ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  G20 Summit Day 2: ಜಿ20 ಶೃಂಗದ ಇಂದಿನ ಕಲಾಪ ವೇಳಾಪಟ್ಟಿ, 5 ಪಾಯಿಂಟ್ಸ್‌ನಲ್ಲಿ ಮೊದಲ ದಿನದ ಸಾರಾಂಶ ಮತ್ತು ಇತರೆ ವಿವರ

G20 Summit Day 2: ಜಿ20 ಶೃಂಗದ ಇಂದಿನ ಕಲಾಪ ವೇಳಾಪಟ್ಟಿ, 5 ಪಾಯಿಂಟ್ಸ್‌ನಲ್ಲಿ ಮೊದಲ ದಿನದ ಸಾರಾಂಶ ಮತ್ತು ಇತರೆ ವಿವರ

HT Kannada Desk HT Kannada

Sep 10, 2023 08:22 AM IST

ನವದೆಹಲಿಯಲ್ಲಿ ಶನಿವಾರ ನಡೆದ ಜಿ20 ಶೃಂಗಸಭೆಯಲ್ಲಿ ಜಾಗತಿಕ ಜೈವಿಕ ಇಂಧನ ಒಕ್ಕೂಟದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕ ಅಧ್ಯಕ್ಷ ಜೋ ಬಿಡೆನ್ (ಎಡ), ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಕೈ ಹಿಡಿದು ಒಮ್ಮತ ತೋರಿದ ಸಂದರ್ಭ.

  • G20 Summit Day 2: ಭಾರತದ ಅಧ್ಯಕ್ಷತೆಯ ಜಿ20ಯ ಜಿ20 ನಾಯಕರ ಶೃಂಗಕ್ಕೆ ಭಾರತ ಇದೇ ಮೊದಲ ಸಲ ಆತಿಥ್ಯವಹಿಸಿದ್ದು, ಮೊದಲ ದಿನವೇ ಐತಿಹಾಸಿಕ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಮಹತ್ವಾಕಾಂಕ್ಷೆಯ ನವದೆಹಲಿ ಘೋಷಣೆಗೆ ಎಲ್ಲ ಸದಸ್ಯ ರಾಷ್ಟ್ರಗಳ ನಾಯಕರು ಒಮ್ಮತ ತೋರಿಸಿದ್ದು ಇದಕ್ಕೆ ಕಾರಣ. ಎರಡನೇ ದಿನದ ಕಲಾಪದ ವೇಳಾಪಟ್ಟಿ ಮತ್ತು ಇತರೆ ವಿವರ ಇಲ್ಲಿದೆ. 

ನವದೆಹಲಿಯಲ್ಲಿ ಶನಿವಾರ ನಡೆದ ಜಿ20 ಶೃಂಗಸಭೆಯಲ್ಲಿ ಜಾಗತಿಕ ಜೈವಿಕ ಇಂಧನ ಒಕ್ಕೂಟದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕ ಅಧ್ಯಕ್ಷ ಜೋ ಬಿಡೆನ್ (ಎಡ), ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಕೈ ಹಿಡಿದು ಒಮ್ಮತ ತೋರಿದ ಸಂದರ್ಭ.
ನವದೆಹಲಿಯಲ್ಲಿ ಶನಿವಾರ ನಡೆದ ಜಿ20 ಶೃಂಗಸಭೆಯಲ್ಲಿ ಜಾಗತಿಕ ಜೈವಿಕ ಇಂಧನ ಒಕ್ಕೂಟದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕ ಅಧ್ಯಕ್ಷ ಜೋ ಬಿಡೆನ್ (ಎಡ), ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಕೈ ಹಿಡಿದು ಒಮ್ಮತ ತೋರಿದ ಸಂದರ್ಭ. (AP)

ಭಾರತದ ರಾಜಧಾನಿ ದೆಹಲಿಯಲ್ಲಿ ಜಿ20 ನಾಯಕರ ಶೃಂಗ ಸಭೆಯ ಮೊದಲ ದಿನವಾದ ಶನಿವಾರ ಮಹತ್ವದ ನವದೆಹಲಿ ಘೋಷಣೆಯನ್ನು ಅಂಗೀಕರಿಸಲಾಯಿತು. ಚೀನಾ ಮತ್ತು ರಷ್ಯಾ ಪ್ರತಿನಿಧಿಗಳನ್ನು ಒಳಗೊಂಡ ನಾಯಕರು ಘೋಷಣೆಯ ಎಲ್ಲ 83 ಪ್ಯಾರಾಗಳನ್ನು ಶೇಕಡ 100ರಷ್ಟು ಒಮ್ಮತದೊಂದಿಗೆ ಅಂಗೀಕರಿಸಿರುವುದು ಮಹತ್ವದ ಮೈಲಿಗಲ್ಲು.

ಟ್ರೆಂಡಿಂಗ್​ ಸುದ್ದಿ

ಸಂಪಾದಕೀಯ: ಕೃಷಿ ಉತ್ಪನ್ನ ಮತ್ತು ರಾಜಕಾರಣ; ಈರುಳ್ಳಿ ಮೇಲೆ ಚುನಾವಣೆಯ ಛಾಯೆ, ರಫ್ತು ನಿರ್ಬಂಧ ಹಿಂಪಡೆವ ನಿರ್ಧಾರದ ಹಲವು ಮುಖಗಳು

ಯಶೋಗಾಥೆ: ಬರಪೀಡಿತ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಜಲಕ್ರಾಂತಿ ಹುಟ್ಟುಹಾಕಿದ ಸುರತ್ಕಲ್‌ ಹಳೆ ವಿದ್ಯಾರ್ಥಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ವಿಶ್ವ ನಾಯಕರು ರಾಷ್ಟ್ರರಾಜಧಾನಿಯ ಪ್ರಗತಿ ಮೈದಾನದ ಭಾರತ ಮಂಟಪದ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ ಒಟ್ಟು ಸೇರಿದ್ದಾರೆ. ಜಿ20 ಶೃಂಗ ಸಭೆಯ ಮೊದಲ ಕಲಾಪವು ಒಂದು ಭೂಮಿ (ಒನ್ ಅರ್ಥ್) ಥೀಮ್‌ ಅಡಿಯಲ್ಲಿ ಶನಿವಾರ ಬೆಳಗ್ಗೆ 10.30ಕ್ಕೆ ಶುರುವಾಯಿತು. ಈ ಸಭೆಯಲ್ಲಿ ಜಾಗತಿಕ ಮಟ್ಟದಲ್ಲಿ ಪರಿಸರದ ವಿಚಾರದಲ್ಲಿ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳು, ಮಾಡಬೇಕಾದ ಪರಿಹಾರ ಕಾರ್ಯಗಳನ್ನು ಜಿ20 ನಾಯಕರು ಮತ್ತು ಪ್ರತಿನಿಧಿಗಳು ಚರ್ಚಿಸಿದರು.

ಎರಡನೇ ಕಲಾಪವು "ಒಂದು ಕುಟುಂಬ" ( ಒನ್‌ ಫ್ಯಾಮಿಲಿ) ಥೀಮ್‌ನಲ್ಲಿ ಶನಿವಾರ ಅಪರಾಹ್ನ 3.30 ರಿಂದ 4.45ರ ತನಕ ನಡೆಯಿತು. ಇದೇ ಕಲಾಪದಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿ ನಾಯಕರ ಘೋಷಣೆಯನ್ನು ಮಂಡಿಸಿ ಅನುಮೋದನೆಗೆ ಇಟ್ಟು ಅಂಗೀಕಾರ ಪಡೆದುಕೊಂಡರು.

ಜಿ20 ಶೃಂಗದಲ್ಲಿ ಇಂದೇನು ನಡೆಯಲಿದೆ, ಸೆಪ್ಟೆಂಬರ್ 10ರ ಕಲಾಪಗಳ ವೇಳಾಪಟ್ಟಿ ಹೀಗಿದೆ

ಬೆಳಗ್ಗೆ 8.15ರಿಂದ 9 ಗಂಟೆ - ಎಲ್ಲ ನಾಯಕರು, ನಿಯೋಗ ಮುಖ್ಯಸ್ಥರು, ಪ್ರತಿನಿಧಿಗಳು ತಮ್ಮ ತಮ್ಮ ವಾಹನಗಳಲ್ಲಿ ರಾಜಘಾಟ್‌ಗೆ ತಲುಪಲಿದ್ದಾರೆ.

ಬೆಳಗ್ಗೆ 9 ರಿಂದ 9.20ರ ತನಕ ಮಹಾತ್ಮ ಗಾಂಧಿ ಸಮಾಧಿಗೆ ವಿಶ್ವನಾಯಕರು ಗೌರವ ಸಲ್ಲಿಸಲಿದ್ದಾರೆ. ಇದೇ ವೇಳೆ, ಮಹಾತ್ಮ ಗಾಂಧಿಯವರಿಗೆ ಪ್ರಿಯವಾದ ಭಜನೆ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 9.20ಕ್ಕೆ ವಿಶ್ವ ನಾಯಕರು ಮತ್ತು ಎಲ್ಲ ನಿಯೋಗ ಮುಖ್ಯಸ್ಥರು, ಪ್ರತಿನಿಧಿಗಳು ಭಾರತ ಮಂಟಪದ ಲಾಂಜ್‌ ಕಡೆಗೆ ಹೊರಡಲಿದ್ದಾರೆ.

ಬೆಳಗ್ಗೆ 9.40 ರಿಂದ 10.15ರ ತನಕ ಭಾರತ ಮಂಟಪಕ್ಕೆ ವಿಶ್ವ ನಾಯಕರು ಮತ್ತು ಎಲ್ಲ ನಿಯೋಗ ಮುಖ್ಯಸ್ಥರು, ಪ್ರತಿನಿಧಿಗಳು ತಲುಪುವ ಸಮಯ.

ಬೆಳಗ್ಗೆ 10.15ರಿಂದ 10.30ರ ತನಕ ಭಾರತ ಮಂಟಪದ ದಕ್ಷಿಣ ಪ್ಲಾಜಾದಲ್ಲಿ ಗಿಡ ನೆಡುವ ಕಾರ್ಯಕ್ರಮ

ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರ ತನಕ ಶೃಂಗದ ಮೂರನೇ ಕಲಾಪ "ಒಂದು ಭವಿಷ್ಯ" (ಒನ್‌ ಫ್ಯೂಚರ್‌) ನಡೆಯಲಿದೆ.

ಭಾರತದ ಪ್ರಧಾನಿ ಮೋದಿ - ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರನ್‌ ಭೇಟಿ

ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್‌ ಮ್ಯಾಕ್ರನ್‌ ಜತೆಗೆ ಪ್ರಧಾನಿ ಮೋದಿ ವರ್ಕಿಂಗ್ ಲಂಚ್‌ಗೆ ಜೊತೆಯಾಗುವ ನಿರೀಕ್ಷೆ ಇದೆ. ಇದೇ ರೀತಿ ಮೀಟಿಂಗ್‌ ಅನ್ನು ಕೆನಡಾ, ಯುಎಇ, ದಕ್ಷಿಣ ಕೊರಿಯಾ, ಬ್ರೆಜಿಲ್, ನೈಜೀರಿಯಾ, ಕೊಮೊರೋಸ್‌ ಮತ್ತು ಟರ್ಕಿ ನಾಯಕರ ಜತೆಗೂ ಯೋಜಿತವಾಗಿವೆ.

ದೆಹಲಿ ಅಕ್ಷರಧಾಮಕ್ಕೆ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಭೇಟಿ

ಬ್ರಿಟಿಷ್‌ ಪ್ರಧಾನಿ ರಿಷಿ ಸುನಕ್, ಅಕ್ಷತಾ ಮೂರ್ತಿ ದಂಪತಿ ಭಾನುವಾರ ಬೆಳಗ್ಗೆ ಅಕ್ಷರಧಾಮ ದೇಗುಲಕ್ಕೆ ಭೇಟಿ ನೀಡಿದರು. ಹೀಗಾಗಿ ದೇಗುಲದ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಶನಿವಾರ ರಿಷಿ ಸುನಕ್ ಅವರನ್ನು ಭೇಟಿ ಮಾಡಿದ್ದು, ದ್ವಿಪಕ್ಷೀಯವಾಗಿ ಹಲವು ಕ್ಷೇತ್ರಗಳಲ್ಲಿ ವ್ಯಾವಹಾರಿಕ ಸಂಬಂಧ ಸುಧಾರಣೆ ಕುರಿತು ಮಾತನಾಡಿದ್ದರು. ರಿಷಿ ಸುನಕ್‌ ಅವರು ತಮ್ಮ ಹಿಂದೂ ಮೂಲದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಭಾರತದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಲು ಸಮಯ ಸಿಕ್ಕಿರುವುದಕ್ಕೆ ಖುಷಿ ಪಟ್ಟಿದ್ದಾರೆ.

“ನಾನು ಹೆಮ್ಮೆಯ ಹಿಂದೂ. ನಾನು ಬೆಳೆದದ್ದು ಹೀಗೆಯೇ, ನಾನು ಹಾಗೆಯೇ ಇದ್ದೇನೆ. ಆಶಾದಾಯಕ ವಿಚಾರ ಎಂದರೆ, ನಾನು ಮುಂದಿನ ಒಂದೆರಡು ದಿನ ಇಲ್ಲಿರುವಾಗ ಮಂದಿರಕ್ಕೆ ಭೇಟಿ ನೀಡುವುದಕ್ಕೆ ಸಮಯ ಸಿಕ್ಕಿದೆ. ನಾವು ಇತ್ತೀಚೆಗಷ್ಟೇ ರಕ್ಷಾಬಂಧನವನ್ನುಆಚರಿಸಿದ್ದೇವೆ, ಆದ್ದರಿಂದ ನನ್ನ ಸಹೋದರಿ ಮತ್ತು ನನ್ನ ಸೋದರಸಂಬಂಧಿಗಳು ಕಟ್ಟಿದ ಎಲ್ಲ ರಾಖಿಗಳು ಜತೆಗಿವೆ... ನನಗೆ ಜನ್ಮಾಷ್ಟಮಿಯನ್ನು ಆಚರಿಸಲು ಸಮಯವಿರಲಿಲ್ಲ. ಆದರೆ, ನಾನು ಹೇಳಿದಂತೆ ಈ ಬಾರಿ ಮಂದಿರಕ್ಕೆ ಭೇಟಿ ನೀಡಿದರೆ ಆ ಕೊರತೆಯನ್ನು ಸರಿದೂಗಿಸಬಹುದು ಎಂದು ರಿಷಿ ಸುನಕ್ ಎಎನ್‌ಐ ಜತೆಗೆ ಮಾತನಾಡುತ್ತ ತಿಳಿಸಿದ್ದರು.

ಜಿ20 ಶೃಂಗದ ಮೊದಲ ದಿನ ಏನಾಯಿತು: ಇಲ್ಲಿವೆ ಟಾಪ್ 5 ಅಂಶದ ವಿವರ

1. ವಿಶ್ವದ 20 ಪ್ರಮುಖ ಆರ್ಥಿಕತೆಗಳ ಗುಂಪು (ಜಿ20) ವಿಶ್ವದ ಜಿಡಿಪಿಯ 85 ಪ್ರತಿಶತವನ್ನು ಪ್ರತಿನಿಧಿಸುವ ಬ್ಲಾಕ್‌ನ ಹೊಸ ಸದಸ್ಯ ಆಫ್ರಿಕನ್ ಒಕ್ಕೂಟವನ್ನು ಸ್ವಾಗತಿಸುವ ಮೂಲಕ ಜಿ20 ಶೃಂಗವನ್ನು ಪ್ರಾರಂಭಿಸಿತು. ಈ ಸೇರ್ಪಡೆಗೆ ಮೊದಲು ಜಿ20ಯಲ್ಲಿ 19 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟ ಮಾತ್ರ ಇತ್ತು. ದಕ್ಷಿಣ ಆಫ್ರಿಕಾವು ಆ ಖಂಡದಿಂದ ಅದರ ಏಕೈಕ ಸದಸ್ಯ ರಾಷ್ಟ್ರವಾಗಿದೆ.

ಆಫ್ರಿಕನ್ ಯೂನಿಯನ್‌ನಲ್ಲಿ 55 ಸದಸ್ಯ ರಾಷ್ಟ್ರಗಳಿವೆ. ಆದರೆ ಆರು ಜುಂಟಾ-ಆಡಳಿತ ರಾಷ್ಟ್ರಗಳನ್ನು ಪ್ರಸ್ತುತ ಅಮಾನತುಗೊಳಿಸಲಾಗಿದೆ. ಇದು ಸುಮಾರು 1.4 ಶತಕೋಟಿ ಜನರೊಂದಿಗೆ 3 ಟ್ರಿಲಿಯನ್‌ ಡಾಲರ್‌ ಸಾಮೂಹಿಕ ಜಿಡಿಪಿ ಹೊಂದಿದೆ.

2. ಕಳೆದ ವರ್ಷ ಉಕ್ರೇನ್‌ ಮೇಲೆ ಮಾಸ್ಕೋದ ಆಕ್ರಮಣದ ನಂತರ ಜಿ20 ನಾಯಕರು ಉಕ್ರೇನ್ ಯುದ್ಧದ ಬಗ್ಗೆ ಬಹಳ ಅಸಮಾಧಾನಗೊಂಡಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಾಜಕೀಯ ವಿರೋಧವನ್ನು ತಪ್ಪಿಸಲು ಶೃಂಗಸಭೆಯಲ್ಲಿ ಭಾಗಿಯಾಗಿಲ್ಲ. ಪ್ರಮುಖ ರಾಜತಾಂತ್ರಿಕ ಮುಜುಗರದ ನಿರೀಕ್ಷೆಯನ್ನು ಎದುರಿಸುತ್ತಿದ್ದ ಆತಿಥೇಯ ಭಾರತವು ತನ್ನ ಹಿಂದಿನ ಯುದ್ಧದ ಖಂಡನೆಯನ್ನು ತಗ್ಗಿಸುವ ಸಾಮಾನ್ಯ ಹೇಳಿಕೆಯನ್ನು ಒಪ್ಪಿಕೊಳ್ಳುವಂತೆ ಸದಸ್ಯರನ್ನು ಒತ್ತಾಯಿಸಿತು. ಅದಕ್ಕೆ ಅಂಗೀಕಾರವೂ ಸಿಕ್ಕಿತು.

ಕೊನೆಯಲ್ಲಿ, ಪ್ರಾದೇಶಿಕ ಲಾಭಕ್ಕಾಗಿ ಸೇನಾ ಬಳಕೆಯನ್ನು ಖಂಡಿಸಿದ ಜಿ20 ನಾಯಕರು, ರಷ್ಯಾದ ವಿರುದ್ಧ ನೇರ ಟೀಕೆ ಮಾಡಲಿಲ್ಲ. ಆದಾಗ್ಯೂ, ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರ ಒಲೆಗ್ ನಿಕೊಲೆಂಕೊ ಹೇಳಿಕೆಯನ್ನು ಜಿ 20 "ಹೆಮ್ಮೆಪಡಲು ಏನೂ ಇಲ್ಲ" ಎಂದು ಟೀಕಿಸಿದರು.

3. ನಿವ್ವಳ-ಶೂನ್ಯ ಹೊರಸೂಸುವಿಕೆ (ನೆಟ್ ಜೀರೋ ಎಮಿಷನ್‌) ಯನ್ನು ಸಾಧಿಸಲು ಡ್ರಾಡೌನ್ ನೀತಿ ಅನುಸರಿಸುವುದು "ಅನಿವಾರ್ಯ" ಎಂಬ ಯುಎನ್ ವರದಿಯು ಒಂದು ದಿನದ ಹಿಂದೆ ಪರಿಗಣಿಸಿದ್ದರೂ, ಪಳೆಯುಳಿಕೆ ಇಂಧನಗಳ ಹಂತ-ಹಂತವನ್ನು ಒಪ್ಪಿಕೊಳ್ಳುವಲ್ಲಿ ನಾಯಕರು ವಿಫಲರಾದರು. ಆದರೆ ಮೊದಲ ಬಾರಿಗೆ, ಜಿ20 ಜಾಗತಿಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವ ಗುರಿಯನ್ನು ಬೆಂಬಲಿಸಿತು ಮತ್ತು 2025 ಕ್ಕಿಂತ ಮೊದಲು ಉತ್ಕರ್ಷಣೆಯ ಉತ್ತುಂಗದ ಅಗತ್ಯವನ್ನು ಉಲ್ಲೇಖಿಸಿದೆ.

4. ಯುನೈಟೆಡ್ ಸ್ಟೇಟ್ಸ್ ಮತ್ತು ಸೌದಿ ಅರೇಬಿಯಾ ಸೇರಿ ವಿಶಾಲ ಮೈತ್ರಿಯು ಯುರೋಪ್, ಮಧ್ಯಪ್ರಾಚ್ಯ ಮತ್ತು ಭಾರತವನ್ನು ಸಂಪರ್ಕಿಸುವ ಆಧುನಿಕ-ದಿನದ ಸ್ಪೈಸ್‌ ರೂಟ್ ರಚಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅನಾವರಣಗೊಳಿಸಿತು. ಇದು ರೈಲ್ವೇ, ಬಂದರು, ವಿದ್ಯುತ್ ಮತ್ತು ದತ್ತಾಂಶ ಜಾಲ ಮತ್ತು ಹೈಡ್ರೋಜನ್ ಪೈಪ್‌ಲೈನ್‌ಗಳ ವಿಚಾರದಲ್ಲಿ ಅದ್ದೂರಿ ಚೀನೀ ಮೂಲಸೌಕರ್ಯ ವೆಚ್ಚಗಳಿಗೆ ಪ್ರತಿಸಮತೋಲನದಲ್ಲಿ ಸ್ಥಾಪಿಸುತ್ತದೆ.

5. ದೇಶದಾದ್ಯಂತ ಇಂಡಿಯಾ ಬದಲು ಭಾರತದ ಹೆಸರನ್ನು ಅಧಿಕೃತವಾಗಿ ಬಳಸಲಾಗುತ್ತಿರುವ ಬಗ್ಗೆ ವದಂತಿಗಳು ವ್ಯಾಪಕವಾಗಿ ಹರಡಿದೆ. ಇದಕ್ಕೆ ಪೂರಕವಾಗಿ ಜಿ20 ಶೃಂಗದಲ್ಲಿ "ಭಾರತ್" ನಾಮಫಲಕಗಳು ರಾರಾಜಿಸಿವೆ. ಭಾರತ್‌ ಎಂಬ ದೇಶದ ನಾಮಫಲಕದ ಹಿಂದೆ ಕುಳಿತಿರುವ ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ತಮ್ಮ ಆರಂಭಿಕ ಭಾಷಣದಲ್ಲಿ ಸಂಭಾವ್ಯ ಬದಲಾವಣೆಯ ದೊಡ್ಡ ಸಂಕೇತವನ್ನು ನೀಡಿದರು. ಇಂಡಿಯಾ ಮತ್ತು ಭಾರತ ಎರಡೂ ಸಂವಿಧಾನದಲ್ಲಿ ಉಲ್ಲೇಖವಾಗಿರುವ ದೇಶದ ಅಧಿಕೃತ ಹೆಸರುಗಳಾಗಿವೆ.

ಜಿ20 ನಾಯಕರು ಯಾರು ಎಷ್ಟು ಹೊತ್ತಿಗೆ ಹಿಂದಿರುಗುತ್ತಾರೆ

ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಸೇರಿ ಇಪ್ಪತ್ತು ರಾಷ್ಟ್ರಗಳ ಮುಖ್ಯಸ್ಥರು ಸೆಪ್ಟೆಂಬರ್ 11 ರ ಸೋಮವಾರ ದೆಹಲಿಯಿಂದ ಹೊರಡಲಿದ್ದಾರೆ. ಬಿಡೆನ್ ಅವರ ನಿರ್ಗಮನ ಸೋಮವಾರ ಬೆಳಿಗ್ಗೆ 10.20 ರ ಸುಮಾರಿಗೆ ನಿಗದಿಯಾಗಿದೆ. ಆದರೆ ರಿಷಿ ಸುನಕ್ ದೆಹಲಿಯಿಂದ ಸೋಮವಾರ ಮಧ್ಯಾಹ್ನ 2.15 ಕ್ಕೆ ನಿರ್ಗಮಿಸಲಿದ್ದಾರೆ.

ಎಎನ್‌ಐ ವರದಿ ಪ್ರಕಾರ, ಶೃಂಗಸಭೆಯ ನಂತರ ವಿದೇಶಿ ಪ್ರತಿನಿಧಿಗಳನ್ನು ನೋಡಲು ಕೇಂದ್ರವು ಕೇಂದ್ರದ ರಾಜ್ಯ ಸಚಿವರಿಗೆ ಜವಾಬ್ದಾರಿಗಳನ್ನು ವಹಿಸಿದೆ. ಈ ಸಂಬಂಧ ವಿದೇಶಾಂಗ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ.

ಯುಎಇ, ಯುಎಸ್, ಬಾಂಗ್ಲಾದೇಶ, ಈಜಿಪ್ಟ್, ಚೀನಾ, ಆಸ್ಟ್ರೇಲಿಯಾ, ಯುಕೆ, ಅರ್ಜೆಂಟೀನಾ, ಇಂಡೋನೇಷ್ಯಾ, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ಟರ್ಕಿ, ಜಪಾನ್, ಇಟಲಿ, ಸ್ಪೇನ್, ದಕ್ಷಿಣ ಆಫ್ರಿಕಾ, ರಿಪಬ್ಲಿಕ್ ಆಫ್ ಕೊರಿಯಾ, ಕೆನಡಾ ಮತ್ತು ಸಿಂಗಾಪುರ ಸೇರಿದಂತೆ ರಾಷ್ಟ್ರಗಳ ಮುಖ್ಯಸ್ಥರು ಸೋಮವಾರ ದೆಹಲಿಯಿಂದ ನಿರ್ಗಮಿಸುತ್ತದೆ ಎಂದು ವರದಿ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ