ವಹಣೆ ಇತ್ಯಾದಿ ಕಾರಣಗಳಿಂದ ಈ ಬೈಕ್‌ ಬಹುತೇಕರಿಗೆ ಇಷ್ಟವಾಗಿದೆ. ಮುಖ್ಯವಾಗಿ ನಗರದ ಜನರು ಶೈನ್‌ ಬೈಕನ್ನು ಇಷ್ಟಪಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿಯೂ ಶೈನ್‌ ಬೈಕ್‌ಗಳಿಗೆ ಬೇಡಿಕೆಯಿದೆ. ವಿಶೇಷವಾಗಿ 100 ಸಿಸಿ ಬೈಕ್‌ನಿಂದ 125 ಸಿಸಿಗೆ ಬೈಕನ್ನು ಅಪ್‌ಗ್ರೇಡ್‌ ಮಾಡಲು ಬಯಸುವವರು ಶೈನ್‌ ಆಯ್ಕೆ ಮಾಡಿಕೊಳ್ಳುವುದು ಹೆಚ್ಚು. ಇದೀಗ 2023 Honda Shine 125 ಲಾಂಚ್‌ ಆಗಿದ್ದು, ಇದರ ಕುರಿತು ಹೆಚ್ಚಿನ ವಿವರ ನೀಡಲಾಗಿದೆ.

ಹೋಂಡಾ ಶೈನ್‌ 125: ಬಿಎಸ್‌6 ಸ್ಟೇಜ್‌ 2 ಬೈಕ್‌

ಹೋಂಡಾ ಕಂಪನಿಯ ನೂತನ ಶೈನ್‌ 125 ಬಿಎಸ್‌6 ಸ್ಟೇಜ್‌ 2 ಬೈಕಾಗಿದೆ. ಅಂದರೆ, ಇದೀಗ ಶೈನ್‌ ಬೈಕ್‌ಗೆ OBD2 ಪೋರ್ಟ್‌ ಅಳವಡಿಸಲಾಗಿದ್ದು, ಎಮಿಷನ್‌ ಅನ್ನು ರಿಯಲ್‌ ಟೈಮ್‌ಗೆ ಡಿಟೆಕ್ಟ್‌ ಮಾಡುತ್ತದೆ. ವಿಶೇಷವೆಂದರೆ, ಶೈನ್‌ 125 ಇನ್ಮುಂದೆ ಎಥೊನೆಲ್‌ ಬ್ಲೆಂಡೆಡ್‌ ಇಂಧನ (ಶೇಕಡ 20ರವರೆಗೆ) ಬಳಸಿಯೂ ಕಾರ್ಯನಿರ್ವಹಿಸುತ್ತದೆ.

ಹತ್ತು ವರ್ಷ ವಾರೆಂಟಿ

ಹೋಂಡಾ ಶೈನ್‌ 125 ಬೈಕ್‌ ಈ ಹಿಂದೆ ಮೂರು ವರ್ಷದ ಸ್ಟಾಂಡರ್ಡ್‌ ವಾರೆಂಟಿ ಹೊಂದಿದೆ. ಇದೀಗ ಹೆಚ್ಚುವರಿಯಾಗಿ ಏಳು ವರ್ಷಗಳ ಕಾಲ ವಾರೆಂಟಿ ವಿಸ್ತರಿಸುವ ಅವಕಾಶ ನೀಡಿದೆ. ಅಂದರೆ, ಹೊಸ ಶೈನ್‌ಗೆ 125 ವಾರೆಂಟಿ ದೊರಕಿದಂತಾಗಿದೆ.

ಹೊಸ ಶೈನ್‌ ಎಂಜಿನ್‌

ನೂತನ ಶೈನ್‌ ಬೈಕ್‌ನ ಎಂಜಿನ್‌ನಲ್ಲಿ ಯಾವ ಬದಲಾವಣೆ ಮಾಡಿಲ್ಲ. 2023ರ ಶೈನ್‌ನಲ್ಲಿ ಈಗಲೂ 125ಸಿಸಿ ಪಿಜಿಎಂ ಎಫ್‌ಐ ಎಂಜಿನ್‌ ಇದೆ. ಇದು 7500 ಆವರ್ತನಕ್ಕೆ 10.54 ಬಿಎಚ್‌ಪಿ ಮತ್ತು 6 ಸಾವಿರ ಆವರ್ತನಕ್ಕೆ 11 ಎನ್‌ಎಂ ಟಾರ್ಕ್‌ ಬಿಡುಗಡೆ ಮಾಡುತ್ತದೆ. ಇದು ಐದು ಸ್ಪೀಡ್‌ನ ಗಿಯರ್‌ ಬಾಕ್ಸ್‌ ಹೊಂದಿದೆ. ಇದು ಎಸಿಜಿ ಸೈಲೆಂಟ್‌ ಸ್ಟಾರ್ಟ್‌ ವ್ಯವಸ್ಥೆ ಹೊಂದಿದೆ.

ಶೈನ್‌ ಫೀಚರ್‌ಗಳು

ಫೀಚರ್‌ ವಿಷಯದಲ್ಲಿಯೂ ಸಾಕಷ್ಟು ಗ್ರಾಹಕರಿಗೆ ಶೈನ್‌ ಇಷ್ಟವಾಗಿದೆ. ಇದು ಅಲಾಯ್‌ ವೀಲ್‌, ಟ್ಯೂಬ್‌ಲೆಸ್‌ ಟೈರ್‌ಗಳನ್ನು ಹೊಂದಿದೆ. ಇದರಲ್ಲಿ ಅನಲಾಗ್‌ ಸ್ಪೀಡೋಮೀಟರ್‌, ಸೈಡ್‌ ಸ್ಟಾಂಡ್‌ ಕಟ್‌ ಆಫ್‌, ಫ್ಯೂಯೆಲ್‌ ಗೇಜ್‌ ಫೀಚರ್‌ ಇದೆ. ಇದರ ಕಾಂಬಿ ಬ್ರೇಕಿಂಗ್‌ ಸಿಸ್ಟಮ್‌ (ಸಿಬಿಎಸ್‌) ಹೊಂದಿದೆ.

ಹೋಂಡಾ ಶೈನ್‌
ಹೋಂಡಾ ಶೈನ್‌

ಹೋಂಡಾ ಶೈನ್‌: ಆವೃತ್ತಿಗಳು ಮತ್ತು ದರ

ನೂತನ ಹೋಂಡಾ ಶೈನ್‌ ಎರಡು ಆವೃತ್ತಿಗಳಲ್ಲಿ ದೊರಕುತ್ತದೆ. ಅಂದರೆ, ಡ್ರಮ್‌ ಮತ್ತು ಡಿಸ್ಕ್‌ ಬ್ರೇಕ್‌ಗಳಲ್ಲಿ ಲಭ್ಯ. ಇದರ ದ ಕ್ರಮವಾಗಿ 79,800 ರೂ. ಮತ್ತು 83, 800 ರೂ. ಇದೆ. ಇವು ದೆಹಲಿ ಎಕ್ಸ್‌ಶೋರೂಂ ದರ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.