USA: ದುಬಾರಿ ಬಾಡಿಗೆ ಹಣ ಉಳಿಸಲು ವಿಮಾನದಲ್ಲಿ ಇಂಟರ್ನ್‌ಶಿಪ್‌ಗೆ ಹೋಗಿ ಬರುವ ಯುವತಿ; ಹೀಗೂ ಇರ್ತಾರೆ
Jan 09, 2024 08:09 PM IST
ವಿಮಾನದ ಮೂಲಕ ಇಂಟರ್ನ್‌ಶಿಪ್‌ಗೆ ಪ್ರಯಾಣಿಸುವ ಯುವತಿ (ಸಾಂದರ್ಭಿಕ ಚಿತ್ರ)
- Sophia Celentano: ಅಮೆರಿಕದ ಯುವತಿಯೊಬ್ಬರು ಪ್ರತಿ ವಾರ ವಿಮಾನದ ಮೂಲಕ ಇಂಟರ್ನ್‌ಶಿಪ್‌ಗೆ ಪ್ರಯಾಣಿಸುವ ಮೂಲಕ ಬಾಡಿಗೆ ಹಣವನ್ನು ಉಳಿಸುತ್ತಿದ್ದಾಳೆ. ದಕ್ಷಿಣ ಕೆರೊಲಿನಾದಿಂದ ನ್ಯೂಜೆರ್ಸಿಗೆ ಪ್ರತಿವಾರ ಆಕೆ ವಿಮಾನದಲ್ಲೇ ಪ್ರಯಾಣಿಸುತ್ತಾಳೆ.
ದೂರದ ಅಮೆರಿಕದಲ್ಲಿ (United States) ಎಲ್ಲವೂ ದುಬಾರಿ. ತಿನ್ನುವ ಊಟದಿಂದ ಹಿಡಿದು ವಾಸಕ್ಕೆ ಒಂದು ಮನೆ ಬೇಕೆಂದರೂ ದುಬಾರಿ ಬೆಲೆ ತೆರಬೇಕು. ಈ ನಡುವೆ ಅಲ್ಲಿ ವೃತ್ತಿ ಜೀವನವನ್ನು ಸಂಭಾಳಿಸುವುದು ಸ್ವಲ್ಪ ಕಷ್ಟವೇ. ಇಲ್ಲೊಬ್ಬಳು ಯುವತಿ ತನ್ನ ಕೆಲಸದ ಕಚೇರಿಗೆ ತೆರಳುವುದಕ್ಕಾಗಿ ಹೊಸ ಉಪಾಯ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಈಗ ಸುದ್ದಿಯಾಗಿದ್ದಾಳೆ.
ಸೋಫಿಯಾ ಸೆಲೆಂಟಾನೊ (Sophia Celentano) ಹೆಸರಿನ 21 ವರ್ಷ ವಯಸ್ಸಿನ ಯುವತಿ, ಅಮೆರಿಕದ ನ್ಯೂಜೆರ್ಸಿಯಲ್ಲಿರುವ (New Jersey) ಓಗಿಲ್ವಿ ಹೆಲ್ತ್‌ನಲ್ಲಿ (Ogilvy Health) ಇಂಟರ್ನ್‌ಶಿಪ್ ಮಾಡುತ್ತಿದ್ದಾರೆ. ಇವರ ಮನೆ ಇರುವುದು ಸೌತ್ ಕೆರೋಲಿನಾದಲ್ಲಿ. ಆದರೆ ಕಂಪನಿ ಇರುವುದು ನ್ಯೂಜೆರ್ಸಿಯಲ್ಲಿ. ವಾರಕ್ಕೊಮ್ಮೆ ಕಂಪನಿಗೆ ಇಂಟರ್ನ್‌ಶಿಪ್‌ಗಾಗಿ ತೆರಳಲು ನ್ಯೂಜೆರ್ಸಿಯಲ್ಲಿ ಬಾಡಿಗೆ ಮನೆ ಮಾಡುವ ಅಗತ್ಯವಿತ್ತು. ಆದರೆ, ಈ ಯುವತಿ ಆ ಆಯ್ಕೆಯನ್ನು ಬದಿಗಿಟ್ಟು, ಪ್ರತಿ ವಾರವೂ ವಿಮಾನದಲ್ಲೇ ಪ್ರಯಾಣ ಮಾಡಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ಪ್ರತಿ ವಾರ ತಮ್ಮ ಕಚೇರಿಗೆ ವಿಮಾನದಲ್ಲೇ ಹಾರುವ ಸೋಫಿಯಾ, ಈ ಆಯ್ಕೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಇದಕ್ಕೆ ಕಾರಣ, ವಿಮಾನದ ಟಿಕೆಟ್ ದರವು ನ್ಯೂಜೆರ್ಸಿಯಲ್ಲಿ ಮನೆ ಬಾಡಿಗೆಗಿಂತ ಅಗ್ಗವಂತೆ.
ಸೆಲೆಂಟಾನೊ ಅವರಿಗೆ ನ್ಯೂಜೆರ್ಸಿಯಿಂದ ಈ ಇಂಟರ್ನ್‌ಶಿಪ್ ಆಫರ್ ಬಂದಾಗ, ಅವರು ತಮ್ಮ ಪೋಷಕರೊಂದಿಗೆ ವಾಸಿಸಲು ಬಾಡಿಗೆ ಮನೆಯ ಹುಡುಕಾಟ ಮಾಡಿದರು. ಪಾರ್ಸಿಪ್ಪನಿ ಅಥವಾ ನ್ಯೂಯಾರ್ಕ್‌ನಲ್ಲಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆಯುವ ವೆಚ್ಚ ಮತ್ತು ವಿಮಾನ ಟಿಕೆಟ್ ದರಗಳನ್ನು ಹೋಲಿಕೆ ಮಾಡಿದರು. Apartments.com ಮತ್ತು Renthopನ ಮಾಹಿತಿಯ ಪ್ರಕಾರ, ಪಾರ್ಸಿಪ್ಪನಿಯಲ್ಲಿನ ಬಾಡಿಗೆ ಮನೆಯ ಸರಾಸರಿ ಬಾಡಿಗೆಯು ತಿಂಗಳಿಗೆ ಸುಮಾರು 1,730 ಡಾಲರ್ (ಸುಮಾರು 1.40 ಲಕ್ಷ ರೂಪಾಯಿ) ಆಗಿದ್ದರೆ, ಇದೇ ಬೆಲೆಯು ನ್ಯೂಯಾರ್ಕ್‌ನಲ್ಲಿ 3,500 ಡಾಲರ್ (2.87 ಲಕ್ಷ ರೂಪಾಯಿ) ಆಗುತ್ತದೆ. ಇದರೊಂದಿಗೆ ಊಟ, ಪೆಟ್ರೋಲ್ ಹಾಗೂ ಇತರ ವೆಚ್ಚಗಳನ್ನು ಲೆಕ್ಕ ಹಾಕಿದರೆ ಇನ್ನೂ ಹೆಚ್ಚು ಹೊರೆ ಬೀಳುತ್ತದೆ ಎಂದು CNBC ವರದಿ ಮಾಡಿದೆ. ಇದನ್ನು ಮನಗಂಡ ಯುವತಿ ಅಲ್ಲಿ ಬಾಡಿಗೆ ಮನೆ ಮಾಡುವುದಕ್ಕಿಂದ ವಾರಕ್ಕೊಮ್ಮೆ ವಿಮಾನದಲ್ಲಿ ಹೋಗುವುದೇ ಒಳಿತು ಎಂದು ಆ ನಿರ್ಧಾರಕ್ಕೆ ಬಂದಿದ್ದಾರೆ.
ತಮ್ಮ ಪ್ರಯಾಣದ ಬಗ್ಗೆ ಲಿಂಕ್‌ಡ್‌ಇನ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸೆಲೆಂಟಾನೊ, ದಕ್ಷಿಣ ಕೆರೊಲಿನಾದಿಂದ ನ್ಯೂಜೆರ್ಸಿಯಲ್ಲಿರುವ ಕಚೇರಿಗೆ ವಿಮಾನದಲ್ಲಿ ಪ್ರಯಾಣಿಸುವ ಕುರಿತಾಗಿ ಹೇಳಿಕೊಂಡಿದ್ದಾರೆ. “ವಿಮಾನದಲ್ಲಿ ಹೋಗುವುದರಿಂದ ನಾನು ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿದೆ. ಬಾಡಿಗೆಗೆಂದು ತಿಂಗಳಿಗೆ 3400 ಡಾಲರ್‌ಗಿಂತಲೂ ಹೆಚ್ಚು ಬೆಲೆ ಪಾವತಿಸುವ ಬದಲು, ನಾನು ಕೆಲಸ ಮಾಡುವ ವಾರದ ಒಂದು ದಿನ ದಕ್ಷಿಣ ಕೆರೊಲಿನಾದಿಂದ ನ್ಯೂಜೆರ್ಸಿಗೆ ವಿಮಾನದಲ್ಲಿ ಹೋಗುತ್ತೇನೆ. ವಿಮಾನ ಟಿಕೆಟ್ ದರವು 100 ಡಾಲರ್ ಇರುತ್ತದೆ ಅಷ್ಟೇ. ಆ ಮೊತ್ತಕ್ಕೆ ನಾನು ನ್ಯೂಜೆರ್ಸಿಗೆ ಹೋಗಿ ಅಲ್ಲಿಂದ ಮರಳಿ ಬರಲು ಸಾಧ್ಯವಾಗುತ್ತದೆ. ಈ ರೀತಿ ಮಾಡುವುದರಿಂದ ನನಗೆ ಹೆಚ್ಚು ಸಮಯ ಉಳಿತಾಯವಾಗುತ್ತದೆ. ನನ್ನ ಜೀವನಶೈಲಿಗೆ ಸ್ವಾತಂತ್ರ್ಯ ಸಿಗುತ್ತಿದೆ” ಎಂದು ಅವರು ಹೇಳಿಕೊಂಡಿದ್ದಾರೆ.
ಕೆಳಗಿನ ಅವಳ ಸಂಪೂರ್ಣ ಪೋಸ್ಟ್ ಅನ್ನು ನೋಡಿ
ಇವರ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ. ಯುವತಿಯ ಯೋಚನೆ ಹಾಗೂ ಹಣ ಉಳಿಸುವ ತಂತ್ರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಂಡನ್: ಜಗತ್ ಪ್ರಸಿದ್ಧಿ ಪಡೆದ ಟೈಟಾನಿಕ್ (Titanic) ಹಡಗಿನ ಅವಶೇಷಗಳನ್ನು ವೀಕ್ಷಿಸಲು ತೆರಳಿ ಅಟ್ಲಾಂಟಿಕ್ ಸಾಗರದಲ್ಲಿ (Atlantic Ocean) ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ನಾಪತ್ತೆಯಾಗಿದ್ದ ಸಬ್ಮೆರಿನ್ಗಾಗಿ (Submarine) ಶೋಧ ನಡೆಯುತ್ತಿದೆ. ಅದರಲ್ಲಿದ್ದ ಪೈಲೆಟ್ ಮತ್ತು ಟೈಟಾನಿಕ್ ಅವಶೇಷಗಳನ್ನು ಕಣ್ತುಂಬಿಕೊಳ್ಳಲು ತೆರಳಿದ್ದ ನಾಲ್ವರ ಜಲಂತರ್ಗಾಮಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಸದ್ಯ ಆಮ್ಲಜನಕದ ಪ್ರಮಾಣ 30ಕ್ಕೆ ಕುಸಿದಿದ್ದು, ಪೈಲೆಟ್ ಜೊತೆಗೆ ಪ್ರವಾಸಿಗರು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.