logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Modhera Sun Temple: ಐತಿಹಾಸಿಕ ಸ್ಮಾರಕದ ಅದ್ಭುತ ಫೋಟೋಸ್‌ ಶೇರ್‌ ಮಾಡಿದ್ದಾರೆ ಪ್ರಧಾನಿ ಮೋದಿ

Modhera Sun Temple: ಐತಿಹಾಸಿಕ ಸ್ಮಾರಕದ ಅದ್ಭುತ ಫೋಟೋಸ್‌ ಶೇರ್‌ ಮಾಡಿದ್ದಾರೆ ಪ್ರಧಾನಿ ಮೋದಿ

HT Kannada Desk HT Kannada

Oct 10, 2022 01:55 PM IST

google News

ಮೊಧೇರಾದ ಸೂರ್ಯ ಮಂದಿರದಲ್ಲಿ 3ಡಿ ಪ್ರೊಜೆಕ್ಷನ್ ಲೈಟ್ ಮತ್ತು ಸೌಂಡ್ ಶೋ.

    • Modhera Sun Temple: ಗುಜರಾತ್‌ನ ಮೆಹಸನ ಜಿಲ್ಲೆಯ ಮೊಧೇರಾವು ಪುಷ್ಪಾವತಿ ನದಿ ದಡದ ಸೂರ್ಯ ದೇವಾಲಯಕ್ಕೆ ಹೆಸರುವಾಸಿ. ಈ ದೇವಾಲಯವನ್ನು 1026-27 CE ನಂತರ ಚಾಲುಕ್ಯ ರಾಜವಂಶದ ಭೀಮ I ರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಗಿದೆ. ಈ ಐತಿಹಾಸಿಕ ಸ್ಮಾರಕದ ಅದ್ಭುತ ಫೋಟೋಸ್‌ ಅನ್ನು ಪ್ರಧಾನಿ ಮೋದಿ ಶೇರ್‌ ಮಾಡಿದ್ದಾರೆ. ಅವು ಇಲ್ಲಿವೆ. 
ಮೊಧೇರಾದ ಸೂರ್ಯ ಮಂದಿರದಲ್ಲಿ 3ಡಿ ಪ್ರೊಜೆಕ್ಷನ್ ಲೈಟ್ ಮತ್ತು ಸೌಂಡ್ ಶೋ.
ಮೊಧೇರಾದ ಸೂರ್ಯ ಮಂದಿರದಲ್ಲಿ 3ಡಿ ಪ್ರೊಜೆಕ್ಷನ್ ಲೈಟ್ ಮತ್ತು ಸೌಂಡ್ ಶೋ. (Narendra Modi Twitter)

ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ತಮ್ಮ ತವರು ರಾಜ್ಯ ಗುಜರಾತ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಸೂರ್ಯ ದೇವಾಲಯಕ್ಕೆ ಹೆಸರುವಾಸಿಯಾದ ಮೊಧೇರಾಕ್ಕೆ ಭೇಟಿ ನೀಡಿದರು. ಸೂರ್ಯ ದೇವಾಲಯಕ್ಕೆ ಹೆಸರುವಾಸಿಯಾಗಿರುವ ಮೊಧೇರಾವನ್ನು ಸೌರಶಕ್ತಿ ಚಾಲಿತ ಗ್ರಾಮ ಎಂದೂ ಅವರು ಇದೇ ವೇಳೆ ಘೋಷಿಸಿದರು.

ಮೊಧೇರಾದ ಸೂರ್ಯ ದೇವಾಲಯದ ಫೋಟೋಗಳನ್ನು ಶೇರ್‌ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಬರೆದುಕೊಂಡಿದ್ದಾರೆ- "ಮೊಧೇರಾದ ಸೂರ್ಯ ದೇವಾಲಯಕ್ಕೆ ಭೇಟಿ ನೀಡುವಂತೆ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಇದು ನಿಮ್ಮ ಮನಸ್ಸಿನ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರುತ್ತದೆ. ಈ ಸ್ಥಳದ ಸೌಂದರ್ಯವನ್ನು ನೋಡಬೇಕು. ಈ ಸಂಜೆಯ ಆರಂಭದಲ್ಲಿ ಪ್ರವಾಸಿಗರಿಗೆ ಅನುಭವವನ್ನು ಹೆಚ್ಚಿಸುವ ಸೌಲಭ್ಯಗಳನ್ನು ಉದ್ಘಾಟಿಸಲಾಗಿದೆ."

ಗುಜರಾತ್‌ನ ಮೆಹಸನ ಜಿಲ್ಲೆಯ ಮೊಧೇರಾವು ಪುಷ್ಪಾವತಿ ನದಿ ದಡದ ಸೂರ್ಯ ದೇವಾಲಯಕ್ಕೆ ಹೆಸರುವಾಸಿ. ಈ ದೇವಾಲಯವನ್ನು 1026-27 CE ನಂತರ ಚಾಲುಕ್ಯ ರಾಜವಂಶದ ಭೀಮ I ರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಗಿದೆ.

<p>ಮೊಧೇರಾ ಸೂರ್ಯದೇಗುಲ</p>

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊಧೇರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ 3,900 ಕೋಟಿ ರೂಪಾಯಿಯ ಬಹು ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ಮಾಡಿದರು. ಸೌರಶಕ್ತಿ ಯೋಜನೆಯು ದೇಶದಲ್ಲಿಯೇ ಮೊದಲನೆಯದು, ಸೂರ್ಯ-ದೇವಾಲಯದ ಪಟ್ಟಣವಾದ ಮೊಧೇರಾವನ್ನು ಸೌರೀಕರಣಗೊಳಿಸುವ ಪ್ರಧಾನ ಮಂತ್ರಿಯ ದೃಷ್ಟಿಕೋನವನ್ನು ಸಾಕಾರಗೊಳಿಸಿದೆ.

<p>ಮೊಧೇರಾ ಸೂರ್ಯ ದೇಗುಲ</p>

ಇದು ಗ್ರೌಂಡ್‌ ಮೌಂಟೆಡ್‌ ಸೌರ ವಿದ್ಯುತ್ ಸ್ಥಾವರ ಮತ್ತು ವಸತಿ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ 1300 ಕ್ಕೂ ಹೆಚ್ಚು ಮೇಲ್ಛಾವಣಿಯ ಸೌರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದನ್ನು ಒಳಗೊಂಡಿದೆ. ಸರ್ಕಾರದ ಹೇಳಿಕೆಯ ಪ್ರಕಾರ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (BESS) ನೊಂದಿಗೆ ಇವು ಸಂಯೋಜಿಸಲ್ಪಟ್ಟಿದೆ.

"ಸೌರಶಕ್ತಿಯ ಮಾತುಗಳು ಬಂದಾಗಲೆಲ್ಲ ಮೊಧೇರಾ ಎಂಬ ಹೆಸರು ಮೊದಲು ಹೊರಹೊಮ್ಮುತ್ತದೆ. ಏಕೆಂದರೆ ಇಲ್ಲಿ ಎಲ್ಲವೂ ಸೌರಶಕ್ತಿಯಿಂದಲೇ ಸಾಗುತ್ತಿದೆ. ಬೆಳಕಿರಲಿ, ಹೊಲವಿರಲಿ, ಬಸ್ಸು, ವಾಹನಗಳನ್ನು ಸೋಲಾರ್‌ನಲ್ಲಿ ಓಡಿಸುವ ಪ್ರಯತ್ನವೂ ನಡೆಯುತ್ತಿದೆ. ʻ21 ನೇ ಶತಮಾನದ ಸ್ವಾವಲಂಬಿ ಭಾರತʼಕ್ಕಾಗಿ ನಮ್ಮ ಶಕ್ತಿಯ ಅಗತ್ಯಗಳಿಗಾಗಿ ನಾವು ಅಂತಹ ಪ್ರಯತ್ನಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಗುಜರಾತ್, ದೇಶ ಮತ್ತು ನಮ್ಮ ಮುಂದಿನ ಪೀಳಿಗೆಗೆ (ಇಂಧನ ಭದ್ರತೆ) ಒದಗಿಸುವ ದಿಕ್ಕಿನಲ್ಲಿ ದೇಶವನ್ನು ಕೊಂಡೊಯ್ಯಲು ನಾನು ಹಗಲಿರುಳು ಶ್ರಮಿಸುತ್ತಿದ್ದೇನೆ, ”ಎಂದು ಪ್ರಧಾನಿ ಹೇಳಿದರು.

<p>ಮೊಧೇರಾ ಸೂರ್ಯ ದೇವಾಲಯ</p>

ಸೌರ ಮೇಲ್ಛಾವಣಿ ಯೋಜನೆಯು ಮೊಧೇರಾದ ನಿವಾಸಿಗಳಿಗೆ ತಮ್ಮ ಅಗತ್ಯಗಳಿಗಾಗಿ ಉಚಿತ ವಿದ್ಯುತ್ ಉತ್ಪಾದಿಸಲು ಸಹಾಯ ಮಾಡುತ್ತದೆ ಆದರೆ ವಿದ್ಯುತ್ ವಿತರಕರಿಗೆ ಹೆಚ್ಚುವರಿ ಯೂನಿಟ್ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸಲು ಸಹಾಯ ಮಾಡುತ್ತದೆ. ಮನೆ ಮಾಲೀಕರು ಮತ್ತು ರೈತರು ಈಗ ವಿದ್ಯುತ್ ಕಾರ್ಖಾನೆಗಳ ಮಾಲೀಕರಾಗುತ್ತಿದ್ದಾರೆ ಎಂದು ಅವರು ಹೇಳಿದರು. ಕಾರ್ಯಕ್ರಮದ ನಂತರ ಪ್ರಧಾನಿಯವರು ಮೊಧೇರಾ ಪಟ್ಟಣದ ಮೋದೇಶ್ವರಿ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಮತ್ತು ಪೂಜೆ ಸಲ್ಲಿಸಿದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ