ಇಸ್ರೇಲ್-ಹಮಾಸ್ ಯುದ್ಧದಲ್ಲಿ ರಾಯಿಟರ್ಸ್ ಪತ್ರಕರ್ತ ಸಾವು; ಕೆಲವೇ ಕ್ಷಣಗಳ ಮುನ್ನ ವಿಡಿಯೋ ಶೇರ್​ ಮಾಡಿದ್ದ ಜರ್ನಲಿಸ್ಟ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇಸ್ರೇಲ್-ಹಮಾಸ್ ಯುದ್ಧದಲ್ಲಿ ರಾಯಿಟರ್ಸ್ ಪತ್ರಕರ್ತ ಸಾವು; ಕೆಲವೇ ಕ್ಷಣಗಳ ಮುನ್ನ ವಿಡಿಯೋ ಶೇರ್​ ಮಾಡಿದ್ದ ಜರ್ನಲಿಸ್ಟ್

ಇಸ್ರೇಲ್-ಹಮಾಸ್ ಯುದ್ಧದಲ್ಲಿ ರಾಯಿಟರ್ಸ್ ಪತ್ರಕರ್ತ ಸಾವು; ಕೆಲವೇ ಕ್ಷಣಗಳ ಮುನ್ನ ವಿಡಿಯೋ ಶೇರ್​ ಮಾಡಿದ್ದ ಜರ್ನಲಿಸ್ಟ್

Israel-Palestine War: ಲೆಬನಾನ್‌ ದೇಶವು ಇಸ್ರೇಲ್​​ನ ನೆರೆರಾಷ್ಟ್ರವಾಗಿದ್ದು, ಲೆಬನಾನ್‌-ಇಸ್ರೇಲ್​​ ಗಡಿ ಭಾಗವಾದ ಅಲ್ಮಾ ಅಲ್-ಶಾಬ್​ನಲ್ಲಿ ರಾಯಿಟರ್ಸ್ ವಿಡಿಯೊ ಪತ್ರಕರ್ತ ಇಸಾಮ್ ಅಬ್ದುಲ್ಲಾ ನಿಯೋಜನೆಗೊಂಡು ವಿಡಿಯೋ ವರದಿ ಕಳುಹಿಸುತ್ತಿದ್ದರು. ಆದರೆ ಇಸ್ರೇಲ್​​ ಕಡೆಯಿಂದ ಬಂದ ಕ್ಷಿಪಳಿಯ ದಾಳಿಗೆ ಸಾವನಪ್ಪಿದ್ದಾರೆ.

ಮೃತಪಟ್ಟ ರಾಯಿಟರ್ಸ್ ಪತ್ರಕರ್ತ ಇಸಾಮ್ ಅಬ್ದುಲ್ಲಾ
ಮೃತಪಟ್ಟ ರಾಯಿಟರ್ಸ್ ಪತ್ರಕರ್ತ ಇಸಾಮ್ ಅಬ್ದುಲ್ಲಾ

ಇಸ್ರೇಲ್ ​​ನಡೆಸಿದ ಕ್ಷಿಪಣಿ ದಾಳಿಯಲ್ಲಿ ಲೆಬನಾನ್‌ನಲ್ಲಿ ರಾಯಿಟರ್ಸ್ ಪತ್ರಕರ್ತ ಮೃತಪಟ್ಟಿದ್ದಾರೆ. ಅಲ್ ಜಜೀರಾ, ಏಜೆನ್ಸ್ ಫ್ರಾನ್ಸ್-ಪ್ರೆಸ್ (ಎಎಫ್‌ಪಿ) ಸೇರಿದಂತೆ ಇತರ ಮಾಧ್ಯಮಗಳ 6 ಮಂದಿ ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಲೆಬನಾನ್‌ ದೇಶವು ಇಸ್ರೇಲ್​​ನ ನೆರೆರಾಷ್ಟ್ರವಾಗಿದ್ದು, ಲೆಬನಾನ್‌-ಇಸ್ರೇಲ್​​ ಗಡಿ ಭಾಗವಾದ ಅಲ್ಮಾ ಅಲ್-ಶಾಬ್​ನಲ್ಲಿ ರಾಯಿಟರ್ಸ್ ವಿಡಿಯೊ ಪತ್ರಕರ್ತ ಇಸಾಮ್ ಅಬ್ದುಲ್ಲಾ ನಿಯೋಜನೆಗೊಂಡು ವಿಡಿಯೋ ವರದಿ ಕಳುಹಿಸುತ್ತಿದ್ದರು. ಆದರೆ ಇಸ್ರೇಲ್​​ ಕಡೆಯಿಂದ ಬಂದ ಕ್ಷಿಪಳಿಯ ದಾಳಿಗೆ ಸಾವನಪ್ಪಿದ್ದಾರೆ. ಇದೇ ಸ್ಥಳದಲ್ಲಿ ವರದಿ ಮಾಡುತ್ತಿದ್ದ ಇತರ 6 ಜರ್ನಲಿಸ್ಟ್​ ಗಾಯಗೊಂಡಿದ್ದಾರೆ. ಗಾಯಗೊಂಡ 6 ಮಂದಿ ಪತ್ರಕರ್ತರಲ್ಲಿ ಇಬ್ಬರು ರಾಯಿಟರ್ಸ್, ಇಬ್ಬರು ಅಲ್ ಜಜೀರಾ ಮತ್ತು ಇಬ್ಬರು ಎಎಫ್‌ಪಿದವರಾಗಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲೆಬನಾನಿನ ಪ್ರಧಾನಿ ನಜೀಬ್ ಮಿಕಾಟಿ ಅವರು ಇಸ್ರೇಲ್ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಇಸ್ರೇಲ್​​ನ ವಿಶ್ವಸಂಸ್ಥೆಯ ರಾಯಭಾರಿ ಗಿಲಾಡ್ ಎರ್ಡಾನ್, "ನಾವು ಎಂದಿಗೂ ಸೇವೆಯಲ್ಲಿರುವ ಪತ್ರಕರ್ತರನ್ನು ಶೂಟ್​ ಮಾಡಲು, ಹತ್ಯೆ ಮಾಡಲು ಬಯಸುವುದಿಲ್ಲ. ಆದರೆ ನಾವು ಯುದ್ಧದ ಸ್ಥಿತಿಯಲ್ಲಿದ್ದೇವೆ, ಯಾವಾಗ ಏನಾದರೂ ಸಂಭವಿಸಬಹುದು. ಘಟನೆಯ ಬಗ್ಗೆ ಇಸ್ರೇಲ್ ತನಿಖೆ ನಡೆಸಲಿದೆ" ಎಂದು ಹೇಳಿದ್ದಾರೆ.

ಇಸಾಮ್​ ಅಬ್ದುಲ್ಲಾ ಅವರು ಸಾಯುವ ಕೆಲವೇ ಕ್ಷಣಗಳ ಮುನ್ನ ಅಲ್ಲಿ ನಡೆಯುತ್ತಿರುವ ಬಾಂಬ್-ಗುಂಡಿನ​ ದಾಳಿಗಳ ವಿಡಿಯೋವನ್ನು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದರು. ಅಲ್ಲದೇ ತಮ್ಮ ಮತ್ತೊಂದು ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಹೆಲ್ಮೆಟ್ ಮತ್ತು ಫ್ಲಾಕ್ ಜಾಕೆಟ್ ಅನ್ನು ಧರಿಸಿರುವ ತಮ್ಮ ಫೋಟೋವನ್ನು ಹಂಚಿಕೊಂಡಿದ್ದರು.

ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಅವರು ಪತ್ರಕರ್ತನ ಸಾವಿಗೆ ಸಂತಾಪ ಸೂಚಿಸಿದ್ದು, ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. "ಎಲ್ಲರಿಗೂ ಸತ್ಯವನ್ನು ತಲುಪಿಸಲು ಹಲವಾರು ಪತ್ರಕರ್ತರು ತಮ್ಮ ಜೀವವನ್ನು ಮುಡಿಪಾಗಿಡುತ್ತಿದ್ದಾರೆ" ಎಂದಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.