logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಟ್ರಕ್ ಓಡಿಸುತ್ತಲೇ ಯೂಟ್ಯೂಬ್ ಆರಂಭಿಸಿದ ಚಾಲಕ, 10 ಲಕ್ಷಕ್ಕೂ ಅಧಿಕ ಸಂಪಾದನೆ; ಇದರ ಮುಂದೆ ಸಂಬಳ ಜುಜುಬಿ

ಟ್ರಕ್ ಓಡಿಸುತ್ತಲೇ ಯೂಟ್ಯೂಬ್ ಆರಂಭಿಸಿದ ಚಾಲಕ, 10 ಲಕ್ಷಕ್ಕೂ ಅಧಿಕ ಸಂಪಾದನೆ; ಇದರ ಮುಂದೆ ಸಂಬಳ ಜುಜುಬಿ

Prasanna Kumar P N HT Kannada

Aug 19, 2024 06:05 AM IST

google News

ಜಾರ್ಖಾಂಡ್​ನ ಟ್ರಕ್ ಚಾಲಕ ರಾಜೇಶ್ ರಾವಾನಿ

    • Rajesh Rawani: ಜಾರ್ಖಾಂಡ್​ನ ಟ್ರಕ್ ಚಾಲಕ ರಾಜೇಶ್ ರಾವಾನಿ ಅವರು ಯೂಟ್ಯೂಟ್​​ನಿಂದ ಮಾಸಿಕ 10 ಲಕ್ಷ ರೂಪಾಯಿ ಆದಾಯ ಸಂಪದಾನೆ ಮಾಡುತ್ತಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.
ಜಾರ್ಖಾಂಡ್​ನ ಟ್ರಕ್ ಚಾಲಕ ರಾಜೇಶ್ ರಾವಾನಿ
ಜಾರ್ಖಾಂಡ್​ನ ಟ್ರಕ್ ಚಾಲಕ ರಾಜೇಶ್ ರಾವಾನಿ

Rajesh Rawani: ಆತ ಟ್ರಕ್ ಓಡಿಸಿದ್ದು ಬರೋಬ್ಬರಿ 25 ವರ್ಷ. ಟ್ರಕ್​ ಡ್ರೈವರ್​ ಆಗಿಯೇ ಭಾರತದ ರಸ್ತೆಗಳಲ್ಲಿ ಅಲೆಮಾರಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಅಡುವೆ ಮಾಡುವುದೆಂದರೆ ಬಲು ಪ್ರೀತಿ. ಪ್ರಯಾಣದ ವೇಳೆ ತಿನ್ನಲು ಸ್ವತಃ ತಾನೇ ಅಡುಗೆ ಮಾಡಿಕೊಳ್ಳುತ್ತಿದ್ದರು. ಇದನ್ನೆಲ್ಲಾ ವಿಡಿಯೋ ಮೂಲಕ ಸೆರೆ ಹಿಡಿಯುತ್ತಿದ್ದ ಈತ ತನ್ನ ಯೂಟ್ಯೂಬ್​ ಚಾನೆಲ್​ಗೆ ಅಪ್​ಲೋಡ್ ಮಾಡುತ್ತಿದ್ದರು. ಈಗ ಯೂಟ್ಯೂಟ್ ಮೂಲಕ ಗಳಿಸಿದ ಆದಾಯದಿಂದ ಹೊಸ ಮನೆಯನ್ನೇ ಕಟ್ಟುವ ಮೂಲಕ ಗಮನ ಸೆಳೆದಿದ್ದಾರೆ!

ಟ್ರಕ್ ಡ್ರೈವರ್ ಹೆಸರು ರಾಜೇಶ್ ರಾವಾನಿ. ಜಾರ್ಖಂಡ್​​​ನ ಜಮ್ತಾರಾ ನಿವಾಸಿ. ಟ್ರಕ್ ಓಡಿಸಿ ತಿಂಗಳಿಗೆ ತನ್ನ ದಿನದ ಸಂಬಳಕ್ಕಿಂತಲೂ ದೊಡ್ಡ ಸಂಪಾದನೆ ಮಾಡುತ್ತಿದ್ದಾರೆ! ಕೆಲಸ ಮಾಡಿ ತಿಂಗಳಿಗೆ 25,000 ರಿಂದ 30,000 ವೇತನ ಪಡೆಯುವ ರಾಜೇಶ್, ಯೂಟ್ಯೂಟ್​​ ಮೂಲಕವೇ ಮಾಸಿಕ 10 ಲಕ್ಷ ಸಂಪಾದಿಸುತ್ತಿದ್ದಾರೆ! ಪ್ರಸ್ತುತ ಅವರು ಯೂಟ್ಯೂಬ್​ನಲ್ಲಿ 1.86 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಇದನ್ನೆಲ್ಲಾ ಸ್ವತಃ ರಾಜೇಶ್ ಅವರೇ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ, ಸಿದ್ಧಾರ್ಥ್ ಕಣ್ಣನ್ ಅವರೊಂದಿಗೆ ಪಾಡ್​​ಕಾಸ್ಟ್​​​ನಲ್ಲಿ ರಾಜೇಶ್ ರಾವಾನಿ ತಮ್ಮ ಯೂಟ್ಯೂಬ್​ ಗಳಿಕೆಯ ಕುರಿತು ಮತ್ತು ಹೊಸ ಮನೆ ನಿರ್ಮಾಣದ ಬಗ್ಗೆ ತಿಳಿಸಿದ್ದಾರೆ. ರಾವಾನಿ ತನ್ನ ನಿವ್ವಳ ಮೌಲ್ಯದ ಕುರಿತು ರಾಜೇಶ್ ಬಹಿರಂಗಪಡಿಸಿದ್ದಾರೆ. ಪ್ರಸ್ತುತ ಮನೆ ನಿರ್ಮಾಣ ಹಂತದಲ್ಲಿರುವ ಕಾರಣ ಮನೆ ಪೂರ್ಣಗೊಳ್ಳುವವರೆಗೆ ಟ್ರಕ್ ಅನ್ನು ಓಡಿಸುತ್ತಲೇ ಇರುತ್ತೇನೆ ಎಂದು ರಾವಾನಿ ಹೇಳಿದ್ದಾರೆ.

ಮಾಸಿಕ 10 ಲಕ್ಷ ಸಂಪಾದನೆ

ಟ್ರಕ್ ಓಡಿಸುವುದರಿಂದ ತಿಂಗಳಿಗೆ 25,000 ರಿಂದ 30,000 ರೂ.ಗಳನ್ನು ಗಳಿಸುತ್ತೇನೆ. ಆದಾಗ್ಯೂ, ನನ್ನ ಯೂಟ್ಯೂಬ್ ಗಳಿಕೆಯು 5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗೂ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಮೊದಲು ಕೇವಲ ವಾಯ್ಸ್​​ಓವರ್​ನೊಂದಿಗೆ ವಿಡಿಯೋ ಪೋಸ್ಟ್​ ಮಾಡುತ್ತಿದ್ದೆ. ವೀಕ್ಷಣೆ ಹೆಚ್ಚಾದಂತೆಲ್ಲಾ ಜನರು ಮುಖ ತೋರಿಸುವಂತೆ ವೀಕ್ಷಕರು ಕೇಳಿದ್ದರು. ಅವರ ಒತ್ತಾಯ ಮೇರೆಗೆ ಮುಖ ತೋರಿಸಿ ವಿಡಿಯೋ ಮಾಡಲು ಪ್ರಾರಂಭಿಸಿದೆ.

ಇದಕ್ಕೆ ನನ್ನ ಮಗ ಸಹಾಯ ಮಾಡಿದ್ದ. ಆತನೇ ವಿಡಿಯೋ ಚಿತ್ರೀಕರಿಸಿದ್ದ. ಆ ವಿಡಿಯೋವನ್ನು ಅಪ್​ಲೋಡ್ ಮಾಡಿದ್ದೆ. ಅದು ಕೇವಲ ಒಂದು ದಿನದಲ್ಲಿ 4.5 ಲಕ್ಷ ವೀಕ್ಷಣೆಗಳನ್ನು ಪಡೆಯಿತು ಎಂದು ರಾಜೇಶ್ ರಾವಾನಿ ತಮ್ಮ ಮೊದಲ ವೈರಲ್ ವಿಡಿಯೋದ ಬಗ್ಗೆ ಹೇಳಿದ್ದಾರೆ. ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿ ತನ್ನ ಮಕ್ಕಳನ್ನು ಶ್ಲಾಘಿಸಿದ್ದಾರೆ. ಡ್ರೈವರ್​ ಆಗಿ ಮತ್ತು ಯೂಟ್ಯೂಬ್ ಚಾನೆಲ್ ಎರಡನ್ನೂ ಒಟ್ಟಿಗೆ ನಡೆಸುತ್ತಿದ್ದೇನೆ. ನನ್ನ ಕುಟುಂಬದ ಬೆಂಬಲ ಮತ್ತು ಸಹಾಯವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ತಂದೆಯೂ ಚಾಲಕರಾಗಿದ್ದರು

ನನ್ನ ತಂದೆಯೂ ಚಾಲಕರಾಗಿದ್ದರು. ಐದು ಸದಸ್ಯರ ಕುಟುಂಬಕ್ಕೆ ಅವರೊಬ್ಬರೇ ಸಂಪಾದನೆ ಮಾಡುತ್ತಿದ್ದರು. ಅವರು ತಿಂಗಳಿಗೆ 500 ರೂಪಾಯಿಗಳನ್ನು ಕಳುಹಿಸುತ್ತಿದ್ದರು. ಈ ಮೊತ್ತದಿಂದ ಕುಟುಂಬವನ್ನು ಪೋಷಿಸಬೇಕಾಗಿತ್ತು. ಅಲ್ಲದೆ, ಆಗಾಗ್ಗೆ ಸಾಲವನ್ನೂ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಈ ಎಲ್ಲಾ ಹೋರಾಟಗಳ ಹೊರತಾಗಿಯೂ, ರಾವಾನಿ ಬಹಳ ದೂರ ಸಾಗಿದ್ದಾರೆ ಮತ್ತು ಇಂದು ಹೆಚ್ಚಿನದನ್ನು ಸಾಧಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ