logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bbc Documentary: ಬಿಬಿಸಿ ಡಾಕ್ಯುಮೆಂಟರಿ ಬಿಡುಗಡೆ ಮಾಡಿದ ಸಮಯ ಪ್ರಶ್ನಿಸಿದ ವಿದೇಶಾಂಗ ಸಚಿವ, ಇದು ವಿದೇಶಿ ಕುತಂತ್ರ ಅಂದ್ರು ಜೈಶಂಕರ್‌

BBC documentary: ಬಿಬಿಸಿ ಡಾಕ್ಯುಮೆಂಟರಿ ಬಿಡುಗಡೆ ಮಾಡಿದ ಸಮಯ ಪ್ರಶ್ನಿಸಿದ ವಿದೇಶಾಂಗ ಸಚಿವ, ಇದು ವಿದೇಶಿ ಕುತಂತ್ರ ಅಂದ್ರು ಜೈಶಂಕರ್‌

Praveen Chandra B HT Kannada

Mar 01, 2023 06:00 PM IST

google News

BBC documentary: ಬಿಬಿಸಿ ಡಾಕ್ಯುಮೆಂಟರಿ ಬಿಡುಗಡೆ ಮಾಡಿದ ಸಮಯ ಪ್ರಶ್ನಿಸಿದ ವಿದೇಶಾಂಗ ಸಚಿವ, ಇದು ರಾಜಕೀಯ ಅಂದ್ರು ಜೈಶಂಕರ್‌

  • ಕೆಲವೊಮ್ಮೆ ಭಾರತದಲ್ಲಿ ರಾಜಕೀಯವು ದೇಶದೊಳಗೆ ಹುಟ್ಟುವುದಿಲ್ಲ, ಗಡಿಯಾಚೆ ಹುಟ್ಟುತ್ತದೆ ಎಂದು ವಿದೇಶಾಂಗ ಸಚಿವರಾದ ಎಸ್‌. ಜೈಶಂಕರ್‌ ಹೇಳಿದ್ದಾರೆ.

BBC documentary: ಬಿಬಿಸಿ ಡಾಕ್ಯುಮೆಂಟರಿ ಬಿಡುಗಡೆ ಮಾಡಿದ ಸಮಯ ಪ್ರಶ್ನಿಸಿದ ವಿದೇಶಾಂಗ ಸಚಿವ, ಇದು ರಾಜಕೀಯ ಅಂದ್ರು ಜೈಶಂಕರ್‌
BBC documentary: ಬಿಬಿಸಿ ಡಾಕ್ಯುಮೆಂಟರಿ ಬಿಡುಗಡೆ ಮಾಡಿದ ಸಮಯ ಪ್ರಶ್ನಿಸಿದ ವಿದೇಶಾಂಗ ಸಚಿವ, ಇದು ರಾಜಕೀಯ ಅಂದ್ರು ಜೈಶಂಕರ್‌ (ANI)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿರುವ ಸಮಯ ಆಕಸ್ಮಿಕವಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಮಂಗಳವಾರ ಹೇಳಿದ್ದಾರೆ.

"ನಾವು ಯುರೋಪಿನ ನಗರದಲ್ಲಿ ಯಾರೋ ಮಾಡಿದ ಸಾಕ್ಷ್ಯಚಿತ್ರ ಅಥವಾ ಭಾಷಣದ ಬಗ್ಗೆ ಚರ್ಚಿಸುತ್ತಿಲ್ಲ. ಇದು ಮೇಲ್ನೋಟಕ್ಕೆ ಕಾಣಿಸುವ ರಾಜಕೀಯ. ಇದರ ಕುರಿತು ಚರ್ಚಿಸುತ್ತಿದ್ದೇವೆ. 'ಇದು ಇನ್ನೊಂದು ರೀತಿಯ ಯುದ್ಧ' ಎಂದು ಅವರು ಹೇಳಿದರು.

ಇದು ಇನ್ನೊಂದು ರೀತಿಯ ರಾಜಕೀಯ ವಿಧಾನ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ನೀವು ಹಠಾತ್‌ ಆಗಿ ಈ ಕೆಲಸ ಆರಂಭಿಸಿದ್ದೀರಿ. ಇದು ಸತ್ಯದ ಅನ್ವೇಷಣೆ ಎಂದು ಹೇಳಿದ್ದೀರಿ. ಇಪ್ಪತ್ತು ವರ್ಷಗಳ ಬಳಿಕ ಇದನ್ನು ಹೊರಹಾಕಲು ನಿರ್ಧರಿಸಿರುವುದು ಆಕಸ್ಮಿಕವೆಂದು ನೀವು ಭಾವಿಸುವಿರಾ? ಚುನಾವಣೆಯ ಋತುವು ಆರಂಭವಾಗಿರುವ ಸಮಯದಲ್ಲಿ ಇದನ್ನು ಬಿಡುಗಡೆ ಮಾಡಿರುವುದರ ಔಚಿತ್ಯವೇನು? ಈ ರಾಜಕೀಯ ಲಂಡನ್‌ ಮತ್ತು ನ್ಯೂಯಾರ್ಕ್‌ನಲ್ಲಿ ಆರಂಭವಾಗಿದೆ" ಎಂದು ಜೈಶಂಕರ್‌ ಹೇಳಿದ್ದಾರೆ.

ನರೇಂದ್ರ ಮೋದಿಯವರು ಗುಜರಾತ್‌ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ, 2002ರಲ್ಲಿ ನಡೆದ ಗುಜರಾತ್‌ ದಂಗೆಯ ಸಂದರ್ಭದ ಘಟನೆಯನ್ನು ತಿಳಿಸುವ ಬಿಬಿಸಿ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಇಂಡಿಯಾ: ಮೋದಿ ಕೊಶ್ಚನ್‌ ಹೆಸರಿನ ಈ ಸಾಕ್ಷ್ಯಚಿತ್ರವನ್ನು ಯೂಟ್ಯೂಬ್‌ ಮತ್ತು ಟ್ವಿಟ್ಟರ್‌ನಿಂದ ತೆಗೆದುಹಾಕಲಾಗಿದೆ.

ಕೆಲವು ಪಾಶ್ಚಿಮಾತ್ಯ ದೇಶಗಳ್ಲಲಿ ಮತ್ತು ಭಾರತದಲ್ಲಿ ಕೆಲವರು ಪ್ರಧಾನಿ ಮೋದಿ ಮತ್ತು ಭಾರತದ ಬೆಳವಣಿಗೆಯನ್ನು ಒಪ್ಪಿಕೊಳ್ಳುತ್ತಿಲ್ಲವೇ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ. "ಇದರ ಕುರಿತು ನಿಮಗೆ ಅನುಮಾನವೇ? ಇದು ಕಲ್ಲಿನ ಮೇಲೆ ಹನಿ ಹನಿ ನೀರು ಬಿದ್ದಂತೆ. ಭಾರತದ ಕುರಿತು, ಬಿಜೆಪಿ ಕುರಿತು, ಪ್ರಧಾನಿ ಕುರಿತು ತುಂಬಾ ಕೆಟ್ಟ ಚಿತ್ರಣವನ್ನು ಹೇಗೆ ಚಿತ್ರಿಸುವಿರಿ? ಇದು ಒಂದು ದಶಕದಿಂದ ನಡೆಯುತ್ತಿರುವ ಪ್ರಕ್ರಿಯೆ, ಅದರ ಬಗ್ಗೆ ಯಾವುದೇ ಅನುಮಾನ ಬೇಡ" ಎಂದರು.

"ನೀವು ಏನಾದರೂ ಹೇಳಿದರೆ ಅದು ಪ್ರತಿಧ್ವನಿಯಾಗುವಂತಹ ಛೇಂಬರ್‌ ಹೊರಗಡೆ ಇದೆ. ಇದು ಜಾಗತಿಕ ಜಗತ್ತು. ಜನರು ರಾಜಕೀಯವನ್ನು ವಿದೇಶಕ್ಕೆ ಕೊಂಡೊಯ್ಯುತ್ತಾರೆ. ಕೆಲವೊಮ್ಮೆ ಭಾರತದಲ್ಲಿನ ರಾಜಕೀಯ ನಮ್ಮ ಗಡಿಯೊಳಗೆ ಹುಟ್ಟಿಕೊಳ್ಳುವುದಿಲ್ಲ. ಅದು ವಿದೇಶಗಳಲ್ಲಿ ಹುಟ್ಟುತ್ತವೆ. ಹೊರಗಿನಿಂದ ಆಲೋಚನೆಗಳು, ಕಾರ್ಯಸೂಚಿಗಳು ರೂಪುಗೊಳ್ಳುತ್ತವೆ. ಇದ್ದಕ್ಕಿದ್ದಂತೆ ಭಾರತದ ಕುರಿತು ವರದಿಗಳು ಹುಟ್ಟಿಕೊಳ್ಳುತ್ತಿರುವುದು ಇಂತಹದ್ದೇ ರಾಜಕೀಯ" ಎಂದು ಅವರು ಹೇಳಿದ್ದಾರೆ.

"ನಿಮಗೆ ಸಾಕ್ಷ್ಯಚಿತ್ರ ಮಾಡಬೇಕು ಎಂದಾದರೆ 1984 ರಲ್ಲಿ ದೆಹಲಿಯಲ್ಲಿ ಅನೇಕ ಘಟನೆಗಳು ನಡೆದವು. ಅದರ ಕುರಿತು ಯಾವುದೇ ಸಾಕ್ಷ್ಯಚಿತ್ರ ನಾವು ನೋಡಲಿಲ್ಲ. ನಾನು ಮಾನವತಾವಾದಿ ಎಂದು ನೀವು ಹೇಳಿದರೆ ಅದು ತಪ್ಪು. ಜನರಿಗೆ ನ್ಯಾಯ ಸಿಗಬೇಕು ಎನ್ನುವುದೇ ನನ್ನ ಕಾಳಜಿ. ರಾಜಕೀಯ ಕ್ಷೇತ್ರಕ್ಕೆ ಬರಲು ಧೈರ್ಯವಿಲ್ಲದ ಜನರು ಆಡುತ್ತಿರುವ ರಾಜಕೀಯ ಇದಾಗಿದೆ" ಎಂದು ಅವರು ಹೇಳಿದ್ದಾರೆ.

ನಾಲ್ಕೇ ನಾಲ್ಕು ಪದಗಳಲ್ಲಿ ಜಾರ್ಜ್‌ ಸೊರೊಸ್‌ಗೆ ಜಾಡಿಸಿದ ವಿದೇಶಾಂಗ ಸಚಿವ ಜೈಶಂಕರ್‌

ಭಾರತದ ಪ್ರಜಾಪ್ರಭುತ್ವದ ಕುರಿತು ಟೀಕೆ ಮಾಡಿರುವ ಶತಕೋಟ್ಯಧಿಪತಿ ಜಾರ್ಜ್‌ ಸೋರಸ್‌ಗೆ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ (S Jaishankar) ನಾಲ್ಕೇ ನಾಲ್ಕು ಪದಗಳಲ್ಲಿ ಸರಿಯಾಗಿ ಜಾಡಿಸಿದ್ದಾರೆ. "ವಯಸ್ಸಾದ, ಶ್ರೀಮಂತ, ಅಭಿಪ್ರಾಯ ಮತ್ತು ಅಪಾಯಕಾರಿ (Old, rich, opinionated and dangerous) ಎಂಬ ನಾಲ್ಕು ಪದಗಳ ಮೂಲಕ ಚಾರ್ಜ್‌ ಸೋರಸ್‌ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚುನಾವಣೆ ಫಲಿತಾಂಶಗಳು ತಮ್ಮ ಇಚ್ಛೆಯಂತೆ ಇಲ್ಲದೆ ಇರುವಂತಹ ಸಮದರ್ಭದಲ್ಲಿ ಸೊರೊಸ್‌ನಂತವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಶ್ನಿಸಲು ಆರಂಭಿಸುತ್ತಾರೆ ಎಂದು ಜೈಶಂಕರ್‌ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತ ವರದಿ ಇಲ್ಲಿದೆ ಓದಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ