OnePlus Easy Upgrades: ಒನ್‌ಪ್ಲಸ್ 12 ಮಾರುಕಟ್ಟೆಗೆ ಬಂದಿದೆ; ಹೊಸ ಒನ್‌ಪ್ಲಸ್ ಈಸೀ ಅಪ್‌ಗ್ರೇಡ್ಸ್ ಪ್ರಯೋಜನ ತಿಳ್ಕೊಂಡರೆ ಒಳಿತು
Feb 03, 2024 10:38 PM IST
OnePlus Easy Upgrades: ಒನ್‌ಪ್ಲಸ್ 12 ಮಾರುಕಟ್ಟೆಗೆ ಬಂದಿದೆ. ಹೊಸ ಒನ್‌ಪ್ಲಸ್ ಈಸೀ ಅಪ್‌ಗ್ರೇಡ್ಸ್ ಪ್ರಯೋಜನ ಪಡೆಯಲು ಮೂರು ಹಂತಗಳನ್ನು ಅನುಸರಿಸಬೇಕು.
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಒನ್‌ಪ್ಲಸ್ 12 ಮಾರುಕಟ್ಟೆಗೆ ಬಂದಿದೆ. ಹೊಸ ಒನ್‌ಪ್ಲಸ್ ಈಸೀ ಅಪ್‌ಗ್ರೇಡ್ಸ್ ಪ್ರಯೋಜನ ತಿಳ್ಕೊಂಡರೆ ಒಳಿತು. ಈ ಯೋಜನೆ ಪ್ರಯೋಜನ ಪಡೆಯಲು ಅನುಸರಿಸಬೇಕಾದ್ದು ಮೂರು ಹಂತ. ಅವುಗಳ ವಿವರ ಹೀಗಿದೆ ಗಮನಿಸಿ.
ಒನ್‌ಪ್ಲಸ್ ಕಂಪನಿಯು ತನ್ನ ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದ್ದು, ವಿಶೇಷ ವಿನಾಯಿತಿ, ನೋ-ಕಾಸ್ಟ್ ಇಎಂಐ ಮತ್ತು ಒನ್‌ಪ್ಲಸ್ ಈಸಿ ಅಪ್‌ಗ್ರೇಡ್ ಮೂಲಕ ಬಳಕೆದಾರರಿಗೆ ಒದಗಿಸುತ್ತಿದೆ.
ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಅಮೆಜಾನ್ ಇಂಡಿಯಾ, ಒನ್‌ಪ್ಲಸ್ ಡಾಟ್ ಇನ್, ಒನ್‌ಪ್ಲಸ್ ಸ್ಟೋರ್ ಅಪ್ಲಿಕೇಶನ್, ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್ ಮತ್ತು ಇತರೆ ಸ್ಮಾರ್ಟ್‌ಫೋನ್ ಮಳಿಗೆಗಳಲ್ಲಿ ಜನವರಿ 30ರಿಂದ ಲಭ್ಯವಿದೆ.
ಈ ಸ್ಮಾರ್ಟ್‌ಫೋನ್ ಫ್ಲೋವಿ ಎಮರಾಲ್ಡ್ ಮತ್ತು ಸಿಲ್ಕಿ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. 12 ಜಿಬಿ RAM, 256 ಜಿಬಿ ಸ್ಟೋರೇಜ್ ಮಾದರಿಯ ಬೆಲೆ 64,999 ರೂ ಮತ್ತು 16 ಜಿಬಿ RAM 512 ಜಿಬಿ ಸ್ಟೋರೇಜ್ ಮಾದರಿಯ ಬೆಲೆ 69,999 ರೂ. ಒನ್‌ಪ್ಲಸ್ 12 ಓಪನ್ ಸೇಲ್‌ನಲ್ಲಿ ಗ್ರಾಹಕರು ಬ್ಯಾಂಕ್ ರಿಯಾಯಿತಿಗಳು, ಸುಲಭ ಅಪ್‌ಗ್ರೇಡ್ ಯೋಜನೆ ಮತ್ತು ಹಲವು ಕೊಡುಗೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಒನ್‌ಪ್ಲಸ್ 12 ಮುಕ್ತ ಮಾರಾಟ ಕೊಡುಗೆಗಳು
ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು OneCard ಮೂಲಕ 9 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಆಯ್ಕೆಯ ಜೊತೆಗೆ 2,000 ರೂ ಮೌಲ್ಯದ ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಒನ್‌ಪ್ಲಸ್ ನೀಡುತ್ತಿದೆ. ಒನ್‌ಪ್ಲಸ್ 12 ಖರೀದಿಯ ಮೇಲೆ ಗ್ರಾಹಕರು 10,000 ರೂಪಾಯಿಯ ವಿಶೇಷ ವಿನಿಮಯ ಬೋನಸ್ ಅನ್ನು ಸಹ ಪಡೆಯಬಹುದು.
ಒನ್‌ಪ್ಲಸ್ ಡಾಟ್ ಇನ್ (OnePlus.in), ಒನ್‌ಪ್ಲಸ್ ಸ್ಟೋರ್ ಅಪ್ಲಿಕೇಶನ್ ಮತ್ತು ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳಲ್ಲಿ ಲಭ್ಯವಿರುವ ಆಕ್ಸಿಡೆಂಟಲ್ ಡ್ಯಾಮೇಜ್ ಪ್ರೊಟೆಕ್ಷನ್ ಪ್ಲಾನ್‌ನಲ್ಲಿ ಶೇಕಡ 50 ರಷ್ಟು ರಿಯಾಯಿತಿಯನ್ನು ಸಹ ಒನ್‌ಪ್ಲಸ್ ನೀಡುತ್ತಿದೆ. ಫೋನ್ ಕೇಸ್‌ಗಳ ಖರೀದಿಯ ವೇಳೆ ಶೇಕಡಾ 20 ರಷ್ಟು ರಿಯಾಯಿತಿ ಮತ್ತು ಒನ್‌ಪ್ಲಸ್ ವೈರ್‌ಲೆಸ್ ಚಾರ್ಜರ್ ಖರೀದಿ ವೇಳೆ ಶೇಕಡಾ 10 ರಷ್ಟು ರಿಯಾಯಿತಿಯನ್ನು ಪಡೆಯಬೇಕಾದರೆ, ಗ್ರಾಹಕರು ಒನ್‌ಪ್ಲಸ್ ಡಾಟ್ ಇನ್ (OnePlus.in) ಮತ್ತು ಒನ್‌ಪ್ಲಸ್ ಸ್ಟೋರ್ ಅಪ್ಲಿಕೇಶನ್‌ನಲ್ಲಿ ಈ ಡಿವೈಸ್ ಖರೀದಿಸಬೇಕು.
ಒನ್‌ಪ್ಲಸ್ ರೆಡ್ ಕೇಬಲ್ ಕ್ಲಬ್‌ನ ಸದಸ್ಯರಾಗಿದ್ದರೆ, ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಖರೀದಿಸುವಾಗ, ಖರೀದಿಯ ಮೇಲೆ 1,000 ರೂಪಾಯಿ ರಿಯಾಯಿತಿ ಪಡೆಯಬಹುದು. ಅಷ್ಟೇ ಅಲ್ಲ 693 ರೆಡ್‌ಕಾಯಿನ್ಸ್ ಗಳಿಸಬಹುದು.
ಹೊಚ್ಚ ಹೊಸ ಒನ್‌ಪ್ಲಸ್ ಈಸಿ ಅಪ್‌ಗ್ರೇಡ್ಸ್ ಪ್ರೋಗ್ರಾಂ
ಹೊಸದಾಗಿ ಪರಿಚಯಿಸಲಾದ ಒನ್‌ಪ್ಲಸ್ ಈಸಿ ಅಪ್‌ಗ್ರೇಡ್ಸ್ (OnePlus Easy Upgrades) ಪ್ರೋಗ್ರಾಂ ಮೂಲಕ ಗ್ರಾಹಕರು 24 ತಿಂಗಳ ತನಕ ನೋ-ಕಾಸ್ಟ್ ಇಎಂಐ ಜೊತೆಗೆ ಮೂಲ ವೆಚ್ಚದ ಶೇಕಡ 65 ಮೌಲ್ಯ ಪಾವತಿಸುವ ಮೂಲಕ ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಹೊಂದುವುದು ಸಾಧ್ಯವಿದೆ. ಆ ನಂತರ ಈ ಪ್ರೋಗ್ರಾಂ 35 ಪ್ರತಿಶತ ಖಚಿತವಾದ ಮೌಲ್ಯವನ್ನು ಖಾತರಿಪಡಿಸುತ್ತದೆ. ಗ್ರಾಹಕರಿಗೆ ಯಾವುದೇ ಸಮಯದಲ್ಲಿ ಸುಲಭವಾಗಿ ಹೊಸ ಒನ್‌ಪ್ಲಸ್ ಫ್ಲ್ಯಾಗ್‌ಶಿಪ್ ಡಿವೈಸ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳಲು ಅವಕಾಶ ಒದಗಿಸುತ್ತದೆ. ಗ್ರಾಹಕರು ಈಸಿ ಅಪ್‌ಗ್ರೇಡ್ ಯೋಜನೆಯನ್ನು ಯಾವುದೇ ಲಭ್ಯವಿರುವ ವಿನಿಮಯ ಕೊಡುಗೆಗಳು ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ ಸಂಯೋಜಿಸಬಹುದು.
ಒನ್‌ಪ್ಲಸ್ ಈಸಿ ಅಪ್‌ಗ್ರೇಡ್ಸ್ ಹೇಗೆ ಕೆಲಸ ಮಾಡುತ್ತೆ; 3 ಹಂತಗಳ ವಿವರಣೆ
ಹಂತ 1
ಬೆಲೆಯ ಒಂದು ಪಾಲನ್ನು ಮಾತ್ರ ಪಾವತಿಸುವ ಮೂಲಕ ಒನ್‌ಪ್ಲಸ್ ಫ್ಲ್ಯಾಗ್‌ಶಿಪ್ ಅನ್ನು ಪಡೆಯಿರಿ* ನಿಮ್ಮ ಮೆಚ್ಚಿನ ಒನ್‌ಪ್ಲಸ್ ಫ್ಲ್ಯಾಗ್‌ಶಿಪ್ ಅನ್ನು ಬೆಲೆಯ ಒಂದು ಪಾಲು ಪಾವತಿಸಿ ಖರೀದಿಸುವ ಮೂಲಕ ಸುಲಭ ಅಪ್‌ಗ್ರೇಡ್‌ಗಳಿಗೆ ಸೈನ್ ಅಪ್ ಮಾಡಿ*.
ಹಂತ 2
ಹೊರೆಯಿಲ್ಲದ ಪಾವತಿ ಯೋಜನೆಯನ್ನು ಆನಂದಿಸಬಹುದು. ಅದಕ್ಕಾಗಿ 24-ತಿಂಗಳ ನೋ ಕಾಸ್ಟ್ ಇಎಂಐ ಯೋಜನೆಯನ್ನು ಆಯ್ಕೆ ಮಾಡಿಕೊಂಡು ಆರಂಭಿಕ ಮೊತ್ತವನ್ನು ಪಾವತಿಸಿ.
ಹಂತ 3
ಇದರಲ್ಲಿ ಎರಡು ಆಯ್ಕೆಗಳಿವೆ. ಮೊದಲ ಆಯ್ಕೆಯ ಪ್ರಕಾರ, ಈಸಿ ಅಪ್‌ಗ್ರೇಡ್ ಪ್ರೋಗ್ರಾಂ ಅವಧಿಯ ಯಾವುದೇ ಸಮಯದಲ್ಲಿ ಮುಂದಿನ ಒನ್‌ಪ್ಲಸ್ ಫ್ಲ್ಯಾಗ್‌ಶಿಪ್‌ಗೆ ಸುಲಭವಾಗಿ ಅಪ್‌ಗ್ರೇಡ್ ಮಾಡಬಹುದು. ನಿಮ್ಮ ಡಿವೈಸ್‌ಗೆ ಖಚಿತ ಮೌಲ್ಯವನ್ನು ಪಡೆದುಕೊಳ್ಳಬಹುದು. *ಅದಲ್ಲದೇ ಹೋದರೆ ಡಿವೈಸ್‌ನ ಸಂಪೂರ್ಣ ಬೆಲೆಯನ್ನು ಪಾವತಿಸಬೇಕಾಗುತ್ತದೆ.
ಎರಡನೇ ಆಯ್ಕೆ ಪ್ರಕಾರ, ನಿಮ್ಮ ಡಿವೈಸ್ ಅನ್ನು ಪರ್ಯಾಯವಾಗಿ ನಿಮ್ಮ ಬಳಿಯೇ ಇಟ್ಟುಕೊಂಡು, ಇಎಂಐ ಅವಧಿಯ ಕೊನೆಯಲ್ಲಿ ವ್ಯತ್ಯಾಸವನ್ನು ಪಾವತಿಸಬಹುದು ಎಂದು ಒನ್‌ಪ್ಲಸ್ ವೆಬ್‌ಸೈಟ್‌ನಲ್ಲಿರುವ ಮಾಹಿತಿ ವಿವರಿಸಿದೆ.