Phone battery life: ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಬಾಳ್ವಿಕೆ ಹೆಚ್ಚಿಸಬೇಕೆ? ಈ 15 ಅಮೂಲ್ಯ ಸಲಹೆಗಳನ್ನು ಪಾಲಿಸಿ
Jun 02, 2023 07:00 AM IST
Phone battery life: ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಬಾಳ್ವಿಕೆ ಹೆಚ್ಚಿಸಬೇಕೆ? ಈ 15 ಅಮೂಲ್ಯ ಸಲಹೆಗಳನ್ನು ಪಾಲಿಸಿ
- Smartphone Battery Life Improve: ಗೂಗಲ್ ಆಂಡ್ರಾಯ್ಡ್ ಸಾಧನಗಳಲ್ಲಿ, ವಿಶೇಷವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಬಾಳ್ವಿಕೆ ಉತ್ತಮಪಡಿಸಲು ಹದಿನೈದು ಅಮೂಲ್ಯ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
Phone battery life: ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಬಾಳ್ವಿಕೆ ಹೆಚ್ಚಿಸಬೇಕೆ? ಈ 15 ಅಮೂಲ್ಯ ಸಲಹೆಗಳನ್ನು ಪಾಲಿಸಿ
ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿ ಹೆಚ್ಚು ಸಮಯ ಬರೋಲ್ಲ, ಬೇಗ ಖಾಲಿಯಾಗುತ್ತದೆ ಎನ್ನುವುದು ಎಲ್ಲರ ದೂರು. ಫೋನ್ ಹೊಸದಾಗಿರುವಾಗ ಒಂದಿಷ್ಟು ಸಮಯ ಬ್ಯಾಟರಿ ಬಾಳ್ವಿಕೆ ಉತ್ತಮವಾಗಿರಬಹುದು. ಹಳೆಯದಾದಂತೆ ಬ್ಯಾಟರಿ ಬೇಗನೇ ಖಾಲಿಯಾಗುವುದು ಸಾಮಾನ್ಯ. ಪ್ರಯಾಣದ ಸಮಯದಲ್ಲಿ ಇದರಿಂದ ಹೆಚ್ಚು ತೊಂದರೆಯಾಗುತ್ತದೆ. ಇದಕ್ಕಾಗಿ ಪವರ್ ಬ್ಯಾಂಕ್ ಜತೆಗೆ ಕೊಂಡೊಯ್ಯಬೇಕಾದ ಅನಿವಾರ್ಯತೆ ಇರುತ್ತದೆ. ಪ್ರತಿನಿತ್ಯ ಹೆಚ್ಚು ಸಮಯ ಫೋನ್‌ನಲ್ಲಿ ಮಾತನಾಡುವವರಂತೂ ಸದಾ ಪ್ಲಗ್ ಪಕ್ಕನೇ ಕುಳಿತುಕೊಳ್ಳಬೇಕಾಗುತ್ತದೆ.
ಕೆಲವೊಂದು ಕ್ರಮಗಳ ಮೂಲಕ ಮೊಬೈಲ್‌ನಲ್ಲಿ ಬ್ಯಾಟರಿ ಬೇಗ ಖಾಲಿಯಾಗದಂತೆ ನೋಡಿಕೊಳ್ಳಬಹುದು. ಅಂತಹ ಕೆಲವು ಅಮೂಲ್ಯ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
- ಮೊದಲನೆಯದಾಗಿ ನಿಮ್ಮ ಮೊಬೈಲ್ ಫೋನ್‌ನ ಸ್ಕ್ರೀನ್ ಬೇಗ ಟರ್ನ್ ಆಫ್ ಆಗುವಂತೆ ಸೆಟಪ್ ಮಾಡಿ. ಈ ಸೆಟಪ್ ಅನ್ನು ಸೆಟ್ಟಿಂಗ್‌ನಲ್ಲಿ ಮಾಡಬಹುದು. ನಾವು ಫೋನ್ ಬಳಸಿ ಇಟ್ಟ ಬಳಿಕ ಹೆಚ್ಚು ಹೊತ್ತು ಫೋನ್ ಆನ್ ಇದ್ದರೆ ಹೆಚ್ಚು ಬ್ಯಾಟರಿ ಖಾಲಿಯಾಗುತ್ತದೆ.
- ಸ್ಕ್ರೀನ್ ಬ್ರೈಟ್‌ನೆಸ್ ಕಡಿಮೆ ಮಾಡುವ ಮೂಲಕವೂ ಬ್ಯಾಟರಿ ಉಳಿತಾಯ ಮಾಡಬಹುದು. ಹೆಚ್ಚು ಪ್ರಕಾಶಮಾನವಾದಂತೆ ಬ್ಯಾಟರಿ ಚಾರ್ಜ್ ಬೇಗ ಖಾಲಿಯಾಗುತ್ತದೆ. ಪರಿಸರದ ಸ್ಥಿತಿಗೆ ತಕ್ಕಂತೆ ಬ್ರೈಟ್‌ನೆಸ್ ಸ್ವಯಂಚಾಲಿತವಾಗಿ ಬದಲಾಗುವ ಸೆಟ್ಟಿಂಗ್ ಆನ್ ಮಾಡಿಡಿ.
- ಕೀಬೋರ್ಡ್ ಸೌಂಡ್ ಅಥವಾ ವೈಬ್ರೆಷನ್ ಅನ್ನು ಆಫ್ ಮಾಡಿ. ಇವು ಹೆಚ್ಚು ಬ್ಯಾಟರಿ ಬಳಸುತ್ತವೆ.
- ಅತ್ಯಧಿಕ ಬ್ಯಾಟರಿ ಬಳಸುವ ಆಪ್‌ಗಳಿಗೆ ಮಿತಿ ಹಾಕಿ. ಸೆಟ್ಟಿಂಗ್‌ಗೆ ಹೋಗಿ ಆಪ್‌ಗಳಲ್ಲಿ ಇಂತಹ ರಿಸ್ಟ್ರಿಕ್ಷನ್ ಹಾಕಬಹುದು.
- ಬಳಕೆ ಮಾಡದೆ ಇರುವ ಅಕೌಂಟ್‌ಗಳನ್ನು, ಆಪ್‌ಗಳನ್ನು ಡಿಲಿಟ್ ಮಾಡಿ.
- ಡಾರ್ಕ್ ಥೀಮ್ ಆನ್ ಮಾಡುವ ಮೂಲಕವೂ ಬ್ಯಾಟರಿ ಬಾಳ್ವಿಕೆ ಹೆಚ್ಚಿಸಬಹುದು.
- ಸಿಕ್ಕ ಸಿಕ್ಕ ಚಾರ್ಜಿಂಗ್ ಪಿನ್‌ಗಳನ್ನು ಬಳಸಬೇಡಿ. ಹೊಸ ಫೋನ್ ಜತೆಗೆ ಬಂದಿರುವ ಪವರ್ ಅಡಾಪ್ಟರ್ ಅನ್ನೇ ಬಳಸಿ. ಸ್ಪೀಡಾಗಿ ಚಾರ್ಜ್ ಆಗಬೇಕು ಎಂದು ಬೇರೆ ಚಾರ್ಜರ್ ಬಳಸಿದರೆ ನಿಮ್ಮ ಮೊಬೈಲ್ ಫೋನ್ ಬೇಗ ಹಾಳಾಗುತ್ತದೆ.
- ಮೊಬೈಲ್ ಹೆಚ್ಚು ಬಿಸಿಯಾಗಲು ಬಿಡಬೇಡಿ. ಚಾರ್ಜ್ ಪೂರ್ತಿಯಾದಗ ಅನ್‌ಪ್ಲಗ್ ಮಾಡಿ. ನಿಮ್ಮ ಫೋನ್ ಹೆಚ್ಚು ಬಿಸಿಯಾದಗ ಬ್ಯಾಟರಿ ಬೇಗ ಖಾಲಿಯಾಗುತ್ತದೆ.
- ಬ್ಯಾಟರಿ ಶೇಕಡ 10ರವರೆಗೆ ಬಂದ ಬಳಿಕ ಪೂರ್ತಿ ಚಾರ್ಜ್‌ಗೆ ಇಡಿ. ದಿನದಲ್ಲಿ ಹತ್ತು ಹಲವು ಬಾರಿ ಚಾರ್ಜಿಂಗ್ ಮಾಡುವ ಅಭ್ಯಾಸ ಬೇಡ.
- ಬ್ಯಾಟರಿ ಕಡಿಮೆಯಾಗುತ್ತಿದ್ದಂತೆ ಬ್ಯಾಟರಿ ಸೇವರ್ ಆಯ್ಕೆಯನ್ನು ಕ್ಲಿಕ್ ಮಾಡಿ. ಈಗ ಬಹುತೇಕ ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ಫೀಚರ್ ಇದೆ.
- ಬಳಸದೆ ಇರುವಾಗ ನ್ಯಾವಿಗೇಷನ್ ಇತ್ಯಾದಿಗಳನ್ನು ಆನ್ ಮಾಡಬೇಡಿ. ಹೆವಿ ಗ್ರಾಫಿಕ್ಸ್ ಇರುವ ಗೇಮ್‌ಗಳನ್ನು ಆಡಬೇಡಿ.
- ಕಡಿಮೆ ನೆಟ್‌ವರ್ಕ್ ಇದ್ದಾಗಲೂ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಬ್ಯಾಟರಿ ಕಡಿಮೆ ಇದ್ದಾಗ ನಿಮ್ಮ ಫೋನ್‌ನ ಹಾಟ್‌ಸ್ಪಾಟ್ ಆನ್ ಮಾಡಬೇಡಿ. ಜಿಪಿಎಸ್ ಬಳಸಬೇಡಿ. ಮ್ಯೂಸಿಕ್ ಅಥವಾ ವಿಡಿಯೋ ಸ್ಟ್ರೀಮ್ ಮಾಡಬೇಡಿ.
- ನಿಮ್ಮ ಆಪ್‌ಗಳು ಅಪ್‌ಡೇಟ್ ಆಗಿರಲಿ. ಮೊಬೈಲ್ ಸಾಫ್ಟ್‌ವೇರ್ ಅಪ್‌ಡೇಟ್ ಆಗಿರಲಿ.
- ಮೊಬೈಲ್ ಖರೀದಿ ಸಮಯದಲ್ಲಿಯೇ ಉತ್ತಮ ಬ್ಯಾಟರಿ ಲೈಫ್ ಇರುವಂತಹ ಫೋನ್ ಖರೀದಿಗೆ ಆದ್ಯತೆ ನೀಡಿ.
- ಈಗ ಬಹುತೇಕರು ಮೊಬೈಲ್‌ನಲ್ಲಿಯೇ ಬಹುತೇಕ ಸಮಯ ಹಾಳು ಮಾಡುತ್ತಾರೆ. ಈ ರೀತಿ ಮಾಡುವುದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಬ್ಯಾಟರಿ ಬಳಕೆಯೂ ಹೆಚ್ಚುತ್ತದೆ. ಅವಶ್ಯವಿರುವಷ್ಟು ಹೊತ್ತು ಮಾತ್ರ ಸ್ಮಾರ್ಟ್‌ಫೋನ್ ಬಳಸುವ ಅಭ್ಯಾಸ ಬೆಳೆಸಿಕೊಳ್ಳುವ ಮೂಲಕವೂ ಬ್ಯಾಟರಿ ಬಾಳ್ವಿಕೆ ಉತ್ತಮಪಡಿಸಬಹುದು.
ಇದನ್ನೂ ಓದಿದ್ದೀರಾ?: Youtube Channel: ಸ್ವಂತ ಯೂಟ್ಯೂಬ್ ಚಾನೆಲ್ ರಚಿಸುವುದು ಹೇಗೆ? ಆರಂಭಿಕರಿಗೆ ಕನ್ನಡ ಮಾರ್ಗದರ್ಶಿ
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.