logo
ಕನ್ನಡ ಸುದ್ದಿ  /  Nation And-world  /  Indian Railways Kavach What Is Kavach In Indian Railways How Does It Prevent Train Accidents Explainer Today News Uks

Indian Railways Kavach: ಏನಿದು ಭಾರತೀಯ ರೈಲ್ವೆಯ ಕವಚ್‌; ರೈಲು ದುರಂತವನ್ನು ಇದು ತಪ್ಪಿಸುವ ಬಗೆ ಹೇಗೆ, ಇಲ್ಲಿದೆ ವಿವರಣೆ

Umesh Kumar S HT Kannada

Jun 03, 2023 09:12 PM IST

ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ಶುಕ್ರವಾರ ಮುಸ್ಸಂಜೆ ಸಂಭವಿಸಿದ ಭಯಾನಕ ರೈಲು ಅಪಘಾತ ಸ್ಥಳದ ಡ್ರೋನ್‌ ಕ್ಯಾಮೆರಾ ದೃಶ್ಯ

  • Kavach in Indian Railways Explainer: ಭಾರತದಲ್ಲಿ ರೈಲು ಅಪಘಾತ ತಡೆಯುವುದಕ್ಕಾಗಿ ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಸಿಸ್ಟಮ್‌ ಕವಚ್‌. ಇದು ಈಗ ಒಡಿಶಾದ ಭೀಕರ ರೈಲು ಅಪಘಾತದ ಬಳಿಕ ಸುದ್ದಿಯ ಕೇಂದ್ರಬಿಂದುವಾಗಿದೆ. ಇದೇ ಕವಚ್‌ ಕುರಿತ ವಿವರಣೆ ಇಲ್ಲಿದೆ.

ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ಶುಕ್ರವಾರ ಮುಸ್ಸಂಜೆ ಸಂಭವಿಸಿದ ಭಯಾನಕ ರೈಲು ಅಪಘಾತ ಸ್ಥಳದ ಡ್ರೋನ್‌ ಕ್ಯಾಮೆರಾ ದೃಶ್ಯ
ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ಶುಕ್ರವಾರ ಮುಸ್ಸಂಜೆ ಸಂಭವಿಸಿದ ಭಯಾನಕ ರೈಲು ಅಪಘಾತ ಸ್ಥಳದ ಡ್ರೋನ್‌ ಕ್ಯಾಮೆರಾ ದೃಶ್ಯ (AP)

ಒಡಿಶಾದ ರೈಲು ಅಪಘಾತದ ಬೆನ್ನಿಗೆ ಕವಚ್‌ ಎಂಬ ಸ್ವದೇಶಿ ಆಟೋಮ್ಯಾಟಿಕ್‌ ಟ್ರೇನ್‌ ಪ್ರೊಟೆಕ್ಷನ್‌ (ಎಟಿಪಿ) ಸಿಸ್ಟಮ್‌ ಎಲ್ಲರ ಗಮನ ಸೆಳೆದಿದೆ. ಚರ್ಚೆಯ ಕೇಂದ್ರಬಿಂದುವೂ ಆಗಿದೆ. ಈ ಸಿಸ್ಟಮ್‌ ಇದ್ದರೂ ಯಾಕೆ ಅಪಘಾತ ತಡೆಯುವುದು ಸಾಧ್ಯವಾಗಿಲ್ಲ ಎಂಬ ಮಾತು ಕೂಡ ಕೇಳಿಬಂದಿದೆ.

ಟ್ರೆಂಡಿಂಗ್​ ಸುದ್ದಿ

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

ತಿರುಮಲ ತಿರುಪತಿ ಜುಲೈ ತಿಂಗಳ ವಿಶೇಷ ಪ್ರವೇಶ ಟಿಕೆಟ್, ಟಿಟಿಡಿ ವೆಬ್‌ಸೈಟ್ ಮೂಲಕ 300 ರೂಪಾಯಿ ಟಿಕೆಟ್‌

ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣ; ಭಾರತೀಯ ರೈಲ್ವೆ ಮಹತ್ವದ ಮೈಲಿಗಲ್ಲು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ

ರಣಬಿಸಿಲಿನಿಂದ ರಕ್ಷಣೆಗೆ ಟ್ರಾಫಿಕ್‌ ಸಿಗ್ನಲ್ ಸಮೀಪ ಹಸಿರು ನೆರಳು ಬಲೆ; ಪುದುಚೇರಿ ಪಿಡಬ್ಲ್ಯುಡಿ ಇಲಾಖೆ ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ

ಕಳೆದ ಮೂರು ವರ್ಷಗಳಿಂದ ಒಂದೇ ಒಂದು ರೈಲು ಅಪಘಾತ ಆಗಿರಲಿಲ್ಲ ಎಂಬುದರ ಕಡೆಗೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಗಮನಸೆಳೆದಿದ್ದರು. ಹಾಗಾದರೆ ಈ ಅಪಘಾತ ತಡೆಯುವಲ್ಲಿ ಕವಚ್‌ ವಿಫಲವಾಯಿತೇ? ಎಂಬಿತ್ಯಾದಿ ಚರ್ಚೆ ನಡೆಯುತ್ತಿದೆ. ಹೀಗಾಗಿ ಕವಚ್‌ ಎಂದರೇನು? ಅದರ ಬಳಕೆ ಹೇಗೆ? ಅದು ಯಾವ ರೀತಿ ಕೆಲಸ ಮಾಡುತ್ತದೆ ಎಂಬಿತ್ಯಾದಿ ವಿವರ ಒದಗಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ.

ಕವಚ್‌ ಎಂಬ ಎಟಿಪಿ ವ್ಯವಸ್ಥೆ

ರೈಲ್ವೆ ಸಚಿವಾಲಯವು 2022ರ ಮಾರ್ಚ್‌ 23ರಂದು ಕವಚ್‌ ಎಂಬ ಸ್ವದೇಶಿ ನಿರ್ಮಿತ ಆಟೋಮ್ಯಾಟಿಕ್‌ ಟ್ರೇನ್‌ ಪ್ರೊಟೆಕ್ಷನ್‌ (ಎಟಿಪಿ) ಸಿಸ್ಟಮ್‌ ಅನ್ನು ಅಭಿವೃ‍ದ್ಧಿಪಡಿಸಿ ಬಳಕೆಗೆ ಶುರುಮಾಡಿತು. ಇದು ಭಾರತದಲ್ಲಿ ರೈಲು ಸಂಚಾರದ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದೂ ಅದು ಘೋಷಿಸಿತು.

ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಮೂರು ಭಾರತೀಯ ಮಾರಾಟಗಾರರ ಸಹಯೋಗದೊಂದಿಗೆ ಕವಚ್‌ ಅನ್ನು ಅಭಿವೃದ್ಧಿಪಡಿಸಿತು. ಕವಚ್ ಅನ್ನು ಭಾರತೀಯ ರೈಲ್ವೆಯಲ್ಲಿ ರಾಷ್ಟ್ರೀಯ ಎಟಿಪಿ ವ್ಯವಸ್ಥೆಯಾಗಿ ಅಳವಡಿಸಲಾಗಿದೆ

ಅಪಾಯದ ಸಮಯದಲ್ಲಿ ಸಿಗ್ನಲ್ ಪಾಸಿಂಗ್ (ಎಸ್‌ಪಿಎಡಿ) ಮತ್ತು ಅತಿ ವೇಗವನ್ನು ತಪ್ಪಿಸುವಲ್ಲಿ ಲೋಕೋಮೋಟಿವ್ ಪೈಲಟ್‌ಗಳಿಗೆ ಸಹಾಯ ಮಾಡುವಂತೆ ಕವಚ್ ಅನ್ನು ವಿನ್ಯಾಸಗೊಳಿಸಲಾಗಿದೆ. ದಟ್ಟವಾದ ಮಂಜಿನಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ರೈಲು ಸಂಚಾರಕ್ಕೆ ಇದು ಬೆಂಬಲವನ್ನು ನೀಡುತ್ತದೆ. ಅಗತ್ಯವಿದ್ದಾಗ ಸ್ವಯಂಚಾಲಿತವಾಗಿ ಬ್ರೇಕ್‌ಗಳನ್ನು ಅನ್ವಯಿಸುವ ಮೂಲಕ, ಸಿಸ್ಟಮ್ ರೈಲಿನ ವೇಗದ ಮೇಲೆ ಉತ್ತಮ ನಿಯಂತ್ರಣವನ್ನು ಖಚಿತಪಡಿಸುತ್ತದೆ ಮತ್ತು ಸಂಭಾವ್ಯ ಅಪಘಾತಗಳನ್ನು ತಡೆಯುತ್ತದೆ ಎಂಬುದು ಇದರ ಫೀಚರ್ಸ್‌ನಲ್ಲಿ ಪ್ರಾಮುಖ್ಯವಾದುದು.

ಕವಚ್‌ನ ಪ್ರಮುಖ ಫೀಚರ್‌ಗಳೇನು?

  • ಲೊಕೊಮೊಟಿವ್ ಪೈಲಟ್ ಕಾರ್ಯನಿರ್ವಹಿಸಲು ವಿಫಲವಾದಲ್ಲಿ ಸ್ವಯಂಚಾಲಿತ ಬ್ರೇಕ್ ಅಪ್ಲಿಕೇಶನ್,
  • ಮಂಜಿನ ಪರಿಸ್ಥಿತಿಗಳಲ್ಲಿ ಮತ್ತು ಹೆಚ್ಚಿನ ವೇಗದಲ್ಲಿ ಸುಧಾರಿತ ಗೋಚರತೆಗಾಗಿ ಕ್ಯಾಬಿನ್‌ನಲ್ಲಿ ಲೈನ್-ಸೈಡ್ ಸಿಗ್ನಲ್ ಪ್ರದರ್ಶನ
  • ಚಲನೆಯ ಪ್ರಾಧಿಕಾರದ ನಿರಂತರ ನವೀಕರಣ,
  • ಲೆವೆಲ್ ಕ್ರಾಸಿಂಗ್‌ಗಳಲ್ಲಿ ಸ್ವಯಂಚಾಲಿತವಾಗಿ ಹಾರ್ನ್‌ ಹಾಕುವುದು
  • ನೇರ ಲೊಕೊ-ಟು-ಲೊಕೊ ಸಂವಹನದ ಮೂಲಕ ಘರ್ಷಣೆ ತಪ್ಪಿಸುವುದು
  • ತುರ್ತು ಸಂದರ್ಭಗಳಲ್ಲಿ ರೈಲುಗಳನ್ನು ನಿಯಂತ್ರಿಸಲು SOS ಫೀಚರ್‌ ಒದಗಿಸುವುದು

ಇದನ್ನೂ ಓದಿ: Odisha Train Accident: ರೈಲು ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮತ್ತು ಇತರ ಗಣ್ಯರು; ಇಲ್ಲಿವೆ ಸ್ಥಳಪರಿಶೀಲನೆಯ ಫೋಟೋಸ್‌

ಕವಚ್‌ನ ಪ್ರಯೋಗ ಹೇಗಾಯಿತು?

ದಕ್ಷಿಣ ಮಧ್ಯ ರೈಲ್ವೆಯ ಲಿಂಗಂಪಲ್ಲಿ-ವಿಕಾರಾಬಾದ್-ವಾಡಿ ಮತ್ತು ವಿಕಾರಾಬಾದ್-ಬೀದರ್ ವಿಭಾಗಗಳಲ್ಲಿ ಕವಚದ ಪ್ರಯೋಗಗಳನ್ನು ನಡೆಸಲಾಯಿತು. ಇದು 250 ಕಿಲೋಮೀಟರ್ ದೂರವನ್ನು ಒಳಗೊಂಡಿತ್ತು. ಯಶಸ್ವಿ ಪ್ರಯೋಗಗಳ ನಂತರ, ಭಾರತೀಯ ರೈಲ್ವೇ ತನ್ನ ರೈಲ್ವೆ ನೆಟ್‌ವರ್ಕ್‌ನಲ್ಲಿ ಹೆಚ್ಚಿನ ಕವಚ್‌ ತಯಾರಿಸಿ ಒದಗಿಸಲು ಮೂರು ಪಾಲುದಾರ ಕಂಪನಿಗಳಿಗೆ ಆರ್ಡರ್‌ ನೀಡಿದೆ.

ಕವಚದ ಅಭಿವೃದ್ಧಿಗೆ ಮಾಡಿದ ಒಟ್ಟು ವೆಚ್ಚ 16.88 ಕೋಟಿ ರೂಪಾಯಿ ಆಗಿತ್ತು. 2024ರ ಮಾರ್ಚ್‌ಗೆ ಗಡುವಿನೊಂದಿಗೆ ನವದೆಹಲಿ-ಹೌರಾ ಮತ್ತು ನವದೆಹಲಿ-ಮುಂಬೈ ವಿಭಾಗಗಳಲ್ಲಿ ಕವಚ ಅಳವಡಿಸುವ ಗುರಿಯನ್ನು ಸಚಿವಾಲಯ ಹಾಕಿಕೊಂಡಿದೆ. ಆರಂಭಿಕ ಅನುಷ್ಠಾನದಿಂದ ಪಡೆದ ಅನುಭವವನ್ನು ಆಧರಿಸಿ ಹೆಚ್ಚಿನ ವಿಸ್ತರಣೆಗೆ ಅನುಮೋದನೆಯನ್ನು ಸಚಿವಾಲಯ ನೀಡಿದೆ.

ರೈಲ್ವೆ, ಸಂಪರ್ಕ ಮತ್ತು ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಒದಗಿಸಿದ್ದಾರೆ. ಕವಚದಂತಹ ತಾಂತ್ರಿಕ ಪ್ರಗತಿಗಳ ಮೂಲಕ ರೈಲು ಕಾರ್ಯಾಚರಣೆಗಳ ಸುರಕ್ಷತೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕವಚ ಒಡಿಶಾ ರೈಲು ಅಪಘಾತವನ್ನು ತಡೆಯುತ್ತಿತ್ತೇ?

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಮುಸ್ಸಂಜೆ ನಡೆದ ದುರಂತದ ಬಳಿಕ ಕವಚ್‌ ವಿಚಾರ ಮುನ್ನೆಲೆಗೆ ಬಂದಿದೆ. ಈ ದುರಂತವು ಭಾರತದ ರೈಲ್ವೆ ಇತಿಹಾಸದ ಇತಿಹಾಸದಲ್ಲಿ ಅತ್ಯಂತ ಭೀಕರ ದುರಂತಗಳಲ್ಲಿ ಒಂದಾಗಿದೆ. ಈ ಅಪಘಾತದಲ್ಲಿ ಎರಡು ಎಕ್ಸ್‌ಪ್ರೆಸ್‌ ಮತ್ತು ಒಂದು ಗೂಡ್ಸ್‌ ರೈಲು ಹಾನಿಗೀಡಾಗಿದ್ದು, ಕನಿಷ್ಠ 250 ಜನ ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಈ ದುರಂತದ ಬಳಿಕ ಕವಚ್‌ ವಿಚಾರ ಮುನ್ನೆಲೆಗೆ ಬಂದಿದೆ. ಅಪಘಾತಕ್ಕೆ ಈಡಾದ ರೈಲುಗಳಲ್ಲಿ ಕವಚ್‌ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಅದು ಇದ್ದಿದ್ದರೆ ಅಪಘಾತ ಆಗುತ್ತಿರಲಿಲ್ಲ ಎಂಬ ಮಾತೂ ಕೇಳಿಬಂದಿದೆ. ಏನೇ ಆದರೂ ಈಗ ಈ ವಿಚಾರದಲ್ಲಿ ಸ್ಪಷ್ಟತೆ ಇಲ್ಲ.

    ಹಂಚಿಕೊಳ್ಳಲು ಲೇಖನಗಳು