logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೈಂಗಿಕ ಸಚಿವಾಲಯ ಸ್ಥಾಪಿಸಲು ಯತ್ನಿಸುತ್ತಿದೆ ಈ ದೇಶ; ಜನಸಂಖ್ಯೆ ಹೆಚ್ಚಿಸುವುದೇ ಇದರ ಗುರಿ, ಮಕ್ಕಳು ಮಾಡಿಕೊಂಡ್ರೆ ಸಿಗಲಿದೆ ಧನಸಹಾಯ!

ಲೈಂಗಿಕ ಸಚಿವಾಲಯ ಸ್ಥಾಪಿಸಲು ಯತ್ನಿಸುತ್ತಿದೆ ಈ ದೇಶ; ಜನಸಂಖ್ಯೆ ಹೆಚ್ಚಿಸುವುದೇ ಇದರ ಗುರಿ, ಮಕ್ಕಳು ಮಾಡಿಕೊಂಡ್ರೆ ಸಿಗಲಿದೆ ಧನಸಹಾಯ!

Prasanna Kumar P N HT Kannada

Nov 09, 2024 05:40 PM IST

google News

ಲೈಂಗಿಕ ಸಚಿವಾಲಯ ಸ್ಥಾಪಿಸಲು ಯತ್ನಿಸುತ್ತಿದೆ ಈ ದೇಶ; ಜನಸಂಖ್ಯೆ ಹೆಚ್ಚಿಸುವುದೇ ಇದರ ಗುರಿ, ಮಕ್ಕಳು ಮಾಡಿಕೊಂಡ್ರೆ ಸಿಗಲಿದೆ ಧನಸಹಾಯ!

    • Ministry of Sex in Russia: ಜನಸಂಖ್ಯೆ ಹೆಚ್ಚಿಸುವ ಗುರಿಯೊಂದಿಗೆ ರಷ್ಯಾ ಲೈಂಗಿಕ ಸಚಿವಾಲಯ ಸ್ಥಾಪನಗೆ ಚಿಂತನೆ ನಡೆಸುತ್ತಿದೆ. ಮಕ್ಕಳು ಮಾಡಿಕೊಂಡರೆ ಧನಸಹಾಯ ನೀಡುವುದಾಗಿ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ.
ಲೈಂಗಿಕ ಸಚಿವಾಲಯ ಸ್ಥಾಪಿಸಲು ಯತ್ನಿಸುತ್ತಿದೆ ಈ ದೇಶ; ಜನಸಂಖ್ಯೆ ಹೆಚ್ಚಿಸುವುದೇ ಇದರ ಗುರಿ, ಮಕ್ಕಳು ಮಾಡಿಕೊಂಡ್ರೆ ಸಿಗಲಿದೆ ಧನಸಹಾಯ!
ಲೈಂಗಿಕ ಸಚಿವಾಲಯ ಸ್ಥಾಪಿಸಲು ಯತ್ನಿಸುತ್ತಿದೆ ಈ ದೇಶ; ಜನಸಂಖ್ಯೆ ಹೆಚ್ಚಿಸುವುದೇ ಇದರ ಗುರಿ, ಮಕ್ಕಳು ಮಾಡಿಕೊಂಡ್ರೆ ಸಿಗಲಿದೆ ಧನಸಹಾಯ!

ರಷ್ಯಾ: ದೇಶದಲ್ಲಿ ಕುಸಿಯುತ್ತಿರುವ ಜನನ ಪ್ರಮಾಣವನ್ನು ನಿಭಾಯಿಸಲು ‘ಲೈಂಗಿಕ ಸಚಿವಾಲಯ’ (Ministry of Sex) ಸ್ಥಾಪಿಸಲು ರಷ್ಯಾ (Russia) ಅನ್ವೇಷಿಸುತ್ತಿದೆ ಎಂದು ವರದಿಯಾಗಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ದೀರ್ಘಕಾಲದ ನಿಷ್ಠಾವಂತ ಮತ್ತು ರಷ್ಯಾದ ಸಂಸತ್ತಿನ ಕುಟುಂಬ ರಕ್ಷಣೆ, ಪಿತೃತ್ವ, ಮಾತೃತ್ವ ಮತ್ತು ಬಾಲ್ಯದ ಸಮಿತಿಯ ಅಧ್ಯಕ್ಷೆ ನೀನಾ ಒಸ್ತಾನಿನಾ (68) ಅವರು ಪ್ರಸ್ತುತ ಪ್ರಸ್ತಾವನೆ ಪರಿಶೀಲನೆ ನಡೆಸುತ್ತಿದ್ದಾರೆ. ಉಕ್ರೇನ್ ಯುದ್ಧದಿಂದಾಗಿ ಅಪಾರ ಪ್ರಾಣಹಾನಿ ಸಂಭವಿಸಿದ್ದು, ದೇಶದ ಜನಸಂಖ್ಯೆ ವಿಪರೀತ ಕುಸಿದಿದೆ. ಇದೀಗ ಜನಸಂಖ್ಯೆ ಹೆಚ್ಚಿಸುವ ಸಲುವಾಗಿ ಪುಟಿನ್, ‘ಲೈಂಗಿಕ ಸಚಿವಾಲಯ’ ರಚಿಸಲು ಕರೆ ಕೊಟ್ಟಿದ್ದಾರೆ. ಕ್ಷೀಣಿಸುತ್ತಿರುವ ಜನಸಂಖ್ಯೆ ಹಿಮ್ಮೆಟ್ಟಿಸಲು ಅಧಿಕಾರಿಗಳು ವಿವಿಧ ತಂತ್ರಗಳನ್ನು ಪರಿಚಯಿಸಿದ ಬಳಿಕ ಈ ಉಪಕ್ರಮ ಬಂದಿದೆ.

ಪಿಆರ್​​ ಸಂಸ್ಥೆ ಗ್ಲಾವ್ ಪಿಆರ್​ ಸಲ್ಲಿಸಿದ ಮನವಿಯ ಮೂಲಕ ಈ ಕಲ್ಪನೆ ಪರಿಚಯ ಮಾಡಲಾಗಿದೆ. ಜನನ ಪ್ರಮಾಣವನ್ನು ಹೆಚ್ಚಿಸಲು ನೀತಿಗಳ ಅನುಷ್ಠಾನಕ್ಕೆ ಸಂಬಂಧಿಸಿ ಲೈಂಗಿಕ ಸಚಿವಾಲಯ ರಚಿಸಲು ರಷ್ಯಾ ಚಿಂತಿಸಿದೆ. ಈ ಪರಿಕಲ್ಪನೆಯು ರಷ್ಯಾದ ಜನಸಂಖ್ಯೆಯ ಕುಸಿತ ನಿಭಾಯಿಸಲು ಪುಟಿನ್ ಅವರ ಬೆಂಬಲಿಗರಾದ ಉಪ ಮೇಯರ್ ಅನಸ್ತಾಸಿಯಾ ರಾಕೋವಾ, ಕ್ರೆಮ್ಲಿನ್‌ ಅವರು ಸಂತಾನೋತ್ಪತ್ತಿ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಈ ಸಮಸ್ಯೆಯನ್ನು ಪುಟಿನ್ ಇತ್ತೀಚೆಗೆ ತುರ್ತು ರಾಷ್ಟ್ರೀಯ ಆದ್ಯತೆಯಾಗಿ ಗುರುತಿಸಿದ್ದಾರೆ. ಮಹಿಳೆಯ ಫಲವತ್ತತೆ ಮಟ್ಟ ಮೌಲ್ಯಮಾಪನ ಮಾಡಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ರಾಕೋವಾ ವಿವರಿಸಿದ್ದಾರೆ.

ಪ್ರಸ್ತಾವಿತ ಉಪಕ್ರಮಗಳು ಯಾವುವು?

ಇಂಟಿಮೇಟ್ ಅವರ್ಸ್' ಅನ್ನು ಪ್ರೋತ್ಸಾಹಿಸುವುದು: ದಂಪತಿಗಳ ನಡುವೆ ಅನ್ಯೋನ್ಯತೆ ಉತ್ತೇಜಿಸುವ ಉದ್ದೇಶದಿಂದ ಮತ್ತು ಆಪ್ತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವುದು. ರಾತ್ರಿ 10 ರಿಂದ ಬೆಳಗಿನ ಜಾವ 2 ಗಂಟೆಯವರೆಗೆ ದೀಪಗಳನ್ನು ಮಬ್ಬಾಗಿಸುವುದು.

ಮನೆಯಲ್ಲಿಯೇ ಇರುವ ತಾಯಂದಿರಿಗೆ ಪಾವತಿಸಿದ ಮನೆಕೆಲಸ: ಮನೆಯಲ್ಲಿರುವ ತಾಯಂದಿರಿಗೆ ಅವರ ನಿವೃತ್ತಿ ನಿಧಿಗೆ ಪಂಚಣಿ ಪಾವತಿಸಲು ಮನೆಗೆಲಸಕ್ಕಾಗಿ ಪರಿಹಾರ ನೀಡಲು ಸರ್ಕಾರ ಚಿಂತಿಸಿದೆ.

ಫಸ್ಟ್​ ಡೇಟ್​​ಗೆ ಧನಸಹಾಯ​: ಸಂಬಂಧಗಳನ್ನು ಬೆಳೆಸಲು, ಉತ್ತೇಜಿಸುವ ಸಲುವಾಗಿ 5,000 ರೂಬಲ್ಸ್ (ಸುಮಾರು 40 ಪೌಂಡ್) ವರೆಗೆ ಫಸ್ಟ್​ ಡೇಟ್​ಗೆ ಧನಸಹಾಯ ಮಾಡಲು ಸರ್ಕಾರವನ್ನು ಸೂಚಿಸಲಾಗಿದೆ.

ಮದುವೆಯ ರಾತ್ರಿ ಸಬ್ಸಿಡಿ: ಮದುವೆಯ ನಂತರ ಶೀಘ್ರದಲ್ಲೇ ಗರ್ಭಧಾರಣೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನವವಿವಾಹಿತರು ತಮ್ಮ ಮದುವೆಯ ರಾತ್ರಿಯ ಹೋಟೆಲ್ ವಾಸ್ತವ್ಯಕ್ಕೆ ಹೋಟೆಲ್ ಸೌಕರ್ಯಗಳಿಗೆ ಸಾರ್ವಜನಿಕ ನಿಧಿಯಿಂದ 26,300 ರೂಬಲ್​​ಗಳನ್ನು (208 ಪೌಂಡ್) ಪಡೆಯಬಹುದು.

ವಿವಿಧೆಡೆಯ ಉಪಕ್ರಮಗಳು: ಮಕ್ಕಳನ್ನು ಹೊಂದಲು ದಂಪತಿಗಳನ್ನು ಪ್ರೇರೇಪಿಸಲು ವಿವಿಧ ಪ್ರದೇಶಗಳು ತಮ್ಮದೇ ಆದ ಉಪಕ್ರಮಗಳನ್ನು ಜಾರಿಗೆ ತರುತ್ತಿವೆ. ಖಬರೋವ್ಸ್ಕ್​​ ನಲ್ಲಿ 18 ರಿಂದ 23 ವರ್ಷ ವಯಸ್ಸಿನ ಮಹಿಳಾ ವಿದ್ಯಾರ್ಥಿಗಳು ಮಗುವನ್ನು ಹೊಂದಲು 900 ಪೌಂಡ್ ಪಡೆಯಬಹುದು. ಚೆಲ್ಯಾಬಿನ್ಸ್ಕ್‌ನಲ್ಲಿ ಮೊದಲ ಮಗು ಹೊಂದುವವರಿಗೆ 8,500 ಪೌಂಡ್ ಪಡೆಯಬಹುದು.

ವಿರಾಮದ ಸಮಯ ಬಳಸಿ: ಪ್ರಾದೇಶಿಕ ಆರೋಗ್ಯ ಸಚಿವ ಯೆವ್ಗೆನಿ ಶೆಸ್ಟೊಪಲೋವ್ ಅವರು ಮಾತನಾಡಿದ್ದು, ರಷ್ಯನ್ನರು “ಸಂತಾನೋತ್ಪತ್ತಿ”ಗಾಗಿ ಕೆಲಸದ ಅವಧಿಯಲ್ಲಿ ಕಾಫಿ ಮತ್ತು ಊಟದ ವಿರಾಮ ಸಮಯವನ್ನು ಬಳಸಬೇಕೆಂದು ಸಲಹೆ ನೀಡಿದ್ದಾರೆ.

ಏತನ್ಮಧ್ಯೆ, ಮಾಸ್ಕೋದಲ್ಲಿ, ಹೆಚ್ಚಿನ ಜನನ ಪ್ರಮಾಣವನ್ನು ಉತ್ತೇಜಿಸಲು ಅಧಿಕಾರಿಗಳು ಮಹಿಳೆಯರ ವೈಯಕ್ತಿಕ ಜೀವನದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮಹಿಳಾ ಸಾರ್ವಜನಿಕ ವಲಯದ ಕಾರ್ಮಿಕರು ತಮ್ಮ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ವಿವರವಾದ ಪ್ರಶ್ನಾವಳಿಗಳನ್ನು ಸ್ವೀಕರಿಸಿದ್ದಾರೆ. ಇದು ರಷ್ಯಾದಾದ್ಯಂತ ವ್ಯಾಪಕ ದತ್ತಾಂಶ ಸಂಗ್ರಹಣೆಯ ಯೋಜನೆಯ ಸುಳಿವು ನೀಡಿದೆ. ಪ್ರತಿಕ್ರಿಯಿಸದವರು ವೈದ್ಯರ ಭೇಟಿಗಳಿಗೆ ಹಾಜರಾಗಬೇಕು, ಅಲ್ಲಿ ಅದೇ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರಶ್ನಾವಳಿಯು ಆಳವಾದ ವೈಯಕ್ತಿಕ ಪ್ರಶ್ನೆಗಳನ್ನು ಒಳಗೊಂಡಿದೆ, ಅವುಗಳೆಂದರೆ,,

  • ನೀವು ಯಾವಾಗ ಲೈಂಗಿಕ ಚಟುವಟಿಕೆಯನ್ನು ಪ್ರಾರಂಭಿಸಿದ್ದೀರಿ?
  • ನೀವು ಕಾಂಡೋಮ್ ಅಥವಾ ಹಾರ್ಮೋನುಗಳ ಜನನ ನಿಯಂತ್ರಣ ಬಳಸುತ್ತೀರಾ?
  • ಸಂಭೋಗದ ಸಮಯದಲ್ಲಿ ನೀವು ನೋವು ಅಥವಾ ರಕ್ತಸ್ರಾವ ಅನುಭವಿಸುತ್ತೀರಾ?
  • ನೀವು ಬಂಜೆತನವನ್ನು ಅನುಭವಿಸಿದ್ದೀರಾ ಅಥವಾ ಗರ್ಭಧಾರಣೆ ಮಾಡಿದ್ದೀರಾ?
  • ನಿಮಗೆ ಮಕ್ಕಳಿದ್ದಾರೆಯೇ ಅಥವಾ ಮುಂದಿನ ವರ್ಷದೊಳಗೆ ಮತ್ತೆ ಮಕ್ಕಳನ್ನು ಹೊಂದಲು ಯೋಜಿಸುತ್ತಿದ್ದೀರಾ?

ಸರ್ಕಾರಿ ಸ್ವಾಮ್ಯದ ಸಾಂಸ್ಕೃತಿಕ ಸಂಸ್ಥೆಗಳಲ್ಲಿನ ನೌಕರರು ತಮ್ಮ ಮಾನವ ಸಂಪನ್ಮೂಲ ಇಲಾಖೆಗಳಿಗೆ ಈ ವಿವರಗಳನ್ನು ಒದಗಿಸುವಂತೆ ಕೇಳಿದಾಗ ನಿರಾಶೆಗೊಂಡಿದ್ದಾರೆ ಎಂದು ವರದಿಯಾಗಿದೆ. ಕೆಲವು ಕಾರ್ಮಿಕರು ಖಾಲಿ ಪ್ರಶ್ನಾವಳಿಗಳನ್ನು ಸಲ್ಲಿಸಿದ್ದಾರೆ. ಆದರೆ ನಂತರ ಅವರ ಹೆಸರುಗಳನ್ನು ನೀಡುವಂತೆ ಸೂಚನೆ ನೀಡಲಾಯಿತು. ಈ ಪ್ರಶ್ನೆಗಳಿಗೆ ವೈಯಕ್ತಿಕವಾಗಿ ಉತ್ತರಿಸಲು ಅವರು ರಾಜ್ಯ ವೈದ್ಯರೊಂದಿಗೆ ಸಂದರ್ಶನಗಳಿಗೆ ಹಾಜರಾಗಬೇಕಾಗಿತ್ತು. ಪ್ರತ್ಯೇಕವಾಗಿ, ಮಾಸ್ಕೋದಲ್ಲಿ ಉಚಿತ ಫಲವತ್ತತೆ ಪರೀಕ್ಷಾ ಕಾರ್ಯಕ್ರಮವನ್ನು ಇಲ್ಲಿಯವರೆಗೆ 20,000 ಮಹಿಳೆಯರು ಕೈಗೆತ್ತಿಕೊಂಡಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ