logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Power Consumption: ಶೇ.10ರಷ್ಟು ಏರಿಕೆಯಾದ ಭಾರತದ ವಿದ್ಯುತ್‌ ಬಳಕೆ ಪ್ರಮಾಣ: ದೇಶ ಬೆಳಗಲು ಬೇಕು ಹೆಚ್ಚು ಇಂಧನ

Power Consumption: ಶೇ.10ರಷ್ಟು ಏರಿಕೆಯಾದ ಭಾರತದ ವಿದ್ಯುತ್‌ ಬಳಕೆ ಪ್ರಮಾಣ: ದೇಶ ಬೆಳಗಲು ಬೇಕು ಹೆಚ್ಚು ಇಂಧನ

HT Kannada Desk HT Kannada

Mar 19, 2023 12:37 PM IST

ಸಾಂದರ್ಭಿಕ ಚಿತ್ರ

    • ಈ ಆರ್ಥಿಕ ವರ್ಷದ ಏಪ್ರಿಲ್-ಫೆಬ್ರವರಿ ಅವಧಿಯಲ್ಲಿ ಭಾರತದ ವಿದ್ಯುತ್ ಬಳಕೆ ಶೇಕಡಾ 10ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ವರದಿ ತಿಳಿಸಿದೆ. ಪ್ರಸ್ತುತ ಭಾರತದ ವಿದ್ಯುತ್‌ ಬಳಕೆ ಪ್ರಮಾಣ 1375.57 ಶತಕೋಟಿ ಯೂನಿಟ್‌(BU)ಗಳಿಗೆ ತಲುಪಿದ್ದು, 2021-22ರಲ್ಲಿ ಸರಬರಾಜು ಮಾಡಿದ ವಿದ್ಯುತ್ ಮಟ್ಟವನ್ನು ಮೀರಿಸಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT_PRINT)

ನವದೆಹಲಿ: ಈ ಆರ್ಥಿಕ ವರ್ಷದ ಏಪ್ರಿಲ್-ಫೆಬ್ರವರಿ ಅವಧಿಯಲ್ಲಿ ಭಾರತದ ವಿದ್ಯುತ್ ಬಳಕೆ ಶೇಕಡಾ 10ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ವರದಿ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್‌ ದೇಶ ಬಿಟ್ಟು ಹೋಗಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರವೇ ಕಾರಣ, ಇಂತವರ ಪರ ಸಹನೆ ಬೇಕಿಲ್ಲ: ಪ್ರಧಾನಿ ಮೋದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

ಪ್ರಸ್ತುತ ಭಾರತದ ವಿದ್ಯುತ್‌ ಬಳಕೆ ಪ್ರಮಾಣ 1375.57 ಶತಕೋಟಿ ಯೂನಿಟ್‌(BU)ಗಳಿಗೆ ತಲುಪಿದ್ದು, 2021-22ರಲ್ಲಿ ಸರಬರಾಜು ಮಾಡಿದ ವಿದ್ಯುತ್ ಮಟ್ಟವನ್ನು ಮೀರಿಸಿದೆ. ಏಪ್ರಿಲ್-ಫೆಬ್ರವರಿ 2021-22ರಲ್ಲಿ ವಿದ್ಯುತ್ ಬಳಕೆ ಪ್ರಮಾಣ 1245.54 BU ಎಂದು ಕೇಂದ್ರ ಸರ್ಕಾರದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2021-22ರ ಸಂಪೂರ್ಣ ಆರ್ಥಿಕ ವರ್ಷದಲ್ಲಿ, ವಿದ್ಯುತ್ ಬಳಕೆ 1374.02 BU ಆಗಿತ್ತು, ಇದು ಏಪ್ರಿಲ್ 2022ರಿಂದ ಫೆಬ್ರವರಿ 2023ರ ಅವಧಿಯಲ್ಲಿ ದಾಖಲಾದ 1375.57 BUಗಿಂತ ಕಡಿಮೆಯಾಗಿದೆ.

ವಿಶೇಷವಾಗಿ ಬೇಸಿಗೆಯಲ್ಲಿ ಅಭೂತಪೂರ್ವ ಹೆಚ್ಚಿನ ಬೇಡಿಕೆಯ ಮುನ್ಸೂಚನೆಗಳ ದೃಷ್ಟಿಯಿಂದ, ಮುಂಬರುವ ತಿಂಗಳುಗಳಲ್ಲಿ ವಿದ್ಯುತ್ ಬಳಕೆ ಎರಡಂಕಿಯಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ವಿದ್ಯುತ್ ಸಚಿವಾಲಯವು ಈ ವರ್ಷದ ಏಪ್ರಿಲ್‌ನಲ್ಲಿಮ ದೇಶದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆಯನ್ನು 229 GW ಎಂದು ಅಂದಾಜಿಸಿದೆ. ಇದು ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ ದಾಖಲಾದ 215.88 GW ಗಿಂತ ಹೆಚ್ಚಾಗಿದೆ.

ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಚಿವಾಲಯವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ವಿದ್ಯುತ್ ಕಡಿತ ಅಥವಾ ಲೋಡ್ ಶೆಡ್ಡಿಂಗ್‌ ಆಯ್ಕೆ ಮಾಡದಂತೆ ರಾಜ್ಯದ ಇಂಧನ ಸಚಿವಾಲಯಗಳಿಗೆ ಸೂಚನೆ ನೀಡಿದೆ.

ಎಲ್ಲಾ ಆಮದು ಮಾಡಿಕೊಂಡ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳನ್ನು, ಮಾರ್ಚ್ 16, 2023ರಿಂದ ಜೂನ್ 15, 2023ರವರೆಗೆ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವಂತೆ ಸಚಿವಾಲಯವು ಕೇಳಿದೆ.

ಇಷ್ಟೇ ಅಲ್ಲದೇ ದೇಶೀಯ ಒಣ ಇಂಧನದೊಂದಿಗೆ ಮಿಶ್ರಣ ಮಾಡಲು, ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಇತರ ಉಷ್ಣ ವಿದ್ಯುತ್ ಉತ್ಪಾದಕಗಳಿಗೂ ಸೂಚನೆ ನೀಡಿದೆ.

ಹೆಚ್ಚಿನ ಆರ್ಥಿಕ ಚಟುವಟಿಕೆಗಳು ಮುಂಬರುವ ತಿಂಗಳುಗಳಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಬೇಡಿಕೆಯನ್ನು ಹೆಚ್ಚಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.

ಅಲ್ಲದೇ ಬೇಸಿಗೆಯಲ್ಲಿ ಹವಾನಿಯಂತ್ರಣಗಳು ಮತ್ತು ಇತರ ಕೂಲಿಂಗ್ ಉಪಕರಣಗಳನ್ನು ಚಲಾಯಿಸಲು, ಹೆಚ್ಚಿನ ವಿದ್ಯುತ್ ಬಳಕೆಗೆ ಕಾರಣವಾಗುತ್ತದೆ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ

ಏಪ್ರಿಲ್‌ನಿಂದ ಭಾರತದಲ್ಲಿ ಅಭೂತಪೂರ್ವ ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಪೂರೈಸುವುದು ಸವಾಲಾಗಿದೆ ಎಂದು ತಜ್ಞರು ಸರ್ಕಾರಕ್ಕೆ ಮುನ್ಸೂಚನೆ ನೀಡಿದ್ದಾರೆ.

ಇಂದಿನ ಪ್ರಮುಖ ಸುದ್ದಿಗಳು

Delhi Police: ಅತ್ಯಾಚಾರ ಸಂತ್ರಸ್ತೆಯರ ಕುರಿತು ರಾಹುಲ್‌ ಹೇಳಿಕೆ: ಮಾಹಿತಿ ಪಡೆಯಲು ಮನೆಗೆ ಬಂದ ಪೊಲೀಸರು!

'ಭಾರತ್ ಜೋಡೋ ಯಾತ್ರೆ' ಸಂದರ್ಭದಲ್ಲಿ ರಾಹುಲ್ ಗಾಂಧಿಯವರ "ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ.." ಎಂಬ ಹೇಳಿಕೆಗೆ ಸಂಬಂಧಿಸಿದಂತೆ, ದೆಹಲಿ ಪೊಲೀಸ್‌ನ ಉನ್ನತ ಅಧಿಕಾರಿಗಳು ಮಾಹಿತಿ ಪಡೆಯಲು ಕಾಂಗ್ರೆಸ್‌ ನಾಯಕನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Punjab Police: 'ಬ್ರಿಂದನ್‌ವಾಲೆ 2.0' ಎಂಬ 'ಡೇಂಜರಸ್‌ ಮ್ಯಾನ್‌' ಬಂಧನಕ್ಕೆ ಪಂಜಾಬ್‌ ಪೊಲೀಸರು ಹೆಣೆದ 'ಆ್ಯಕ್ಷನ್‌ ಪ್ಲ್ಯಾನ್‌' ಏನು?

ಖಲಿಸ್ತಾನ ಬೆಂಬಲಿಗರಿಂದ 'ಬ್ರಿಂದನ್‌ವಾಲೆ 2.0' ಎಂದು ಕರೆಯಲ್ಪಡುವ 'ವಾರಿಸ್ ಪಂಜಾಬ್ ದೇ' ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್‌ ಸಿಂಗ್‌, ಭಾರತದ ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳೂ ಕಂಡುಬರುತ್ತಿವೆ. ಈ ಮಧ್ಯೆ ಪರಾರಿಯಾಗಿರುವ ಅಮೃತ್‌ಪಾಲ್‌ ಸಿಂಗ್‌ ಬಂಧನಕ್ಕೆ ಪಂಜಾಬ್‌ ಪೊಲೀಸರು ಹೆಣೆದಿರುವ ಯೋಜನೆ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು