logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Arvind Kejriwal: ಆಟೋ ಡ್ರೈವರ್‌ ಮನೆಯಲ್ಲಿ ಊಟ ಮಾಡಲು ಗುಜರಾತ್‌ ಪೊಲೀಸರೊಂದಿಗೆ ಕೇಜ್ರಿ ವಾಗ್ವಾದ!

Arvind Kejriwal: ಆಟೋ ಡ್ರೈವರ್‌ ಮನೆಯಲ್ಲಿ ಊಟ ಮಾಡಲು ಗುಜರಾತ್‌ ಪೊಲೀಸರೊಂದಿಗೆ ಕೇಜ್ರಿ ವಾಗ್ವಾದ!

Nikhil Kulkarni HT Kannada

Sep 13, 2022 08:26 AM IST

‌ಆಟೋ ಡ್ರೈವರ್‌ ಮನೆಯಲ್ಲಿ ಕೇಜ್ರಿವಾಲ್ ಭೋಜನ

    • ಅಹಮದಾಬಾದ್‌ನಲ್ಲಿ ಆಟೋ ಟ್ರೈವರ್‌ ಓರ್ವನ ಮನೆಯಲ್ಲಿ ಊಟ ಮಾಡಿರುವ ಕೇಜ್ರಿವಾಲ್‌, ಆಪ್‌ ಜನಸಾಮಾನ್ಯರ ಪಕ್ಷ ಎಂದು ಸಾರುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಆಟೋ ಡ್ರೈವರ್ ಮನೆಗೆ ಆತನ ಆಟೋದಲ್ಲಿ ತೆರಳಲು ಅನುಮತಿ ನಿರಾಕರಿಸಿದ ಅಹಮದಾಬಾದ್‌ ಪೊಲೀಸರೊಂದಿಗೆ ಅರವಿಂದ್‌ ಕೇಜ್ರಿವಾಲ್‌ ವಾಗ್ವಾದ ನಡೆಸಿದ ಘಟನೆಯೂ ನಡೆದಿದೆ. ಆಟೋ ಡ್ರೈವರ್‌ ವಿಕ್ರಮ್‌ ದಂತಾನಿ ಅವರ ಮನವಿಯೆ ಮೇರೆಗೆ ಕೇಜ್ರಿವಾಲ್‌ ಆತನ ಮನೆಗೆ ಊಟಕ್ಕೆ ತೆರಳಿದ್ದರು.
‌ಆಟೋ ಡ್ರೈವರ್‌ ಮನೆಯಲ್ಲಿ ಕೇಜ್ರಿವಾಲ್ ಭೋಜನ
‌ಆಟೋ ಡ್ರೈವರ್‌ ಮನೆಯಲ್ಲಿ ಕೇಜ್ರಿವಾಲ್ ಭೋಜನ (Verified Twitter)

ಅಹಮದಾಬಾದ್:‌ ಗುಜರಾತ್‌ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಆಮ್‌ ಆದ್ಮಿ ಪಕ್ಷ(ಆಪ್)‌, ಗುಜರಾತ್‌ ಜನರ ಮನೆಗೆಲ್ಲಲು ನಾನಾ ಕಸರತ್ತು ನಡೆಸುತ್ತಿದೆ. ಗುಜರಾತ್‌ನಲ್ಲಿ ಖುದ್ದು ಅಖಾಡಕ್ಕಿಳಿದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ರಾಜ್ಯದ ಮೂಲೆ ಮೂಲೆಗೂ ತೆರಳಿ ಜನರನ್ನು ಭೇಟಿ ಮಾಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

ತಿರುಮಲ ತಿರುಪತಿ ಜುಲೈ ತಿಂಗಳ ವಿಶೇಷ ಪ್ರವೇಶ ಟಿಕೆಟ್, ಟಿಟಿಡಿ ವೆಬ್‌ಸೈಟ್ ಮೂಲಕ 300 ರೂಪಾಯಿ ಟಿಕೆಟ್‌

ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣ; ಭಾರತೀಯ ರೈಲ್ವೆ ಮಹತ್ವದ ಮೈಲಿಗಲ್ಲು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ

ರಣಬಿಸಿಲಿನಿಂದ ರಕ್ಷಣೆಗೆ ಟ್ರಾಫಿಕ್‌ ಸಿಗ್ನಲ್ ಸಮೀಪ ಹಸಿರು ನೆರಳು ಬಲೆ; ಪುದುಚೇರಿ ಪಿಡಬ್ಲ್ಯುಡಿ ಇಲಾಖೆ ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ

ಅದರಂತೆ ಅಹಮದಾಬಾದ್‌ನಲ್ಲಿ ಆಟೋ ಟ್ರೈವರ್‌ ಓರ್ವನ ಮನೆಯಲ್ಲಿ ಊಟ ಮಾಡಿರುವ ಕೇಜ್ರಿವಾಲ್‌, ಆಪ್‌ ಜನಸಾಮಾನ್ಯರ ಪಕ್ಷ ಎಂದು ಸಾರುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಆಟೋ ಡ್ರೈವರ್ ಮನೆಗೆ ಆತನ ಆಟೋದಲ್ಲಿ ತೆರಳಲು ಅನುಮತಿ ನಿರಾಕರಿಸಿದ ಅಹಮದಾಬಾದ್‌ ಪೊಲೀಸರೊಂದಿಗೆ ಅರವಿಂದ್‌ ಕೇಜ್ರಿವಾಲ್‌ ವಾಗ್ವಾದ ನಡೆಸಿದ ಘಟನೆಯೂ ನಡೆದಿದೆ.

ಅಹಮದಾಬಾದ್‌ನಲ್ಲಿ ಆಟೋ ಡ್ರೈವರ್‌ ಆಗಿರುವ ವಿಕ್ರಮ್‌ ದಂತಾನಿ ಎಂಬಾತನ ಮನೆಗೆ ತೆರಳಿದ ಅರವಿಂದ್‌ ಕೇಜ್ರಿವಾಲ್‌, ಆತನ ಕುಟೂಂಬಸ್ಥರ ಜೊತೆಗೂಡಿ ಊಟ ಮಾಡಿದರು. ಊಟದ ಬಳಿಕ ಮಾತನಾಡಿದ ಆಟೋ ಡ್ರೈವರ್‌ ವಿಕ್ರಮ್‌ ದಂತಾನಿ, ಮುಖ್ಯಮಂತ್ರಿಯೊಬ್ಬರು ನನ್ನಂತಹ ಸಾಮಾನ್ಯ ವ್ಯಕ್ತಿಯ ಮನೆಗೆ ಬಂದು ಊಟ ಮಾಡಿದ್ದನ್ನು ನಾನು ಇದುವರೆಗೂ ನೋಡಿರಲಿಲ್ಲ. ಕೇಜ್ರಿವಾಲ್‌ ನಿಜಕ್ಕೂ ಜನಪರ ರಾಜಕಾರಣಿ ಎಂದು ಶಹಬ್ಬಾಸಗಿರಿ ನೀಡಿದರು.

ಇದಕ್ಕೂ ಮೊದಲು ಆಟೋ ಡ್ರೈವರ್‌ ವಿಕ್ರಮ್‌ ದಂತಾನಿ ಮನೆಗೆ ತೆರಳಲು, ಆತನ ಆಟೋದಲ್ಲಿ ಹೊರಟಿದ್ದ ಅರವಿಂದ್‌ ಕೇಜ್ರಿವಾಲ್‌ ಅವರನ್ನು, ಅಹಮದಾಬಾದ್‌ ಪೊಲೀಸರು ತಡೆದರು. ಭ್ರದ್ರತಾ ಕಾರಣಗಳಿಗೆ ಆಟೋದಲ್ಲಿ ತೆರಳದಂತೆ ಪೊಲೀಸರು ಕೇಜ್ರಿವಾಲ್‌ ಅವರಿಗೆ ಮನವಿ ಮಾಡಿದರು.

ಆದರೆ ಪೊಲೀಸರ ಮನವಿಯನ್ನು ತಳ್ಳಿಹಾಕಿದ ಕೇಜ್ರಿವಾಲ್‌, ನನಗೆ ಪೊಲೀಸರ ಭದ್ರತೆಯೇ ಬೇಡ. ನೀವು ಹೋಗಿ ಮುಖ್ಯಮಂತ್ರಿ ಅವರಿಗೆ ಭದ್ರತೆ ನೀಡಿ. ಅವರಿಗೆ ಮನೆಯಿಂದ ಹೊರಬಂದು ಜನಸಾಮಾನ್ಯರ ಕಷ್ಟಗಳನ್ನು ಕೇಳಲು ಹೇಳಿ. ಜನಸಾಮಾನ್ಯರಿಂದ ದೂರವಾಗಿರುವ ಗುಜರಾತ್‌ ಮುಖ್ಯಮಂತ್ರಿ ಅವರಿಗೆ ಭದ್ರತೆಯ ಅವಶ್ಯಕತೆ ಇದೆಯೇ ಹೊರತು ನನಗಲ್ಲ ಎಂದು ಏರುಧ್ವನಿಯಲ್ಲಿ ಹರಿಹಾಯ್ದರು.

ಆದರೂ ಪೊಲೀಸರು ಕೇಜ್ರಿವಾಲ್‌ ಅವರಿಗೆ ಆಟೋದಲ್ಲಿ ತೆರಳಲು ಅನುಮತಿ ನೀಡದಾದಾಗ, ಕುಪಿತಗೊಂಡ ಕೇಜ್ರಿವಾಲ್‌, ನನಗೆ ಭದ್ರತೆ ಬೇಡ ಎಂದರೂ ನೀವು ಒತ್ತಾಯ ಮಾಡುತ್ತಿರುವುದನ್ನು ನೋಡಿದರೆ ನನ್ನನ್ನು ಬಂಧಿಸುವ ಇರಾದೆ ಇದ್ದಂತೆ ಕಾಣುತ್ತಿದೆ ಎಂದು ಕಿಡಿಕಾರಿದರು. ಬಳಿಕ ಕೇಜ್ರಿವಾಲ್‌ ಒತ್ತಡಕ್ಕೆ ಮಣಿದ ಪೊಲೀಸರು, ಆಟೋದಲ್ಲೇ ಕೇಜ್ರಿವಾಲ್‌ ಅವರಿಗೆ ಭದ್ರತೆ ಒದಗಿಸಿದರು.

ಬಳಿಕ ಆಟೋ ಡ್ರೈವರ್‌ ವಿಕ್ರಮ್‌ ದಂತಾನಿ ಮನೆಗೆ ತೆರಳಿದ ಕೇಜ್ರಿವಾಲ್‌, ದಂತಾನಿ ಕುಟುಂಬಸ್ಥರೊಡನೆ ಸೇರಿ ಭೋಜನ ಮಾಡಿದರು. ಬಳಿಕ ಮಾತನಾಡಿದ ಕೇಜ್ರಿವಾಲ್‌, ನಾನು ಮುಖ್ಯಮಂತ್ರಿಯಾಗಿ ಗುಜರಾತ್‌ಗೆ ಬಂದಿಲ್ಲ. ನಾಒಬ್ಬ ಜನಸಾಮಾನ್ಯನಾಗಿ ಗುಜರಾತ್‌ಗೆ ಬಂದಿದ್ದೇನೆ. ನನಗೆ ಯಾವ ವಿಐಪಿ ಸೌಲಭ್ಯಗಳೂ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಜನಸಾಮಾನ್ಯರೊಂದಿಗೆ ಬೆರೆಯಲು ನನಗೆ ಭದ್ರತೆಯ ಆತಂಕ ಕಾಡುವುದಿಲ್ಲ. ಜನಸಾಮಾನ್ಯರೊಂದಿಗೆ ಇದ್ದಾಗ ನನಗೆ ಸುರಕ್ಷಿತ ಭಾವನೆ ಇರುತ್ತದೆ. ಹೀಗಾಗಿ ಗುಜರಾತ್‌ ಪೊಲೀಸರು ನನ್ನ ಭದ್ರತೆಯೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಗುಜರಾತ್‌ನ ಆಡಳಿತಾರೂಢ ಬಿಜೆಪಿ ಸರ್ಕಾರ ಜನಸಾಮಾನ್ಯರಿಂದ ದೂರವಾಗಿದೆ. ಹೀಗಾಗಿ ಜನರಿಂದ ಅವರಿಗೆ ಭದ್ರತೆ ಕಾಡುತ್ತದೆ. ಆದರೆ ನಾವು ಜನರೊಂದಿಗೆ ಬೆರೆತು ರಾಜಕಾರಣ ಮಾಡಲು ಇಲ್ಲಿಗೆ ಬಂದಿದ್ದೇವೆ. ನಮಗೆ ಜನರನ್ನು ಭೇಟಿ ಮಾಡುವುದರಲ್ಲಿ ಯಾವುದೇ ಭಯ ಕಾಡುವುದಿಲ್ಲ ಎಂದು ಕೇಜ್ರಿವಾಲ್‌ ಇದೇ ವೇಳೆ ನುಡಿದರು.

ಎರಡು ದಿನಗಳ ಅಹಮದಾಬಾದ್‌ ಪ್ರವಾಸದಲ್ಲಿರುವ ಅರವಿಂದ್‌ ಕೇಜ್ರಿವಾಲ್‌, ಆಪ್‌ ಬೆಂಬಲಿಗರ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ಆಟೋ ಚಾಲಕ ವಿಕ್ರಮ್‌ ದಂತಾನಿ ಕೇಜ್ರಿವಾಲ್‌ ಅವರಿಗೆ ಭೋಜನಕ್ಕಾಗಿ ತಮ್ಮ ಮನೆಗೆ ಆಹ್ವಾನಿಸಿದ್ದರು. ನೀವು ಪಂಜಾಬ್‌ನಲ್ಲಿ ಆಟೋ ಚಾಲಕನೋರ್ವನ ಮನೆಗೆ ಊಟಕ್ಕೆ ತೆರಳಿದ್ದನ್ನು ನೋಡಿದ್ದೇನೆ. ಈಗ ಗುಜರಾತ್‌ಗೆ ಬಂದಿರುವ ನೀವು, ನನ್ನ ಮನೆಗೂ ಊಟಕ್ಕೆ ಬರುತ್ತೀರಾ ಎಂದು ವಿಕ್ರಮ್‌ ದಂತಾನಿ ಕೇಳಿದ್ದರು.

ಇದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿದ್ದ ಕೇಜ್ರಿವಾಲ್‌, ನಾನು ತಂಗಿರುವ ಹೋಟೆಲ್‌ಗೆ ಬಂದು ನನ್ನನ್ನು ನಿಮ್ಮದೇ ಆಟೋದಲ್ಲಿ ಮನೆಗೆ ಕರೆದುಕೊಂಡು ಹೋಗುವಂತೆ ವಿಕ್ರಮ್‌ ದಂತಾನಿ ಅವರಿಗೆ ಹೇಳಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು