logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Video: ಶೌಚಾಲಯಗಳ ಮೇಲೆ ಗುಂಡು ಹಾರಿಸಿ ಯಾರೂ ಬದುಕುಳಿದಿಲ್ಲ ಎಂದು ಕನ್​ಫರ್ಮ್​ ಮಾಡಿಕೊಂಡ ಹಮಾಸ್​ ಉಗ್ರರು

Video: ಶೌಚಾಲಯಗಳ ಮೇಲೆ ಗುಂಡು ಹಾರಿಸಿ ಯಾರೂ ಬದುಕುಳಿದಿಲ್ಲ ಎಂದು ಕನ್​ಫರ್ಮ್​ ಮಾಡಿಕೊಂಡ ಹಮಾಸ್​ ಉಗ್ರರು

Meghana B HT Kannada

Oct 14, 2023 03:41 PM IST

google News

ಶೌಚಾಲಯಗಳ ಮೇಲೆ ಗುಂಡು ಹಾರಿಸಿದ ಉಗ್ರರು

    • Israel-Palestine War: ಸಂಗೀತ ಉತ್ಸವದಲ್ಲಿ ಪಾಲ್ಗೊಂಡಿದ್ದ 260 ಮಂದಿಯನ್ನು ಹಮಾಸ್​ ಉಗ್ರರು ಕೊಂದಿದ್ದರು, ಕೆಲವರನ್ನು ಅಪಹರಿಸಿದ್ದರು. ಇದೀಗ ಆ ದಿನ ಹಮಾಸ್​ ಉಗ್ರರು ಮ್ಯೂಸಿಕ್ ಫೆಸ್ಟಿವಲ್‌ ನಡೆಯುತ್ತಿದ್ದ ಜಾಗದಲ್ಲಿದ್ದ ಶೌಚಾಲಯಗಳ ಮೇಲೆ ಗುಂಡು ಹಾರಿಸಿ ಅದರೊಳಗೆ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.
ಶೌಚಾಲಯಗಳ ಮೇಲೆ ಗುಂಡು ಹಾರಿಸಿದ ಉಗ್ರರು
ಶೌಚಾಲಯಗಳ ಮೇಲೆ ಗುಂಡು ಹಾರಿಸಿದ ಉಗ್ರರು

ಇಸ್ರೇಲ್​ ಮತ್ತು ಪ್ಯಾಲೆಸ್ತೀನ್​ ನಡುವಿನ ಯುದ್ಧಕ್ಕೆ ಇಂದು 8ನೇ ದಿನ. ಅಕ್ಟೋಬರ್ 7 ರಂದು ಇಸ್ರೇಲ್​​ ಮೇಲೆ ಮೊದಲು ದಾಳಿ ನಡೆಸಿದ್ದ ಹಮಾಸ್​ ಉಗ್ರರು ಅಂದು ಗಾಜಾ ಗಡಿಯ ಸಮೀಪವಿರುವ ಇಸ್ರೇಲ್​​ನ ಟ್ರೈಬ್ ಆಫ್ ನೋವಾ ಮ್ಯೂಸಿಕ್ ಫೆಸ್ಟಿವಲ್‌ ಮೇಲೆಯೂ ದಾಳಿ ನಡೆಸಿದ್ದರು.

ಸಂಗೀತ ಉತ್ಸವದಲ್ಲಿ ಪಾಲ್ಗೊಂಡಿದ್ದ 260 ಮಂದಿಯನ್ನು ಹಮಾಸ್​ ಉಗ್ರರು ಕೊಂದಿದ್ದರು, ಕೆಲವರನ್ನು ಅಪಹರಿಸಿದ್ದರು. ಇದೀಗ ಆ ದಿನ ಹಮಾಸ್​ ಉಗ್ರರು ಮ್ಯೂಸಿಕ್ ಫೆಸ್ಟಿವಲ್‌ ನಡೆಯುತ್ತಿದ್ದ ಜಾಗದಲ್ಲಿದ್ದ ಶೌಚಾಲಯಗಳ ಮೇಲೆ ಗುಂಡು ಹಾರಿಸಿ ಅದರೊಳಗೆ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ತನ್ನ ಎಕ್ಸ್​ (ಟ್ವಿಟರ್​) ಖಾತೆಯ್ಲಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬಂದೂಕುಧಾರಿ ಹಮಾಸ್​ ಉಗ್ರರು ಸಾಲಾಗಿ ಸ್ಥಾಪಿಸಲಾಗಿದ್ದ ಹತ್ತಾರು ಶೌಚಾಲಯಗಳ ಮೇಲೆ ಕ್ರಮವಾಗಿ ಗುಂಡು ಹಾರಿಸುವುದು ಕಂಡು ಬಂದಿದೆ. ಹಮಾಸ್​ ಉಗ್ರರಿಗೆ ನೀವು ಯಾರು ಎಂಬುದು ಮುಖ್ಯವಲ್ಲ, ಕೇವಲ ನಿಮ್ಮನ್ನು ಕೊಲ್ಲುವುದಷ್ಟೇ ಅವರಿಗೆ ಮುಖ್ಯ ಎಂಬುದನ್ನು ಈ ದೃಶ್ಯ ತೋರಿಸುತ್ತದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ.

ಇದೇ ಮ್ಯೂಸಿಕ್ ಫೆಸ್ಟಿವಲ್​ನಲ್ಲಿ ಪಾಲ್ಗೊಂಡಿದ್ದ ಯುವತಿಯೊಬ್ಬಳನ್ನು ಹಮಾಸ್ ಉಗ್ರರು ಅಪಹರಿಸುತ್ತಿರುವ ವಿಡಿಯೋ ಕೂಡ ವೈರಲ್​ ಆಗಿತ್ತು. , ಆಕೆ "ನನ್ನನ್ನು ಕೊಲ್ಲಬೇಡಿ, ನೋ, ನೋ" ಎಂದು ಚೀರಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧದಲ್ಲಿ ರಾಯಿಟರ್ಸ್ ಪತ್ರಕರ್ತ ಸಾವು; ಕೆಲವೇ ಕ್ಷಣಗಳ ಮುನ್ನ ವಿಡಿಯೋ ಶೇರ್​ ಮಾಡಿದ್ದ ಜರ್ನಲಿಸ್ಟ್

ಇಸ್ರೇಲ್​​ನ ಕ್ಷಿಪಣಿ ದಾಳಿಯಲ್ಲಿ ಲೆಬನಾನ್‌ನಲ್ಲಿ ರಾಯಿಟರ್ಸ್ ಪತ್ರಕರ್ತ ಮೃತಪಟ್ಟಿದ್ದಾರೆ. ಅಲ್ ಜಜೀರಾ, ಏಜೆನ್ಸ್ ಫ್ರಾನ್ಸ್-ಪ್ರೆಸ್ (ಎಎಫ್‌ಪಿ) ಸೇರಿದಂತೆ ಇತರ ಮಾಧ್ಯಮಗಳ 6 ಮಂದಿ ಪತ್ರಕರ್ತರು ಗಾಯಗೊಂಡಿದ್ದಾರೆ. ಲೆಬನಾನ್‌ ದೇಶವು ಇಸ್ರೇಲ್​​ನ ನೆರೆರಾಷ್ಟ್ರವಾಗಿದ್ದು, ಲೆಬನಾನ್‌-ಇಸ್ರೇಲ್​​ ಗಡಿ ಭಾಗವಾದ ಅಲ್ಮಾ ಅಲ್-ಶಾಬ್​ನಲ್ಲಿ ರಾಯಿಟರ್ಸ್ ವಿಡಿಯೊ ಪತ್ರಕರ್ತ ಇಸಾಮ್ ಅಬ್ದುಲ್ಲಾ ನಿಯೋಜನೆಗೊಂಡು ವಿಡಿಯೋ ವರದಿ ಕಳುಹಿಸುತ್ತಿದ್ದರು. ಆದರೆ ಇಸ್ರೇಲ್​​ ಕಡೆಯಿಂದ ಬಂದ ಕ್ಷಿಪಳಿಯ ದಾಳಿಗೆ ಸಾವನಪ್ಪಿದ್ದಾರೆ. ಇದೇ ಸ್ಥಳದಲ್ಲಿ ವರದಿ ಮಾಡುತ್ತಿದ್ದ ಇತರ 6 ಜರ್ನಲಿಸ್ಟ್​ ಗಾಯಗೊಂಡಿದ್ದಾರೆ. ಇದು ಉದ್ದೇಶಪೂರ್ವಕ ಹತ್ಯೆಯಲ್ಲ, ಪತ್ರಕರ್ತರಿಗೆ ಹಾನಿಯುಂಟುಮಾಡುವ ಉದ್ದೇಶವಿಲ್ಲ, ಆದರೆ ಯುದ್ಧದ ಸಮಯದಲ್ಲಿ ಯಾರಿಗೆ ಏನು ಬೇಕಾದರೂ ಸಂಭವಿಸಬಹುದು ಎಂದು ಇಸ್ರೇಲ್​ ಪಡೆ ಹೇಳಿದ್ದು, ಕ್ಷಮೆಯಾಚಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ