logo
ಕನ್ನಡ ಸುದ್ದಿ  /  Nation And-world  /  Nobel Prize In Physics Awarded To Alain Aspect, John F. Clauser, Anton Zeilinger

Nobel prize in Physics: ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿ ಹಂಚಿಕೊಂಡ ಅಲೈನ್‌ ಆಸ್ಪೆಕ್ಟ್‌, ಜಾನ್‌ ಎಫ್‌, ಕ್ಲೌಸರ್‌, ಆಂಟನ್‌ ಝೈಲಿಂಗರ್‌

Praveen Chandra B HT Kannada

Oct 04, 2022 04:03 PM IST

Nobel prize in Physics: ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿ ಹಂಚಿಕೊಂಡ ಅಲೈನ್‌ ಆಸ್ಪೆಕ್ಟ್‌, ಜಾನ್‌ ಎಫ್‌, ಕ್ಲೌಸರ್‌, ಆಂಟನ್‌ ಝೈಲಿಂಗರ್‌

    • Nobel prize in Physics 2022: ಅಲೈನ್‌ ಆಸ್ಪೆಕ್ಟ್‌, ಜಾನ್‌ ಎಫ್‌, ಕ್ಲೌಸರ್‌, ಆಂಟನ್‌ ಝೈಲಿಂಗರ್‌ ಅವರು ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
Nobel prize in Physics: ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿ ಹಂಚಿಕೊಂಡ ಅಲೈನ್‌ ಆಸ್ಪೆಕ್ಟ್‌, ಜಾನ್‌ ಎಫ್‌, ಕ್ಲೌಸರ್‌, ಆಂಟನ್‌ ಝೈಲಿಂಗರ್‌
Nobel prize in Physics: ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿ ಹಂಚಿಕೊಂಡ ಅಲೈನ್‌ ಆಸ್ಪೆಕ್ಟ್‌, ಜಾನ್‌ ಎಫ್‌, ಕ್ಲೌಸರ್‌, ಆಂಟನ್‌ ಝೈಲಿಂಗರ್‌

ಸ್ಟಾಕ್‌ಹೋಮ್‌: 2022ರ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿ (Nobel prize in Physics) ಘೋಷಣೆಯಾಗಿದೆ. ಅಲೈನ್‌ ಆಸ್ಪೆಕ್ಟ್‌, ಜಾನ್‌ ಎಫ್‌, ಕ್ಲೌಸರ್‌, ಆಂಟನ್‌ ಝೈಲಿಂಗರ್‌ ಅವರು ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ರಾಯಲ್‌ ಸ್ವೀಡಿಸ್‌ ಅಕಾಡೆಮಿಯು ಇವರಿಗೆ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಿದೆ.

ಟ್ರೆಂಡಿಂಗ್​ ಸುದ್ದಿ

ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದೀರಾ? ಮೊದಲ ಪ್ರಯತ್ನ ನಿಮ್ಮದಾಗಿದ್ದರೆ ಈ 9 ಸಲಹೆಗಳನ್ನು ಮೊದಲು ಓದಿಕೊಳ್ಳಿ

ಕೇರಳ, ತಮಿಳುನಾಡು ಕರಾವಳಿಯಲ್ಲಿ ಕಲ್ಲಕಡಲ್ ವಿದ್ಯಮಾನ ಎಚ್ಚರಿಕೆ; ಮೀನುಗಾರರಿಗೆ ಎಚ್ಚರಿಕೆ, ಏನಿದು ಬೆಳವಣಿಗೆ?

Bank Holidays: ಕಾರ್ಮಿಕರ ದಿನ, ಬಸವ ಜಯಂತಿಗೆ ಬ್ಯಾಂಕ್‌ಗಳಿಗೆ ರಜೆ; ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಬಿಡುಗಡೆ

Video: ಕೇರಳದಲ್ಲಿ ಬರೋಬ್ಬರಿ 150 ಜೋಡಿ ಅವಳಿಗಳ ಸಮಾಗಮ; ಒಂದೆಡೆ ಸೇರಲು ನೆರವಾಯ್ತು ವಾಟ್ಸಾಪ್ ಗ್ರೂಪ್

"2022ರ ಭೌತಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿ ವಿಜೇತರ ಸಂಶೋಧನೆಗಳು ಕ್ವಾಂಟಮ್‌ ತಂತ್ರಜ್ಞಾನದ ಹೊಸ ಯುಗಕ್ಕೆ ಬುನಾದಿ ಹಾಕಿದೆ. ಕ್ವಾಂಟಮ್‌ ಸ್ಟೇಟ್‌ಗಳು ಮತ್ತು ಅವುಗಳ ಎಲ್ಲಾ ಪದರಗಳ ಗುಣಲಕ್ಷಣಗಳನ್ನು ತಿಳಿಯಲು ಇವರ ಸಂಶೋಧನೆಗಳು ನೆರವಾಗಿವೆʼʼ ಎಂದು ನೊಬೆಲ್‌ ಪ್ರಶಸ್ತಿ ಸಮಿತಿಯು ಪ್ರಶಸ್ತಿ ಘೋಷಣೆ ಸಂದರ್ಭದಲ್ಲಿ ತಿಳಿಸಿದೆ.

Nobel prize in Physics: 2022ರ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿ ಘೋಷಣೆಯಾಗಿದೆ. ಅಲೈನ್‌ ಆಸ್ಪೆಕ್ಟ್‌, ಜಾನ್‌ ಎಫ್‌, ಕ್ಲೌಸರ್‌, ಆಂಟನ್‌ ಝೈಲಿಂಗರ್‌ ಅವರು ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ರಾಯಲ್‌ ಸ್ವೀಡಿಸ್‌ ಅಕಾಡೆಮಿಯು ಇವರಿಗೆ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಿದೆ.

"2022ರ ಭೌತಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿ ವಿಜೇತರ ಸಂಶೋಧನೆಗಳು ಕ್ವಾಂಟಮ್‌ ತಂತ್ರಜ್ಞಾನದ ಹೊಸ ಯುಗಕ್ಕೆ ಬುನಾದಿ ಹಾಕಿದೆ. ಕ್ವಾಂಟಮ್‌ ಸ್ಟೇಟ್‌ಗಳು ಮತ್ತು ಅವುಗಳ ಎಲ್ಲಾ ಪದರಗಳ ಗುಣಲಕ್ಷಣಗಳನ್ನು ತಿಳಿಯಲು ಇವರ ಸಂಶೋಧನೆಗಳು ನೆರವಾಗಿವೆʼʼ ಎಂದು ನೊಬೆಲ್‌ ಪ್ರಶಸ್ತಿ ಸಮಿತಿಯು ಪ್ರಶಸ್ತಿ ಘೋಷಣೆ ಸಂದರ್ಭದಲ್ಲಿ ತಿಳಿಸಿದೆ.

2021ರಲ್ಲಿ ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಸ್ಯುಕುರೊ ಮನಬೆ, ಕ್ಲಾಸ್ ಹ್ಯಾಸೆಲ್‌ಮನ್ ಮತ್ತು ಜಾರ್ಜಿಯೊ ಪ್ಯಾರಿಸಿ ಎಂಬ ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದರು. ಹವಾಮಾನದ ಬದಲಾವಣೆ ಕುರಿತು ಅರ್ಥಮಾಡಿಕೊಳ್ಳಲು ನೆರವಾಗುವ ಇವರ ಸಂಶೋಧನೆಗಳಿಗೆ ನೊಬೆಲ್‌ ನೀಡಲಾಗಿತ್ತು.

ಈ ವರ್ಷದ ನೊಬೆಲ್‌ ಪ್ರಶಸ್ತಿ ನಿನ್ನೆ ಆರಂಭವಾಗಿತ್ತು. ಜ್ಞಾನಿ ಸ್ವಾಂಟೆ ಪಾಬೊ (Scientist Svante Paabo) ಅವರು ಈ ಬಾರಿಯ ಮೆಡಿಸಿನ್‌ ವಿಭಾಗದ ನೊಬೆಲ್‌ ಪ್ರಶಸ್ತಿ (2022 Nobel Prize)ಗೆ ಭಾಜನರಾಗಿದ್ದರು. ಮಾನವ ವಿಕಾಸದ ವಂಶವಾಹಿ ಮತ್ತು ಅಳಿವಿನಂಚಿನಲ್ಲಿರುವ ಹೋಮಿನಿನ್‌ಗಳ ಕುರಿತಾದ ಸಂಶೋಧನೆಗೆ ಶರೀರಶಾಸ್ತ್ರ/ವೈದ್ಯಕೀಯ ನೊಬೆಲ್‌ ಅನ್ನು ಇವರಿಗೆ ನೀಡಲಾಗಿದೆ ಎಂದು ನೊಬೆಲ್‌ ಪ್ರಶಸ್ತಿ ಸಂಸ್ಥೆ ತಿಳಿಸಿತ್ತು. ಇದೀಗ ಈ ವರ್ಷದ ಫಿಸಿಕ್ಸ್‌ ವಿಭಾಗದ ನೊಬೆಲ್‌ ಪ್ರಶಸ್ತಿ ಘೋಷಣೆಯಾಗಿದೆ.

ನೊಬೆಲ್‌ ಪ್ರಶಸ್ತಿಯು ಜಗತ್ತಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. ಇದನ್ನು ಸ್ವೀಡನ್‌ನ ಕರೊಲಿನ್ಸಕ ಇನ್‌ಸ್ಟಿಟ್ಯೂಟ್‌ ಪ್ರಧಾನ ಮಾಡುರತ್ತದೆ. ಈ ಪ್ರಶಸ್ತಿಯು 10 ದಶಲಕ್ಷ ಸ್ವೀಡಿಸ್‌ ಕ್ರೌನ್ಸ್‌ (900,357 ಡಾಲರ್‌) ಬಹುಮಾನ ಮೊತ್ತವನ್ನು ಹೊಂದಿದೆ.

ನೊಬೆಲ್‌ ಪ್ರಶಸ್ತಿಯನ್ನು ಸ್ವಿಡನ್‌ನ ಕೈಗಾರಿಕೋದ್ಯಮಿ ಆಲ್‌ಫ್ರೆಡ್‌ ನೋಬೆಲ್‌ ಅವರು ಆರಂಭಿಸಿದರು. ಅವರು ಡೈನಾಮೈಟ್‌ನ ಅನ್ವೇಷಕರು. 1901ರಲ್ಲಿ ಮೊದಲ ಬಾರಿಗೆ ನೊಬೆಲ್‌ ಪ್ರಶಸ್ತಿ ನೀಡಲಾಯಿತು. ನೋಬೆಲ್‌ ಅವರು ಮರಣ ಹೊಂದಿದ ಐದು ವರ್ಷಗಳ ತರುವಾಯ ಮೊದಲ ನೊಬೆಲ್‌ ಪ್ರಶಸ್ತಿ ಘೋಷಿಸಲಾಯಿತು.

ಮೊದಲ ದಿನ ಮೆಡಿಸಿನ್‌ ವಿಭಾಗದಲ್ಲಿ ನೋಬೆಲ್‌ ಘೋಷಣೆಯಾಗುತ್ತದೆ. ಮರುದಿನ ಅಂದರೆ, ಇಂದು ಕೆಮಿಸ್ಟ್ರಿ ವಿಭಾಗದ ನೊಬೆಲ್‌ ಘೋಷಣೆಯಾಗುತ್ತದೆ. ಬಳಿಕ ಸಾಹಿತ್ಯಕ್ಕೆ ನೋಬೆಲ್‌ ಘೋಷಣೆಯಾಗುತ್ತದೆ. ಅಕ್ಟೋಬರ್‌ 10ರಂದು ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ ಘೋಷಿಸಲಾಗುತ್ತದೆ.

ಪ್ರತಿ ನೊಬೆಲ್‌ ಪ್ರಶಸ್ತಿಯು 10 ದಶಲಕ್ಷ ಕ್ರೊನೊರ್‌ ಮೊತ್ತವನ್ನು ಹೊಂದಿರುತ್ತದೆ. ಅಂದರೆ, ಇದು 9 ಲಕ್ಷ ಡಾಲರ್‌ಗೆ ಸಮ. ಡಿಸೆಂಬರ್‌ ಹತ್ತರಂದು ನೋಬೆಲ್‌ ಪಡೆದವರಿಗೆ ಪ್ರಶಸ್ತಿ ಸರ್ಟಿಫಿಕೇಟ್‌ ಮತ್ತು ಚಿನ್ನದ ಪದಕವನ್ನೂ ನೀಡಲಾಗುತ್ತದೆ. ಡಿಸೆಂಬರ್‌ 10ರಂದು ಅಲ್ಬರ್ಡ್‌ ನೋಬೆಲ್‌ ಮೃತಪಟ್ಟ ದಿನವಾಗಿದೆ.

1901ರಲ್ಲಿ ನೊಬೆಲ್‌ ಪ್ರಶಸ್ತಿ ಆರಂಭಿಸಿದ ಸಮಯದಲ್ಲಿ ಇಲ್ಲದ ವಿವಿಧ ವಿಭಾಗಗಳಿಗೂ ನೊಬೆಲ್‌ ಪ್ರಶಸ್ತಿ ನೀಡುವ ಪರಿಪಾಠವಿದೆ. ಅರ್ಥಶಾಸ್ತ್ರ ವಿಭಾಗಕ್ಕೆ ನೊಬೆಲ್‌ ಪ್ರಶಸ್ತಿಯನ್ನು 1968ರಲ್ಲಿ ಆರಂಭಿಸಲಾಗಿತ್ತು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು