PM Modi's US visit: ಪ್ರಧಾನಿ ಮೋದಿ ಅಮೆರಿಕ ಪ್ರವಾಸ; ಯೋಗ ದಿನದಿಂದ ಹಿಡಿದು ಅಮೆರಿಕನ್ ಕಾಂಗ್ರೆಸ್ ಭಾಷಣದ ತನಕ ವಿವಿಧ ಕಾರ್ಯಕ್ರಮ
Jun 17, 2023 02:32 PM IST
ಪ್ರಧಾನ ಮಂತ್ರಿ ನರೇಂದ್ರ ಮೋದಿ (ಕಡತ ಚಿತ್ರ)
PM Modi s US visit: ಪಿಎಂ ಮೋದಿ ಅವರು ಮುಂದಿನ ವಾರ ತಮ್ಮ ಅಮೆರಿಕ ಪ್ರವಾಸ ಪ್ರಾರಂಭಿಸಲಿದ್ದಾರೆ. ಅಲ್ಲಿ ಅವರು ಯುಎನ್ ಪ್ರಧಾನ ಕಚೇರಿಯಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡನ್, ಇತರ ಯುಎಸ್ ನಾಯಕರು ಮತ್ತು ಪ್ರಮುಖ ಸಿಇಒಗಳನ್ನು ಭೇಟಿಯಾಗಲಿದ್ದಾರೆ. 10 ಅಂಶಗಳಲ್ಲಿ ಅವರ ಪ್ರವಾಸ ವಿವರ.
ಅಮೆರಿಕನ್ ಕಾಂಗ್ರೆಸ್‌ನಲ್ಲಿ ಭಾಷಣ ಮಾಡುವುದರಿಂದ ಹಿಡಿದು ನ್ಯೂಯಾರ್ಕ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸುವವರೆಗೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮುಂದಿನವಾರವೇ ಅವರ ಈ ಪ್ರವಾಸ ಇದ್ದು, ಪ್ರಧಾನಮಂತ್ರಿಯಾಗಿ ಇದು ಅವರ ಆರನೇ ಅಮೆರಿಕ ಪ್ರವಾಸ.
ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸವು ಜೂನ್ 20 ರಂದು ನ್ಯೂಯಾರ್ಕ್‌ನಿಂದ ಪ್ರಾರಂಭವಾಗಲಿದ್ದು, ಜೂನ್ 24 ರಂದು ಕೊನೆಗೊಳ್ಳಲಿದೆ. ಜೂನ್ 21 ರಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಲಿದ್ದಾರೆ. ನಂತರ ಅವರು ವಾಷಿಂಗ್ಟನ್ ಡಿಸಿಗೆ ಪ್ರಯಾಣಿಸಲಿದ್ದಾರೆ. ಅಲ್ಲಿ, ಯುಎಸ್ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡುವುದು, ಯುಎಸ್ ಅಧ್ಯಕ್ಷ ಜೋ ಬಿಡನ್ ಅವರನ್ನು ಭೇಟಿ ಮಾಡುವುದು ಇತ್ಯಾದಿ ಇತರ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಪ್ರಧಾನಿ ಮೋದಿಯವರ ಮುಂದಿನ ಅಮೆರಿಕ ಭೇಟಿಯ ಬಗ್ಗೆ ತಿಳಿಯಬೇಕಾದ 10 ವಿಷಯಗಳಿವು
- ಪ್ರಧಾನಿ ನರೇಂದ್ರ ಮೋದಿ ಜೂನ್ 21 ರಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಒಂಬತ್ತನೇ ವರ್ಷದ ಯೋಗ ದಿನಾಚರಣೆ. ಇದು ಯೋಗಕ್ಕೆ ಅಂತರಾಷ್ಟ್ರೀಯ ಮನ್ನಣೆಗಾಗಿ ಪ್ರಧಾನಿ ಮೋದಿಯವರ ಪ್ರಯತ್ನದ ಫಲ.
- ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಂತರ ಪ್ರಧಾನಿ ಮೋದಿ ವಾಷಿಂಗ್ಟನ್ ಡಿಸಿಗೆ ಪ್ರಯಾಣ ಬೆಳೆಸಲಿದ್ದಾರೆ. ಜೂನ್ 22 ರಂದು ಶ್ವೇತಭವನದಲ್ಲಿ ಅವರನ್ನು ಅಮೆರಿಕ ಸರ್ಕಾರ ಅಧಿಕೃತವಾಗಿ ಬರಮಾಡಿಕೊಳ್ಳುತ್ತದೆ.
- ಅದಾಗಿ, ಉನ್ನತ ಮಟ್ಟದ ಸಂವಾದ ಸಭೆಗಾಗಿ ಯುಎಸ್ ಅಧ್ಯಕ್ಷ ಜೋ ಬಿಡನ್ ಅವರನ್ನು ಭೇಟಿಯಾಗಲಿದ್ದಾರೆ. ಅಧ್ಯಕ್ಷ ಬಿಡೆನ್ ಅವರೊಂದಿಗಿನ ಅವರ ಸಭೆಯು ಕೆಲವು ಪ್ರಮುಖ ಒಪ್ಪಂದಗಳು ಮತ್ತು ರಕ್ಷಣಾ ಮತ್ತು ನಿರ್ಣಾಯಕ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಹೆಚ್ಚಿನ ಕೈಗಾರಿಕಾ ಸಹಕಾರಕ್ಕಾಗಿ ನಿಯಂತ್ರಕ ಚೌಕಟ್ಟನ್ನು ಸರಳಗೊಳಿಸುವ ಮಾರ್ಗಗಳಿಗಾಗಿ ಒಮ್ಮತ ನಿರ್ಮಿಸುವ ಸಾಧ್ಯತೆಗಳಿವೆ.
- ಎರಡು ಕಡೆಯವರು ಹಲವಾರು ವ್ಯವಸ್ಥೆಗಳು ಮತ್ತು ಒಪ್ಪಂದಗಳನ್ನು ಬಲಪಡಿಸುವ ನಿರೀಕ್ಷೆಯಿದೆ. ಇದು ಭಾರತದ 30 ಸಶಸ್ತ್ರ ಡ್ರೋನ್‌ಗಳ ಖರೀದಿಯನ್ನು ಸಹ ಒಳಗೊಂಡಿರುತ್ತದೆ.
- ಅಧ್ಯಕ್ಷ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಆಯೋಜಿಸಿರುವ ಸರ್ಕಾರಿ ಔತಣಕೂಟದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
- ಪ್ರಧಾನಿ ಮೋದಿ ಜೂನ್ 22 ರಂದು ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ಕೆವಿನ್ ಮೆಕಾರ್ಥಿ ಮತ್ತು ಸೆನೆಟ್‌ನ ಸ್ಪೀಕರ್ ಚಾರ್ಲ್ಸ್ ಶುಮರ್ ಸೇರಿದಂತೆ ಯುಎಸ್ ಕಾಂಗ್ರೆಸ್ ನಾಯಕರು ಅವರನ್ನು ಆಹ್ವಾನಿಸಿದ್ದಾರೆ.
- ಪ್ರಧಾನಿ ಮೋದಿ ಅವರು ಜೂನ್ 23 ರಂದು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ರಾಜ್ಯ ಉಪಾಧ್ಯಕ್ಷ ಆಂಟೋನಿ ಬ್ಲಿಂಕನ್ ಅವರನ್ನು ಭೇಟಿ ಮಾಡಲಿದ್ದಾರೆ.
- ಹೆಚ್ಚಿನ ಸಂಖ್ಯೆಯ ಭಾರತೀಯ ವಲಸಿಗರು ಸೇರಿರುವ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಕಾರ್ಯಕ್ರಮವು ಸಾಂಪ್ರದಾಯಿಕ ರೊನಾಲ್ಡ್ ರೇಗನ್ ಕಟ್ಟಡದಲ್ಲಿ ನಡೆಯಲಿದೆ ಎಂದು ವಿಯನ್ ವರದಿ ಮಾಡಿದೆ.
- ಅಮೆರಿಕ ಪ್ರವಾಸದ ವೇಳೆ, ಪ್ರಧಾನಿ ಮೋದಿ ಅವರು ಜೂನ್ 23 ರಂದು 20 ಸಿಇಒಗಳು, ವೃತ್ತಿಪರರು ಮತ್ತು ಇತರ ಪಾಲುದಾರರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
-During his US visit, PM Modi is also expected to meet 20 CEOs, professionals, and other stakeholders on June 23.