logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Hdfc: ಎಚ್‌ಡಿಎಫ್‌ಸಿ ಮಾಜಿ ಚೇರ್ಮನ್‌ ದೀಪಕ್‌ ಪಾರೇಕ್‌ ಮೊದಲ ಜಾಬ್‌ ಆಫರ್‌ ಲೆಟರ್‌ ವೈರಲ್‌, ಅವರ ಆಗಿನ ವೇತನ ಕಂಡು ಅಚ್ಚರಿಗೊಂಡ ನೆಟ್ಟಿಗರು

HDFC: ಎಚ್‌ಡಿಎಫ್‌ಸಿ ಮಾಜಿ ಚೇರ್ಮನ್‌ ದೀಪಕ್‌ ಪಾರೇಕ್‌ ಮೊದಲ ಜಾಬ್‌ ಆಫರ್‌ ಲೆಟರ್‌ ವೈರಲ್‌, ಅವರ ಆಗಿನ ವೇತನ ಕಂಡು ಅಚ್ಚರಿಗೊಂಡ ನೆಟ್ಟಿಗರು

Praveen Chandra B HT Kannada

Jan 09, 2024 07:59 PM IST

google News

ಎಚ್‌ಡಿಎಫ್‌ಸಿಯ ಮಾಜಿ ಚೇರ್ಮನ್‌ ದೀಪಕ್‌ ಪಾರೇಕ್‌

    • HDFC merger: ಭಾರತದ ಕಾರ್ಪೊರೆಟ್‌ ಜಗತ್ತಿನ ಬೃಹತ್‌ ವಿಲೀನವೆಂದೇ ಪರಿಗಣಿಸಿದ ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ವಿಲೀನದ ಸಂದರ್ಭದಲ್ಲಿ ಎಚ್‌ಡಿಎಫ್‌ಸಿಯ ಮಾಜಿ ಚೇರ್ಮನ್‌ ದೀಪಕ್‌ ಪಾರೇಕ್‌ (Deepak Parekh) ಅವರ ಮೊದಲ ಸ್ಯಾಲರಿ ಮಾಹಿತಿ ವೈರಲ್‌ ಆಗಿದೆ.
ಎಚ್‌ಡಿಎಫ್‌ಸಿಯ ಮಾಜಿ ಚೇರ್ಮನ್‌ ದೀಪಕ್‌ ಪಾರೇಕ್‌
ಎಚ್‌ಡಿಎಫ್‌ಸಿಯ ಮಾಜಿ ಚೇರ್ಮನ್‌ ದೀಪಕ್‌ ಪಾರೇಕ್‌ (Hemant Mishra/Mint)

ಎಚ್‌ಡಿಎಫ್‌ಸಿ ಬ್ಯಾಂಕ್‌ ಜತೆ ಎಚ್‌ಡಿಎಫ್‌ಸಿ ಲಿಮಿಟೆಡ್‌ ವಿಲೀನವಾದ ಈ ಸಂದರ್ಭದಲ್ಲಿ ಎಚ್‌ಡಿಎಫ್‌ಸಿಯ ಮಾಜಿ ಚೇರ್ಮನ್‌ ದೀಪಕ್‌ ಪಾರೇಕ್‌ ಕುರಿತಾದ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಈಗ ಹಲವು ಕೋಟಿ ವೇತನ ಪಡೆಯುತ್ತಿರುವ ಇವರು ತಮ್ಮ ಮೊದಲ ವೇತನದಲ್ಲಿ ಇಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರ? ಎಂಬ ಅಚ್ಚರಿ ಎಲ್ಲರಲ್ಲಿ ಮೂಡಿದೆ.

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ಪತ್ರದ ಪ್ರಕಾರ ದೀಪಕ್‌ ಪಾರೇಕ್‌ ಅವರ ಬೇಸಿಕ್‌ ವೇನ 3,500 ರೂಪಾಯಿ, ಇದರ ಜತೆಗೆ 500 ರೂಪಾಯಿ ಅವರಿಗೆ ಡಿಯರ್‌ನೆಸ್‌ ಅಲೋವೆನ್ಸ್‌ ಇತ್ತು. ಇದರ ಜತೆ ಸಂಸ್ಥೆಯ ಪ್ರಾವಿಡೆಂಟ್‌ ಫಂಡ್‌, ಗ್ರಾಜುಯಿಟಿ, ಮೆಡಿಕಲ್‌ ಬೆನಿಫಿಟ್‌, ಲೀವ್‌ ಟ್ರಾವೆಲ್‌ ಸೌಲಭ್ಯ ಇತ್ಯಾದಿಗಳನ್ನೂ ಇವರಿಗೆ ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ಮನೆಯ ಟೆಲಿಫೋನ್‌ ಬಿಲ್‌ ಶುಲ್ಕವನ್ನೂ ಕಂಪನಿಯೇ ನೀಡುತ್ತಿತ್ತು.

ಭಾರತದ ಕಾರ್ಪೊರೆಟ್‌ ಜಗತ್ತಿನ ಅತ್ಯಂತ ದೊಡ್ಡ ವಿಲೀನವೆಂದು ಕರೆಯಲ್ಪಡುವ ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಲಿಮಿಟೆಡ್‌ನ ವಿಲೀನ ಈ ತಿಂಗಳು ನಡೆದಿದೆ. ಇದೇ ಸಮಯದಲ್ಲಿ ದೀಪಕ್‌ ಪಾರೇಕ್‌ ಅವರ ಸ್ಯಾಲರಿ ಲೆಟರ್‌ ಕೂಡ ವೈರಲ್‌ ಆಗಿದೆ. ಈ ವಿಲೀನಕ್ಕೆ ಮೊದಲು ದೀಪಕ್‌ ಪಾರೇಕ್‌ ಅವರು ಎಚ್‌ಡಿಎಫ್‌ಸಿ ಲಿಮಿಟೆಡ್‌ಗೆ ರಾಜೀನಾಮೆ ನೀಡಿದ್ದಾರೆ. "ನನ್ನ ಬೂಟುಗಳನ್ನು ನೇತುಹಾಕುವ ಸಮಯ" ಎಂದು ರಿಸೈನ್‌ ಮಾಡಿದ ಸಂದರ್ಭದಲ್ಲಿ ದೀಪಕ್‌ ಪಾರೇಕ್‌ ಹೇಳಿದ್ದರು.

ಇವರಿಗೆ ಯಾವ ಇಸವಿಯಲ್ಲಿ ಇಷ್ಟು ಕಡಿಮೆ ವೇತನ ಇತ್ತು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. 1978ರ ಜುಲೈ 19ರಂದು ಇವರು ಎಚ್‌ಡಿಎಫ್‌ಸಿಗೆ ಸೇರಿದ್ದರು. ಆ ಸಂದರ್ಭದಲ್ಲಿ ಇವರಿಗೆ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಹುದ್ದೆ ನೀಡಲಾಗಿತ್ತು. ಆಗ ಅವರಿಗೆ ಮೂರುವರೆ ಸಾವಿರ ವೇತನವಿತ್ತು. ಶೇಕಡ 15ರಷ್ಟು ಎಚ್‌ಆರ್‌ಇ ಮತ್ತು ನಗರದಲ್ಲಿ ವಾಸಿಸುವ ಅಲೋವೆನ್ಸ್‌ ಶೇಕಡ 10 ನೀಡಲಾಗಿತ್ತು. ಈ ಆಫರ್‌ ಲೆಟರ್‌ ಅನ್ನು ಟ್ವಿಟ್ಟರ್‌ನಲ್ಲಿ ಶಿಲ್ಪ ಎಸ್‌ ರಾಣಿಪೀಠ ಎಂಬವರು ಹಂಚಿಕೊಂಡಿದ್ದಾರೆ. ಈ ಆಫರ್‌ ಲೆಟರ್‌ನ ಸತ್ಯಾಸತ್ಯತೆ ಖಚಿತಗೊಂಡಿಲ್ಲ.

ಇದು ಸುಮಾರು 45 ವರ್ಷಗಳ ಹಿಂದಿನ ವೇತನವಾಗಿದ್ದರೂ ಇದು ಕಡಿಮೆ ವೇತನವೆಂದೇ ಹೇಳಬಹುದು. ಆದರೆ, ನಿವೃತ್ತಿಯಾಗುವ ಮೊದಲು ಇವರ ವೇತನ ಹಲವು ಕೋಟಿಗೆ ತಲುಪಿತ್ತು. ಹೊಸದಾಗಿ ಉದ್ಯೋಗಕ್ಕೆ ಸೇರುವವರು ಇದನ್ನು ಒಂದು ಪಾಠವಾಗಿ ತೆಗೆದುಕೊಳ್ಳಬಹುದು. ಕೆಲಸಕ್ಕೆ ಸೇರುವ ಸಮಯದಲ್ಲಿ ಕಡಿಮೆ ವೇತನವಿದ್ದರೂ ಸತತ ಪ್ರಯತ್ನ ಮತ್ತು ಪ್ರತಿಭೆಯಿಂದ ದೊಡ್ಡ ವೇತನ ಮತ್ತು ದೊಡ್ಡ ಹುದ್ದೆಗೆ ಹೋಗಬಹುದು ಎಂದು ಇದರಿಂದ ತಿಳಿದುಕೊಳ್ಳಬಹುದು.

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಪಾರೇಕ್‌ ಅವರು ಸುಮಾರು 45 ವರ್ಷ ಕೆಲಸ ಮಾಡಿದ ಬಳಿಕ ರಾಜೀನಾಮೆ ನೀಡಿದ್ದಾರೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಬ್ಯಾಂಕ್‌ ನೇಮಕಾತಿಗೆ ಸಂಬಂಧಪಟ್ಟಂತೆ ವಯೋಮಿತಿ ನಿಯಮಗಳಿಗೆ ತಕ್ಕಂತೆ ಇವರು ರಾಜೀನಾಮೆ ನೀಡಿದ್ದಾರೆ. ಪಾರೇಕ್‌ ಅವರು ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ