Organ Donation: ಜೀವ ಉಳಿಸಲು ರಕ್ತದಾನವಷ್ಟೇ ಶ್ರೇಷ್ಠ ಅಂಗಾಂಗ ದಾನ; ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ಅಂಗಾಂಗ ದಾನಿಗಳು
Jun 15, 2023 09:52 AM IST
ಕೆಲವು ದೇಶಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ಅಂಗಾಂಗ ದಾನ ಮಾಡುವವರ ಸಂಖ್ಯೆ ಕಡಿಮೆ ಇದೆ. (File)
ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಗಮನಾರ್ಹವಾದ ಬೆಳವಣಿಗೆಗಳನ್ನು ಕಂಡಿದ್ದರೂ, ಪ್ರಪಂಚದ ಕೆಲವು ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತ ಅತ್ಯಂತ ಕಡಿಮೆ ಅಂಗಾಂಗ ದಾನಿಗಳನ್ನು ಹೊಂದಿದೆ.
ನವೆದಹಲಿ: ಮನುಷ್ಯನ ಜೀವ ಉಳಿಸಲು ಅತ್ಯಂತ ಶ್ರೇಷ್ಠ ದಾನ ಎಂದರೆ ಅದು ರಕ್ತದಾನ (Blood Donation) ಅಂತ ಹೇಳ್ತಾರೆ. ಇದರ ಜೊತೆಗೆ ಆಧುನಿಕ ಜಗತ್ತಿನಲ್ಲೇ ಅಂಗಾಂಗ ದಾನ (Organ Donation) ಕೂಡ ಶ್ರೇಷ್ಠವಾಗಿದೆ.
ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಗಮನಾರ್ಹವಾದ ಬೆಳವಣಿಗೆಗಳನ್ನು ಕಂಡಿದ್ದರೂ, ಪ್ರಪಂಚದ ಕೆಲವು ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತ (India) ಅತ್ಯಂತ ಕಡಿಮೆ ಅಂಗಾಂಗ ದಾನಿಗಳನ್ನು ಹೊಂದಿದೆ.
ದಕ್ಷಿಣ ಏಷ್ಯಾ ರಾಷ್ಟ್ರವಾದ ಭಾರತದಲ್ಲಿ ಅಂಗಾಂಗ ದಾನಿಗಳ ಪ್ರಮಾಣವನ್ನು ಹೆಚ್ಚಿಸಲು ಗಮನಾರ್ಹವಾದ ಬದಲಾವಣೆಗಳನ್ನು ತರುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಂಗದಾನಕ್ಕಾಗಿ ಭಾರತ ಬೇಡಿಕೆ ಹೆಚ್ಚಿದೆ. ಆದರೆ ಪೂರೈಕೆ ಮಾತ್ರ ತೀರಾ ಕಡಿಮೆಯಾಗಿದೆ. ಮರಣಿಸಿದ ಅಂಗ ದಾನಿಗಳ ದರವು ಪ್ರತಿ 10 ಲಕ್ಷಕ್ಕೆ ಒಬ್ಬ ದಾನಿಗಿಂತ ಕಡಿಮೆ ಇದೆ. ಇದು ದಿಗ್ಬ್ರಮೆಗೊಳಿಸುವಷ್ಟು ಕಡಿಮೆಯಾಗಿದೆ. ವಿಶೇ,ವಾಗಿ ಅಮೆರಿಕ ಮತ್ತು ಸ್ಪೇನ್‌ನಂತಹ ದೇಶಗಳಲ್ಲಿ ಹೆಚ್ಚಿದೆ. ಇಲ್ಲಿ ಮರಣಿಸಿದ ಅಂಗ ದಾನಿಗಳ ದರಗಳು ವಿಶ್ವದ ಅತಿ ಹೆಚ್ಚು ಅಂದರೆ ಪ್ರತಿ ಮಿಲಿಯನ್‌ಗೆ 40 ದಾನಿಗಳು ಇದ್ದಾರೆ.
ಅಂಗಾಂಗ ಪೂರೈಕೆಗಿಂತ ಬೇಡಿಕೆಯೇ ಹೆಚ್ಚು
ಭಾರತದಲ್ಲಿ ಅಂಗಾಂಗ ದಾನ ಮಾಡಬೇಕಾದವರು ಹಾಗೂ ಕಸಿ ಮಾಡಲು ಲಭ್ಯವಿರುವ ಅಂಗಗಳ ಸಂಖ್ಯೆಯ ನಡುವಿನ ಅಂತರ ದೊಡ್ಡದಿದೆ. ಇದರ ಪರಿಣಾಮ ಅಗತ್ಯವಿರುವ ಅಂಗಾಂಗ ಸೂಕ್ತ ಸಮಯಕ್ಕೆ ಸಿಗದಿರುವುದು ಅನೇಕ ರೋಗಿಗಳು ಸಾವಿಗೆ ಕಾರಣವಾಗುತ್ತದೆ. ಅಂಗಾಂಗ ಪೂರೈಕೆಗಿಂತ ಬೇಡಿಕೆ ಹೆಚ್ಚಾಗಿದೆ.
ಅಂಗಾಂಗ ದಾನದ ಬಗ್ಗೆ ಅರಿವಿನ ಕೊರತೆ ಇದೆ. ತಪ್ಪು ಕಲ್ಪನೆಗಳು ಮತ್ತು ಮೂಲಸೌಕರ್ಯ ಸಮಸ್ಯೆಗಳು ಸೇರಿದಂತೆ ಅಂಗಾಂಗ ದಾನಿಗಳ ಕೊರತೆಗೆ ಕಾರಣವಾಗುವ ಹಲವು ಅಂಶಗಳನ್ನು ವೈದ್ಯರು ಮತ್ತು ಕಸಿ ತಜ್ಞರು ಗುರುತಿಸಿದ್ದಾರೆ.
ಅಮೆರಿಕದ ನಂತರ ಭಾರತವು ವಿಶ್ವದ ಎರಡನೇ ಅತಿ ಹೆಚ್ಚು ಜೀವಂತ ದಾನಿಗಳನ್ನು ಕಸಿಯನ್ನು ನಿರ್ವಹಿಸುತ್ತಿದೆ. ಆದರೆ ದಕ್ಷಿಣ ಏಷ್ಯಾದ ರಾಷ್ಟ್ರಗಳ ಪೈಕಿ ಭಾರತ ಮರಣಿಸಿದ ದಾನಿಗಳಿಂದ ಕೇವಲ ಕಡಿಮೆ ಸಂಖ್ಯೆ ಕಸಿಗಳನ್ನು ಮಾಡಿದೆ.
2019ರಲ್ಲಿ ಭಾರತದಲ್ಲಿ ಜೀವಂತ ದಾನಿಗಳಿಂದ ಶೇಕಡಾ 88 ರಷ್ಟು ಅಂದರೆ 9,751 ಮೂತ್ರಪಿಂಡ (ಕಿಡ್ನಿ) ಕಸಿಗಳು, ಶೇಕಡಾ 77 ರಷ್ಟು ಯಕೃತ್ತಿನ (ಲಿವರ್) ಕಸಿಗಳನ್ನು ಮಾಡಲಾಗಿದೆ. ಇದೇ ಅವಧಿಯಲ್ಲಿ ಜಾಗತಿಕವಾಗಿ ಶೇಕಡಾ 36 ರಷ್ಟು ಮೂತ್ರಪಿಂಡ ಹಾಗೂ ಶೇಕಡಾ 19 ರಷ್ಟು ಲಿವರ್ ಕಸಿಗಳನ್ನು ಮಾಡಲಾಗಿದೆ ಎಂದು ಅಂಗಾಂಗ ದಾನ ಮತ್ತು ಕಸಿ ಮಾಡುವಿಕೆಯನ್ನು ಉತ್ತೇಜಿಸುವ ಮೋಹನ್ ಫೌಂಡೇಶನ್‌ನ ಸುನಿಲ್ ಶ್ರಾಫ್ ತಿಳಿಸಿದ್ದಾರೆ.
ಭಾರತದಲ್ಲಿ ದಾನಿಗಳ ದರವನ್ನು ಹೆಚ್ಚಿಸಬಹುದು?
ರಸ್ತೆ ಸಾರಿಗೆ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಿಂದ ಸುಮಾರು 1,50, 000 ಜನ ಸಾಯುತ್ತಾರೆ. ಪ್ರತಿ ದಿನ ಸರಾಸರಿ 1,000ಕ್ಕೂ ಹೆಚ್ಚು ಘರ್ಷಣೆಗಳಿಂದ ಹಾಗೂ 400ಕ್ಕೂ ಅಧಿಕ ಮಂದಿ ರಸ್ತೆ ಅಪಘಾತದಲ್ಲಿ ಮೃತರಾಗುತ್ತಿದ್ದಾರೆ.
ಈ ಮೃತರದಿಂದ ಹೃದಯ, ಲಿವರ್, ಕಿಡ್ನಿ, ಕರುಳುಗಳು, ಕಣ್ಣು, ಶ್ವಾಸಕೋಶ ಹಾಗೂ ಮೇದೋಜ್ಜೀರಕ ಗ್ರಂಥಿಯನ್ನು ದಾನ ಮಾಡಬಹುದಾಗಿದೆ. ಅಗತ್ಯವಿರುವ ರೋಗಿಗಳಿಗೆ ಈ ಅಂಗಾಂಗಳನ್ನು ನೀಡಿದರೆ ಅವರ ಜೀವ ಉಳಿಸಬಹುದಾಗಿದೆ. ಒಬ್ಬ ಮೃತ ದಾನಿಯಿಂದ ಒಂಬತ್ತು ಜನರ ಜೀವ ಉಳಿಸಬಹುದಾಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಮೃತರ ಕುಟುಂಬಸ್ಥರು ಅಂಗಾಂಗ ದಾನ ಮಾಡುವ ವಿಷಯದಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಮೃತ ದಾನಿಗಳ ಅಂಗಾಂಗಗಳನ್ನು ಕೇಳೋದಿಕ್ಕೆ ವೈದ್ಯರೂ ಮನಸು ಮಾಡುತ್ತಿಲ್ಲ. ಯಾವುದೇ ಪ್ರೋತ್ಸಾಹ ಇಲ್ಲದೆ, ಭಯದ ಕಾರಣದಿಂದ ವೈದ್ಯರು ಅಂಗಾಂಗ ಕೇಳಲು ಹಿಂದೆ ಮುಂದೆ ನೋಡುತ್ತಾರೆ ಎಂದು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಯಕೃತ್ತಿ ಕಸಿ ಶಸ್ತ್ರ ಚಿಕಿತ್ಸಕ ಡಾ ಸಮೀರನ್ ನುಂಡಿ ಹೇಳಿದ್ದಾರೆ.
ಭಾರತದಲ್ಲಿ ಮೂಲ ಸೌಕರ್ಯಗಳ ಸಮಸ್ಯೆ
ಹೆಚ್ಚಿನ ಜನ ಅಂಗಾಂಗ ದಾನಿಗಳಾಲು ಸಿದ್ದರಿದ್ದರೂ ಸಹ ಎಲ್ಲಾ ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿ ಮತ್ತು ಮರು ಜೋಡಣೆ ಮಾಡುವ ಪ್ರಕ್ರಿಯೆ ವ್ಯವಸ್ಥೆ ಇರುವುದಿಲ್ಲ. ಇದಕ್ಕಾಗಿ ಬೇಕಾಗಿರುವಂತ ತಂತ್ರಜ್ಞಾನ, ಯಂತ್ರೋಪಕರಣಗಳ ಕೊರತೆಯೂ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರಗಳ ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ.
ವಿಭಾಗ