logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Forest News: ಭಾರತದ ಅರಣ್ಯದಲ್ಲಿ 12 ವರ್ಷದ ನಂತರ ವಿಶಿಷ್ಟ ಬಗೆಯ ಕಾಡು ಬೆಕ್ಕು ಪತ್ತೆ, ಏನಿದರ ವಿಶೇಷ

Forest News: ಭಾರತದ ಅರಣ್ಯದಲ್ಲಿ 12 ವರ್ಷದ ನಂತರ ವಿಶಿಷ್ಟ ಬಗೆಯ ಕಾಡು ಬೆಕ್ಕು ಪತ್ತೆ, ಏನಿದರ ವಿಶೇಷ

Umesha Bhatta P H HT Kannada

Oct 29, 2024 10:20 AM IST

google News

ರಾಜಸ್ತಾನದ ಅರಣ್ಯದಲ್ಲಿ ಕಾಣಿಸಿಕೊಂಡ ಕ್ಯಾರಕಲ್ ಎನ್ನುವ ಕಾಡು ಬೆಕ್ಕು

  • Caracal Wild Cat Found: ಭಾರತದ ಅರಣ್ಯದಲ್ಲಿ ಹಲವು ಬಗೆಯ ಬೆಕ್ಕುಗಳಿವೆ. ರಾಜಸ್ತಾನದಲ್ಲಿ 12 ವರ್ಷದ ಹಿಂದೆ ಕಾಣದೇ ಮಾಯವಾಗಿದ್ದ ಕ್ಯಾರಕಲ್ ಎನ್ನುವ ಬೆಕ್ಕು ಈಗ ಕಾಣಿಸಿಕೊಂಡಿದೆ. ಇದರ ವಿಶೇಷ ಇಲ್ಲಿದೆ

ರಾಜಸ್ತಾನದ ಅರಣ್ಯದಲ್ಲಿ ಕಾಣಿಸಿಕೊಂಡ  ಕ್ಯಾರಕಲ್ ಎನ್ನುವ ಕಾಡು ಬೆಕ್ಕು
ರಾಜಸ್ತಾನದ ಅರಣ್ಯದಲ್ಲಿ ಕಾಣಿಸಿಕೊಂಡ ಕ್ಯಾರಕಲ್ ಎನ್ನುವ ಕಾಡು ಬೆಕ್ಕು

ದೆಹಲಿ: ವಿಶಿಷ್ಟ ಬಗೆಯ ಬೆಕ್ಕಿನ ಜಾತಿಯ ಪ್ರಾಣಿ ಭಾರತದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಅದೂ 12 ವರ್ಷದ ಬಳಿಕ ಈ ಬೆಕ್ಕು ಅರಣ್ಯದಲ್ಲಿ ಕಾಣಿಸಿಕೊಂಡಿದೆ. ರಾಜಸ್ತಾನದ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕ್ಯಾರಕಲ್ ಎನ್ನುವ ಈ ಪ್ರಾಣಿ ಕಾಣಸಿಕ್ಕಿದೆ. ಕ್ಯಾರಕಲ್, ಭಾರತದ ಅಪರೂಪದ ಕಾಡು ಬೆಕ್ಕು ಪ್ರಭೇದಗಳಲ್ಲಿ ಒಂದು. ಈ ಬೆಕ್ಕು ಹಿಂದೆಲ್ಲಾ ಸಾಕಷ್ಟು ಸಂಖ್ಯೆಯಲ್ಲಿ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಅಳಿದು ಹೋಗಿದೆ. ಈ ಬೆಕ್ಕುಗಳು ಕಾಣುವುದೇ ಅಪರೂಪ. ರಾಜಸ್ತಾನ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದನ್ನು 12 ವರ್ಷದ ಹಿಂದೆ ನೋಡಿದ್ದರು. ಆನಂತರ ಬೇರೆ ಜಾತಿಯ ಬೆಕ್ಕುಗಳು ಕಂಡು ಬಂದಿದ್ದರೂ ಕ್ಯಾರಕಲ್‌ ಮಾತ್ರ ದರ್ಶನ ನೀಡಿರಲಿಲ್ಲ. ಈ ಬೆಕ್ಕು ಇನ್ನೂ ಭಾರತದ ಕಾಡಿನಲ್ಲಿ ಉಳಿದಿದೆ ಎನ್ನುವ ಸಂತಸ ರಾಜಸ್ತಾನ ಅರಣ್ಯ ಇಲಾಖೆಯವರದ್ದು.

ರಾಜಸ್ತಾನದ ಸರಿಸ್ಕಾ ಪ್ರಮುಖ ಅರಣ್ಯಗಳಲ್ಲಿ ಒಂದು. ಹುಲಿ ಪುನರ್ವಸತಿ ಯೋಜನೆ ಮೂಲಕ ಈ ಅರಣ್ಯ ಜನಪ್ರಿಯವಾಗಿದೆ. ಇದು ಹುಲಿ ಸಹಿತ ಹಲವು ವನ್ಯಜೀವಿಗಳಿರುವ ಅರಣ್ಯ ಪ್ರದೇಶ. ಇಲ್ಲಿ 2012ರಲ್ಲಿ ಕ್ಯಾರಕಲ್‌ ಎನ್ನುವ ಈ ಬೆಕ್ಕು ಕಾಣಿಸಿಕೊಂಡಿತ್ತು. ಅದಾದ ಬಳಿಕ ಈಗ ಕ್ಯಾಮರಾ ಟ್ರಾಪ್‌ನಲ್ಲಿ ಕಾಣ ಸಿಕ್ಕಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕ್ಯಾರಕಲ್ 30 ಜಾತಿಯ ಸಣ್ಣ ಕಾಡು ಬೆಕ್ಕುಗಳಲ್ಲಿ ಒಂದಾಗಿದೆ. ಮಾಂಸಾಹಾರಿ ಆಫ್ರಿಕಾ ಮತ್ತು ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಏಷ್ಯಾದ ಭಾಗಗಳಲ್ಲಿ ಇವುಗಳ ಇರುವಿಕೆ ಅಧಿಕ. ಭಾರತದಲ್ಲಿ, ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ನೆಲೆ ಕಂಡುಕೊಂಡಿರುವ ಕ್ಯಾರಕಲ್‌ಗಳ ಸಂಖ್ಯೆ 100 ಕ್ಕಿಂತ ಕಡಿಮೆ ಇದೆ. ವಿಶ್ವದ ಕೆಲವು ಮೃಗಾಲಗಳಲ್ಲಿ ಇವುಗಳ ಪ್ರದರ್ಶನ ಇದೆ.

ಕಳೆದ 12 ವರ್ಷಗಳ ಹಿಂದೆ ಮೀಸಲು ಪ್ರದೇಶದಲ್ಲಿ ಕ್ಯಾರಕಲ್ ಕಾಣಿಸಿಕೊಂಡಿತ್ತು. ಕ್ಯಾರಕಲ್: ಆನ್ ಇಂಟಿಮೇಟ್ ಹಿಸ್ಟರಿ ಆಫ್ ಎ ಮಿಸ್ಟೀರಿಯಸ್ ಕ್ಯಾಟ್ ಪುಸ್ತಕದ ಪ್ರಕಾರ, ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸ್ಥಾಪಿಸಿದ ಕ್ಯಾಮೆರಾ ಟ್ರ್ಯಾಪ್ ಜೂನ್ 2012 ರಲ್ಲಿ ಹಿಂದಿನ ಕ್ಯಾರಕಲ್ ದೃಶ್ಯವನ್ನು ಸೆರೆಹಿಡಿದಿತ್ತು.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ತಜ್ಞರು ಭಾರತೀಯ ಕ್ಯಾರಕಲ್ ಬ್ರೀಡಿಂಗ್ ಕಾರ್ಯಕ್ರಮವನ್ನು ಕೆಲ ದಿನಗಳ ಹಿಂದೆ ಪ್ರಸ್ತಾಪಿಸಿದ್ದರು. ಆದಾಗ್ಯೂ, ಆಫ್ರಿಕಾ ಮತ್ತು ಇಸ್ರೇಲ್‌ನಿಂದ ಕ್ಯಾರಕಲ್‌ಗಳ ಪರಿಚಯವು ಋಣಾತ್ಮಕ ಪರಿಸರ ಪರಿಣಾಮಗಳನ್ನು ಉಂಟುಮಾಡಬಹುದು ಎಂಬ ಕಳವಳವನ್ನು ಉಲ್ಲೇಖಿಸಿ ರಾಜಸ್ಥಾನ ಅರಣ್ಯ ಇಲಾಖೆ ನಿರಾಕರಿಸಿತ್ತು. ಈಗ ಅದೇ ಕಾಣಿಸಿಕೊಂಡು ಪುನರುತ್ಥಾನದ ಚರ್ಚೆ ವೇಳೆ ಅಚ್ಚರಿ ತಂದಿದೆ.

ರಾಜಸ್ಥಾನದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಪವನ್ ಕುಮಾರ್ ಅವರು ಸರಿಸ್ಕಾದಲ್ಲಿ ಕ್ಯಾರಕಲ್‌ ಪತ್ತೆಯಾಗಿರುವುದನ್ನು ಖಚಿತಪಡಿಸಿದ್ದು, ನಮ್ಮ ಸಿಬ್ಬಂದಿ ಇರಿಸಿದ್ದ ಕ್ಯಾಮರಾದಲ್ಲಿ ಕ್ಯಾರಕಲ್ ಇರುವುದು ಕಂಡು ಬಂದಿದೆ. ಕೆಲವು ದಿನಗಳಿಗೊಮ್ಮೆ ಕ್ಯಾಮರಾಗಳನ್ನು ಪರಿಶೀಲಿಸುತ್ತೇವೆ. ಇದರಲ್ಲಿ ಕ್ಯಾರಕಲ್‌ ಕಂಡು ಬಂದಿದ್ದು ಆಶ್ಚರ್ಯ ಹಾಗೂ ಖುಷಿ ಎರಡೂ ಆಯಿತು. ಅತ್ಯಂತ ಅಪರೂಪದ ಪ್ರಾಣಿಯಾಗಿದೆ. ಅದರ ಉಪಸ್ಥಿತಿಯು ಸಂರಕ್ಷಣಾ ಪ್ರಯತ್ನಗಳಿಗೆ ಭರವಸೆಯ ಸಂಕೇತವಾಗಿದೆ ಎಂದು ಕುಮಾರ್ ಹೇಳಿದರು.

ಸರಿಸ್ಕಾದಲ್ಲಿ ಕ್ಯಾರಕಲ್ ಅನ್ನು ಗುರುತಿಸಲಾಗಿದೆ.ರಣಥಂಬೋರ್ ಲ್ಯಾಂಡ್‌ಸ್ಕೇಪ್ ಮತ್ತು ಕಚ್‌ನ ಹೊರಗಿನ ಕ್ಯಾರಕಲ್ ದೃಶ್ಯವು ಎಷ್ಟು ದೊಡ್ಡದಾಗಿದೆ ಎಂದು ನಿಮಗೆ ತಿಳಿದಿದೆಯೇ?. ನಾನು ತುಂಬಾ ಸಂತೋಷವಾಗಿದ್ದೇನೆ. ಭಾರತದ ಅಪರೂಪದ ಬೆಕ್ಕು ಮತ್ತೆ ಕಂಡಿರುವುದು ಆಶ್ಚರ್ಯವನ್ನುಂಟುಮಾಡುತ್ತದೆ ಎಂದು ಅರಾವಳಿಯಲ್ಲಿ ವನ್ಯಜೀವಿ ಉತ್ಸಾಹಿ ಕ್ರಿಶ್ ಬೋಹ್ರಾ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ