ಹೌದು ಸ್ವಾಮಿ! Bigg Boss Kannada 11 ಪ್ರೋಮೋ ಶೂಟಿಂಗ್‌ ಮುಗೀತು; ಹೊಸ ಲುಕ್‌ನಲ್ಲಿ ಕಿಚ್ಚನ ಆಗಮನ, ಶೀಘ್ರದಲ್ಲಿಯೇ ಶೋ ಶುರು-television news bigg boss kananda season 11 promo shoot complete kichcha sudeeps leaked photo goes viral mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಹೌದು ಸ್ವಾಮಿ! Bigg Boss Kannada 11 ಪ್ರೋಮೋ ಶೂಟಿಂಗ್‌ ಮುಗೀತು; ಹೊಸ ಲುಕ್‌ನಲ್ಲಿ ಕಿಚ್ಚನ ಆಗಮನ, ಶೀಘ್ರದಲ್ಲಿಯೇ ಶೋ ಶುರು

ಹೌದು ಸ್ವಾಮಿ! Bigg Boss Kannada 11 ಪ್ರೋಮೋ ಶೂಟಿಂಗ್‌ ಮುಗೀತು; ಹೊಸ ಲುಕ್‌ನಲ್ಲಿ ಕಿಚ್ಚನ ಆಗಮನ, ಶೀಘ್ರದಲ್ಲಿಯೇ ಶೋ ಶುರು

ಈಗಾಗಲೇ ಸೀಸನ್‌ 11ರ ಪ್ರೋಮೋ ಶೂಟಿಂಗ್‌ ಮುಗಿಸಿಕೊಂಡಿರುವ ಕಲರ್ಸ್‌ ಕನ್ನಡ, ಸದ್ಯ ಅದರ ಎಡಿಟಿಂಗ್‌ ಕೆಲಸದಲ್ಲಿ ಬಿಜಿಯಾಗಿದೆ. ಕಳೆದ ಬಾರಿಗಿಂತ ಹೊಸದನ್ನೇ ನೋಡುಗನಿಗೆ ನೀಡಲು ಮುಂದಾಗಿರುವ ವಾಹಿನಿ, ಆ ನಿರೀಕ್ಷೆ ಮಟ್ಟವನ್ನು ಫುಲ್‌ಫಿಲ್‌ ಮಾಡುವ ಉಮೇದಿನಲ್ಲಿದೆ.

ಈಗಾಗಲೇ ಸೀಸನ್‌ 11ರ ಪ್ರೋಮೋ ಶೂಟಿಂಗ್‌ ಮುಗಿಸಿಕೊಂಡಿರುವ ಕಲರ್ಸ್‌ ಕನ್ನಡ, ಸದ್ಯ ಅದರ ಎಡಿಟಿಂಗ್‌ ಕೆಲಸದಲ್ಲಿ ಬಿಜಿಯಾಗಿದೆ.  ಹೊಸದನ್ನೇ ನೋಡುಗನಿಗೆ ನೀಡಲು ಮುಂದಾಗಿರುವ ವಾಹಿನಿ, ಆ ನಿರೀಕ್ಷೆ ಮಟ್ಟವನ್ನು ಫುಲ್‌ಫಿಲ್‌ ಮಾಡುವ ಉಮೇದಿನಲ್ಲಿದೆ.
ಈಗಾಗಲೇ ಸೀಸನ್‌ 11ರ ಪ್ರೋಮೋ ಶೂಟಿಂಗ್‌ ಮುಗಿಸಿಕೊಂಡಿರುವ ಕಲರ್ಸ್‌ ಕನ್ನಡ, ಸದ್ಯ ಅದರ ಎಡಿಟಿಂಗ್‌ ಕೆಲಸದಲ್ಲಿ ಬಿಜಿಯಾಗಿದೆ. ಹೊಸದನ್ನೇ ನೋಡುಗನಿಗೆ ನೀಡಲು ಮುಂದಾಗಿರುವ ವಾಹಿನಿ, ಆ ನಿರೀಕ್ಷೆ ಮಟ್ಟವನ್ನು ಫುಲ್‌ಫಿಲ್‌ ಮಾಡುವ ಉಮೇದಿನಲ್ಲಿದೆ.

Bigg Boss Kannada Season 11: ಇನ್ನೇನು ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಆಗಮನ ದೂರ ಉಳಿದಿಲ್ಲ. ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಒಂದಷ್ಟು ಸೆಲೆಬ್ರಿಟಿಗಳ ಹೆಸರುಗಳು ಹರಿದಾಡುತ್ತಿವೆಯಾದರೂ, ಯಾವುದೂ ಅಧಿಕೃತವಾಗಿಲ್ಲ. ಇದೆಲ್ಲದರ ನಡುವೆಯೇ ಈ ಸಲದ ಬಿಗ್‌ಬಾಸ್‌ನಲ್ಲಿ ಸುದೀಪ್‌ ಇರ್ತಾರಾ ಇಲ್ವಾ ಎಂಬ ಚರ್ಚೆಯೂ ನಡೆದಿತ್ತು. ಬೇರೆ ಬೇರೆ ಭಾಷೆಗಳಲ್ಲಿ ನಿರೂಪಕರು ಬದಲಾಗಿದ್ದರು. ಕನ್ನಡದ ಬಿಗ್‌ಬಾಸ್‌ನಲ್ಲಿಯೂ ಅಂತ ಬೆಳವಣಿಗೆ ಆಗಬಹುದು ಎಂದೇ ಹೇಳುತ್ತಿದ್ದರು.

ಇಷ್ಟಕ್ಕೆ ಮುಗಿಯಲಿಲ್ಲ, ಸುದೀಪ್‌ ಬದಲಿಗೆ ಬೇರೆ ಯಾರು ನಿರೂಪಣೆ ಮಾಡಲಿದ್ದಾರೆ ಎಂಬ ಪ್ರಶ್ನೆಗಳು ಮೂಡಿದಾಗ, ರಮೇಶ್‌ ಅರವಿಂದ್‌, ರಿಷಬ್‌ ಶೆಟ್ಟಿ ಹೆಸರುಗಳು ಕೇಳಿ ಬಂದಿದ್ದವು. ಈ ವದಂತಿಗಳು ಸುಳ್ಳೆಂದು ಗೊತ್ತಿದ್ದರೂ, ಕಿಚ್ಚನ ಫ್ಯಾನ್ಸ್‌ ವಲಯದಲ್ಲಿ ಕೊಂಚ ಅಳುಕು ಉಂಟು ಮಾಡಿತ್ತು. ಇದೀಗ ಆ ಎಲ್ಲ ಸುದ್ದಿ ಸುಳ್ಳಾಗಿದೆ. ಅಂದರೆ, ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಬಗ್ಗೆ ಹೊಸ ಅಪ್‌ಡೇಟ್‌ ಸಿಕ್ಕಿದೆ. ಅದೇನೆಂದರೆ, ಈ ಸಲವೂ ಕಿಚ್ಚನ ನಿರೂಪಣೆಯಲ್ಲಿಯೇ ಬಿಗ್‌ ಬಾಸ್‌ ಮುನ್ನಡೆಯಲಿದೆ.

ಫೋಟೋ ಲೀಕ್‌

ಕನ್ನಡದ ಬಿಗ್‌ಬಾಸ್‌ ಶುರುವಾಗಿ 10 ಸೀಸನ್‌ಗಳು ಯಶಸ್ವಿಯಾಗಿ ಮುಗಿದಿವೆ. ಎಲ್ಲ ಶೋಗಳ ನಿರೂಪಣೆಯ ಹೊಣೆ ಹೊತ್ತು ಅಚ್ಚುಕಟ್ಟಾಗಿ ಮುಗಿಸಿಕೊಟ್ಟಿದ್ದಾರೆ ಕಿಚ್ಚ ಸುದೀಪ್.‌ ಬಿಗ್‌ಬಾಸ್‌ ಅಂದ್ರೆ ಸುದೀಪ್‌, ಸುದೀಪ್‌ ಅಂದ್ರೆ ಬಿಗ್‌ಬಾಸ್‌ ಅನ್ನೋ ರೀತಿಯಲ್ಲಿ ಕರುನಾಡಿನ ಪ್ರೇಕ್ಷಕರ ಭಾವನೆ. ಇದೀಗ ಸೀಸನ್‌ 11ರ ಪ್ರೋಮೋ ಶೂಟಿಂಗ್‌ ಸಹ ಮುಗಿದಿದೆ. ಹೊಸ ಕಾನ್ಸೆಪ್ಟ್‌ ಜತೆಗೆ, ಹೊಸ ಅವತಾರದಲ್ಲಿ ಕಿಚ್ಚ ಸುದೀಪ್‌ ಅವರ ಆಗಮನವಾಗಲಿದೆ. ಆ ಪ್ರೋಮೋ ಶೂಟ್‌ನ ಕೆಲವು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಲೀಕ್‌ ಸಹ ಆಗಿವೆ.

ಯಾವಾಗ ಶೋ ಆರಂಭ, ಪ್ರೋಮೋ ರಿಲೀಸ್‌ ಯಾವಾಗ?

ಸದ್ಯದ ಕೆಲ ಮೂಲಗಳ ಮಾಹಿತಿ ಪ್ರಕಾರ, ಈಗಾಗಲೇ ಸೀಸನ್‌ 11ರ ಪ್ರೋಮೋ ಶೂಟಿಂಗ್‌ ಮುಗಿಸಿಕೊಂಡಿರುವ ಕಲರ್ಸ್‌ ಕನ್ನಡ, ಸದ್ಯ ಅದರ ಎಡಿಟಿಂಗ್‌ ಕೆಲಸದಲ್ಲಿ ಬಿಜಿಯಾಗಿದೆ. ಕಳೆದ ಬಾರಿಗಿಂತ ಹೊಸದನ್ನೇ ನೋಡುಗನಿಗೆ ನೀಡಲು ಮುಂದಾಗಿರುವ ವಾಹಿನಿ, ಆ ನಿರೀಕ್ಷೆ ಮಟ್ಟವನ್ನು ಫುಲ್‌ಫಿಲ್‌ ಮಾಡುವ ಉಮೇದಿನಲ್ಲಿದೆ. ಅದರಂತೆ ಸೆಪ್ಟಂಬರ್‌ ಮೊದಲ ವಾರದಲ್ಲಿ ಅಥವಾ ಎರಡನೇ ವಾರದಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಮೊದಲ ಪ್ರೋಮೋ ಬಿಡುಗಡೆ ಆಗಲಿದೆ. ಅದಾದ ಮೇಲೆ ಅಂದರೆ, ಅಕ್ಟೋಬರ್‌ ಮೂರನೇ ವಾರದಲ್ಲಿ ಶೋ ಶುರುವಾಗಲಿದೆ.

ನಿರೀಕ್ಷೆ ದುಪ್ಪಟ್ಟು

ಈ ಸಲದ ಬಿಗ್‌ಬಾಸ್‌ ಶೋಗೆ ಯಾರೆಲ್ಲ ಹೋಗ್ತಾರೆ? ಈ ಪ್ರಶ್ನೆಗೆ ಉತ್ತರವೆಂಬಂತೆ, ಸೋಷಿಯಲ್‌ ಮೀಡಿಯಾದಲ್ಲಿ ಸರಣಿ ಹೆಸರುಗಳೇ ತೇಲಿಬಂದಿವೆ. ಮುಂದಿನ ದಿನಗಳಲ್ಲಿ ಆ ಹೆಸರುಗಳಿಗೆ ಇನ್ನಷ್ಟು ಹೆಸರುಗಳೂ ತಳುಕು ಹಾಕಿಕೊಳ್ಳಲಿವೆ. ಇನ್ನು ಕಳೆದ ಬಾರಿಯ ಸೀಸನ್‌ನಲ್ಲಿ ಕಾರ್ತಿಕ್‌ ಮಹೇಶ್‌ ವಿನ್ನರ್‌ ಪಟ್ಟ ಪಡೆದರೆ, ಡ್ರೋನ್‌ ಪ್ರತಾಪ್‌ ರನ್ನರ್‌ ಅಪ್‌ ಆಗಿದ್ದರು. ವೀಕ್ಷಣೆ ವಿಚಾರದಲ್ಲಿ ಈ ಹಿಂದಿನ ಕನ್ನಡದ 9 ಬಿಗ್‌ಬಾಸ್‌ ಸೀಸನ್‌ಗಳ ದಾಖಲೆ ಮುರಿದು, ಹೊಸ ಎತ್ತರಕ್ಕೆ ಏರಿತ್ತು ಬಿಗ್‌ಬಾಸ್‌ 10. ಇದೀಗ ಸೀಸನ್‌ 11 ಹೇಗಿರಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.