ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  G20 Summit: ನವದೆಹಲಿಯಲ್ಲಿ ಜಿ20 ಶೃಂಗ ಶುರು, ಮೊದಲ ದಿನದ ಕೆಲವು ಆಕರ್ಷಕ ಫೋಟೋಸ್‌ ಮತ್ತು ವರದಿ

G20 Summit: ನವದೆಹಲಿಯಲ್ಲಿ ಜಿ20 ಶೃಂಗ ಶುರು, ಮೊದಲ ದಿನದ ಕೆಲವು ಆಕರ್ಷಕ ಫೋಟೋಸ್‌ ಮತ್ತು ವರದಿ

ಭಾರತ ಇದೇ ಮೊದಲ ಸಲ ಜಿ20 ಶೃಂಗ ಸಭೆಯ ಆತಿಥ್ಯವಹಿಸಿದೆ. ಈ ವರ್ಷ ಭಾರತ ಜಿ20ಯ ಅಧ್ಯಕ್ಷತೆಯನ್ನೂ ಹೊಂದಿರುವ ಕಾರಣ ಈ ಶೃಂಗದ ಮಹತ್ವ ಹೆಚ್ಚಾಗಿದೆ. ಜಿ20 ಅಧ್ಯಕ್ಷತೆ ಸದಸ್ಯರ ನಡುವೆ ಪ್ರತಿ ವರ್ಷ ಬದಲಾಗುತ್ತದೆ. ಮೊದಲ ದಿನ ಕಲಾಪದ ಕೆಲವು ಫೋಟೋಸ್ ಇಲ್ಲಿವೆ.

ಭಾರತದ ರಾಜಧಾನಿ ನವದೆಹಲಿಯ ಹೃದಯ ಭಾಗದಲ್ಲಿರುವ ಭಾರತ್ ಮಂಟಪದಲ್ಲಿ ಶನಿವಾರ ಜಿ20 ಶೃಂಗ ಸಭೆ ಶುರುವಾಗಿದೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ವಿಶ್ವದ ಅತ್ಯಂತ ಶ್ರೀಮಂತ ಆರ್ಥಿಕತೆಯ ಇತರ ಪ್ರಮುಖ ನಾಯಕರು ಶೃಂಗಸಭೆಯಲ್ಲಿ ನಿರ್ಣಾಯಕ ಜಾಗತಿಕ ವಿಷಯಗಳ ಕುರಿತು ಚರ್ಚೆಗಳನ್ನು ಪ್ರಾರಂಭಿಸಿದರು.
icon

(1 / 7)

ಭಾರತದ ರಾಜಧಾನಿ ನವದೆಹಲಿಯ ಹೃದಯ ಭಾಗದಲ್ಲಿರುವ ಭಾರತ್ ಮಂಟಪದಲ್ಲಿ ಶನಿವಾರ ಜಿ20 ಶೃಂಗ ಸಭೆ ಶುರುವಾಗಿದೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ವಿಶ್ವದ ಅತ್ಯಂತ ಶ್ರೀಮಂತ ಆರ್ಥಿಕತೆಯ ಇತರ ಪ್ರಮುಖ ನಾಯಕರು ಶೃಂಗಸಭೆಯಲ್ಲಿ ನಿರ್ಣಾಯಕ ಜಾಗತಿಕ ವಿಷಯಗಳ ಕುರಿತು ಚರ್ಚೆಗಳನ್ನು ಪ್ರಾರಂಭಿಸಿದರು.(via REUTERS)

ನವದೆಹಲಿಯಲ್ಲಿ ಶನಿವಾರ ಆರಂಭವಾದ ಜಿ20 ಶೃಂಗಸಭೆಯ ಮೊದಲ ದಿನದ ಕಲಾಪದ ವೇಳೆ  ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಯುಎಸ್ ಅಧ್ಯಕ್ಷ ಜೋ ಬಿಡೆನ್‌ ಜತೆಗೆ ಮಾತುಕತೆ ನಡೆಸಿದರು.   
icon

(2 / 7)

ನವದೆಹಲಿಯಲ್ಲಿ ಶನಿವಾರ ಆರಂಭವಾದ ಜಿ20 ಶೃಂಗಸಭೆಯ ಮೊದಲ ದಿನದ ಕಲಾಪದ ವೇಳೆ  ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಯುಎಸ್ ಅಧ್ಯಕ್ಷ ಜೋ ಬಿಡೆನ್‌ ಜತೆಗೆ ಮಾತುಕತೆ ನಡೆಸಿದರು.   (AP)

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನವದೆಹಲಿಯಲ್ಲಿ ಜಿ20 ಶೃಂಗಸಭೆಯ ಮೊದಲ ದಿನ ಸ್ವಾಗತ ಭಾಷಣ ಮಾಡಿದರು. ಇದೇ ವೇಳೆ ಅವರ ಎದುರು ಇದ್ದ ನೇಮ್‌ಪ್ಲೇಟ್‌ನಲ್ಲಿ ಭಾರತ್ ಎಂದು ದೇಶದ ಹೆಸರು ಬರೆದಿದ್ದುದು ಗಮನಸೆಳೆಯಿತು.
icon

(3 / 7)

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನವದೆಹಲಿಯಲ್ಲಿ ಜಿ20 ಶೃಂಗಸಭೆಯ ಮೊದಲ ದಿನ ಸ್ವಾಗತ ಭಾಷಣ ಮಾಡಿದರು. ಇದೇ ವೇಳೆ ಅವರ ಎದುರು ಇದ್ದ ನೇಮ್‌ಪ್ಲೇಟ್‌ನಲ್ಲಿ ಭಾರತ್ ಎಂದು ದೇಶದ ಹೆಸರು ಬರೆದಿದ್ದುದು ಗಮನಸೆಳೆಯಿತು.(HT Photo)

ವಿಶ್ವದ ಅತಿದೊಡ್ಡ ಆರ್ಥಿಕತೆಗಳನ್ನು ಒಳಗೊಂಡ ಜಿ20 ಗುಂಪಿಗೆ ಆಫ್ರಿಕನ್ ಯೂನಿಯನ್ ಅನ್ನು ಶನಿವಾರ ಶಾಶ್ವತ ಸ್ಥಾನಮಾನ ನೀಡಿ ಸ್ವಾಗತಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತ ಭಾಷಣದ ವೇಳೆ ಈ ಮಹತ್ವದ ವಿಚಾರವನ್ನು ಘೋಷಿಸಿದರು. 
icon

(4 / 7)

ವಿಶ್ವದ ಅತಿದೊಡ್ಡ ಆರ್ಥಿಕತೆಗಳನ್ನು ಒಳಗೊಂಡ ಜಿ20 ಗುಂಪಿಗೆ ಆಫ್ರಿಕನ್ ಯೂನಿಯನ್ ಅನ್ನು ಶನಿವಾರ ಶಾಶ್ವತ ಸ್ಥಾನಮಾನ ನೀಡಿ ಸ್ವಾಗತಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತ ಭಾಷಣದ ವೇಳೆ ಈ ಮಹತ್ವದ ವಿಚಾರವನ್ನು ಘೋಷಿಸಿದರು. (AP)

ನವದೆಹಲಿಯ ಭಾರತ್ ಮಂಟಪದಲ್ಲಿ 2023ರ ಜಿ 20 ಶೃಂಗಸಭೆಯಲ್ಲಿ ಜಿ 20 ರ ಖಾಯಂ ಸದಸ್ಯರಾದ ನಂತರ ಯೂನಿಯನ್ ಆಫ್ ಕೊಮೊರೊಸ್ ಮತ್ತು ಆಫ್ರಿಕನ್ ಯೂನಿಯನ್ (ಎಯು) ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರು ಪಿಎಂ ಮೋದಿ ಅವರನ್ನು ಆಲಂಗಿಸಿದರು.
icon

(5 / 7)

ನವದೆಹಲಿಯ ಭಾರತ್ ಮಂಟಪದಲ್ಲಿ 2023ರ ಜಿ 20 ಶೃಂಗಸಭೆಯಲ್ಲಿ ಜಿ 20 ರ ಖಾಯಂ ಸದಸ್ಯರಾದ ನಂತರ ಯೂನಿಯನ್ ಆಫ್ ಕೊಮೊರೊಸ್ ಮತ್ತು ಆಫ್ರಿಕನ್ ಯೂನಿಯನ್ (ಎಯು) ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರು ಪಿಎಂ ಮೋದಿ ಅವರನ್ನು ಆಲಂಗಿಸಿದರು.(PTI)

ಹವಾಮಾನ ಪರಿವರ್ತನೆಗೆ ಹಣಕಾಸು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ ಗುರಿಗಳ ತ್ವರಿತ ಅನುಷ್ಠಾನ, ಕ್ರಿಪ್ಟೋಕರೆನ್ಸಿಗೆ ಚೌಕಟ್ಟಿನ ಸ್ಥಾಪನೆ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಸುಧಾರಣೆ ಸೇರಿ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಸ್ಪಷ್ಟ ಫಲಿತಾಂಶಗಳನ್ನು ಸಾಧಿಸುವ ಗುರಿಯನ್ನು ಭಾರತ ಹೊಂದಿದೆ.
icon

(6 / 7)

ಹವಾಮಾನ ಪರಿವರ್ತನೆಗೆ ಹಣಕಾಸು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ ಗುರಿಗಳ ತ್ವರಿತ ಅನುಷ್ಠಾನ, ಕ್ರಿಪ್ಟೋಕರೆನ್ಸಿಗೆ ಚೌಕಟ್ಟಿನ ಸ್ಥಾಪನೆ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಸುಧಾರಣೆ ಸೇರಿ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಸ್ಪಷ್ಟ ಫಲಿತಾಂಶಗಳನ್ನು ಸಾಧಿಸುವ ಗುರಿಯನ್ನು ಭಾರತ ಹೊಂದಿದೆ.(AP)

ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವವರ ಪೈಕಿ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ದಕ್ಷಿಣ ಕೊರಿಯಾದ ಅಧ್ಯಕ್ಷ ಯೋನ್ ಸುಕ್ ಯೋಲ್ ಮತ್ತು ಬ್ರೆಜಿಲಿಯನ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಸೇರಿ ಹಲವರಿದ್ಧಾರೆ. 
icon

(7 / 7)

ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವವರ ಪೈಕಿ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ದಕ್ಷಿಣ ಕೊರಿಯಾದ ಅಧ್ಯಕ್ಷ ಯೋನ್ ಸುಕ್ ಯೋಲ್ ಮತ್ತು ಬ್ರೆಜಿಲಿಯನ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಸೇರಿ ಹಲವರಿದ್ಧಾರೆ. (PTI)


ಇತರ ಗ್ಯಾಲರಿಗಳು