logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bindeshwar Pathak: ಸುಲಭ ಶೌಚಾಲಯ ಸ್ಥಾಪಕ ಬಿಂದೇಶ್ವರ್‌ ಪಾಠಕ್‌ ನಿಧನ; ಇವರ ಕುರಿತು ತಿಳಿದಿರಬೇಕಾದ 5 ವಿಷಯಗಳು ಇಲ್ಲಿವೆ

Bindeshwar Pathak: ಸುಲಭ ಶೌಚಾಲಯ ಸ್ಥಾಪಕ ಬಿಂದೇಶ್ವರ್‌ ಪಾಠಕ್‌ ನಿಧನ; ಇವರ ಕುರಿತು ತಿಳಿದಿರಬೇಕಾದ 5 ವಿಷಯಗಳು ಇಲ್ಲಿವೆ

Reshma HT Kannada

Aug 16, 2023 08:23 AM IST

google News

ಸುಲಭ ಶೌಚಾಲಯ ಸ್ಥಾಪಕ ಬಿಂದೇಶ್ವರ್‌ ಪಾಠಕ್‌

    • Sulabh Founder Bindeshwar Pathak: ಬಯಲು ಶೌಚದ ವಿರುದ್ಧ ಸಮರ ಸಾರಿ, ಸುಲಭ ಶೌಚಾಲಯ ಪರಿಕ್ಪಲನೆಯನ್ನು ಹುಟ್ಟು ಹಾಕಿ, ಸಾವಿರಾರು ಶೌಚಾಲಯ ನಿರ್ಮಿಸಿದ್ದ ಸುಲಭ್‌ ಇಂಟರ್‌ನ್ಯಾಷನಲ್‌ ಸಂಸ್ಥಾಪಕ ಬಿಂದೇಶ್ವರ್‌ ಪಾಠಕ್‌ ಮಂಗಳವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರ ಕುರಿತ ಆಸಕ್ತಿದಾಯಕ ವಿಷಯಗಳು ಇಲ್ಲಿವೆ. 
ಸುಲಭ ಶೌಚಾಲಯ ಸ್ಥಾಪಕ ಬಿಂದೇಶ್ವರ್‌ ಪಾಠಕ್‌
ಸುಲಭ ಶೌಚಾಲಯ ಸ್ಥಾಪಕ ಬಿಂದೇಶ್ವರ್‌ ಪಾಠಕ್‌ (HT Photo )

ಬಯಲು ಶೌಚದ ವಿರುದ್ಧ ಹೋರಾಡಿ, ಸಮುದಾಯ ಶೌಚಾಲಯಗನ್ನು ಸ್ಥಾಪಿಸಿದ್ದ ಸುಲಭ್‌ ಇಂಟರ್‌ನ್ಯಾಷನಲ್‌ ಸಂಸ್ಥಾಪಕ ಬಿಂದೇಶ್ವರ್‌ ಪಾಠಕ್‌ ಮಂಗಳವಾರ ಹೃದಯಾಘಾತದಿಂದ ಮರಣ ಹೊಂದಿದ್ದಾರೆ.

ಪಾಠಕ್‌ ಅವರು ಮಾನವ ಹಕ್ಕುಗಳು, ಪರಿಸರ ನೈಮರ್ಲ್ಯ, ತ್ಯಾಜ್ಯ ನಿರ್ವಹಣೆ ಮತ್ತು ಶಿಕ್ಷಣದ ಮೂಲಕ ಸುಧಾರಣೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಸುಲಭ್‌ ಇಂಟರ್‌ನ್ಯಾಷನಲ್‌ನ ಎಂಬ ಸಾಮಾಜಿಕ ಸಂಸ್ಥೆಯನ್ನು ಸ್ಥಾಪಿಸುತ್ತಾರೆ.

ಪಾಠಕ್‌ ಅವರು ನಿನ್ನೆ (ಆಗಸ್ಟ್‌ 15) ಧ್ವಜಾರೋಹಣ ಮಾಡುವ ವೇಳೆ ಕುಸಿದು ಬಿದ್ದಿದ್ದಾರೆ ಎಂದು ಅವರ ಸಹಾಯಕರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ. ಕೂಡಲೇ ಅವರನ್ನು ದೆಹಲಿಯ ಏಮ್ಸ್‌ಗೆ ರವಾನಿಸಲಾಗಿತ್ತು. ಮಧ್ಯಾಹ್ನ 1.42ರ ವೇಳೆಗೆ ಪಾಠಕ್‌ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಪಾಠಕ್‌ ನಿಧನಕ್ಕೆ ಪ್ರಧಾನಮಂತ್ರಿ ಮೋದಿ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

ʼಡಾ. ಬಿಂದೇಶ್ವರ ಪಾಠಕ್ ಜೀ ಅವರ ನಿಧನ ನಮ್ಮ ದೇಶಕ್ಕೆ ತುಂಬಲಾರದ ನಷ್ಟ. ಅವರು ಸಾಮಾಜಿಕ ಪ್ರಗತಿಗಾಗಿ ಮತ್ತು ದೀನದಲಿತರ ಸಬಲೀಕರಣಕ್ಕಾಗಿ ವ್ಯಾಪಕವಾಗಿ ಕೆಲಸ ಮಾಡಿದ ದಾರ್ಶನಿಕರಾಗಿದ್ದರು” ಎಂದು ಪ್ರಧಾನ ಮಂತ್ರಿ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಬರೆದಿದ್ದಾರೆ.

ʼಬಿಂದೇಶ್ವರ್ ಅವರು ಸ್ವಚ್ಛ ಭಾರತವನ್ನು ನಿರ್ಮಿಸಲು ತಮ್ಮ ಧ್ಯೇಯವನ್ನು ರೂಪಿಸಿದ್ದರು. ಅವರು ಸ್ವಚ್ಛ ಭಾರತ್ ಮಿಷನ್‌ಗೆ ಬೆಂಬಲ ನೀಡಿದ್ದರು. ಅವರು ನನ್ನೊಂದಿಗೆ ಮಾತನಾಡಿದಾಗೆಲ್ಲ ಸ್ವಚ್ಛತೆಯ ಕಡೆಗಿನ ಅವರ ಉತ್ಸಾಹವು ಯಾವಾಗಲೂ ಗೋಚರಿಸುತ್ತಿತ್ತು. ಅವರ ಸಮಾಜಕ್ಕಾಗಿ ಮಾಡಿದ ಕಾರ್ಯಗಳು ಹಲವು ಜನರಿಗೆ ಸ್ಫೂರ್ತಿ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪ. ಓಂ ಶಾಂತಿʼ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದರು ಪ್ರಧಾನಿ ಮೋದಿ.

ಪಾಠಕ್‌ ಅವರ ಕುರಿತ 5 ಆಸಕ್ತಿದಾಯಕ ವಿಷಯಗಳು ಇಲ್ಲಿವೆ

  • ಬಿಂದೇಶ್ವರ್‌ ಪಾಠಕ್‌ ಬಿಹಾರದ ವೈಶಾಲಿ ಜಿಲ್ಲೆಯ ರಾಮ್‌ಪುರ ಬಾಘೇಲ್‌ ಗ್ರಾಮದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ಯೋಗಮಾಯಾದೇವಿ ಮತ್ತು ತಂದೆ ರಮಾಕಾಂತ್‌ ಪಾಠಕ್‌.
  • ಅಲ್ಲಿಂದ ಪಾಠಕ್‌ ಪಾಟ್ನಾಗೆ ಸ್ಥಳಾಂತರಗೊಳ್ಳುತ್ತಾರೆ. ಇವರು ಸಮಾಜಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಕೆಲ ಕಾಲ ಶಿಕ್ಷಕರಾಗಿ ಕೆಲಸ ಮಾಡುವ ಇವರು ನಂತರ ಪಾಟ್ನಾದ ಗಾಂಧಿ ಶತಮಾನೋತ್ಸವ ಸಮಿತಿಯಲ್ಲಿ ಸ್ವಯಂಸೇವಕರಾಗಿ ಸೇರುತ್ತಾರೆ.
  • ಸುಲಭ್‌ ಇಂಟರ್‌ನ್ಯಾಷನಲ್‌ ವೆಬ್‌ಸೈಟ್‌ ಪ್ರಕಾರ ಪಾಠಕ್‌ ಅವರು ಮಹಾತ್ಮ ಗಾಂಧಿಯವರಿಂದ ಪ್ರೇರಿತರಾಗಿದ್ದರು. ಕಳೆದ 50 ವರ್ಷಗಳಲ್ಲಿ ಭಾರತದ ಜಾತಿ ಆಧಾರಿತ ವ್ಯವಸ್ಥೆ ಮತ್ತು ಮಹಿಳೆ ಹಾಗೂ ಮಾನವರ ಹಕ್ಕಗಳಿಗಾಗಿ ಕೆಲಸ ಮಾಡಿದ್ದಾರೆ.
  • 1973ರಲ್ಲಿ ಬಿಂದೇಶ್ವರ್‌ ಪಾಠಕ್‌ ಅವರು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಪತ್ರ ಬರೆಯಲು ಶಾಸಕರಾದ ಭಗದೇವ ಸಿಂಗ್‌ ಯೋಗಿ ಅವರಿಗೆ ಮನವೊಲಿಸಿದ್ದರು. ಶೌಚಗುಂಡಿ ಸ್ವಚ್ಛ ಮಾಡುವ ಸಫಾಯಿ ಕರ್ಮಾಚಾರಿಗಳ ಪರಿಸ್ಥಿತಿಯ ಬಗ್ಗೆ ಗಮನ ಸೆಳೆದರು. ಇವರ ಪತ್ರಕ್ಕೆ ಉತ್ತರಿಸಿದ್ದ ಇಂದಿರಾಗಾಂಧಿ ಈ ವಿಷಯದ ಬಗ್ಗೆ ವೈಯಕ್ತಿಕ ಗಮನ ಹರಿಸಲು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತಿದ್ದೇನೆ ಎಂದು ಉತ್ತರಿಸಿದ್ದರು.
  • 1973ರಲ್ಲಿ ಬಿಹಾರದ ಸಣ್ಣ ಪಟ್ಟಣವಾದ ಅರಾಹ್‌ ಪುರಸಭೆಯ ಅಧಿಕಾರಿಯೊಬ್ಬರು ಪಾಠಕ್‌ ಅವರಿಗೆ ಪುರಸಭೆ ಆವರಣದಲ್ಲಿ ಎರಡು ಶೌಚಾಲಯಗಳನ್ನು ನಿರ್ಮಿಸಲು 500 ರೂಪಾಯಿಗಳನ್ನು ನೀಡಿದ್ದರು. ಶೌಚಾಲಯಗಳು, ಅದರ ವ್ಯಾಪಕ ಅನುಷ್ಠಾನಕ್ಕಾಗಿ ಯೋಜನೆಯನ್ನು ಸಿದ್ದ ಪಡಿಸಿದ್ದನ್ನು ಕಂಡು ಖುಷಿ ಪಟ್ಟ ಅಧಿಕಾರಿಗಳು ಅದನ್ನು ಮಂಜೂರು ಮಾಡಿದರು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ