logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮುಂಬೈ ಬಳಿ ನೌಕಾಪಡೆಯ ಸ್ಪೀಡ್‌ಬೋಟ್ ಪ್ರಯೋಗದ ವೇಳೆ ಮತ್ತೊಂದು ದೋಣಿಗೆ ಡಿಕ್ಕಿ; 13 ಮಂದಿ ದುರ್ಮರಣ, 94 ಮಂದಿ ರಕ್ಷಣೆ

ಮುಂಬೈ ಬಳಿ ನೌಕಾಪಡೆಯ ಸ್ಪೀಡ್‌ಬೋಟ್ ಪ್ರಯೋಗದ ವೇಳೆ ಮತ್ತೊಂದು ದೋಣಿಗೆ ಡಿಕ್ಕಿ; 13 ಮಂದಿ ದುರ್ಮರಣ, 94 ಮಂದಿ ರಕ್ಷಣೆ

Umesha Bhatta P H HT Kannada

Dec 18, 2024 09:11 PM IST

google News

ಮುಂಬೈನಲ್ಲಿ ನೌಕಾಪಡೆ ದೋಣಿ ಹಾಗೂ ಪ್ರಯಾಣಿಕರ ದೋಣಿ ಡಿಕ್ಕಿಯಾಗಿರುವ ಸನ್ನಿವೇಶ.

    • ಮುಂಬೈನ ಸಮುದ್ರದಲ್ಲಿ ನೌಕಾ ಪಡೆಯ ದೋಣಿ ಪ್ರಯೋಗದ ವೇಳೆ ನಿಯಂತ್ರಣ ತಪ್ಪಿ ಪ್ರಯಾಣಿಕರಿದ್ದ ದೋಣಿಗೆ ಅಪ್ಪಳಿಸಿ 13 ಮಂದಿ ಮೃತಪಟ್ಟಿದ್ದಾರೆ.
ಮುಂಬೈನಲ್ಲಿ ನೌಕಾಪಡೆ ದೋಣಿ ಹಾಗೂ ಪ್ರಯಾಣಿಕರ ದೋಣಿ ಡಿಕ್ಕಿಯಾಗಿರುವ ಸನ್ನಿವೇಶ.
ಮುಂಬೈನಲ್ಲಿ ನೌಕಾಪಡೆ ದೋಣಿ ಹಾಗೂ ಪ್ರಯಾಣಿಕರ ದೋಣಿ ಡಿಕ್ಕಿಯಾಗಿರುವ ಸನ್ನಿವೇಶ.

ಮುಂಬೈ: ಇಂಜಿನ್ ಪ್ರಯೋಗ ನಡೆಸುತ್ತಿದ್ದ ಭಾರತೀಯ ನೌಕಾಪಡೆಯ ವೇಗದ ದೋಣಿಯೊಂದು ಮುಂಬೈ ಕರಾವಳಿಯಲ್ಲಿ ಬುಧವಾರ ಸಂಜೆ ನಿಯಂತ್ರಣ ಕಳೆದುಕೊಂಡು ಪ್ರಯಾಣಿಕರ ದೋಣಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಪ್ರಯೋಗ ನಡೆಸುತ್ತಿದ್ದ ದೋಣಿಯಲ್ಲಿದ್ದ ನೌಕಾಪಡೆಯ ಅಧಿಕಾರಿ ಸೇರಿದಂತೆ 13 ಜನರು ಮತ್ತು ಮೂಲ ಉಪಕರಣ ತಯಾರಕರ ಇಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 110 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಗೆ ನೌಕಾ ಪಡೆ ದೋಣಿ ಅಪ್ಪಳಿಸುತ್ತಿರುವ ಅಪಘಾತದ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ.ಅಪಘಾತ ಸಂಭವಿಸಿದ ಎರಡು ಗಂಟೆಗಳ ನಂತರ ಸ್ಪೀಡ್‌ಬೋಟ್ ದೋಣಿಗೆ ಡಿಕ್ಕಿ ಹೊಡೆಯುವ ವಿಡಿಯೋ ಹೊರಬಿದ್ದಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದ 94 ಮಂದಿಯನ್ನು ರಕ್ಷಿಸಲಾಗಿದೆ ಎಂದು ನೌಕಾಪಡೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಗೇಟ್‌ವೇ ಆಫ್ ಇಂಡಿಯಾದಿಂದ ಮುಂಬೈ ಕರಾವಳಿಯ ಎಲಿಫೆಂಟಾ ದ್ವೀಪಕ್ಕೆ ದೋಣಿ ಪ್ರಯಾಣಿಸಿತ್ತು. ಈ ವೇಳೆ ಅದೇ ಮಾರ್ಗದಲ್ಲಿ ಪ್ರಯೋಗದಲ್ಲಿ ನಿರತವಾಗಿದ್ದ ನೌಕಾಪಡೆಯ ದೋಣಿ ನಿಯಂತ್ರಣ ಕಳೆದುಕೊಂಡು ಪ್ರಯಾಣಿಕರಿದ್ದ ದೋಣಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕೆ ದೋಣಿ ಮುಳುಗಲು ಪ್ರಾರಂಭಿಸಿತು ಎಂದು ಮೊದಲು ವರದಿಯಾಗಿದೆ. ಹೆಚ್ಚಿನ ದೃಶ್ಯಗಳು ಲೈಫ್ ಜಾಕೆಟ್‌ಗಳನ್ನು ಧರಿಸಿರುವ ಪ್ರಯಾಣಿಕರನ್ನು ರಕ್ಷಿಸಿ ಮತ್ತೊಂದು ದೋಣಿಗೆ ಸ್ಥಳಾಂತರಿಸುವುದನ್ನು ಆರಂಭಿಸಲಾಯಿತು. ಈ ವೇಳೆ ಪ್ರಯಾಣಿಕರಿದ್ದ ದೋಣಿ ನೀರಿನ ಮೇಲ್ಮೈಗೆ ವಾಲಲು ಪ್ರಾರಂಭಿಸಿತು. ಈ ಹೊತ್ತಿಗೆ ಕೆಲವರು ಮುಳುಗಿ ಮೃತಪಟ್ಟರು. ಸದ್ಯ 13 ಜನ ಮೃತಪಟ್ಟರೆ, 94 ಮಂದಿಯನ್ನು ರಕ್ಷಣೆ ಮಾಡಿರುವ ಮಾಹಿತಿ ಲಭಿಸಿದೆ.

ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದು, 11 ನೌಕಾಪಡೆಯ ದೋಣಿಗಳು, ಸಾಗರ ಪೊಲೀಸರ ಮೂರು ದೋಣಿಗಳು ಮತ್ತು ಕೋಸ್ಟ್ ಗಾರ್ಡ್‌ನ ದೋಣಿಯನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಲ್ಕು ಹೆಲಿಕಾಪ್ಟರ್‌ಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ, ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರದ ರಕ್ಷಣಾ ಸಿಬಬಂದಿ ಮತ್ತು ಪ್ರದೇಶದ ಮೀನುಗಾರರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಗೇಟ್‌ವೇ ಆಫ್ ಇಂಡಿಯಾದ ಪೂರ್ವದಲ್ಲಿರುವ ಎಲಿಫೆಂಟಾ ಗುಹೆಗಳಿಗೆ ಪ್ರಯಾಣಿಸಲು ಜನರು ಸಾರ್ವಜನಿಕ ದೋಣಿಗಳನ್ನು ಬಳಸುತ್ತಾರೆ. ಈ ರೀತಿ ಹೊರಟಿದ್ದ ದೋಣಿಗೆ ನೌಕಾದಳ ದೋಣಿ ಅಪ್ಪಳಿಸಿರುವುದು ವಿಡಿಯೋಗದಿಂದ ಗೊತ್ತಾಗಿದ್ದು. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ