ಕನ್ನಡ ಸುದ್ದಿ  /  Photo Gallery  /  Bengaluru News South Western Railways Cancel Few Trains From Bengaluru As Odisha Train Accident Today News Mgb

Bengaluru Trains: ಒಡಿಶಾ ರೈಲು ಅಪಘಾತ; ಬೆಂಗಳೂರಿನಿಂದ ಹೊರಡಬೇಕಿದ್ದ ಈ ರೈಲುಗಳು ರದ್ದು

  • Odisha Train Accident: ಒಡಿಶಾದ ಭೀಕರ ರೈಲು ಅಪಘಾತದ ಸ್ಥಳದಲ್ಲಿ ಇನ್ನೂ ಕೂಡ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಬೆಂಗಳೂರಿನಿಂದ ಹೊರಡಬೇಕಿದ್ದ ಕೆಲವು ರೈಲುಗಳನ್ನು ನೈಋತ್ಯ ರೈಲ್ವೆ ರದ್ದುಗೊಳಿಸಿದೆ. ಈ ಬಗ್ಗೆ ಇಲ್ಲಿದೆ ವಿವರ..

ಒಡಿಶಾದ ಬಾಲಾಸೋರ್​ನಲ್ಲಿ ನಿನ್ನೆ (ಜೂನ್​ 2, ಶುಕ್ರವಾರ) ನಡೆದ ಭೀಕರ ರೈಲು ಅಪಘಾತದಲ್ಲಿ ಬರೋಬ್ಬರಿ 261 ಪ್ರಯಾಣಿಕರು ಸಾವನ್ನಪ್ಪಿದ್ದು, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. 
icon

(1 / 5)

ಶುಕ್ರವಾರ ಸಂಜೆ 7 ಗಂಟೆಯ ಸುಮಾರಿಗೆ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳು ಡಿಕ್ಕಿಯಾಗಿವೆ. 17 ಬೋಗಿಗಳು ಹಳಿತಪ್ಪಿದ್ದವು. 
icon

(2 / 5)

ಹೆಚ್ಚು ನಜ್ಜುಗುಜ್ಜಾಗಿರುವ ಬೋಗಿಗಳಲ್ಲಿ ಇನ್ನೂ ಕೂಡ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದೆ. ಹೀಗಾಗಿ ಇಂದು (ಜೂನ್​ 3, ಶನಿವಾರ) ಬೆಂಗಳೂರಿನಿಂದ ಒಡಿಶಾದ ಬಾಲಸೋರ್ ಮೂಲಕ ಪ್ರಯಾಣಿಸಬೇಕಾದ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.  
icon

(3 / 5)

ರದ್ದಾದ ರೈಲುಗಳು: 12551 - SMVT ಬೆಂಗಳೂರು To ಕಾಮಾಖ್ಯ, 12864 - SMVT ಬೆಂಗಳೂರು To ಹೌರಾ, 12551 - SMVT ಬೆಂಗಳೂರು To ಭಾಗಲ್ಪುರ, 12245 - ಹೌರಾ To SMVT ಬೆಂಗಳೂರು
icon

(4 / 5)

ಘಟನಾ ಸ್ಥಳಕ್ಕೆ ಇಂದು (ಜೂನ್​ 3) ಪ್ರಧಾನಿ ನರೇಂದ್ರ ಮೋದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಸ್ಥರಿಗೆ  2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.  
icon

(5 / 5)

IPL_Entry_Point

ಇತರ ಗ್ಯಾಲರಿಗಳು