logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಶ್ರಾವಣದಲ್ಲಿ ಮಟನ್​ ಮಾಡಿದ ಜನಿವಾರಧಾರಿ ಬ್ರಾಹ್ಮಣ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ Video

ಶ್ರಾವಣದಲ್ಲಿ ಮಟನ್​ ಮಾಡಿದ ಜನಿವಾರಧಾರಿ ಬ್ರಾಹ್ಮಣ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ VIDEO

Meghana B HT Kannada

Sep 03, 2023 04:30 PM IST

google News

ಮಟನ್​ ಅಡುಗೆ ಮಾಡಿದ ರಾಹುಲ್ ಗಾಂಧಿ

    • Rahul Gandhi: ಈ ವಿಡಿಯೋದಲ್ಲಿ ಲಾಲು ಪ್ರಸಾದ್ ಯಾದವ್ ಅವರು ಕುರಿ ಮಾಂಸದಿಂದ ಮಾಡುವ ರೆಸಿಪಿಯೊಂದರ ಬಗ್ಗೆ ರಾಹುಲ್​ ಗಾಂಧಿಗೆ ವಿವರಿಸುತ್ತಾ ಅಡುಗೆ ಮಾಡುತ್ತಾರೆ. ರಾಹುಲ್ ಗಾಂಧಿ ಅವರೂ ಕಲಿತುಕೊಳ್ಳುತ್ತಾ ತಾವೂ ಅಡುಗೆ ಮಾಡಲು ಸಹಾಯ ಮಾಡುತ್ತಾರೆ. ಆದರೆ ಅವರು ಅದನ್ನು ಸೇವಿಸುವುದು ಈ ವಿಡಿಯೋದಲ್ಲಿ ಕಂಡುಬರುವುದಿಲ್ಲ.
ಮಟನ್​ ಅಡುಗೆ ಮಾಡಿದ ರಾಹುಲ್ ಗಾಂಧಿ
ಮಟನ್​ ಅಡುಗೆ ಮಾಡಿದ ರಾಹುಲ್ ಗಾಂಧಿ

ರಾಷ್ಟ್ರೀಯ ಜನತಾದಳದ ( ಆರ್​ಜೆಡಿ ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಜೊತೆಯಲ್ಲಿ ಸೇರಿ ಕಾಂಗ್ರೆಸ್ ನಾಯಕ, ಜನಿವಾರಧಾರಿ ಬ್ರಾಹ್ಮಣ ರಾಹುಲ್ ಗಾಂಧಿ ಅವರು ಶ್ರಾವಣ ಮಾಸದಲ್ಲಿ ಕುರಿ ಮಾಂಸದ ಅಡುಗೆ ಮಾಡಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ನಿನ್ನೆಯಷ್ಟೇ (ಸೆಪ್ಟೆಂಬರ್​ 2,ಶನಿವಾರ) ರಾಹುಲ್​ ಗಾಂಧಿ ತಮ್ಮ ಯೂಟ್ಯೂಬ್​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ 'ಇಂಡಿಯಾ' ಮೈತ್ರಿಕೂಟದ ನಾಯಕರಾದ ರಾಹುಲ್​ ಗಾಂಧಿ ಮತ್ತು ಲಾಲು ಪ್ರಸಾದ್ ಯಾದವ್ ಅವರ ನಡುವಿನ ಒಡನಾಟವನ್ನು ಕಾಣಬಹುದಾಗಿದೆ.

ಈ ವಿಡಿಯೋದಲ್ಲಿ ಲಾಲು ಪ್ರಸಾದ್ ಯಾದವ್ ಅವರು ಕುರಿ ಮಾಂಸದಿಂದ ಮಾಡುವ ರೆಸಿಪಿಯೊಂದರ ಬಗ್ಗೆ ರಾಹುಲ್​ ಗಾಂಧಿಗೆ ವಿವರಿಸುತ್ತಾ ಅಡುಗೆ ಮಾಡುತ್ತಾರೆ. ರಾಹುಲ್ ಗಾಂಧಿ ಅವರೂ ಕಲಿತುಕೊಳ್ಳುತ್ತಾ ತಾವೂ ಅಡುಗೆ ಮಾಡಲು ಸಹಾಯ ಮಾಡುತ್ತಾರೆ. ಆದರೆ ಅವರು ಅದನ್ನು ಸೇವಿಸುವುದು ಈ ವಿಡಿಯೋದಲ್ಲಿ ಕಂಡುಬರುವುದಿಲ್ಲ.

ವಿಡಿಯೋ ತುಣುಕನ್ನು ಹಂಚಿಕೊಂಡು ಈ ಬಗ್ಗೆ ಟ್ವೀಟ್​ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, "ರಾಹುಲ್​ ಗಾಂಧಿ ಮತ್ತು ಲಾಲು ಪ್ರಸಾದ್​ ಯಾದವ್​ ತಮ್ಮ ಪಾಕಶಾಲೆಯ ಕೌಶಲ್ಯಗಳನ್ನು ತೋರಿಸಲು ಶ್ರಾವಣ ಮುಗಿಯುವುದನ್ನು ಕಾಯುತ್ತಿದ್ದರು. ದೇವಾಧಿದೇವ ಮಹಾದೇವನ ಅತ್ಯಂತ ಪ್ರೀತಿಯ ಮಾಸವಾದ ಶ್ರಾವಣದಲ್ಲಿ ಶಿವಭಕ್ತ ಎಂದು ಕರೆಯಲ್ಪಡುವ ರಾಹುಲ್​ ಗಾಂಧಿ ಉದ್ದೇಶಪೂರ್ವಕವಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ನೆನಪಿರಲಿ, ದೇಶದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ" ಎಂದಿದ್ದಾರೆ.

ಉತ್ತರ ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಶ್ರಾವಣ ಮಾಸ ಬಂದಿತ್ತು. ಈ ವಿಡಿಯೋವನ್ನು ಸೆಪ್ಟೆಂಬರ್​ 2ರಂದು ಹಂಚಿಕೊಳ್ಳಲಾಗಿದೆಯಾದರೂ ಸಂಬಿತ್ ಪಾತ್ರಾ ಅವರು ಇದು ಆಗಸ್ಟ್ 4 ರ ವಿಡಿಯೋ ಎಂದು ಹೇಳಿದ್ದಾರೆ.

ಬಿಜೆಪಿ ಮತ್ತೊಬ್ಬ ವಕ್ತಾರ ಶೆಜಾದ್ ಪೂನವಾಲ ಅವರು, "ಶ್ರಾವಣ ಮಾಸದಲ್ಲಿ ಮಾಂಸಾಹಾರ ತಿನ್ನುವ ಬಗ್ಗೆ ಯಾವುದೇ ಸನಾತನಿಗಳು ಯೋಚಿಸುವುದಿಲ್ಲ. ಕೆಲವರು ಶಿವ-ಭಕ್ತರಂತೆ ನಟಿಸುತ್ತಾರೆ, ಅವರು ಚಂದ್ರನ ಮೇಲಿನ ಶಿವಶಕ್ತಿ ಪಾಯಿಂಟ್ ಹೆಸರನ್ನು ವಿರೋಧಿಸುತ್ತಾರೆ" ಎಂದು ಹೇಳಿ ರಾಹುಲ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ಮಲೇರಿಯಾ ಮತ್ತು ಡೆಂಗ್ಯೂ ರೀತಿಯಲ್ಲಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು" ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ ಬೆನ್ನಲ್ಲೇ ರಾಹುಲ್​ ಗಾಂಧಿ ಅವರ ವಿಡಿಯೋ ಹಾಗೂ ಸಂಬಿತ್​ ಪಾತ್ರಾ ಅವರ ಟ್ವೀಟ್​ ವೈರಲ್​ ಆಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ