logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಐಟೆಲ್‌ ಬಡ್ಸ್ ಏಸ್ ಎಎನ್‌ಸಿ, ಬಡ್ಸ್ ಏಸ್ 2 ಮತ್ತು ರೋರ್ 54 ಪ್ರೊ ಬಿಡುಗಡೆ; ಫೀಚರ್‌ ಏನೇನಿದೆ? ದರ ಎಷ್ಟು ತಿಳಿಯಿರಿ

ಐಟೆಲ್‌ ಬಡ್ಸ್ ಏಸ್ ಎಎನ್‌ಸಿ, ಬಡ್ಸ್ ಏಸ್ 2 ಮತ್ತು ರೋರ್ 54 ಪ್ರೊ ಬಿಡುಗಡೆ; ಫೀಚರ್‌ ಏನೇನಿದೆ? ದರ ಎಷ್ಟು ತಿಳಿಯಿರಿ

Praveen Chandra B HT Kannada

Dec 02, 2024 03:59 PM IST

google News

ಐಟೆಲ್‌ ಬಡ್ಸ್ ಏಸ್ ಎಎನ್‌ಸಿ, ಬಡ್ಸ್ ಏಸ್ 2 ಮತ್ತು ರೋರ್ 54 ಪ್ರೊ ಬಿಡುಗಡೆ

    • ಐಟೆಲ್‌ ಕಂಪನಿಯು ಹೊಸ ಆಡಿಯೋ ಗ್ಯಾಜೆಟ್‌ಗಳನ್ನು ಬಿಡುಗಡೆ ಮಾಡಿದ್ದು, ಆರಂಭಿಕ ಆಫರ್‌ ಆಗಿ ಗ್ರಾಹಕರಿಗೆ ಶೇಕಡ 70ರಷ್ಟು ರಿಯಾಯಿತಿ ದರ ಘೋಷಿಸಿದೆ. ಬಡ್ಸ್ ಏಸ್ 2, ಬಡ್ಸ್ ಏಸ್ ಎಎನ್‌ಸಿ ಮತ್ತು ರೋರ್ 54 ಪ್ರೊ ಬಿಡುಗಡೆಯಾಗಿದ್ದು, ಇದರಲ್ಲಿ ಏನೆಲ್ಲ ವಿಶೇಷ ಇದೆ ನೋಡೋಣ.
ಐಟೆಲ್‌ ಬಡ್ಸ್ ಏಸ್ ಎಎನ್‌ಸಿ, ಬಡ್ಸ್ ಏಸ್ 2 ಮತ್ತು ರೋರ್ 54 ಪ್ರೊ ಬಿಡುಗಡೆ
ಐಟೆಲ್‌ ಬಡ್ಸ್ ಏಸ್ ಎಎನ್‌ಸಿ, ಬಡ್ಸ್ ಏಸ್ 2 ಮತ್ತು ರೋರ್ 54 ಪ್ರೊ ಬಿಡುಗಡೆ

ಐಟೆಲ್ ಕಂಪನಿಯು ಆಡಿಯೊ ಗ್ಯಾಜೆಟ್‌ಗಳಾದ ಬಡ್ಸ್ ಏಸ್ 2, ಬಡ್ಸ್ ಏಸ್ ಎಎನ್‌ಸಿ ಮತ್ತು ರೋರ್ 54 ಪ್ರೊ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅತ್ಯುತ್ತಮ ಧ್ವನಿ ಗುಣಮಟ್ಟ ಮತ್ತು ಅತ್ಯಾಧುನಿಕ ಫೀಚರ್‌ಗಳು ಸಿಗುವಂತೆ ವಿನ್ಯಾಸಗೊಳಿಸಲಾದ ಈ ಮುಂದಿನ ತಲೆಮಾರಿನ ಗ್ಯಾಜೆಟ್‌ಗಳು ಈಗ ಆನ್‌ಲೈನ್ ಮತ್ತು ಆಫ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಈ ಪ್ರೀಮಿಯಂ ಆಡಿಯೊ ಸಾಧನಗಳ ಮೇಲೆ ಶೇಕಡ 70 ರಿಯಾಯಿತಿ ಪ್ರಕಟಿಸಲಾಗಿದೆ. ಬಡ್ಸ್ ಏಸ್ ಎಎನ್‌ಸಿ ಕೇವಲ 1499 ರೂ.ಗಳಿಗೆ, ಬಡ್ಸ್ ಏಸ್ 2 ಕೇವಲ 1199 ರೂ.ಗೆ ಮತ್ತು ರೋರ್ 54 ಪ್ರೊ ಕೇವಲ 799 ರೂ.ಗೆ ಲಭ್ಯವಿದೆ.

ಬಡ್ಸ್ ಏಸ್ ಎಎನ್‌ಸಿ

ಐಟೆಲ್ ಬಡ್ಸ್ ಏಸ್ ಎಎನ್‌ಸಿ ಪ್ರೀಮಿಯಂ ಟ್ರೂ ವೈರ್‌ಲೆಸ್‌ ಸ್ಟೀರಿಯೊ (TWS) ಆಗಿದ್ದು, ಶೋಆಫ್‌ ಅಥವಾ ಪ್ರದರ್ಶನವನ್ನು ಇಷ್ಟಪಡುವವರಿಗೆ ಅತ್ಯುತ್ತಮ ಅಕ್ಸೆಸರಿಯಾಗಿದೆ. ಫ್ಲಿಪ್ ಕಾರ್ಟ್‌ನಲ್ಲಿ ಕೇವಲ 1499 ರೂಪಾಯಿಗಳ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಈ ಟ್ರೂ ವೈರ್ ಲೆಸ್ ಇಯರ್ ಬಡ್‌ಗಳು ಹಲವಾರು ಫೀಚರ್‌ಗಳೊಂದಿಗೆ ಈ ವಿಭಾಗದಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ಡ್ಯುಯಲ್ ಮೈಕ್ ಎಐ- ಇಎನ್‌ಸಿ, 25 ಡೆಸಿಬಲ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಷನ್‌ ಮತ್ತು ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದರಲ್ಲಿದೆ. ಇದು ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 180 ನಿಮಿಷಗಳ ಪ್ಲೇಬ್ಯಾಕ್ ನೀಡುತ್ತದೆ ಮತ್ತು ನಿಖರ ಮತ್ತು ಸ್ಪಷ್ಟ ಆಡಿಯೊ ಗುಣಮಟ್ಟ ಒದಗಿಸುತ್ತದೆ. ಹೀಗಾಗಿ ಅತ್ಯುತ್ತಮ ಕೇಳುವಿಕೆ ಅನುಭವ ಖಚಿತ. 50 ಗಂಟೆಗಳ ಪ್ಲೇ ಟೈಮ್‌, ಐಪಿಎಕ್ಸ್ 5 ವಾಟರ್ ರೆಸಿಸ್ಟೆನ್ಸ್ ಮತ್ತು ಟಚ್ ಕಂಟ್ರೋಲ್‌ ವ್ಯವಸ್ಥೆ ಈ ಸಾಧನದ ವಿಶೇಷ. . ಡ್ಯುಯಲ್-ಟೋನ್ ವಿನ್ಯಾಸ ಹೊಂದಿರುವ ಈ ಇಯರ್ ಬಡ್‌ಗಳು ನಿರಂತರ ಮನರಂಜನೆಗೆ ಉತ್ತಮ ಆಯ್ಕೆ.

ಬಡ್ಸ್ ಏಸ್ 2

ಕೈಗೆಟುಕುವ ಬೆಲೆಯಲ್ಲಿ ಪ್ರೀಮಿಯಂ ಇಯರ್ ಬಡ್‌ಗಳನ್ನು ಹುಡುಕುತ್ತಿದ್ದರೆ, ಐಟೆಲ್ ಬಡ್ಸ್ ಏಸ್2 ಸೂಕ್ತ ಆಯ್ಕೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಎರಡರಲ್ಲೂ ಕೇವಲ 1199 ರೂ.ಗೆ ಲಭ್ಯವಿರುವ ಈ ಟ್ರೂ ವೈರ್‌ಲೆಸ್‌ ಇಯಯ್‌ಬಡ್‌ಗಳು ಆಕರ್ಷಕ ಫೀಚರ್‌ಗಳಿಂದ ತುಂಬಿವೆ. ಸ್ಪಷ್ಟ ಫೋನ್‌ ಕರೆಗಳಿಗಾಗಿ ಕ್ವಾಡ್ ಮೈಕ್ ಇಎನ್‌ಸಿ, ಆಕರ್ಷಕ 50 ಗಂಟೆಗಳ ಬ್ಯಾಟರಿ ಬಾಳಿಕೆ ಮತ್ತು ಫಾಸ್ಟ್ ಚಾರ್ಜಿಂಗ್‌ ಬೆಂಬಲ ಹೊಂದಿದೆ. ಇದು ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 120 ನಿಮಿಷಗಳ ಪ್ಲೇಬ್ಯಾಕ್ ನೀಡುತ್ತದೆ. ಬಡ್ಸ್ ಏಸ್ 2 ಅನ್ನು ತಡೆರಹಿತ ಮನರಂಜನೆಗಾಗಿ ವಿನ್ಯಾಸಗೊಳಿಸಲಾಗಿದೆ. ಇಯರ್ ಬಡ್‌ಗಳು ಸುಲಭ ಸಂಪರ್ಕಕ್ಕಾಗಿ ಬ್ಲೂಟೂತ್ 5.3 ಮತ್ತು 45 ಎಂಎಸ್‌ನ (MS) ಲೊ ಲೇಟೆನ್ಸಿ ಗೇಮಿಂಗ್ ಮೋಡ್ ಸಹ ಹೊಂದಿದೆ. ಇದು ಗೇಮಿಂಗ್ ಅನುಭವವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

ರೋರ್ 54 ಪ್ರೊ

ವೇಗದ ಜೀವನಶೈಲಿಗೆ ಪೂರಕವಾದ ಗ್ಯಾಜೆಟ್ ಅನ್ನು ನೀವು ಹುಡುಕುತ್ತಿದ್ದರೆ, ಐಟೆಲ್ ರೋರ್ 54 ಪ್ರೊ ನೆಕ್ ಬ್ಯಾಂಡ್ ಅತ್ಯುತ್ತಮ ಆಯ್ಕೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಎರಡರಲ್ಲೂ ಕೇವಲ 799 ರೂ.ಗಳ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಇದು 35 ಗಂಟೆಗಳ ಪ್ಲೇಬ್ಯಾಕ್ ಮತ್ತು 10 ಮಿಲಿ ಮೀಟರ್‌ ಬಾಸ್ ಬೂಸ್ಟ್ ಡೈವ್‌ ಹೊಂದಿದೆ. ಡೀಪ್‌ ಸೌಂಡ್‌ ಕಾರ್ಯಕ್ಷಮತೆಯನ್ನೂ ಹೊಂದಿದೆ. ವೇಗದ ಚಾರ್ಜಿಂಗ್ ಸಾಮರ್ಥ್ಯ ಹೊಂದಿರುವ, ಕೇವಲ 10 ನಿಮಿಷಗಳ ಚಾರ್ಜಿಂಗ್ 5 ಗಂಟೆಗಳ ಪ್ಲೇಬ್ಯಾಕ್ ನೀಡುತ್ತದೆ. ಅಡ್ಡಾಡುವ ನಡುವೆಯೂ ಸ್ಮಾರ್ಟ್‌ಫೋನ್‌ ಜತೆ ಸಂಪರ್ಕದಲ್ಲಿರಲು ಬಯಸುವವರಿಗೆ ಇದು ಸೂಕ್ತ. ಈ ನೆಕ್ ಬ್ಯಾಂಡ್ ಐಪಿಎಕ್ಸ್ 5 ವಾಟರ್‌ ರೆಸಿಸ್ಟ್‌ ಹೊಂದಿದೆ. ಹೀಗಾಗಿ ಬೆವರು ಮತ್ತು ಸಣ್ಣ ಮಳೆಯನ್ನು ತಡೆದುಕೊಳ್ಳುತ್ತದೆ. ಇದು ಸೂಕ್ತ ಆಯ್ಕೆಯಾಗಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ