logo
ಕನ್ನಡ ಸುದ್ದಿ  /  Nation And-world  /  India Post Gds Recruitment 2023: Registration For 40889 Posts Ends Tomorrow

India Post GDS Recruitment 2023: ಅಂಚೆ ಇಲಾಖೆಯ 40889 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನಾಂಕ, ತಕ್ಷಣ ಅರ್ಜಿ ಸಲ್ಲಿಸಿ

Praveen Chandra B HT Kannada

Feb 15, 2023 03:34 PM IST

India Post GDS Recruitment 2023: ಅಂಚೆ ಇಲಾಖೆಯ 40889 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನಾಂಕ, ತಕ್ಷಣ ಅರ್ಜಿ ಸಲ್ಲಿಸಿ

    • India Post GDS Recruitment 2023: ಅಂಚೆ ಇಲಾಖೆಯಲ್ಲಿ ದೇಶಾದ್ಯಂತ ಭರ್ಜರಿ 40889 ಹುದ್ದೆಗಳಿದ್ದು, ಇನ್ನೂ ಅರ್ಜಿ ಸಲ್ಲಿಸದೆ ಇರುವವರು ತಕ್ಷಣ indiapostgdsonline.gov.in ವೆಬ್‌ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಸಬಹುದು.
India Post GDS Recruitment 2023: ಅಂಚೆ ಇಲಾಖೆಯ 40889 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನಾಂಕ, ತಕ್ಷಣ ಅರ್ಜಿ ಸಲ್ಲಿಸಿ
India Post GDS Recruitment 2023: ಅಂಚೆ ಇಲಾಖೆಯ 40889 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನಾಂಕ, ತಕ್ಷಣ ಅರ್ಜಿ ಸಲ್ಲಿಸಿ

ಭಾರತೀಯ ಅಂಚೆ ಇಲಾಖೆಯ ಜಿಡಿಎಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನಾಂಕವಾಗಿದೆ. ದೇಶಾದ್ಯಂತ ಭರ್ಜರಿ 40889 ಹುದ್ದೆಗಳಿದ್ದು, ಇನ್ನೂ ಅರ್ಜಿ ಸಲ್ಲಿಸದೆ ಇರುವವರು ತಕ್ಷಣ indiapostgdsonline.gov.in ವೆಬ್‌ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಸಿ ತಮ್ಮ ಅದೃಷ್ಟ ಪರೀಕ್ಷಿಸಬಹುದು.

ಟ್ರೆಂಡಿಂಗ್​ ಸುದ್ದಿ

ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದೀರಾ? ಮೊದಲ ಪ್ರಯತ್ನ ನಿಮ್ಮದಾಗಿದ್ದರೆ ಈ 9 ಸಲಹೆಗಳನ್ನು ಮೊದಲು ಓದಿಕೊಳ್ಳಿ

ಕೇರಳ, ತಮಿಳುನಾಡು ಕರಾವಳಿಯಲ್ಲಿ ಕಲ್ಲಕಡಲ್ ವಿದ್ಯಮಾನ ಎಚ್ಚರಿಕೆ; ಮೀನುಗಾರರಿಗೆ ಎಚ್ಚರಿಕೆ, ಏನಿದು ಬೆಳವಣಿಗೆ?

Bank Holidays: ಕಾರ್ಮಿಕರ ದಿನ, ಬಸವ ಜಯಂತಿಗೆ ಬ್ಯಾಂಕ್‌ಗಳಿಗೆ ರಜೆ; ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಬಿಡುಗಡೆ

Video: ಕೇರಳದಲ್ಲಿ ಬರೋಬ್ಬರಿ 150 ಜೋಡಿ ಅವಳಿಗಳ ಸಮಾಗಮ; ಒಂದೆಡೆ ಸೇರಲು ನೆರವಾಯ್ತು ವಾಟ್ಸಾಪ್ ಗ್ರೂಪ್

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಏನಾದರೂ ತಿದ್ದುಪಡಿ ಮಾಡಬೇಕಿದ್ದರೆ ಅದಕ್ಕೆ ಫೆಬ್ರವರಿ 17ರಿಂದ ಫೆಬ್ರವರಿ 19ರವರೆಗೆ ಅವಕಾಶ ನೀಡಲಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹತ್ತನೇ ತರಗತಿ ವಿದ್ಯಾರ್ಹತೆ ಬಯಸಲಾಗಿದೆ. ಅರ್ಜಿ ಸಲ್ಲಿಸಲು ಈ ಮುಂದಿನ ಹಂತಗಳನ್ನು ಪಾಲಿಸಿ.

  • ಭಾರತೀಯ ಅಂಚೆ ಇಲಾಖೆಯ ಜಿಡಿಎಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೊದಲು indiapostgdsonline.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಅಲ್ಲಿ ನೋಂದಣಿ ಲಿಂಕ್‌ ಕ್ಲಿಕ್‌ ಮಾಡಿ. ಅಂದರೆ, ಈ ಜಿಡಿಎಸ್‌ ಹುದ್ದೆಗಳಿಗೆ ಸಂಬಂಧಪಟ್ಟ ಲಿಂಕ್‌ ಇರುತ್ತದೆ. ಅದನ್ನು ಕ್ಲಿಕ್‌ ಮಾಡಿ ವಿವರ ನಮೂದಿಸಿ.
  • ನಿಮ್ಮ ಅಕೌಂಟ್‌ಗೆ ಲಾಗಿನ್‌ ಮಾಡಿ ಅರ್ಜಿ ನಮೂನೆ ಭರ್ತಿ ಮಾಡಬೇಕು.
  • ಅರ್ಜಿ ಶುಲ್ಕ ಪಾವತಿಸಿದ ಬಳಿಕ ಸಬ್‌ಮಿಟ್‌ ಬಟನ್‌ ಕ್ಲಿಕ್‌ ಮಾಡಿ.
  • ಅರ್ಜಿ ಸಲ್ಲಿಸಿದ ಬಳಿಕ ಭರ್ತಿ ಮಾಡಿದ ಅರ್ಜಿ ಪ್ರತಿಯನ್ನು ಡೌನ್‌ಲೋಡ್‌ ಮಾಡಿ.

ಯಾರು ಅರ್ಜಿ ಸಲ್ಲಿಸಬಹುದು?

ಭಾರತೀಯ ಅಂಚೆ ಇಲಾಖೆಯ ಗ್ರಾಮೀಣ ಡಾಕ್‌ ಸೇವಕ್‌, ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌, ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್‌ ಮಾಸ್ಟರ್‌ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ / 10ನೇ ತರಗತಿ ವಿದ್ಯಾರ್ಹತೆ ಬಯಸಲಾಗಿದೆ.

ಎಸ್‌ಎಸ್‌ಎಲ್‌ಸಿ/ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದವರನ್ನು ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ.

ವೇತನ ಎಷ್ಟಿರುತ್ತದೆ?

ಭಾರತೀಯ ಅಂಚೆ ಇಲಾಖೆಯ ಬ್ರ್ಯಾಂಚ್‌ ಪೋಸ್ಟ್‌ಮಾಸ್ಟರ್‌ (BPM) ಹುದ್ದೆಗೆ Rs.12,000-29,380 ವರೆಗೆ ವೇತನ ಇರುತ್ತದೆ. ಇದೇ ರೀತಿ, ಅಸಿಸ್ಟಂಟ್ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್ (ABPM) : Rs.10,000-24,470 ವೇತನವಿರುತ್ತದೆ. ಡಾಕ್ ಸೇವಕ್‌ : Rs.10,000-24,470 ವೇತನ ಇರುತ್ತದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆಯಾ ರಾಜ್ಯದ ಪ್ರಾದೇಶಿಕ ಭಾಷೆ ತಿಳಿದಿರಬೇಕು. ಅಂದರೆ, ಕರ್ನಾಟಕದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ತಿಳಿದಿರಬೇಕು.

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ ನೀಡಲಾಗುತ್ತದೆ.

ಯುಪಿಎಸ್‌ಸಿ ಮೂಲಕ ನೇಮಕ, 73 ಅಸಿಸ್ಟೆಂಟ್‌ ಕಂಟ್ರೋಲರ್‌ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕ ಸೇವಾ ಆಯೋಗವು ಅಸಿಸ್ಟೆಂಟ್‌ ಕಂಟ್ರೋಲರ್‌ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು upsc.gov.in ಮುಖಾಂತರ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ, ಹುದ್ದೆಗಳ ಸಂಖ್ಯೆ, ವಯೋಮಿತಿ ಸೇರಿದಂತೆ ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.

    ಹಂಚಿಕೊಳ್ಳಲು ಲೇಖನಗಳು