logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bharat Jodo Yatra: ಗುಜರಾತ್‌ನಿಂದ ಮೇಘಾಲಯಕ್ಕೆ ಪಾದಯಾತ್ರೆ; ಎರಡನೇ ಹಂತದ ಭಾರತ್‌ ಜೋಡೋ ಯಾತ್ರೆಗೆ ರಾಹುಲ್‌ ಗಾಂಧಿ ಸಜ್ಜು

Bharat Jodo Yatra: ಗುಜರಾತ್‌ನಿಂದ ಮೇಘಾಲಯಕ್ಕೆ ಪಾದಯಾತ್ರೆ; ಎರಡನೇ ಹಂತದ ಭಾರತ್‌ ಜೋಡೋ ಯಾತ್ರೆಗೆ ರಾಹುಲ್‌ ಗಾಂಧಿ ಸಜ್ಜು

HT Kannada Desk HT Kannada

Aug 08, 2023 05:58 PM IST

google News

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜೂನ್ 23 ರಂದು ಬಿಹಾರದ ಪಾಟ್ನಾದ ಸದಾಕತ್ ಆಶ್ರಮದಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಗಾಯಗೊಂಡ ಕಾರ್ಯಕರ್ತನ ಕುಟುಂಬ ಸದಸ್ಯರನ್ನು ಭೇಟಿಯಾದರು. (ಕಡತ ಚಿತ್ರ)

  • Bharat Jodo Yatra: ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಎರಡನೇ ಹಂತವು ಗುಜರಾತ್‌ನಲ್ಲಿ ಪ್ರಾರಂಭವಾಗಿ ಮೇಘಾಲಯದವರೆಗೆ ಸಾಗಲಿದೆ. ಆದರೆ ಇನ್ನೂ ಇದಕ್ಕೆ ಅಂತಿಮ ರೂಪುರೇಷೆ ಆಗಿಲ್ಲ ಎಂದು ವರದಿಗಳು ಹೇಳಿವೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜೂನ್ 23 ರಂದು ಬಿಹಾರದ ಪಾಟ್ನಾದ ಸದಾಕತ್ ಆಶ್ರಮದಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಗಾಯಗೊಂಡ ಕಾರ್ಯಕರ್ತನ ಕುಟುಂಬ ಸದಸ್ಯರನ್ನು ಭೇಟಿಯಾದರು. (ಕಡತ ಚಿತ್ರ)
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜೂನ್ 23 ರಂದು ಬಿಹಾರದ ಪಾಟ್ನಾದ ಸದಾಕತ್ ಆಶ್ರಮದಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಗಾಯಗೊಂಡ ಕಾರ್ಯಕರ್ತನ ಕುಟುಂಬ ಸದಸ್ಯರನ್ನು ಭೇಟಿಯಾದರು. (ಕಡತ ಚಿತ್ರ) (PTI)

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರ ಎರಡನೇ ಹಂತದ ಭಾರತ್‌ ಜೋಡೋ ಯಾತ್ರೆ (Bharati Jodo Yatra) ಗುಜರಾತ್‌ನಿಂದ ಮೇಘಾಲಯದ ತನಕ ನಡೆಯಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಆದರೆ. ಹೊಸ ಮಾರ್ಗ ಮತ್ತು ಅನುಗುಣವಾದ ದಿನಾಂಕಗಳ ಕುರಿತಾದ ವಿವರಗಳು ಇಲ್ಲಿಯವರೆಗೆ ದೃಢೀಕರಿಸಲಾಗಿಲ್ಲ.

ಈ ಸುದ್ದಿಯನ್ನು ಮಂಗಳವಾರ ಖಚಿತಪಡಿಸಿದ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ರಾಜ್ಯದ ಪಕ್ಷದ ನಾಯಕರು ಸಮಾನಾಂತರ ಮೆರವಣಿಗೆ ನಡೆಸಲಿದ್ದಾರೆ. ಪ್ರಮುಖ ಕಾಂಗ್ರೆಸ್ ನಾಯಕರು ಪಶ್ಚಿಮ ರಾಜ್ಯದ ವಿವಿಧ ಭಾಗಗಳಲ್ಲಿ ಮೆರವಣಿಗೆಯನ್ನು ಮುನ್ನಡೆಸಲಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಈ ಹಿಂದೆ ಪಕ್ಷದ ಹಿರಿಯ ನಾಯಕ ಜೈರಾಮ್‌ ರಮೇಶ್‌ ಅವರು, ರಾಹುಲ್‌ ಗಾಂಧಿ ಅವರ ಪಾದಯಾತ್ರೆ ಗುಜರಾತ್‌ನ ಪೋರ್‌ಬಂದರ್‌ನಿಂದ ಅರುಣಾಚಲ ಪ್ರದೇಶದ ಪಾಸಿಘಾಟ್‌ ತನಕ ನವೆಂಬರ್‌ ತಿಂಗಳಿಗಿಂತ ಮೊದಲು ನಡೆಯಲಿದೆ ಎಂದು ಹೇಳಿದ್ದರು.

ಮೊದಲ ಹಂತದ ಭಾರತ್‌ ಜೋಡೋ ಯಾತ್ರೆ

ಮೊದಲ ಹಂತದ ಭಾರತ್‌ ಜೋಡೋ ಯಾತ್ರೆ 2022ರ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಭಾರತದ ತುದಿಯಿಂದ ಪ್ರಾರಂಭವಾಗಿ ಉತ್ತರ ಭಾರತದ ಕಾಶ್ಮೀರದಲ್ಲಿ ಕೊನೆಯಾಗಿತ್ತು. ಇದು 130 ದಿನಗಳ ನಂತರ ಮತ್ತು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು ಸಾಗಿದ ಪಾದಯಾತ್ರೆಯಾಗಿತ್ತು.

ಎರಡನೇ ಹಂತದ ಪಾದಯಾತ್ರೆಗೆ ಸಿದ್ಧತೆ

ಸಂಸತ್‌ ಸದಸ್ಯತ್ವ ಮರುಸ್ಥಾಪಿಸಲ್ಪಟ್ಟ ರಾಹುಲ್‌ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸಿದ ಗುಜರಾತ್‌ ಕಾಂಗ್ರೆಸ್‌, 'ಮಹಾತ್ಮಾ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರ ಭೂಮಿ'ಯಿಂದ ಹೊಸ ಪಾದಯಾತ್ರೆ ಆರಂಭಿಸುವಂತೆ ಸೋಮವಾರ ಆಹ್ವಾನ ನೀಡಿತ್ತು.

ಎರಡನೇ ಹಂತದ ಪಾದಯಾತ್ರೆಯು ರಾಜ್ಯದಿಂದ ಆರಂಭವಾಗಬೇಕು. ಎರಡನೇ ಹಂತದ ಭಾರತ್ ಜೋಡೋ ಯಾತ್ರೆಯನ್ನು ನಡೆಸಲು ಕೇಂದ್ರ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ. ವಿವರಗಳನ್ನು ಅಂತಿಮಗೊಳಿಸಲಾಗುತ್ತಿದೆ. ಅನೇಕ ರಾಜ್ಯ ಘಟಕಗಳು ಎರಡನೇ ಹಂತದ ಪಾದಯಾತ್ರೆಗೆ ಇದೇ ರೀತಿಯ ಅಥವಾ ಇತರ ಸಲಹೆಗಳನ್ನು ನೀಡಿವೆ ಎಂದು ಗುಜರಾತ್‌ನ ವಿರೋಧ ಪಕ್ಷದ ನಾಯಕ ಅಮಿತ್ ಚಾವ್ಡಾ ಸುದ್ದಿಗಾರರಿಗೆ ತಿಳಿಸಿದರು.

ಭಾರತ್‌ ಜೋಡೋ ಯಾತ್ರೆ -2ರ ಕುರಿತು ಜೈರಾಮ್‌ ರಮೇಶ್‌ ಏನು ಹೇಳಿದ್ದರು

ಭಾರತ್‌ ಜೋಡೋ ಯಾತ್ರೆ 2ರ ಕುರಿತು ಅಂದರೆ ಪೂರ್ವ-ಪಶ್ಚಿಮ ಜೋಡಿಸುವ ಯಾತ್ರೆಯ ಕುರಿತಾದ ಪ್ರಶ್ನೆಗಳನ್ನು ಈ ವರ್ಷ ಆರಂಭದಲ್ಲಿ ಎದುರಿಸಿದ್ದ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌, ಸ್ವರೂಪ ಸ್ವಲ್ಪ ವಿಭಿನ್ನವಾಗಿರಬಹುದು. ಇದು ಆರಂಭಿಕ ಭಾರತ್ ಜೋಡೋ ಯಾತ್ರೆಗೆ ಸಜ್ಜುಗೊಳಿಸಿದಂತಹ ವಿಸ್ತಾರವಾದ ಮೂಲಸೌಕರ್ಯವನ್ನು ಹೊಂದಿಲ್ಲದಿರಬಹುದು ಮತ್ತು ಕಡಿಮೆ ಯಾತ್ರಿಗಳನ್ನು ಹೊಂದಿರಬಹುದು. ಇದು ಹೆಚ್ಚಾಗಿ ಪಾದಯಾತ್ರೆಯಾಗಿದ್ದರೂ, ಈ ಮಾರ್ಗದಲ್ಲಿ ಕಾಡುಗಳು ಮತ್ತು ನದಿಗಳಿವೆ ಎಂಬುದನ್ನು ಉಲ್ಲೇಖಿಸಿದ್ದರು.

"ಇದು ಬಹು-ಮಾದರಿ ಯಾತ್ರೆಯಾಗಿರಲಿದೆ. ಆದರೆ ಹೆಚ್ಚಾಗಿ ಇದು ಪಾದಯಾತ್ರೆಯಾಗಿದೆ" ಎಂದು ರಮೇಶ್ ಹೇಳಿದ್ದರು.

ಕರ್ನಾಟಕ ಚುನಾವಣೆ, ಮುಂಗಾರು ಮತ್ತು ನವೆಂಬರ್‌ನಲ್ಲಿ ರಾಜ್ಯ ಚುನಾವಣೆಗಳನ್ನು ಉಲ್ಲೇಖಿಸಿ ಅವರು ಜೂನ್‌ಗಿಂತ ಮೊದಲು ಅಥವಾ ನವೆಂಬರ್‌ಗಿಂತ ಮೊದಲು ಯಾತ್ರೆಯನ್ನು ಕೈಗೊಳ್ಳಬೇಕಾಗಬಹುದು ಎಂದು ಆ ಸಮಯದಲ್ಲಿ ಸೂಚಿಸಿದ್ದರು. ಇದು ಮೊದಲ ಭಾರತ್‌ ಜೋಡೋ ಯಾತ್ರೆಗಿಂತ ಕಡಿಮೆ ಅವಧಿಯದ್ದಾಗಿರಬಹುದು ಎಂದು ಅವರು ಹೇಳಿದ್ದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ