Wolfs Attack: ಉತ್ತರ ಪ್ರದೇಶದಲ್ಲಿ ತೋಳಗಳ ದಾಳಿಗೆ ಬಾಲಕಿ ಸೇರಿ 9 ಮಂದಿ ಬಲಿ, ಸ್ಥಳೀಯರು ಮಕ್ಕಳ ರಕ್ಷಣೆಗೆ ಮಾಡಿದ್ದೇನು-forest news uttar pradesh bahraich facing wolf attacks 9 dead including 2 year girl localitis protecting with sticks kub ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Wolfs Attack: ಉತ್ತರ ಪ್ರದೇಶದಲ್ಲಿ ತೋಳಗಳ ದಾಳಿಗೆ ಬಾಲಕಿ ಸೇರಿ 9 ಮಂದಿ ಬಲಿ, ಸ್ಥಳೀಯರು ಮಕ್ಕಳ ರಕ್ಷಣೆಗೆ ಮಾಡಿದ್ದೇನು

Wolfs Attack: ಉತ್ತರ ಪ್ರದೇಶದಲ್ಲಿ ತೋಳಗಳ ದಾಳಿಗೆ ಬಾಲಕಿ ಸೇರಿ 9 ಮಂದಿ ಬಲಿ, ಸ್ಥಳೀಯರು ಮಕ್ಕಳ ರಕ್ಷಣೆಗೆ ಮಾಡಿದ್ದೇನು

Forest News ತೋಳಗಳು ನಿರಂತರವಾಗಿ ದಾಳಿ ಮಾಡುತ್ತಿರುವ ಘಟನೆಗಳು ಉತ್ತರ ಪ್ರದೇಶದ ಬಹರೈಚ್‌ ಜಿಲ್ಲೆಯಲ್ಲಿ ವರದಿಯಾಗುತ್ತಿವೆ.

ಉತ್ತರ ಪ್ರದೇಶದಲ್ಲಿ ತೋಳ ದಾಳಿಯಿಂದ ತಪ್ಪಿಸಿಕೊಳ್ಳಲು ದೊಣ್ಣೆ ಹಿಡಿದ ಗ್ರಾಮಸ್ಥರು.
ಉತ್ತರ ಪ್ರದೇಶದಲ್ಲಿ ತೋಳ ದಾಳಿಯಿಂದ ತಪ್ಪಿಸಿಕೊಳ್ಳಲು ದೊಣ್ಣೆ ಹಿಡಿದ ಗ್ರಾಮಸ್ಥರು.

ಲಕ್ನೋ: ಉತ್ತರ ಪ್ರದೇಶದಲ್ಲಿ ಈಗ ತೋಳ ದಾಳಿಯ ಆತಂಕ.ಅದರಲ್ಲೂ ಮನೆಯ ಒಳಗೆ ನುಗ್ಗಿ ಮಕ್ಕಳನ್ನು ಎಳೆದುಕೊಂಡು ಹೋಗಿ ತೋಳಗಳು ಕೊಂದು ಹಾಕುತ್ತಿವೆ. ರಸ್ತೆಗಳಲ್ಲಿ ನಡೆದು ಹೋಗುವವರು, ಜಮೀನಿನ ಕೆಲಸದಲ್ಲಿ ತೊಡಗಿರುವವರ ಮೇಲೂ ದಾಳಿಗಳು ನಡೆದಿವೆ. ಇದರಿಂದ ಈವರೆಗೂ ಒಂಬತ್ತು ಮಂದಿ ಜೀವ ಕಳೆದುಕೊಂಡಿದ್ದಾರೆ. ಎರಡು ವರ್ಷದ ಬಾಲಕಿಯೂ ಇದರಲ್ಲಿ ಸೇರಿದ್ದಾರೆ. ಮೂವತ್ತಕ್ಕೂ ಅಧಿಕ ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರಂತರ ಮಾನವ ಸಾವಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಅರಣ್ಯ ಇಲಾಖೆಯೂ ತೋಳಗಳ ಬೇಟೆಗೆ ಮುಂದಾಗಿದೆ. ಈಗಾಗಲೇ ನಾಲ್ಕು ತೋಳಗಳನ್ನು ಸೆರೆ ಹಿಡಿದಿದ್ದು. ಇನ್ನೆರಡು ತೋಳ ಸೆರೆಗೆ ಮುಂದಾಗಿದೆ.

ಉತ್ತರ ಪ್ರದೇಶ ಬಹರೈಚ್‌ (Bahraich) ಜಿಲ್ಲೆಯ ಕೆಲವು ಭಾಗದಲ್ಲಿ ಎರಡು ತಿಂಗಳಿನಿಂದಲೂ ತೋಳಗಳ ಉಪಟಳ ಅಧಿಕವಾಗಿದೆ. ಆದರೆ ಕೆಲವು ದಿನಗಳಲ್ಲಿ ತೋಳಗಳ ದಾಳಿ ತೀವ್ರಗೊಂಡಿದ್ದು ಒಂಬತ್ತು ಜನರನ್ನು ಬಲಿತೆಗೆದುಕೊಂಡಿವೆ. ಒಟ್ಟು ಆರು ತೋಳಗಳು ಈ ಭಾಗದಲ್ಲಿ ದಾಳಿ ಮಾಡುತ್ತಿವೆ.

ಅದರಲ್ಲೂ ಹಗಲಲ್ಲೂ ಊರುಗಳಿಗೆ ನುಗ್ಗಿ ದಾಳಿ ಮಾಡುತ್ತಿರುವುದು ಆತಂಕ ಹೆಚ್ಚಿಸಿದೆ. ಈ ಭಾಗದಲ್ಲಿ ತೋಳಗಳು ಕಂಡರೆ ಹೆದರುವ, ಓಡಿ ಹೋಗುವ ಸನ್ನಿವೇಶ ಎದುರಾಗಿದೆ.

ಕೆಲವು ದಿನಗಳಿಂದ ತೋಳ ದಾಳಿ ಮಾಡುತ್ತಿರುವ ಬಗ್ಗೆ ಕೇಳಿದ್ದೆವು. ಅವು ನಮ್ಮ ಮನೆಗೆ ನುಗ್ಗಿ ಎರಡು ವರ್ಷದ ಮಗಳನ್ನು ಎಳೆದುಕೊಂಡು ಹೋಗುತ್ತವೆ ಎಂದುಕೊಂಡಿರಲಿಲ್ಲ. ಮನೆಯಲ್ಲಿ ಯಾರೂ ಇಲ್ಲದೇ ಇದ್ಧಾಗ ದಾಳಿ ಮಾಡಿ ಮಗಳನ್ನು ಸಾಯಿಸಿವೆ ಎಂದು ತಾಯಿ ಕಣ್ಣೀರಾದರು. ಸ್ಥಳಕ್ಕೆ ಧಾವಿಸಿದ್ದ ಬಹರೈಚ್‌ ಜಿಲ್ಲಾಧಿಕಾರಿ ಮೋನಿಕಾ ರಾಣಿ ತಾಯಿಯನ್ನು ತಬ್ಬಿಕೊಂಡು ಸಾಂತ್ವನ ಹೇಳಿದರು.

ಇಲ್ಲಿ ತೋಳಗಳ ದಾಳಿ ದೂರುಗಳು ಬಂದಿದ್ದವು. ಅರಣ್ಯ ಇಲಾಖೆ ಇತರೆ ಇಲಾಖೆ ಸಹಯೋಗದಿಂದ ಕಾರ್ಯಾಚರಣೆ ನಡೆಸಿತ್ತು. ಈಗ ಮತ್ತೆ ದಾಳಿಯಾಗಿದೆ. ಜನ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಈಗಾಗಲೇ ನಾಲ್ಕು ತೋಳ ಸೆರೆ ಹಿಡಿದಿದ್ದು, ಇನ್ನೆರೆಡು ತೋಳ ಸೆರೆ ಹಿಡಿಯಲಾಗುವುದು. ಮೃತರ ಕುಟುಂಬಕ್ಕೆ ಪರಿಹಾರವನ್ನೂ ವಿತರಿಸಲಾಗಿದೆ ಎಂದು ಡಿಸಿ ಮೋನಿಕಾರಾಣಿ ಹೇಳಿದ್ದಾರೆ.

ತೋಳಗಳ ದಾಳಿಯಿಂದ ರೋಸಿ ಹೋಗಿರುವ ಈ ಭಾಗದಲ್ಲಿ ಪ್ರತಿಯೊಬ್ಬರು ಭಾರೀ ಗಾತ್ರದ ದೊಣ್ಣೆಯನ್ನು ಹಿಡಿದುಕೊಂಡೇ ಅಡ್ಡಾಡುತ್ತಿದ್ದಾರೆ. ತೋಳ ಸಿಕ್ಕರೆ ಏಟು ಗ್ಯಾರಂಟಿ ಎಂದು ಹೇಳುತ್ತಿದ್ದಾರೆ.

ಈ ಭಾಗದಲ್ಲಿ ತೋಳ ಬಂದಿದೆ ಎನ್ನುವ ಸುದ್ದಿ ತಿಳಿದು ಅತ್ತ ಗುಂಪು ಗುಂಪಾಗಿ ಜನ ಓಡುತ್ತಿದ್ದಾರೆ. ತೋಳದ ಭಯ ಜನರನ್ನು ಆವರಿಸಿದೆ. ಇದಕ್ಕಾಗಿ ಸ್ವಂತ ಅಸ್ತ್ರವನ್ನು ಅವರು ರೂಪಿಸಿಕೊಂಡು ಸ್ವಯಂ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.

ಇದರ ನಡುವೆಯೇ ಶನಿವಾರ ಮತ್ತೆ ತೋಳ ಬಾಲಕನೊಬ್ಬನ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಇದೇ ಜಿಲ್ಲೆಯಲ್ಲಿ ವರದಿಯಾಗಿದೆ. ಇದರಿಂದ ಅರಣ್ಯ ಇಲಾಖೆ ತೋಳಗಳ ಸೆರೆಗೆ ಮತ್ತಷ್ಟು ಕಾರ್ಯಾಚರಣೆ ಬಿರುಸುಗೊಳಿಸಿದೆ. ಈಗಾಗಲೇ ಢ್ರೋಣ್‌ ಸಹಿತ ಆಧುನಿಕ ತಂತ್ರಜ್ಞಾನದ ಉಪಕರಣ ಬಳಿಸಿ ತೋಳ ಸೆರೆ ಕಾರ್ಯಾಚರಣೆ ನಡೆಸಿದೆ.

mysore-dasara_Entry_Point

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.