ಜಾರ್ಖಂಡ್ ವಿಧಾನಸಭೆ ಚುನಾವಣೆ 2024 ಎಕ್ಸಿಟ್ ಪೋಲ್ ಯಾವಾಗ, ಎಷ್ಟು ಗಂಟೆಗೆ, ಪ್ರಸಾರ ಎಲ್ಲಿ; ಇಲ್ಲಿದೆ ವಿವರ
Nov 20, 2024 06:36 PM IST
ಜಾರ್ಖಂಡ್ ವಿಧಾನಸಭೆ ಚುನಾವಣೆ ಮತದಾನ ಮುಗಿದಿದ್ದು, ಎಕ್ಸಿಲ್ ಪೋಲ್ ಶುರುವಾಗಲಿದೆ. ಬಿಜೆಪಿಯ ಬಾಬುಲಾಲ್ ಮರಾಂಡಿ, ಜೆಎಂಎಂನ ಹೇಮಂತ್ ಸೊರೆನ್ ಭವಿಷ್ಯ ನಿರ್ಧಾರವಾಗಲಿದೆ.
- Jharkhand exit polls 2024: ತೀವ್ರ ಜಿದ್ದಾಜಿದ್ದಿನ ಮೂಲಕ ಗಮನಸೆಳೆದ ಜಾರ್ಖಂಡ್ ವಿಧಾನ ಸಭೆ ಚುನಾವಣೆಯ ಮತದಾನ ಇಂದು (ನವೆಂಬರ್ 20) ಮುಗಿದಿದೆ. ಜಾರ್ಖಂಡ್ ರಾಜ್ಯದ ಎಕ್ಸಿಟ್ ಪೋಲ್ ಯಾವಾಗ, ಎಷ್ಟು ಗಂಟೆಗೆ, ಎಲ್ಲಿ ಪ್ರಸಾರವಾಗಲಿದೆ. ಮತದಾನೋತ್ತರ ಸಮೀಕ್ಷೆಯ ವಿವರದ ಕ್ಷಣ ಕ್ಷಣದ ಅಪ್ಡೇಟ್ಸ್ ಅನ್ನು ಎಲ್ಲಿ ನೋಡಬೇಕು ಎನ್ನುವ ವಿವರ ಇಲ್ಲಿದೆ.
Jharkhand exit polls 2024: ಬಿಜೆಪಿ ಹಾಗೂ ಜೆಎಂಎಂನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಜಾರ್ಖಂಡ್ ವಿಧಾನಸಭೆಯ 81 ಸ್ಥಾನಗಳಿಗೆ ಎರಡು ಹಂತದಲ್ಲಿ ಮತದಾನ ನಡೆದಿದೆ. ಮೊದಲ ಹಂತದಲ್ಲಿ 41 ಹಾಗೂ ಎರಡನೇ ಹಂತದಲ್ಲಿ ಇಂದು (ನವೆಂಬರ್ 20) 38 ಸ್ಥಾನಗಳಿಗೆ ಮತದಾನ ಪೂರ್ಣಗೊಂಡಿದೆ. ಸಂಜೆ 5 ಗಂಟೆಗೆ ಮತದಾನ ಮುಕ್ತಾಯವಾಗಿದ್ದು, ಅದಾಗಿ ಕೆಲವೇ ಹೊತ್ತಿನ ಬಳಿಕ ಜಾರ್ಖಂಡ್ ವಿಧಾಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಅಥವಾ ಜಾರ್ಖಂಡ್ ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರ ಬೀಳಲಿವೆ. ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಜೆಎಂಎಂ ಕಾಂಗ್ರೆಸ್ ಆರ್‌ಜೆಡಿ ಮೈತ್ರಿ ಕೂಟ ಮತ್ತು ವಿರೋಧ ಪಕ್ಷದ ಬಿಜೆಪಿ ಜೆಡಿಯು ಸಹಿತ ಎನ್‌ಡಿಎ ಪಕ್ಷಗಳ ನಡುವೆ ತೀವ್ರ ಹಣಾಹಣಿ ಇದ್ದು, ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವ ಕುತೂಹಲವಂತೂ ಭಾರತದಾದ್ಯಂತ ಇದೆ. ಮತ ಎಣಿಕೆಯು ನವೆಂಬರ್ 23 ರಂದು ನಡೆದು ಅಂದೇ ಮಧ್ಯಾಹ್ನದೊಳಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ.
ಜಾರ್ಖಂಡ್ ಚುನಾವಣಾ ಕಣದ ಹೇಗಿತ್ತು
ಜಾರ್ಖಂಡ್ ನಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ ನಡುವೆಯೇ ಹಣಾಹಣಿ. ಇಲ್ಲಿ ಉಭಯ ಪಕ್ಷಗಳು ಮೈತ್ರಿಯನ್ನು ಹೊಂದಿದ್ದರೂ ಈ ಎರಡೂ ಪಕ್ಷಗಳೇ ಇಲ್ಲಿ ಪ್ರಬಲವಾಗಿವೆ. ಜಾರ್ಖಂಡ್ ರಾಜ್ಯ ರಚನೆಯಾಗಿ 24 ವರ್ಷ ಪೂರ್ಣಗೊಂಡು ಈಗ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈಗಾಗಲೇ ಐದು ವಿಧಾನಸಭೆ ಚುನಾವಣೆ ಮುಗಿದು ಆರನೇ ಚುನಾವಣೆ ನಡೆದಿದೆ. ಹಿಂದಿನ ಚುನಾವಣೆಗಳಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರೆತಿಲ್ಲ.ಮೈತ್ರಿಯೊಂದಿಗೆ ಅಧಿಕಾರ ಹಿಡಿದ ಉದಾಹರಣೆಯಿದೆ. ಈ ಬಾರಿಯಾದರೂ ಬಹುಮತ ಸಿಗಬಹುದೇ ಎನ್ನುವ ನಿರೀಕ್ಷೆಗಳು ಇವೆ. ಜಾರ್ಖಂಡ್‌ನಲ್ಲಿ ಮೊದಲಿನಿಂದಲೂ ಒಮ್ಮೆ ಬಿಜೆಪಿ ಮೈತ್ರಿ, ಮತ್ತೊಂದು ಜೆಎಂಎಂ ಅಧಿಕಾರ ಸ್ಥಾಪಿಸಿಕೊಂಡು ಬಂದಿವೆ. ಸದ್ಯ ಅಲ್ಲಿ ಜೆಎಂಎಂ ಆಡಳಿತದ ಸರ್ಕಾರವಿದೆ. ಈ ಬಾರಿ ಬದಲಾಗಬಹುದೇ ಎನ್ನುವ ಪ್ರಶ್ನೆಗಳಿಗೆ ಅರ್ಧ ಉತ್ತರ ಇಂದು ಸಿಗಲಿದೆ. ಪೂರ್ಣ ಹಾಗೂ ಅಧಿಕೃತ ಉತ್ತರಕ್ಕೆ ನವೆಂಬರ್ 23 ರ ವರೆಗೆ ಕಾಯಬೇಕು.
ಇಲ್ಲಿ ಆಡಳಿತಾರೂಢ ಜೆಎಂಎಂ, ಕಾಂಗ್ರೆಸ್ ಹಾಗೂ ಆರ್‌ಜೆಡಿ, ಸಿಪಿಐಎಂ ಸ್ಪರ್ಧೆ ಮಾಡಿವೆ. ಬಿಜೆಪಿ, ಜೆಡಿಯು, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್, ಲೋಕಜನಶಕ್ತಿ ಸ್ಪರ್ಧಿಸಿವೆ. ತೃತೀಯ ರಂಗವಾಗಿ ಬಿಎಸ್ಪಿ ಸೇರಿ ಹತ್ತಕ್ಕೂ ಹೆಚ್ಚು ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ ಬಿಜೆಪಿ ಅತ್ಯಧಿಕ 68, ಜೆಎಂಎಂ 43, ಕಾಂಗ್ರೆಸ್ 30, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ 10, ಆರ್‌ಜೆಡಿ 7, ಸಿಪಿಐಎಂ 4, ಜೆಡಿಯು 2 ಸ್ಥಾನಗಳಲ್ಲಿ ಕಣಕ್ಕೆ ಇಳಿದಿದೆ.
ಹಿಂದಿನ ಚುನಾವಣೆಯಲ್ಲಿ ಜೆಎಂಎಂ ಹಾಗೂ ಕಾಂಗ್ರೆಸ್ ಮೈತ್ರಿಯೊಂದಿಗೆ 46 ಸ್ಥಾನ ಪಡೆದು ಯುಪಿಎ ಅಧಿಕಾರದಲ್ಲಿತ್ತು. ಅದರ ಹಿಂದಿನ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಕಳೆದ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿತ್ತು.
ಜಾರ್ಖಂಡ್ ಎಕ್ಸಿಟ್ ಪೋಲ್ ಫಲಿತಾಂಶ ಯಾವಾಗ?; ಎಲ್ಲಿ ನೋಡಬಹುದು
ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಅಥವಾ ಜಾರ್ಖಂಡ್ ಎಕ್ಸಿಟ್ ಪೋಲ್ ಫಲಿತಾಂಶ ಇಂದು (ನವೆಂಬರ್ 20) ಮತದಾನ ಮುಗಿದ ಅರ್ಧ ಗಂಟೆ ಬಳಿಕ ಪ್ರಕಟವಾಗಲಿದೆ. ಸಂಜೆ 5 ಗಂಟೆ ಬಳಿಕ ಎಕ್ಸಿಟ್ ಪೋಲ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡಲಿವೆ. ಆದರೆ ಎಕ್ಸಿಟ್ ಪೋಲ್ ಫಲಿತಾಂಶಗಳು ಸಂಜೆ 6.30ರ ನಂತರ ಪ್ರಕಟವಾಗಲಿದೆ. ಸಂಜೆ 7ರ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ.
ಜಾರ್ಖಂಡ್ ಎಕ್ಸಿಟ್ ಪೋಲ್ ಫಲಿತಾಂಶದ ನೇರ ಪ್ರಸಾರಗಳನ್ನು ವಿವಿಧ ಸುದ್ದಿ ವಾಹಿನಿಗಳಲ್ಲಿ ವೀಕ್ಷಿಸಬಹುದು.
1) ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಜಾರ್ಖಂಡ್ ಎಕ್ಸಿಟ್ ಪೋಲ್ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯಬಹುದು. ಅದಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ - Election Exit Poll Live: ಜಾರ್ಖಂಡ್ ಚುನಾವಣೆ ಎಕ್ಸಿಟ್ ಪೋಲ್ ಫಲಿತಾಂಶಕ್ಕೆ ಕ್ಷಣಗಣನೆ, ಎಲ್ಲಿ ಯಾವಾಗ ಪ್ರಕಟ?
2) ಹಿಂದೂಸ್ತಾನ್ ಟೈಮ್ಸ್ ಕೂಡ ಜಾರ್ಖಂಡ್ ಚುನಾವಣೆಯ ಲೈವ್ ಅಪ್ಡೇಟ್ಸ್ ಅನ್ನು ಕೊಡುತ್ತಿದ್ದು ಅದಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ.
3) ಹಿಂದೂಸ್ತಾನ್ ಟೈಮ್ಸ್ ಬಳಗದ ಲೈವ್ ಮಿಂಟ್‌ನಲ್ಲೂ ಜಾರ್ಖಂಡ್ ಚುನಾವಣೆಯ ಲೈವ್ ಅಪ್ಡೇಟ್ಸ್ ಅನ್ನು ನೀವು ಗಮನಿಸಬಹುದು. ಅದನ್ನು ನೋಡುವುದಕ್ಕಾಗಿ ನೀವು ಈ ಲಿಂಕ್ ಕ್ಲಿಕ್ ಮಾಡಬಹುದು.