ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Technology News: ಬಾಹ್ಯಾಕಾಶದ ಕೆಳಕಕ್ಷೆಗೆ ಹಾರಲಿವೆ ಮಿಂಚುಹುಳು, ಜೇನುನೊಣ ಮಾದರಿ ಉಪಗ್ರಹಗಳು; ಬೆಂಗಳೂರು ನವೋದ್ಯಮ ಪಿಕ್ಸ್‌ಎಕ್ಸೆಲ್ ಸಾಧನೆ

Technology News: ಬಾಹ್ಯಾಕಾಶದ ಕೆಳಕಕ್ಷೆಗೆ ಹಾರಲಿವೆ ಮಿಂಚುಹುಳು, ಜೇನುನೊಣ ಮಾದರಿ ಉಪಗ್ರಹಗಳು; ಬೆಂಗಳೂರು ನವೋದ್ಯಮ ಪಿಕ್ಸ್‌ಎಕ್ಸೆಲ್ ಸಾಧನೆ

Umesh Kumar S HT Kannada

Jan 28, 2024 06:57 PM IST

ಮಿಂಚು ಹುಳು ಮತ್ತು ಜೇನ್ನೊಣ ಮಾದರಿಯ ಉಪಗ್ರಹಗಳು

  • Technology News: ಬೆಂಗಳೂರು ಮೂಲದ ನವೋದ್ಯಮ ಪಿಕ್ಸ್‌ಎಕ್ಸೆಲ್‌, 2024ರಲ್ಲಿ 6 ಸ್ಪೆಕ್ಟ್ರಲ್ ಉಪಗ್ರಹ ಸೇರಿ 2025ರ ಒಳಗೆ ಒಟ್ಟು 24 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಈ ಪೈಕಿ 18 ಮಿಂಚುಹುಳು ಮತ್ತು 6 ಜೇನ್ನೊಣ ಮಾದರಿಯ ಉಪಗ್ರಹಗಳು ಎಂಬುದು ವಿಶೇಷ.

ಮಿಂಚು ಹುಳು ಮತ್ತು ಜೇನ್ನೊಣ ಮಾದರಿಯ ಉಪಗ್ರಹಗಳು
ಮಿಂಚು ಹುಳು ಮತ್ತು ಜೇನ್ನೊಣ ಮಾದರಿಯ ಉಪಗ್ರಹಗಳು (@awaisahmedna)

ಬಾಹ್ಯಾಕಾಶ ಗಮನಿಸುತ್ತಿರಿ. ಶೀಘ್ರವೇ ಕೆಳಕಕ್ಷೆಯಲ್ಲಿ ಮಿಂಚುಹುಳುಗಳ ಆಕಾರದ ಮತ್ತು ಜೇನುನೊಣಗಳ ಆಕಾರದ ಉಪಗ್ರಹಗಳು ಹಾರಾಡುವುದನ್ನು ಕಾಣಬಹುದು!

ಟ್ರೆಂಡಿಂಗ್​ ಸುದ್ದಿ

Lok Sabha Election: 4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಆರಂಭ; ಆಂಧ್ರ ಪ್ರದೇಶ ವಿಧಾನಸಭೆಗೂ ಇಂದೇ ವೋಟಿಂಗ್

CBSE Result 2024: ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಯಾವಾಗ; ರಿಸಲ್ಟ್ ನೋಡಲು ಅಧಿಕೃತ ವೆಬ್‌ಸೈಟ್‌ಗಳು, ದಿನಾಂಕದ ಮಾಹಿತಿ ತಿಳಿಯಿರಿ

Indian Railways: ಧಾರ್ಮಿಕ ಕ್ಷೇತ್ರ ದರ್ಶನಕ್ಕೆ ಭಾರತ್‌ ಗೌರವ್‌ ವಿಶೇಷ ರೈಲು, ಮೇ 18ಕ್ಕೆ ಆರಂಭ, ಮಾರ್ಗ, ದರ ಪರಿಶೀಲಿಸಿ

Viral Video: ಕಣ್ಣಿಲ್ಲದವರಿಗೂ ಫುಟ್‌ಬಾಲ್‌ ಮ್ಯಾಚ್ ಸವಿಯಲು ಅವಕಾಶ ಮಾಡಿಕೊಟ್ಟ ಹೃದಯವಂತ, ಸೂಪರ್ ಅಂತ ಮೆಚ್ಚಿದ ಜನ

ಹೌದು ಹೀಗೆಂದೇ, ಬೆಂಗಳೂರು ಮೂಲದ ಬಾಹ್ಯಾಕಾಶ ದತ್ತಾಂಶ ಕಂಪನಿಯಾಗಿರುವ ಪಿಕ್ಸ್‌ಎಕ್ಸೆಲ್‌ನ ಸಂಸ್ಥಾಪಕ, ಸಿಇಒ ಅವೈಸ್ ಅಹ್ಮದ್ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪಿಕ್ಸ್‌ಎಕ್ಸೆಲ್‌ ಕಂಪನಿಯು 2025 ರ ವೇಳೆಗೆ ಆರು ಸ್ಪೆಕ್ಟ್ರಲ್ ಉಪಗ್ರಹಗಳು ಸೇರಿ ಒಟ್ಟು 24 ಉಪಗ್ರಹಗಳನ್ನು ಉಡಾವಣೆ ಮಾಡಲು ಸಜ್ಜಾಗಿದೆ. ಈ ಪೈಕಿ ಆರು ಸ್ಪೆಕ್ಟ್ರಲ್ ಉಪಗ್ರಹಗಳನ್ನು ಇದೇ ವರ್ಷ (2024) ಉಡಾವಣೆ ಮಾಡಲು ಉದ್ದೇಶಿಸಿದೆ.

ಎಕನಾಮಿಕ್ಸ್ ವರದಿ ಪ್ರಕಾರ, ಈ 24 ಉಪಗ್ರಹಗಳ ಪೈಕಿ 18 ಮಿಂಚುಹುಳುಗಳ ಆಕಾರದಲ್ಲೂ, ಇನ್ನು 6 ಉಪಗ್ರಹಗಳು ಜೇನುನೊಣಗಳಂತೆಯೂ ಇರಲಿವೆ. ಇವುಗಳನ್ನು ಹಂತ ಹಂತವಾಗಿ ಉಡಾವಣೆ ಮಾಡುವುದು ಪಿಕ್ಸ್‌ಎಕ್ಸೆಲ್‌ ಕಂಪನಿ ಉದ್ದೇಶ.

ಪಿಕ್ಸ್‌ಎಕ್ಸೆಲ್‌ನ ಉಪಗ್ರಹ ಸಮೂಹದ ಭಾಗವಾಗಿರುವ ಮಿಂಚುಹುಳು ಉಪಗ್ರಹಗಳು, ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾಗಳು ಮತ್ತು ವರ್ಧಿತ ಸಂಗ್ರಹಣಾ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ. ಬಾಹ್ಯಾಕಾಶದಲ್ಲಿ ಹತ್ತು ವರ್ಷಗಳ ಜೀವಿತಾವಧಿಯನ್ನೂ ಹೊಂದಿರುತ್ತದೆ.

ಏತನ್ಮಧ್ಯೆ, ಜೇನುನೊಣ ಮಾದರಿಯ ಉಪಗ್ರಹಗಳ ಸಮೂಹವು ಚಿತ್ರದ ರೆಸಲ್ಯೂಶನ್ ಮತ್ತು ತರಂಗಾಂತರದ ವ್ಯಾಪ್ತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಅಂತಿಮವಾಗಿ ಪ್ರತಿ 24 ಗಂಟೆಗಳಿಗೊಮ್ಮೆ ಪತ್ತೆ, ಮೇಲ್ವಿಚಾರಣೆ ಮತ್ತು ಭವಿಷ್ಯವನ್ನು ಸುಗಮಗೊಳಿಸುವುದು ಗುರಿಯೊಂದಿಗೆ ಕೆಲಸ ನಿರ್ವಹಿಸಲಿವೆ ಎಂದು ವರದಿ ವಿವರಿಸಿದೆ.

ಪಿಎಕ್ಸ್‌ಎಲ್‌ ಈಗಾಗಲೇ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ದಾಪುಗಾಲು ಹಾಕಿದೆ. ಪ್ರಸ್ತುತ ಆನಂದ್ ಮತ್ತು ಶಕುಂತಲಾ ಸೇರಿ ಮೂರು ವರ್ಷಗಳ ಜೀವಿತಾವಧಿಯ ಮೂರು ಹೈಪರ್‌ಸ್ಪೆಕ್ಟ್ರಲ್ ಉಪಗ್ರಹಗಳನ್ನು ನಿರ್ವಹಿಸುತ್ತಿದೆ. ಈ ಪೈಕಿ ಶಕುಂತಲಾ ಉಪಗ್ರಹವು ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್ ಫಾಲ್ಕನ್-9 ರಾಕೆಟ್ ಸಹಾಯದಿಂದ ಕಳೆದ ವರ್ಷ ಏಪ್ರಿಲ್‌ನಲ್ಲಿ ಉಡಾವಣೆಯಾಗಿತ್ತು. ಮೂರನೇ ಉಪಗ್ರಹ ಆನಂದ್ 2022ರ ನವೆಂಬರ್‌ನಲ್ಲಿ ಉಡಾವಣೆಯಾಗಿದೆ. ಈ ಹೈಪರ್‌ಸ್ಪೆಕ್ಟ್ರಲ್ ಇಮೇಜಿಂಗ್ ಉಪಗ್ರಹಗಳು ಹವಾಮಾನ ಬದಲಾವಣೆಯನ್ನು ಮೇಲ್ವಿಚಾರಣೆ ನಡೆಸುತ್ತಿವೆ.

ತಮ್ಮ ಹೈಪರ್‌ಸ್ಪೆಕ್ಟ್ರಲ್ ತಂತ್ರಜ್ಞಾನದೊಂದಿಗೆ 10 ಮೀಟರ್ ರೆಸಲ್ಯೂಶನ್ ಹೊಂದಿರುವ ಡೇಟಾವನ್ನು ಪಿಎಕ್ಸ್‌ಎಕ್ಸೆಲ್ ಸಂಗ್ರಹಿಸಿದೆ. ಈ ವಿಧಾನವು ಸಾಂಪ್ರದಾಯಿಕ ಬಾಹ್ಯಾಕಾಶ ಏಜೆನ್ಸಿಗಳಾದ ನಾಸಾ, ಇಸ್ರೋ ಮತ್ತು ಇಎಸ್‌ಎಗಿಂತ ಭಿನ್ನವಾದುದು. ಇದು ದೀರ್ಘಾವಧಿಯ ಉತ್ಪಾದನಾ ಸಮಯಾವಧಿಯೊಂದಿಗೆ ಭಾರವಾದ ಮತ್ತು ಹೆಚ್ಚು ದುಬಾರಿ ಉಪಗ್ರಹಗಳನ್ನು ನಿಯೋಜಿಸುತ್ತದೆ ಎಂದು ಅವೈಸ್ ಅಹ್ಮದ್ ಹೇಳಿರುವುದಾಗಿ ವರದಿ ವಿವರಿಸಿದೆ.

ಪಿಎಕ್ಸ್‌ಎಕ್ಸೆಲ್‌ ಸಾಧನೆಯ ಪಥ

ಪಿಎಕ್ಸ್ಎಕ್ಸೆಲ್‌ ಎಂಬ ನವೋದ್ಯಮವನ್ನು 2019 ರಲ್ಲಿ ಸ್ಥಾಪಿಸಲಾಯಿತು. ಅಂದು 21 ವರ್ಷ ವಯಸ್ಸಿನ ಅವೈಸ್ ಅಹ್ಮದ್ ಚಿಂತನೆಯೊಂದಿಗೆ ಬೆಂಗಳೂರಿನಲ್ಲಿ ಸ್ಥಾಪನೆಯಾದ ಈ ಕಂಪನಿಯಲ್ಲಿ ಮೂರು ವರ್ಷ ಹಿಂದೆ ಇದ್ದ ಉದ್ಯೋಗಿಗಳ ಸಂಖ್ಯೆ 20. ಈಗ ಮೂರು ಉಪಖಂಡಗಳಲ್ಲಿ 200 ಉದ್ಯೋಗಿಗಳಿದ್ದಾರೆ. ಮೂರು ಉಪಗ್ರಹಗಳನ್ನು ಉಡಾವಣೆ ಮಾಡಿ ನಿರ್ವಹಿಸುತ್ತಿದೆ. ಲಕ್ಷಾಂತರ ಡಾಲರ್ ಆದಾಯವೂ ಇದೆ. 50 ಗ್ರಾಹಕರು ಮತ್ತು ವಿತರಕರು ಇದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ