ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  G20 Dinner Menu: ಜಿ20 ನಾಯಕರ ಡಿನ್ನರ್‌ ಮೆನು, ಹಲಸಿನ ಭಕ್ಷ್ಯದಿಂದ ಹಿಡಿದು ಮುಂಬಯಿ ಪಾವ್ ತನಕ ಸಿರಿಧಾನ್ಯ ಖಾದ್ಯ ವೈವಿಧ್ಯ

G20 Dinner Menu: ಜಿ20 ನಾಯಕರ ಡಿನ್ನರ್‌ ಮೆನು, ಹಲಸಿನ ಭಕ್ಷ್ಯದಿಂದ ಹಿಡಿದು ಮುಂಬಯಿ ಪಾವ್ ತನಕ ಸಿರಿಧಾನ್ಯ ಖಾದ್ಯ ವೈವಿಧ್ಯ

HT Kannada Desk HT Kannada

Sep 09, 2023 09:55 PM IST

ಜಿ20 ಡಿನ್ನರ್ ಮೆನು

  • ಭಾರತದ ಆತಿಥ್ಯದಲ್ಲಿ ಎರಡು ದಿನಗಳ ಜಿ20 ಶೃಂಗ ನವದೆಹಲಿಯಲ್ಲಿ ಇಂದು (ಸೆ.9) ಶುರುವಾಗಿದೆ. ಮೊದಲ ದಿನದ ಪೂರ್ಣ ಅವಧಿಯ ಕಲಾಪಗಳು ನಡೆದಿದ್ದು, ರಾತ್ರಿ ಭೋಜನಕೂಟವನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏರ್ಪಡಿಸಿದ್ದರು. ಇದರ ಮೆನು ವೈರಲ್ ಆಗಿದ್ದು, ವಿವರ ಇಲ್ಲಿದೆ.

ಜಿ20 ಡಿನ್ನರ್ ಮೆನು
ಜಿ20 ಡಿನ್ನರ್ ಮೆನು

ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಜಿ20 ನಾಯಕರ ಶೃಂಗದ ಮೊದಲ ದಿನ ಭಾರಿ ಚಟುವಟಿಕೆಗಳಿಂದ ಕೂಡಿತ್ತು. ಜಿ20 ನಾಯಕರ ಮಾತುಕತೆ, ದೆಹಲಿ ಘೋಷಣೆ ಅಂಗೀಕಾರ ಹೀಗೆ ಹಲವು ವಿಚಾರಗಳು ಗಮನಸೆಳೆದವು. ಈ ನಡುವೆ ನಿಗದಿಯಂತೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಿ20 ನಾಯಕರಿಗೆ ರಾತ್ರಿ ಭೋಜನಕೂಟವನ್ನು ಭಾರತ್ ಮಂಟಪದಲ್ಲಿ ಏರ್ಪಾಡು ಮಾಡಿದ್ದರು.

ಟ್ರೆಂಡಿಂಗ್​ ಸುದ್ದಿ

ಭಾರತದ ಮುಂದಿನ ಪ್ರಧಾನಿ ಅಮಿತ್ ಶಾ, ಸಿಎಂ ಗದ್ದುಗೆ ಕಳೆದುಕೊಳ್ಳಲಿದ್ದಾರೆ ಯೋಗಿ ಆದಿತ್ಯನಾಥ್: ಅರವಿಂದ ಕೇಜ್ರಿವಾಲ್

ಲೋಕಸಭಾ ಚುನಾವಣೆ: ಬಿಜೆಪಿಗೆ ಈ ಬಾರಿ ಕರ್ನಾಟಕದಲ್ಲೇ ಸರಿಯಾದ ಹೊಡೆತ; ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

PM Narendra Modi Interview: ನಮಗೆ ಜನಪ್ರಿಯತೆ ಅಗತ್ಯವಿಲ್ಲ, ನಮ್ಮ ಕೆಲಸದ ವೇಗವನ್ನು ಜನ ನೋಡಿದ್ದಾರೆ; ಪ್ರಧಾನಿ ಮೋದಿ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆ ಕಂಡ ಚಿನ್ನದ ಬೆಲೆ, ಸತತ ಒಂದು ವಾರದಿಂದ ಏರುತ್ತಿದೆ ಬೆಳ್ಳಿ ದರ; ಇಂದಿನ ದರ ಗಮನಿಸಿ

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್‌, ಮಾರಿಷಸ್‌ ಪ್ರಧಾನಿ ಪ್ರವೀಂದ್ ಕುಮಾರ್‌ ಜಗನ್ನಾಥ್‌, ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್‌ ಸೇರಿ ಹಲವರು ಶೃಂಗದಲ್ಲಿ ಭಾಗಿಯಾಗಿದ್ದಾರೆ. ರಾತ್ರಿ ಭೋಜನಕೂಟ ಸಂಪೂರ್ಣವಾಗಿ ಸಸ್ಯಾಹಾರದ್ದಾಗಿದ್ದು, ಡಿನ್ನರ್ ಮೆನು ಬಹಿರಂಗವಾಗಿ ವೈರಲ್ ಆಗಿದೆ.

ವೈರಲ್ ಆಗಿರುವ ಮೊದಲ ದಿನದ ಡಿನ್ನರ್ ಮೆನುವಿನಲ್ಲಿ ಏನೇನಿವೆ?

ಸ್ಟಾರ್ಟರ್

ಪಾತ್ರಮ್‌: ನವಣೆ ಎಲೆಗಳಿಂದ ಅಲಂಕೃತ ಗಟ್ಟಿಮೊಸರು ಮತ್ತು ಖಾರ ಚಟ್ನಿ

ಮೇನ್ ಕೋರ್ಸ್

ವನವರ್ಣಂ: ಕೇರಳದ ಕೆಂಪಕ್ಕಿ ಅನ್ನಕ್ಕೆ ಕರಿಬೇವು ಒಗ್ಗರಣೆ ಮತ್ತು ಹಲಸಿನ ಖಾದ್ಯ ಜತೆಗೆ ಮಶ್ರೂಮ್‌ ಖಾದ್ಯ.

ಭಾರತದ ಬ್ರೆಡ್ಸ್

ಮುಂಬಯಿ ಪಾವ್‌: ಈರುಳ್ಳಿ ರುಚಿಯ ಬನ್‌

ಬಕರ್‌ಖಾನಿ: ಏಲಕ್ಕಿ ಪರಿಮಳದ ಸಿಹಿ ರೋಟಿ

ಡೆಸರ್ಟ್

ಮಧುರಿಮಾ: ಏಲಕ್ಕಿ ಪರಿಮಳದ ಬಾರ್ನ್ಯಾರ್ಡ್ ಧಾನ್ಯದ ಪುಡಿಂಗ್, ಅಂಜೂರದ ಪೀಚ್ ಕಾಂಪೋಟ್ ಮತ್ತು ಅಂಬೆಮೊಹರ್ ಅನ್ನ.

ಬೆವರೇಜಸ್‌

ಕಾಶ್ಮೀರಿ ಕಾಹ್ವಾ, ಫಿಲ್ಟರ್ ಕಾಫಿ, ಡಾರ್ಜಲಿಂಗ್ ಟೀ.

ಇದಲ್ಲದೆ, ಪಾನ್‌ ಫ್ಲೇವರ್‌ನ ಚಾಕೊಲೇಟ್‌ ಲೀವ್ಸ್‌ ಕೂಡ ಮೆನುವಿನಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ