logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Delhi Liquor Policy: ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿ ಆರೋಪಿಗಳ ಆಸ್ತಿ ಜಪ್ತಿ ಮಾಡಿದ ಇಡಿ

Delhi Liquor Policy: ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿ ಆರೋಪಿಗಳ ಆಸ್ತಿ ಜಪ್ತಿ ಮಾಡಿದ ಇಡಿ

Jayaraj HT Kannada

Jan 09, 2024 07:57 PM IST

google News

ಮನೀಶ್ ಸಿಸೋಡಿಯಾ

    • Manish Sisodia: ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರೊಂದಿಗೆ ಉದ್ಯಮಿಗಳಾದ ಅಮನ್‌ದೀಪ್ ಸಿಂಗ್ ಧಲ್, ಗೌತಮ್ ಮಲ್ಹೋತ್ರಾ ಮತ್ತು ರಾಜೇಶ್ ಜೋಶಿ ಅವರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. 
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ (HT)

ಅಕ್ರಮ ಹಣ ವರ್ಗಾವಣೆ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಆಮ್ ಆದ್ಮಿ ಪಕ್ಷದ (AAP) ಹಿರಿಯ ನಾಯಕ ಹಾಗೂ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರ 52.24 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (Enforcement Directorate) ಜುಲೈ 7ರ ಶುಕ್ರವಾರ ಜಪ್ತಿ ಮಾಡಿದೆ.

ದೆಹಲಿಯ ಹೊಸ ಅಬಕಾರಿ ನೀತಿಗೆ (excise policy) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಈಗಾಗಲೇ ಎಎಪಿ ನಾಯಕ ಮನೀಶ್ ಸಿಸೋಡಿಯಾ ಜೈಲು ಪಾಲಾಗಿದ್ದಾರೆ. ಇವರು ಮಾತ್ರವಲ್ಲದೆ ಇತರ ಆರೋಪಿಗಳ ಆಸ್ತಿಯನ್ನು ಕೂಡಾ ಇಡಿ ಜಪ್ತಿ ಮಾಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಜಪ್ತಿಯಾದ ಆಸ್ತಿಗಳಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಅವರ ಪತ್ನಿ ಸೀಮಾ ಸಿಸೋಡಿಯಾ ಅವರ ಫ್ಲಾಟ್ ಸೇರಿದಂತೆ ಎರಡು ಸ್ಥಿರ ಆಸ್ತಿಗಳು‌ ಕೂಡಾ ಕೂಡಾ ಸೇರಿವೆ. ಇದರೊಂದಿಗೆ 11.49 ಲಕ್ಷ ರೂಪಾಯಿ ಬ್ಯಾಂಕ್ ಠೇವಣಿಯನ್ನು ಕೂಡಾ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

ಸಿಸೋಡಿಯಾ ಅವರೊಂದಿಗೆ ಉದ್ಯಮಿಗಳಾದ ಅಮನ್‌ದೀಪ್ ಸಿಂಗ್ ಧಲ್, ಗೌತಮ್ ಮಲ್ಹೋತ್ರಾ ಮತ್ತು ರಾಜೇಶ್ ಜೋಶಿ ಅವರ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಲಾದ ಆಸ್ತಿಯಲ್ಲಿ 44.29 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಚರಾಸ್ತಿ ಹಾಗೂ ಇತರ ಆರೋಪಿಗಳ ಜಮೀನು/ಫ್ಲಾಟ್ ಕೂಡ ಸೇರಿದೆ ಎಂದು ಹೇಳಿಕೆಯೊಂದು ತಿಳಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಕಳೆದ ಮಾರ್ಚ್‌ ತಿಂಗಳಲ್ಲಿ ಜಾರಿ ನಿರ್ದೇಶನಾಲಯವು ಬಂಧಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಗುರುವಾರ ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಏನಿದು ಪ್ರಕರಣ

ಆದ್‌ ಆದ್ಮಿ ಪಾರ್ಟಿ ನಾಯಕ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಶ್‌ ಸಿಸೋಡಿಯಾ ಹಾಗೂ ಇತರರು, ರಾಷ್ಟ್ರ ರಾಜಧಾನಿಯಲ್ಲಿ ಹೊಸ ಮದ್ಯ ಮಾರಾಟ ನೀತಿಯನ್ನು ತರುವಲ್ಲಿ ಭ್ರಷ್ಟಾಚಾರ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ. ಅಬಕಾರಿ ನೀತಿ ರಚನೆ ಮತ್ತು ಅನುಷ್ಠಾನಕ್ಕೆ ಅಕ್ರಮ ಹಣ ವರ್ಗಾವಣೆ ಆರೋಪವನ್ನು ಸಿಸೋಡಿಯಾ ಎದುರಿಸುತ್ತಿದ್ದಾರೆ.

ದೆಹಲಿ ಸರ್ಕಾರದ 2021-22ರ ಹೊಸ ಅಬಕಾರಿ ನೀತಿಯು ಮದ್ಯ ವಿತರಕರಿಗೆ ಪರವಾನಗಿಗಳನ್ನು ನೀಡಿದ್ದು, ಈ ನೀತಿಯ ಅನುಕೂಲ ಪಡೆದ ಕೆಲವು ವಿತರಕರು ಈ ಪ್ರಕ್ರಿಯೆಗೆ ಲಂಚ ನೀಡಿದ್ದಾರೆ ಎಂದು ಇಡಿ ಮತ್ತು ಸಿಬಿಐ ರೋಪಿಸಿದೆ. ಆದರೆ ಎಎಪಿಯು ಈ ಆರೋಪಗಳನ್ನು ಅಲ್ಲಗಳೆದಿದೆ.

ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಕಳೆದ ವರ್ಷ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದರು. ಅದಾದ ಬಳಿಕ ದೆಹಲಿ ಸರ್ಕಾರವು ಹಳೆಯ ಮದ್ಯ ನೀತಿಯನ್ನು ಜಾರಿಗೊಳಿಸಿತು. ಹೀಗಾಗಿ ಕೋಟ್ಯಂತರ ರೂಪಾಯಿಗಳ ಆದಾಯದ ನಷ್ಟಕ್ಕೆ ಲೆಫ್ಟಿನೆಂಟ್ ಗವರ್ನರ್ ಅವರನ್ನು ಎಎಪಿ ಸರ್ಕಾರ ದೂಷಿಸಿತು. ಅತ್ತ ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ದೆಹಲಿ ಸರ್ಕಾರವು ಹಳೆಯ ಮದ್ಯ ಮಾರಾಟ ನೀತಿಗೆ ಮತ್ತೆ ಜಾರಿಗೊಳಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಎಲ್ಲಾ ಆರೋಪಗಳನ್ನು ಆಡಳಿತಾರೂಢ ಸರ್ಕಾರ ತಳ್ಳಿ ಹಾಕಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ