logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi Birthday: ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬ; ಅವರು ಇವತ್ತೇನೋ ಮಿಸ್‌ ಮಾಡ್ಕೊಂಡ್ರು! ಏನು ಅನ್ನೋ ಕುತೂಹಲವೇ ಈ ವರದಿ ಓದಿ...

PM Modi birthday: ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬ; ಅವರು ಇವತ್ತೇನೋ ಮಿಸ್‌ ಮಾಡ್ಕೊಂಡ್ರು! ಏನು ಅನ್ನೋ ಕುತೂಹಲವೇ ಈ ವರದಿ ಓದಿ...

HT Kannada Desk HT Kannada

Sep 17, 2022 04:05 PM IST

google News

(ಕಡತ ಚಿತ್ರ) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಗಾಂಧಿನಗರದಲ್ಲಿ ಭೇಟಿಯಾದರು. (PIB)

  • PM Modi birthday: ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬ ಇಂದು. ದೇಶ ವಿದೇಶಗಳ ಗಣ್ಯರು, ರಾಜಕೀಯ ನೇತಾರರು ಅವರಿಗೆ ಇಂದು ಶುಭಕೋರಿದ್ದಾರೆ. ವಿಶೇಷ ಏನಪ್ಪಾ ಅಂದರೆ, ಪ್ರಧಾನಿ ಮೋದಿ ಅವರು ಪ್ರತಿವರ್ಷದ ವಾಡಿಕೆಯನ್ನು ಈ ವರ್ಷ ಮುರಿದಿದ್ದಾರೆ. ಅವರು ಏನೋ ಮಿಸ್‌ ಮಾಡಿಕೊಂಡಿದ್ದಾರೆ. ಅದೇನು? ಇಲ್ಲಿದೆ ವರದಿ. 

(ಕಡತ ಚಿತ್ರ) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಗಾಂಧಿನಗರದಲ್ಲಿ ಭೇಟಿಯಾದರು. (PIB)
(ಕಡತ ಚಿತ್ರ) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಗಾಂಧಿನಗರದಲ್ಲಿ ಭೇಟಿಯಾದರು. (PIB)

ಗಾಂಧಿನಗರ (ಗುಜರಾತ್‌): ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದ ವಾಡಿಕೆಯನ್ನು ಈ ಸಲ ತಪ್ಪಿಸಿಕೊಂಡಿದ್ದಾರೆ. ಅವರು ಏನೋ ಮಿಸ್‌ ಮಾಡಿಕೊಂಡಿದ್ದಾರೆ. ಏನದು ನೀವೇನಾದರೂ ಗುರುತಿಸಿದ್ದೀರಾ?

ಪ್ರಧಾನಿ ನರೇಂದ್ರ ಮೋದಿ ಅವರು 72ನೇ ವರ್ಷಕ್ಕೆ ಕಾಲಿಟ್ಟ ಈ ದಿನ ಪ್ರಾಜೆಕ್ಟ್‌ ಚೀತಾ ಮೂಲಕ ಭಾರತಕ್ಕೆ 7 ದಶಕಗಳ ಬಳಿಕ ಅಳಿವಿನಂಚಿನ ಚಿರತೆಗಳನ್ನು ಸ್ಥಳಾಂತರಿಸಿಕೊಂಡರು. ಭಾರತದಲ್ಲಿ 1952ರಲ್ಲೇ ಚೀತಾ ಅಳಿವಿನಂಚು ತಲುಪಿತ್ತು. ನಮೀಬಿಯಾದೊಂದಿಗೆ ತಿಳಿವಳಿಕೆ ಜ್ಞಾಪಕ ಪತ್ರದ ಒಡಂಬಡಿಕೆ ಮಾಡಿಕೊಂಡು ಈಗ ಎಂಟು ಚಿರತೆಗಳಿ ಭಾರತಕ್ಕೆ ತಲುಪಿವೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಅವುಗಳ ಸೇರ್ಪಡೆ ಕಾರ್ಯವನ್ನು ಸ್ವತಃ ಪ್ರಧಾನಿ ಮೋದಿ ನೆರವೇರಿಸಿದರು.

ಈ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಅವರು ಮಧ್ಯಪ್ರದೇಶದ ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತ, ತಾವು ಇಂದು ವಾಡಿಕೆ ಮುರಿದ ವಿಚಾರ ತಿಳಿಸಿದರು. ಅವರು ಹೇಳಿದ್ದಿಷ್ಟು-

"ಪ್ರತಿ ವರ್ಷ ಹುಟ್ಟುಹಬ್ಬದ ದಿನದ ಗಾಂಧಿನಗರಕ್ಕೆ ಹೋಗಿ ತಾಯಿ ಹೀರಾಬೆನ್‌ ಅವರ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆಯುತ್ತಿದ್ದೆ. ಆದರೆ ಈ ವರ್ಷ ಅದು ಸಾಧ್ಯವಾಗಿಲ್ಲ. ಆದರೆ ಮಧ್ಯಪ್ರದೇಶದಲ್ಲಿ ಲಕ್ಷಾಂತರ ಮಹಿಳೆಯರು.. ತಾಯಂದಿರು ನನಗೆ ತಮ್ಮ ಆಶೀರ್ವಾದವನ್ನು ನೀಡುತ್ತಿದ್ದಾರೆ" .

ಕಳೆದ ಶತಮಾನ ಮತ್ತು ಈ ಶತಮಾನದ ನಡುವೆ ದೇಶದಲ್ಲಿ ಮಹಿಳೆಯರ ಪ್ರಾತಿನಿಧ್ಯದಲ್ಲಿ ಭಾರಿ ಬದಲಾವಣೆಯಾಗಿದೆ. ಗ್ರಾಮ ಸಂಸ್ಥೆಗಳಿಂದ ರಾಷ್ಟ್ರಪತಿ ಭವನದವರೆಗೆ ಮಹಿಳಾ ಶಕ್ತಿಯೇ ದೇಶವನ್ನು ಆಳುತ್ತಿದೆ.

ಗ್ರಾಮ ಆರ್ಥಿಕತೆಯಲ್ಲಿ ಮಹಿಳಾ ಉದ್ಯಮಿಗಳಿಗೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸಲು ನಮ್ಮ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. 'ಒಂದು ಜಿಲ್ಲೆ, ಒಂದು ಉತ್ಪನ್ನ' ಮೂಲಕ ನಾವು ಪ್ರತಿ ಜಿಲ್ಲೆಯಿಂದ ಸ್ಥಳೀಯ ಉತ್ಪನ್ನಗಳನ್ನು ದೊಡ್ಡ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇವೆ. ಕಳೆದ ಎಂಟು ವರ್ಷಗಳಲ್ಲಿ ನಾವು ಸಹಾಯ ಮಾಡಿದ್ದೇವೆ. ಸ್ವಸಹಾಯ ಗುಂಪುಗಳನ್ನು ಸಶಕ್ತಗೊಳಿಸಲು ಎಲ್ಲಾ ಮಾರ್ಗಗಳು. ಇಂದು, ದೇಶಾದ್ಯಂತ 8 ಕೋಟಿಗೂ ಹೆಚ್ಚು ಮಹಿಳೆಯರು ಈ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಅಭಿಯಾನದಲ್ಲಿ ಪ್ರತಿ ಗ್ರಾಮೀಣ ಮನೆಯಿಂದ ಕನಿಷ್ಠ ಒಬ್ಬ ಸಹೋದರಿಯನ್ನು ಹೊಂದಲು ನಾವು ಗುರಿ ಹೊಂದಿದ್ದೇವೆ" ಎಂದು ಅವರು ಒತ್ತಿ ಹೇಳಿದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ