logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sbi Po Final Result 2023: ಎಸ್‌ಬಿಐ ಪ್ರೊಬೆಷನರಿ ಆಫೀಸರ್‌ ನೇಮಕಾತಿ, ಅಂತಿಮ ಫಲಿತಾಂಶ ಪ್ರಕಟ, ರಿಸಲ್ಟ್‌ ಇಲ್ಲಿ ನೋಡಿ

SBI PO Final result 2023: ಎಸ್‌ಬಿಐ ಪ್ರೊಬೆಷನರಿ ಆಫೀಸರ್‌ ನೇಮಕಾತಿ, ಅಂತಿಮ ಫಲಿತಾಂಶ ಪ್ರಕಟ, ರಿಸಲ್ಟ್‌ ಇಲ್ಲಿ ನೋಡಿ

Praveen Chandra B HT Kannada

Apr 18, 2023 09:52 PM IST

SBI PO Final result 2023: ಎಸ್‌ಬಿಐ ಪ್ರೊಬೆಷನರಿ ಆಫೀಸರ್‌ ನೇಮಕಾತಿ, ಅಂತಿಮ ಫಲಿತಾಂಶ ಪ್ರಕಟ, ರಿಸಲ್ಟ್‌ ಇಲ್ಲಿ ನೋಡಿ

    • SBI PO Final result 2023 released on the official website at sbi.co.in.ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನಡೆಸಿದ (State Bank of India ) ಪ್ರೊಬೆಷನರಿ ಆಫೀಸರ್‌ (SBI Probationary Officers) ಪರೀಕ್ಷೆಯ  ಅಂತಿಮ ಫಲಿತಾಂಶ www.sbi.co.in ಪ್ರಕಟಗೊಂಡಿದೆ. 
SBI PO Final result 2023: ಎಸ್‌ಬಿಐ ಪ್ರೊಬೆಷನರಿ ಆಫೀಸರ್‌ ನೇಮಕಾತಿ, ಅಂತಿಮ ಫಲಿತಾಂಶ ಪ್ರಕಟ, ರಿಸಲ್ಟ್‌ ಇಲ್ಲಿ ನೋಡಿ
SBI PO Final result 2023: ಎಸ್‌ಬಿಐ ಪ್ರೊಬೆಷನರಿ ಆಫೀಸರ್‌ ನೇಮಕಾತಿ, ಅಂತಿಮ ಫಲಿತಾಂಶ ಪ್ರಕಟ, ರಿಸಲ್ಟ್‌ ಇಲ್ಲಿ ನೋಡಿ (HT File)

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ (State Bank of India ) ಪ್ರೊಬೆಷನರಿ ಆಫೀಸರ್‌ (SBI Probationary Officers) ಆಗಿ ವೃತ್ತಿಜೀವನ ನಡೆಸಲು ಬಯಸಿದವರ ಕನಸು ನನಸಾಗುವ ಸಮಯ ಬಂದಿದೆ. ಎಸ್‌ಬಿಐ ಪಿಒ ಪರೀಕ್ಷೆಯ ಅಂತಿಮ ಫಲಿತಾಂಶವು www.sbi.co.in ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ. ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿರುವವರು ಫಲಿತಾಂಶ ವೀಕ್ಷಿಸಬಹುದು.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಎಸ್‌ಬಿಐ ಪಿಒ ಮುಖ್ಯಪರೀಕ್ಷೆಯ ಫಲಿತಾಂಶವು ಮಾರ್ಚ್‌ 10ರಂದು ಪ್ರಕಟವಾಗಿತ್ತು. ಏಪ್ರಿಲ್‌ ತಿಂಗಳಿನಲ್ಲಿ ಗುಂಪು ಚರ್ಚೆ ಮತ್ತು ಸಂದರ್ಶನ ಪ್ರಕ್ರಿಯೆಗಳು ಮುಗಿದಿದ್ದವು. ಮುಖ್ಯ ಪರೀಕ್ಷೆಯು ಜನವರಿ 30, 2023ರಂದು ನಡೆದಿತ್ತು. 1673 ಪ್ರೊಬೆಷನರಿ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಈ ನೇಮಕಾತಿ ಡ್ರೈವ್‌ ನಡೆದಿತ್ತು.

ಫಲಿತಾಂಶ ನೋಡುವುದು ಹೇಗೆ?

ಮೊದಲನೆಯದಾಗಿ ಎಸ್‌ಬಿಐ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ವೆಬ್‌ಸೈಟ್‌ ಲಿಂಕ್‌: sbi.co.in.

ವೆಬ್‌ಸೈಟ್‌ನ ಮುಖಪುಟದಲ್ಲಿ ಕರಿಯರ್‌ ಟ್ಯಾಬ್‌ ಕ್ಲಿಕ್‌ ಮಾಡಿ.

ಅಂತಿಮ ಫಲಿತಾಂಶ ಲಿಂಕ್‌ ಕ್ಲಿಕ್‌ ಮಾಡಿ.

ಪರದೆಯಲ್ಲಿ ಪಿಡಿಎಫ್‌ ಕಾಣಿಸಿಕೊಳ್ಳುತ್ತದೆ.

ಆ ಪುಟವನ್ನು ಡೌನ್‌ಲೋಡ್‌ ಮಾಡಿಕೊಳ್ಳಿ

 

ಫಲಿತಾಂಶದ ಪಿಡಿಎಫ್‌ ಈ ಕೆಳಗೆ ನೀಡಲಾಗಿದ್ದು, ಇಲ್ಲೂ ಫಲಿತಾಂಶವನ್ನು ಪರೀಕ್ಷಿಸಿಕೊಳ್ಳಬಹುದು.

ಎಸ್‌ಬಿಐ ಪಿಒ ವೇತನ ಎಷ್ಟು?

ಮೂಲ ವೇತನ 41, 960 ರೂಪಾಯಿ

ಎಸ್‌ಬಿಐ ಪಿಒ ಪರೀಕ್ಷೆಯನ್ನು ಮುಂದಿನ ದಿನಗಳಲ್ಲಿ ಬರೆಯಲು ಬಯಸುವವರಿಗೆ ಅಮೂಲ್ಯ ಮಾಹಿತಿ ಇಲ್ಲಿದೆ. ಎಸ್‌ಬಿಐ ಪಿಒ ಪರೀಕ್ಷೆ ಬರೆಯಲು ಬಯಸುವವರು ಪದವಿ ವಿದ್ಯಾರ್ಹತೆ ಹೊಂದಿರಬೇಕು. ಅಂದರೆ, ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆಯನ್ನು ಅರ್ಜಿ ಸಲ್ಲಿಸುವವರು ಹೊಂದಿರಬೇಕು. ಅಭ್ಯರ್ಥಿಯ ವಯಸ್ಸಿನ ಮಿತಿ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಯ ವಯೋಮಿತಿ 21 ರಿಂದ 30 ವರ್ಷಗಳ ನಡುವೆ ಇರಬೇಕು.

ವಿಶ್ವ ಭಾರತಿಯಲ್ಲಿ ಉದ್ಯೋಗಾವಕಾಶ, 709 ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತದ ಯಾವುದೇ ಮೂಲೆಯಲ್ಲಿ ಕೆಲಸ ಮಾಡಲು ಸಿದ್ಧರೆನ್ನುವ ಅಭ್ಯರ್ಥಿಗಳಿಗೆ ಸೂಕ್ತವಾದ ಉದ್ಯೋಗಾವಕಾಶ ಇಲ್ಲಿದೆ. ವಿಶ್ವ ಭಾರತಿ ಯೂನಿವರ್ಸಿಟಿಯು ಪಶ್ಚಿಮ ಬಂಗಾಳದ ಸಂಘನಿಕೇತನದಲ್ಲಿದೆ. ಇದು ರವೀಂದ್ರನಾಥ ಠಾಗೂರ್‌ (Rabindranath Tagore ) ಅವರು ಸ್ಥಾಪಿಸಿದ ವಿಶ್ವವ ವಿದ್ಯಾಲಯ. ವಿಶ್ವ ಭಾರತಿ ವಿಶ್ವವಿದ್ಯಾಲಯವು (Visva-Bharati University) ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಿದೆ. ಆಸಕ್ತ ಅಭ್ಯರ್ಥಿಗಳು vbharatirec.nta.ac.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಕುರಿತು ಪೂರ್ಣ ವಿವರ ಇಲ್ಲಿದೆ.

ಸಿಬ್ಬಂದಿ ನೇಮಕಾತಿ ಆಯೋಗದಿಂದ ಎಸ್‌ಎಸ್‌ಸಿ ಸಿಜಿಎಲ್‌ ಅಧಿಸೂಚನೆ ಪ್ರಕಟ, ಸುಮಾರು 7,500 ಹುದ್ದೆಗಳ ನೇಮಕ, ಅರ್ಜಿ ಸಲ್ಲಿಸಿ

ಸಿಬ್ಬಂದಿ ನೇಮಕಾತಿ ಆಯೋಗವು ಎಸ್‌ಎಸ್‌ಸಿ ಸಿಜಿಎಲ್‌ ಎಕ್ಸಾಂ 2023 ಅಧಿಸೂಚನೆ (SSC CGL Exam 2023 notification) ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಇಂದಿನಿಂದ ಅರ್ಜಿ ಸಲ್ಲಿಸಬಹುದು. ssc.nic.in ಅರ್ಜಿ ಸಲ್ಲಿಸಲು ಮೇ 4 ಕೊನೆಯ ದಿನಾಂಕವಾಗಿದೆ.  ಈ ಕುರಿತು ಕಂಪ್ಲಿಟ್‌ ಡಿಟೈಲ್ಸ್‌ ಇಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ