logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayodhya Ram Mandir: ಆದಾಯ ತೆರಿಗೆ ವಿನಾಯಿತಿ ಬಯಸುತ್ತೀರಾದರೆ, ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆ ಯಾವ ರೀತಿ ಸಹಕಾರಿ

Ayodhya Ram Mandir: ಆದಾಯ ತೆರಿಗೆ ವಿನಾಯಿತಿ ಬಯಸುತ್ತೀರಾದರೆ, ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆ ಯಾವ ರೀತಿ ಸಹಕಾರಿ

Umesh Kumar S HT Kannada

Jan 22, 2024 04:33 PM IST

google News

ಅಯೋಧ್ಯೆ ರಾಮ ಮಂದಿರ (ಸಾಂಕೇತಿಕ ಚಿತ್ರ)

  • Donations to Ayodhya Ram Mandir: ಹಣಕಾಸು ವರ್ಷದ ಅಂತ್ಯದ ಕಾಲಘಟ್ಟದಲ್ಲಿದ್ದೇವೆ. ಆದಾಯ ತೆರಿಗೆ ಉಳಿಸುವುದು ಹೇಗೆ ಎಂಬ ಆಲೋಚನೆ ಹಲವರದ್ದು, ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆ ನೀಡಿದರೆ ಸಹಕಾರಿಯಾದೀತೆ ಎಂಬ ಚಿಂತನೆಯೂ ಮೂಡಿರಬಹುದು. ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆ ಯಾವ ರೀತಿ ಸಹಕಾರಿ ಎಂಬ ವಿವರಣೆ ಇಲ್ಲಿದೆ. 

ಅಯೋಧ್ಯೆ ರಾಮ ಮಂದಿರ (ಸಾಂಕೇತಿಕ ಚಿತ್ರ)
ಅಯೋಧ್ಯೆ ರಾಮ ಮಂದಿರ (ಸಾಂಕೇತಿಕ ಚಿತ್ರ) (PTI)

ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆ ನೀಡುವ ಮೂಲಕ ತೆರಿಗೆದಾರರು ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ವೆಬ್‌ಸೈಟ್‌ನಲ್ಲಿ ಹೇಳಿರುವ ಪ್ರಕಾರ, "ಕೇಂದ್ರ ಸರ್ಕಾರವು 2020-2021ರ ಹಣಕಾಸು ವರ್ಷದಿಂದ "ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ" (ಪ್ಯಾನ್: AAZTS6197B) ವನ್ನು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳ ಮತ್ತು ಪ್ರಸಿದ್ಧ ಸಾರ್ವಜನಿಕ ಪೂಜಾ ಸ್ಥಳವೆಂದು ಗುರುತಿಸಿ ಅಧಿಸೂಚನೆ ಹೊರಡಿಸಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ಮಂದಿರದ ನವೀಕರಣ / ದುರಸ್ತಿಯ ಉದ್ದೇಶಕ್ಕಾಗಿ ಸ್ವಯಂಪ್ರೇರಿತವಾಗಿ ನೀಡುವ ದೇಣಿಗೆಯ ಶೇ 50 ರಷ್ಟು ಪಾಲು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 80 ಜಿ ಅಡಿಯಲ್ಲಿ ಉಲ್ಲೇಖಿಸಲಾದ ಇತರ ಷರತ್ತುಗಳಿಗೆ ಒಳಪಟ್ಟು ಸೆಕ್ಷನ್ 80 ಜಿ (2) (ಬಿ) ಅಡಿಯಲ್ಲಿ ವಿನಾಯಿತಿಗೆ ಅರ್ಹವಾಗಿದೆ. 2000 ರೂಪಾಯಿ.ಗಿಂತ ಹೆಚ್ಚಿನ ನಗದು ದೇಣಿಗೆಗೆ ತೆರಿಗೆ ವಿನಾಯಿತಿ ಸಿಗುವುದಿಲ್ಲ.

ಸೆಕ್ಷನ್ 80 ಸಿ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಜಿ ನಿರ್ದಿಷ್ಟ ಪರಿಹಾರ ನಿಧಿಗಳು ಮತ್ತು ದತ್ತಿ ಸಂಸ್ಥೆಗಳಿಗೆ ಮಾಡಿದ ದೇಣಿಗೆಗಳನ್ನು ತೆರಿಗೆಗೆ ಒಳಪಡುವ ಆದಾಯವನ್ನು ತಲುಪುವ ಮೊದಲು ಒಟ್ಟು ಆದಾಯದಿಂದ ಕಡಿತವಾಗಿ ಅನುಮತಿಸುತ್ತದೆ.

ದೇಣಿಗೆ ನೀಡುವುದು ಹೇಗೆ

  • ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ ವೆಬ್‌ಸೈಟ್‌ ದೇಣಿಗೆ ನೀಡುವುದಕ್ಕೆ ವಿವಿಧ ಆಯ್ಕೆಗಳು ಮತ್ತು ವಿಧಾನಗಳನ್ನು ನೀಡಿದೆ.
  • ದೇಣಿಗೆ ನೀಡಲು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ದೇಣಿಗೆ ವಿಭಾಗವನ್ನು ಕ್ಲಿಕ್ ಮಾಡಬಹುದು.
  • ಈ ರೀತಿ ಕ್ಲಿಕ್ ಮಾಡಿ, ವಿವರಗಳನ್ನು ತುಂಬಿದ ಬಳಿಕ ಆ ವ್ಯಕ್ತಿಯ ಮೊಬೈಲ್‌ಗೆ ಒಟಿಪಿ ರವಾನೆಯಾಗುತ್ತದೆ. ಅದನ್ನು ಬಳಸಿ ಲಾಗ್ ಇನ್ ಮಾಡಬಹುದು
  • ಈಗ ಹೆಸರು, ದಾನದ ಉದ್ದೇಶ, ಪ್ಯಾನ್ ಸಂಖ್ಯೆ, ದೇಣಿಗೆ ಮೊತ್ತ, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮುಂತಾದ ಮಾಹಿತಿಯನ್ನು ಭರ್ತಿ ಮಾಡಿ.
  • ದೇಣಿಗೆ ರಸೀದಿ ತಕ್ಷಣವೇ ಸಿಗುತ್ತದೆ. ಆ ರಸೀದಿಯನ್ನು ದಾನಿಯು ಡೌನ್ಲೋಡ್ ಮಾಡಬಹುದು.
  • ಪಾವತಿ ಗೇಟ್‌ವೇಗಳು, ಯುಪಿಐ, ಎನ್ಇಎಫ್ಟಿ, ಐಎಂಪಿಎಸ್, ಡಿಮ್ಯಾಂಡ್ ಡ್ರಾಫ್ಟ್ ಮತ್ತು ಚೆಕ್ ಪಾವತಿ ಸೇರಿ ವಿವಿಧ ದೇಣಿಗೆ ವಿಧಾನಗಳು ಲಭ್ಯವಿದೆ.

ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ ವೆಬ್‌ಸೈಟ್

ಶ್ರೀ ರಾಮ್ ಟ್ರಸ್ಟ್‌ಗೆ ದೇಣಿಗೆ ನೀಡಿದ ಮೊತ್ತಕ್ಕೆ ಸೆಕ್ಷನ್ 80 ಜಿ ಅಡಿಯಲ್ಲಿ ವಿನಾಯಿತಿ ಇದೆ. ದೇವಾಲಯದ ನವೀಕರಣ / ದುರಸ್ತಿಗಾಗಿ ದೇಣಿಗೆಗಳನ್ನು ನಿರ್ದಿಷ್ಟವಾಗಿ ನೀಡಬೇಕು. ದಾನಿಗಳು ದೇಣಿಗೆ ರಸೀದಿಯನ್ನು ಸಂಗ್ರಹಿಸಬೇಕು. 2,000 ರೂಪಾಯಿಗಿಂತ ಹೆಚ್ಚಿನ ದೇಣಿಗೆಗಳು ನಗದು ರೂಪದಲ್ಲಿರಬಾರದು. ಅರ್ಹತಾ ಮಿತಿಗೆ ಒಳಪಟ್ಟು ದೇಣಿಗೆ ನೀಡಿದ ಮೊತ್ತದ ಶೇ 50 ವರೆಗೆ ವಿನಾಯಿತಿಯನ್ನು ಪಡೆಯಬಹುದು.

ಕ್ಲಿಯರ್ ಟ್ಯಾಕ್ಸ್‌ನ ಹಿರಿಯ ನಿರ್ದೇಶಕ ಅವಿನಾಶ್ ಪೋಲೆಪಲ್ಲಿ ಅವರ ಪ್ರಕಾರ, “1961 ರ ಆದಾಯ ತೆರಿಗೆ ಕಾಯ್ದೆ, ಸೆಕ್ಷನ್ 80 ಜಿ ಅಡಿಯಲ್ಲಿ, ಅರ್ಹ ದತ್ತಿ ಸಂಸ್ಥೆಗಳಿಗೆ ದೇಣಿಗೆಗಳಿಗೆ ತೆರಿಗೆ ವಿನಾಯಿತಿಗಳನ್ನು ನೀಡುತ್ತದೆ. ರೆಸಿಡೆನ್ಸಿ ಸ್ಥಿತಿಯನ್ನು ಲೆಕ್ಕಿಸದೆ ವ್ಯಕ್ತಿಗಳು, ಕಂಪನಿಗಳು, ಸಂಸ್ಥೆಗಳು ಮತ್ತು ಎಲ್ಎಲ್ಪಿಗಳು ಸೇರಿಎಲ್ಲಾ ತೆರಿಗೆದಾರ ವರ್ಗಗಳಿಗೆ ಈ ಪ್ರಯೋಜನವು ವಿಸ್ತರಿಸುತ್ತದೆ. ದೇಣಿಗೆಗಳು ಸಂಸ್ಥೆ ಮತ್ತು ಉದ್ದೇಶವನ್ನು ಅವಲಂಬಿಸಿ ಶೇ 50 ರಿಂದ ಶೇ100 ವರೆಗೆ ವಿನಾಯಿತಿ ಸಿಗುತ್ತದೆ.”

“2020-21ರ ಹಣಕಾಸು ವರ್ಷದಿಂದ ಸೆಕ್ಷನ್ 80 ಜಿ (2) (ಬಿ) ಉದ್ದೇಶಗಳಿಗಾಗಿ ಕೇಂದ್ರ ಸರ್ಕಾರವು ಶ್ರೀ ರಾಮ ಟ್ರಸ್ಟ್ ಅನ್ನು ಐತಿಹಾಸಿಕವಾಗಿ ಮಹತ್ವದ ಮತ್ತು ಪ್ರಸಿದ್ಧ ಸಾರ್ವಜನಿಕ ಪೂಜಾ ಸ್ಥಳವೆಂದು ಅಧಿಕೃತವಾಗಿ ಗುರುತಿಸಿದೆ. ಆದ್ದರಿಂದ, ದೇವಾಲಯದ ನವೀಕರಣ ಅಥವಾ ದುರಸ್ತಿಯ ಗುರಿಯನ್ನು ಹೊಂದಿರುವ ದೇಣಿಗೆಗಳು ಈ ಸೆಕ್ಷನ್ ಅಡಿಯಲ್ಲಿ ಶೇ 50 ಕಡಿತಕ್ಕೆ ಅರ್ಹವಾಗಿವೆ. ಆದಾಗ್ಯೂ, ನಿಮ್ಮ ಸರಿಹೊಂದಿಸಿದ ಒಟ್ಟು ಆದಾಯ (ಎಟಿಐ) ಮಿತಿಯ ಶೇ 10 ಕ್ಕಿಂತ ಹೆಚ್ಚಿನ ಕಡಿತಗಳನ್ನು ಅನುಮತಿಸಲಾಗುವುದಿಲ್ಲ ಎಂಬುದನ್ನು ಗಮನಿಸಿ. ಅಲ್ಲದೆ, ದೇವಾಲಯದ ದುರಸ್ತಿ ಮತ್ತು ನವೀಕರಣವನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ದೇಣಿಗೆ ನೀಡಿದರೆ ಅದು, ತೆರಿಗೆ ವಿನಾಯಿತಿ ವ್ಯಾಪ್ತಿಗೆ ಬರುವುದಿಲ್ಲ” ಎಂದು ಅವರು ಹೇಳಿದರು.

-----------------------

ಹಕ್ಕುತ್ಯಾಗ: ಮೇಲಿರುವ ಅಭಿಪ್ರಾಯಗಳು ಮತ್ತು ಶಿಫಾರಸುಗಳು ವಿಶ್ಲೇಷಕರ ವೈಯಕ್ತಿಕ. ಹಿಂದೂಸ್ತಾನ್ ಟೈಮ್ಸ್‌ ಕನ್ನಡದ್ದಲ್ಲ. ಯಾವುದೇ ಹೂಡಿಕೆ, ದೇಣಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು, ಪ್ರಮಾಣೀಕೃತ ತಜ್ಞರೊಂದಿಗೆ ಸಮಾಲೋಚನೆ ಮಾಡುವುದು ಒಳಿತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ