logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nilekani On Next Infosys Chairman: ಇನ್ಫೋಸಿಸ್‌ನ ಮುಂದಿನ ಚೇರ್ಮನ್‌ ಕುರಿತು ಮಾಹಿತಿ ಹಂಚಿಕೊಂಡ ನಂದನ್‌ ನಿಲೇಕಣಿ

Nilekani on Next Infosys chairman: ಇನ್ಫೋಸಿಸ್‌ನ ಮುಂದಿನ ಚೇರ್ಮನ್‌ ಕುರಿತು ಮಾಹಿತಿ ಹಂಚಿಕೊಂಡ ನಂದನ್‌ ನಿಲೇಕಣಿ

HT Kannada Desk HT Kannada

Dec 15, 2022 11:14 AM IST

google News

Next Infosys chairman: ಇನ್ಫೋಸಿಸ್‌ನ ಮುಂದಿನ ಚೇರ್ಮನ್‌ ಕುರಿತು ಮಾಹಿತಿ ಹಂಚಿಕೊಂಡ ನಂದನ್‌ ನಿಲೇಕಣಿ

    • "ನಮ್ಮಲ್ಲಿ ಯಾವುದೇ ಪ್ಲ್ಯಾನ್‌ ಬಿ ಇಲ್ಲ. ನಾನು ಚೇರ್ಮನ್‌ ಹುದ್ದೆಯಿಂದ ಕೆಳಗೆ ಇಳಿದಾಗ ಕಂಪನಿಯ ಸ್ಥಾಪಕೇತರರು ಈ ಸ್ಥಾನ ಪಡೆಯಲಿದ್ದಾರೆʼʼ ಎಂದು ನಿಲೇಕಣಿ ಹೇಳಿದ್ದಾರೆ. "
Next Infosys chairman: ಇನ್ಫೋಸಿಸ್‌ನ ಮುಂದಿನ ಚೇರ್ಮನ್‌ ಕುರಿತು ಮಾಹಿತಿ ಹಂಚಿಕೊಂಡ ನಂದನ್‌ ನಿಲೇಕಣಿ
Next Infosys chairman: ಇನ್ಫೋಸಿಸ್‌ನ ಮುಂದಿನ ಚೇರ್ಮನ್‌ ಕುರಿತು ಮಾಹಿತಿ ಹಂಚಿಕೊಂಡ ನಂದನ್‌ ನಿಲೇಕಣಿ (Bloomberg)

ನವದೆಹಲಿ: ಇನ್ಫೋಸಿಸ್‌ನ ಮುಂದಿನ ಚೇರ್ಮನ್‌ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಇದಕ್ಕೆ ಸಂಬಂಧಪಟ್ಟಂತೆ ಇನ್ಪೋಸಿಸ್‌ನ ಈಗಿನ ಚೇರ್ಮನ್‌ ನಂದನ್‌ ನಿಲೇಕಣಿ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಮಾರುಕಟ್ಟೆ ಬಂಡವಾಳೀಕರಣದ ಮೂಲಕ ಭಾರತದ ಎರಡನೇ ಅಗ್ರ ಮಾಹಿತಿ ತಂತ್ರಜ್ಞಾನ (ಐಟಿ) ಸೇವೆಗಳ ಕಂಪನಿಯಾದ ಇನ್ಫೋಸಿಸ್‌ನ ನಿರ್ದೇಶಕರ ಮಂಡಳಿಯ ಮುಂದಿನ ಅಧ್ಯಕ್ಷರು ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಲ್ಲ ಎಂದಿದ್ದಾರೆ. ಅಂದರೆ, ಕಂಪನಿಯ ಆರಂಭಕ್ಕೆ ಕಾರಣರಾದ ಸಹ ಸಂಸ್ಥಾಪಕರು ಮುಂದಿನ ಚೇರ್ಮನ್‌ ಆಗುವುದಿಲ್ಲ ಎಂದು ನಂದನ್‌ ನಿಲೇಕಣಿ ಹೇಳಿದ್ದಾರೆ.

"ಪ್ರತಿಯೊಬ್ಬರಿಗೂ ಸಮಾನ ಅವಕಾಶ" ನೀಡುವ ಕುರಿತು ಇತ್ತೀಚೆಗೆ ಇನ್ಫೋಸಿಸ್‌ನ ಸ್ಥಾಪಕರಾದ ಎನ್‌ಆರ್‌ ನಾರಾಯಣ ಮೂರ್ತಿ ಹೇಳಿದ್ದರು. ಪ್ರಮುಖ ಮ್ಯಾನೇಜ್‌ಮೆಂಟ್‌ ಹುದ್ದೆಗೆ ನಮ್ಮಲ್ಲಿ ಅತ್ಯುತ್ತಮ ಜನರಿದ್ದಾರೆ ಎಂದು ಅವರು ಹೇಳಿದ್ದಾರೆ. "ಕಂಪನಿಯ ಸ್ಥಾಪಕರ, ಸಹಸ್ಥಾಪಕರ ಮುಂದಿನ ಪೀಳಿಗೆಗೆ ಕಂಪನಿಯ ಉನ್ನತ ಸ್ಥಾನ ನೀಡಲಾಗುವುದೇ?ʼʼ ಎಂಬ ಪ್ರಶ್ನೆಗೆ ನಾರಾಯಣ ಮೂರ್ತಿ ಈ ರೀತಿ ಉತ್ತರಿಸಿದ್ದರು. ಈ ಹೇಳಿಕೆಗೆ ಪೂರಕವಾಗಿ ನಂದನ್‌ ನಿಲೇಕಣಿಯವರ ಈಗಿನ ಹೇಳಿಕೆ ಹೊರಬಿದ್ದಿದೆ.

"ನಮ್ಮಲ್ಲಿ ಯಾವುದೇ ಪ್ಲ್ಯಾನ್‌ ಬಿ ಇಲ್ಲ. ನಾನು ಚೇರ್ಮನ್‌ ಹುದ್ದೆಯಿಂದ ಕೆಳಗೆ ಇಳಿದಾಗ ಕಂಪನಿಯ ಸ್ಥಾಪಕೇತರರು ಈ ಸ್ಥಾನ ಪಡೆಯಲಿದ್ದಾರೆʼʼ ಎಂದು ನಿಲೇಕಣಿ ಹೇಳಿದ್ದಾರೆ. "ನನಗೆ ಅಗತ್ಯಕ್ಕಿಂತ ಹೆಚ್ಚು ಸಮಯ ಈ ಹುದ್ದೆ ಬೇಡ. ಆದರೆ, ಇದಕ್ಕಾಗಿ ಯಾವುದೇ ಟೈಮ್‌ಲೈನ್‌ ನೀಡುವುದಿಲ್ಲʼʼ ಎಂದು ಇವರು ಹೇಳಿದ್ದಾರೆ.

ಬೆಂಗಳೂರಿನ ಇನ್ಫೋಸಿಸ್‌ ಪ್ರಧಾನ ಕಚೇರಿಯಲ್ಲಿ ಇನ್ಫೋಸಿಸ್‌ ಸ್ಥಾಪಕರ ಸಭೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಇನ್ಫೋಸಿಸ್‌ನ ಆಡಳಿತ ಮಂಡಳಿಯನ್ನು ಸಂಸ್ಥಾಪಕೇತರ ಸದಸ್ಯರು ಮುನ್ನಡೆಸುತ್ತಿದ್ದರು. ಇನ್ಫೋಸಿಸ್‌ಗೆ ನಂದನ್‌ ನಿಲೇಕಣಿಯವರು ಹಿಂತುರುಗಿದಾಗ ಅವರು ಉಪಾಧ್ಯಕ್ಷರಾದ ಆರ್‌. ಶೇಷಸಾಯಿ ಮತ್ತು ರವಿ ವೆಂಕಟೇಶನ್‌ ಅವರನ್ನು ಬದಲಾಯಿಸಿದ್ದರು. ಬಳಿಕ ವಿಶಾಲ್‌ ಸಿಕ್ಕಾ ಅವರೂ ಚೀಫ್‌ ಎಕ್ಸಿಕ್ಯುಟಿವ್‌ ಸ್ಥಾನದಿಂದ ಹೊರನಡೆದಿದ್ದರು.

ಭಾರತ ಸರಕಾರದ ಆಧಾರ್‌ ಪ್ರಾಜೆಕ್ಟ್‌ಗಾಗಿ ನಿಲೇಕಣಿಯವರು ಇನ್ಫೋಸಿಸ್‌ನ ಚೇರ್ಮನ್‌ ಹುದ್ದೆಯಿಂದ 2009ರ ಜುಲೈನಲ್ಲಿ ಇನ್ಫೋಸಿಸ್‌ ಉಪಾಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿದ್ದರು. 1981ರಲ್ಲಿ ನಾರಾಯಣ ಮೂರ್ತಿ ಜತೆ ಸೇರಿ ಇನ್ಫೋಸಿಸ್‌ ಆರಂಭಕ್ಕೆ ಇವರು ಕಾರಣರಾಗಿದ್ದರು. ಇವರು ಈ ಕಂಪನಿಯ ಸಹ-ಸ್ಥಾಪಕರಲ್ಲಿ ಒಬ್ಬರು.

ಇನ್ಫೋಸಿಸ್‌ನ ಸ್ಥಾಪಕೇತರ ಚೇರ್ಮನ್‌ಗಳಲ್ಲಿ ಒಬ್ಬರಾದ ಸಿಕ್ಕಾರ ಜತೆ ನಾರಾಯಣ ಮೂರ್ತಿಯವರ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಪ್ರಕಟವಾದಗ, ಸಿಕ್ಕಾ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಆಗಸ್ಟ್‌ 2017ರಲ್ಲಿ ನಿಲೇಕಣಿಯವರು ಇನ್ಫೋಸಿಸ್‌ಗೆ ಹಿಂತುರುಗಿದ್ದರು.

ಅಲ್ಲಿಂದ ಇಲ್ಲಿಯವರೆಗೆ ಐದು ವರ್ಷಗಳ ಕಾಲ ಕಂಪನಿಯ ವಾರ್ಷಿಕ ಆದಾಯ ಹಲವು ಪಟ್ಟು ಹೆಚ್ಚಾಗಿತ್ತು. 2017ರ ಆರ್ಥಿಕ ವರ್ಷದಲ್ಲಿ 68,484 ಕೋಟಿ ರೂ. ಇದ್ದ ಆದಾಯವು 1.24 ಟ್ರಿಲ್ಲಿಯನ್‌ಗೆ ತಲುಪಿತ್ತು. ಸಲೀಲ್‌ ಪಾರೇಖ್‌ ಅವರ ಜತೆ ಸೇರಿ ನಿಲೇಕಣಿಯವರು ಕಂಪನಿಯ ಆದಾಯ ಹೆಚ್ಚಳಕ್ಕೆ ಕಾರಣವಾಗಿತ್ತು. ಅಂದಹಾಗೆ ಸಲೀಲ್‌ ಪಾರೇಖ್‌ ಕೂಡ ಇನ್ಫೋಸಿಸ್‌ನ ಸ್ಥಾಪಕೇತರ ಸಿಇಒ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ