logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಈರುಳ್ಳಿ ಬೆಲೆಯಲ್ಲೂ ಏರಿಕೆ; ರಫ್ತು ನಿಷೇಧದಿಂದ ಶೀಘ್ರದಲ್ಲೇ ಈರುಳ್ಳಿ ಬೆಲೆ ಕಡಿಮೆಯಾಗಲಿದೆ ಎಂದ ಕೇಂದ್ರ ಸರ್ಕಾರ

ಈರುಳ್ಳಿ ಬೆಲೆಯಲ್ಲೂ ಏರಿಕೆ; ರಫ್ತು ನಿಷೇಧದಿಂದ ಶೀಘ್ರದಲ್ಲೇ ಈರುಳ್ಳಿ ಬೆಲೆ ಕಡಿಮೆಯಾಗಲಿದೆ ಎಂದ ಕೇಂದ್ರ ಸರ್ಕಾರ

HT Kannada Desk HT Kannada

Dec 12, 2023 09:05 AM IST

google News

ಈರುಳ್ಳಿ ಬೆಲೆ ಏರಿಕೆ

  • Onion Price Hike: ಒಂದೆಡೆ ಬೆಳ್ಳುಳ್ಳಿ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದರೆ ಈರುಳ್ಳಿ ಬೆಲೆ ಕೂಡಾ ಏರುತ್ತಲೇ ಇದೆ. 2024 ಮಾರ್ಚ್‌ ವೇಳೆಗೆ ಈರುಳ್ಳಿ ಬೆಲೆಯಲ್ಲಿ ಕಡಿಮೆ ಆಗಲಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಭರವಸೆ ನೀಡಿದ್ದಾರೆ.

ಈರುಳ್ಳಿ ಬೆಲೆ ಏರಿಕೆ
ಈರುಳ್ಳಿ ಬೆಲೆ ಏರಿಕೆ

Onion Price Hike: ಇತ್ತೀಚೆಗಷ್ಟೇ ಟೊಮೆಟೊ ಭಾರೀ ಏರಿಕೆ ಕಂಡು ಇಳಿಕೆ ಆಗಿತ್ತು. ಸದ್ಯಕ್ಕೆ ಬೆಳ್ಳುಳ್ಳಿ ಬೆಲೆ ಕೆಲವೆಡೆ ಕಿಲೋಗೆ 300 ಆಗಿತ್ತು. ಇದರ ನಡುವೆ ಈರುಳ್ಳಿ ಬೆಲೆ ಕೂಡಾ ಏರುತ್ತಲೇ ಇದೆ. ಜನರು ತರಕಾರಿ ಬೆಲೆ ಈ ರೀತಿ ಏರುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದು ಈರುಳ್ಳಿ ಬೆಲೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿರುವುದಾಗಿ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಭರವಸೆ ನೀಡಿದ್ದಾರೆ.

2024 ಮಾರ್ಚ್‌ವರೆಗೂ ಈರುಳ್ಳಿ ರಫ್ತು ನಿಷೇಧ

ಖಾರಿಫ್ ಆಗಮನದಲ್ಲಿ ವಿಳಂಬ, ಟರ್ಕಿ ಮತ್ತು ಈಜಿಪ್ಟ್‌ನ ರಫ್ತು ನಿರ್ಬಂಧ, ಖಾರಿಫ್ ಬೆಳೆ ಸಮಯದಲ್ಲಿ ಆಲಿಕಲ್ಲು ಮಳೆಯಿಂದ ಈರುಳ್ಳಿ ಬೆಲೆ ಏರಿದೆ. ಸದ್ಯಕ್ಕೆ ಭಾರತದಲ್ಲಿ ಈರುಳ್ಳಿ ಬೆಲೆ ಪ್ರತಿ ಕಿಲೋಗೆ 56 ರೂ. ಇದೆ. ಕೆಲವೆಡೆ 80 ರೂ. ಇಲದೆ. ಜನವರಿ ತಿಂಗಳೊಳಗೆ ಈರುಳ್ಳಿ ಬೆಲೆ 40 ರೂ.ಗೆ ಇಳಿಯುವ ಸಾಧ್ಯತೆ ಇದೆ. ಏಪ್ರಿಲ್‌ನಿಂದ ಆಗಸ್ಟ್‌ವರೆಗೂ 9.75 ಲಕ್ಷ ಟನ್‌ ಈರುಳ್ಳಿಯನ್ನು ರಫ್ತು ಮಾಡಲಾಗಿದೆ. ಬಾಂಗ್ಲಾದೇಶ, ಮಲೇಷ್ಯಾ, ಯುಎಇಗೆ ಹೆಚ್ಚಿನ ಪ್ರಮಾಣದ ಈರುಳ್ಳಿಯನ್ನು ರಫ್ತು ಮಾಡಲಾಗಿದೆ. ಈರುಳ್ಳಿ ಮೇಲಿನ ಕನಿಷ್ಠ ರಫ್ತು ಬೆಲೆಯ ನಿರ್ಬಂಧದ ಬದಲು 2024 ಮಾರ್ಚ್‌ವರೆಗೂ ಇಡೀ ಈರುಳ್ಳಿ ರಫ್ತನ್ನೇ ನಿಷೇಧಿಸಲಾಗಿದೆ.

ಶೀಘ್ರದಲ್ಲೇ ಈರುಳ್ಳಿ ಬೆಲೆ ಇಳಿಕೆ

ಭಾರತದ ಅತಿದೊಡ್ಡ ಉತ್ಪನ್ನದ ಸಗಟು ಮಾರುಕಟ್ಟೆಯಾದ ಲಾಸಲ್‌ಗಾಂವ್‌ನಲ್ಲಿ ಈರುಳ್ಳಿ ಬೆಲೆ ಈ ವರ್ಷದ ಫೆಬ್ರವರಿಯಲ್ಲಿ ಕಡಿಮೆಯಾಗಿತ್ತು. ನಂತರ ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟವು ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಈರುಳ್ಳಿ ಬೆಲೆಯನ್ನು ಏರಿಕೆ ಮಾಡಿತ್ತು. ಆಗಸ್ಟ್ 2023 ಆಗಸ್ಟ್‌ನಲ್ಲಿ ರಫ್ತುಗಳಲ್ಲಿನ ಏರಿಕೆ ಮತ್ತು ಜಾಗತಿಕ ಲಭ್ಯತೆಯ ಕಾಳಜಿಯಿಂದ ಈರುಳ್ಳಿ ರೀಟೇಲ್‌ ಬೆಲೆಯಲ್ಲಿ ಹೆಚ್ಚಳವಾಯ್ತು. ದೇಶೀಯ ಬೆಲೆಗಳನ್ನು ನಿಯಂತ್ರಣದಲ್ಲಿಡಲು 40% ರಫ್ತು ಸುಂಕವನ್ನು ವಿಧಿಸಲಾಯಿತು. ಈರುಳ್ಳಿ ರಫ್ತು ನಿಷೇಧದಿಂದ ಸಣ್ಣ ಸಣ್ಣ ರೈತರಿಗೆ ಏನೂ ಸಮಸ್ಯೆ ಆಗುವುದಿಲ್ಲ. ಈರುಳ್ಳಿ ಬೆಲೆ ವಿಚಾರದಲ್ಲಿ ಸರ್ಕಾರ ಸಮಯಕ್ಕೆ ಸರಿಯಾಗಿ ಮಧ್ಯ ಪ್ರವೇಶಿಸದಿದ್ದರೆ ಇಷ್ಟೊತ್ತಿಗೆ ಒಂದು ಕಿಲೋಗೆ ಈರುಳ್ಳಿ ಬೆಲೆ 100 ರೂ. ಏರಿಕೆ ಆಗುತ್ತಿತ್ತು ಎಂದು ರೋಹಿತ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.

ಮಹಾರಾಷ್ಟ್ರ ರೈತರ ಪ್ರತಿಭಟನೆ

ಆದರೆ ಈರುಳ್ಳಿ ರಫ್ತು ನಿಷೇಧದ ಕುರಿತು ಮಹಾರಾಷ್ಟ್ರದಲ್ಲಿ ರೈತರು ಮತ್ತು ವ್ಯಾಪಾರಿಗಳ ಪ್ರತಿಭಟನೆಗಳು ಮುಂದುವರೆದಿದ್ದು, ಕೇಂದ್ರದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ