logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Reliance Jio Offer: ರಿಲಯನ್ಸ್ ಜಿಯೋದಿಂದ ಗಣರಾಜ್ಯೋತ್ಸವ ಕೊಡುಗೆ, 2999 ರೂ ರೀಚಾರ್ಜ್‌ ಪ್ಲಾನ್‌ಗೆ 3000 ರೂ ಕೂಪನ್‌ಗಳು

Reliance Jio Offer: ರಿಲಯನ್ಸ್ ಜಿಯೋದಿಂದ ಗಣರಾಜ್ಯೋತ್ಸವ ಕೊಡುಗೆ, 2999 ರೂ ರೀಚಾರ್ಜ್‌ ಪ್ಲಾನ್‌ಗೆ 3000 ರೂ ಕೂಪನ್‌ಗಳು

Umesh Kumar S HT Kannada

Jan 17, 2024 12:54 PM IST

ರಿಲಯನ್ಸ್ ಜಿಯೋ ಗಣರಾಜ್ಯೋತ್ಸವ ಪ್ಲಾನ್ ಬಿಡುಗಡೆ, ಜನವರಿ 31ರ ತನಕ ಈ ರಿಯಾಯಿತಿ ಕೂಪನ್‌ಗಳ ಜತೆಗಿನ ಪ್ಲಾನ್ ಲಭ್ಯ. (ಸಾಂಕೇತಿಕ ಚಿತ್ರ)

  • Reliance Jio Offer: ರಿಲಯನ್ಸ್ ಜಿಯೋದಿಂದ ಗಣರಾಜ್ಯೋತ್ಸವ ಸಂದರ್ಭಕ್ಕೆ ವಿಶೇಷ ಆಫರ್ ಪರಿಚಯಿಸಲಾಗಿದ್ದು, 2999 ರೂಪಾಯಿ ರೀಚಾರ್ಜ್‌ನಲ್ಲಿ ಅಜಿಯೋ, ಸ್ವಿಗ್ಗಿ, ಟಿರಾ ಮುಂತಾದ ಕಂಪನಿಗಳ 3000 ರೂಪಾಯಿಗೂ ಹೆಚ್ಚು ಮೌಲ್ಯದ ಕೂಪನ್ ಪಡೆಯುವ ಅವಕಾಶ ಇದೆ. ಈ ಆಫರ್ ಅನ್ನು ಜಿಯೋ ಜನವರಿ 31ರ ತನಕ ಈ ರೀಚಾರ್ಜ್‌ ಪ್ಲಾನ್‌ನಲ್ಲಿರಿಸಿದೆ.

ರಿಲಯನ್ಸ್  ಜಿಯೋ ಗಣರಾಜ್ಯೋತ್ಸವ ಪ್ಲಾನ್ ಬಿಡುಗಡೆ, ಜನವರಿ 31ರ ತನಕ ಈ ರಿಯಾಯಿತಿ ಕೂಪನ್‌ಗಳ ಜತೆಗಿನ ಪ್ಲಾನ್ ಲಭ್ಯ. (ಸಾಂಕೇತಿಕ ಚಿತ್ರ)
ರಿಲಯನ್ಸ್ ಜಿಯೋ ಗಣರಾಜ್ಯೋತ್ಸವ ಪ್ಲಾನ್ ಬಿಡುಗಡೆ, ಜನವರಿ 31ರ ತನಕ ಈ ರಿಯಾಯಿತಿ ಕೂಪನ್‌ಗಳ ಜತೆಗಿನ ಪ್ಲಾನ್ ಲಭ್ಯ. (ಸಾಂಕೇತಿಕ ಚಿತ್ರ) (HT Tech)

ನವದೆಹಲಿ: ಗಣರಾಜ್ಯೋತ್ಸವ ನಿಮಿತ್ತ ದೇಶದ ಪ್ರಮುಖ ಟೆಲಿಕಾಂ ಆಪರೇಟರ್ ಆದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ರೀಚಾರ್ಜ್‌ ಪ್ಲಾನ್ ಅನ್ನು ಪರಿಚಯಿಸಿದೆ. ಈ ಗಣರಾಜ್ಯೋತ್ಸವ ವಿಶೇಷ ಯೋಜನೆಯು 2999 ರೂಪಾಯಿ ರೀಚಾರ್ಜ್‌ ಪ್ಲಾನ್ ಆಗಿದ್ದು, ರೀಚಾರ್ಜ್ ಮಾಡಿದಾಗ 3,000 ರೂಪಾಯಿಗೂ ಅಧಿಕ ಮೌಲ್ಯದ ಕೂಪನ್‌ಗಳನ್ನು ಗ್ರಾಹಕರು ಪಡೆಯಲಿದ್ದಾರೆ ಎಂದು ಕಂಪನಿ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

ಈ ಕೂಪನ್‌ಗಳನ್ನು ಶಾಪಿಂಗ್, ಪ್ರಯಾಣ ಮತ್ತು ಆಹಾರದ ಬಿಲ್‌ಗಳನ್ನು ಪಾವತಿಸಲು ಬಳಸಬಹುದು. ಗ್ರಾಹಕರು ಜಿಯೋ ಯೋಜನೆಯನ್ನು ರೀಚಾರ್ಜ್ ಮಾಡಿದ ಮೇಲೆ ಅವರು ಸ್ವೀಕರಿಸುವ ಕೂಪನ್‌ಗಳು ತಕ್ಷಣವೇ ಮೈಜಿಯೋ ಅಪ್ಲಿಕೇಷನ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಅಂದ ಹಾಗೆ ಈ ಗಣರಾಜ್ಯೋತ್ಸವದ ಆಫರ್ ಅನ್ನು ಜನವರಿ 31ರ ವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.

ಈ ಪ್ರಿಪೇಯ್ಡ್ ಯೋಜನೆಯು 2.5 GB ಯ 4G ಡೇಟಾವನ್ನು ಮತ್ತು ಅನಿಯಮಿತ ಕರೆಯೊಂದಿಗೆ 365 ದಿನಗಳವರೆಗೆ ಅನಿಯಮಿತ 5G ಡೇಟಾವನ್ನು ಬಳಸುವುದಕ್ಕೆ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತದೆ. ಅಷ್ಟೇ ಅಲ್ಲ, ಈ ಪ್ಲಾನ್‌ ಪ್ರಕಾರ ರೀಚಾರ್ಜ್ ಮಾಡಿದರೆ, ಸ್ವಿಗ್ಗಿ ಮತ್ತು ಅಜಿಯೋ ಕೂಪನ್‌ಗಳು, ಇಕ್ಸಿಗೋ ಮೂಲಕ ವಿಮಾನ ಟಿಕೆಟ್‌ಗಳ ಮೇಲಿನ ರಿಯಾಯಿತಿಗಳು ಮತ್ತು ರಿಲಯನ್ಸ್ ಡಿಜಿಟಲ್‌ನಲ್ಲಿ ಆಯ್ದ ಉತ್ಪನ್ನಗಳ ಮೇಲೆ ಶೇಕಡಾ 10 ರಷ್ಟು ರಿಯಾಯಿತಿ ಮುಂತಾದ ಹೆಚ್ಚುವರಿ ಪ್ರಯೋಜನಗಳೂ ಸಿಗಲಿದೆ.

ಈ ಪ್ಲಾನ್ ಪ್ರಕಾರ ರೀಚಾರ್ಜ್ ಮಾಡಿದರೆ, ಸರಾಸರಿ ಮಾಸಿಕ 230 ರೂಪಾಯಿ ವೆಚ್ಚದಲ್ಲಿ ಫೋನ್‌ನಲ್ಲಿ ಡೇಟಾ ಬಳಕ ಮಾಡಬಹುದು. ಈ ರೀಚಾರ್ಜ್ ಯೋಜನೆಯು ಜನವರಿ 15 ರಿಂದ ಜನವರಿ 30 ರವರೆಗೆ My Jio ಅಪ್ಲಿಕೇಶನ್ ಮೂಲಕ ಲಭ್ಯವಿರುತ್ತದೆ. ಅದರೊಳಗೆ ರೀಚಾರ್ಜ್ ಮಾಡುವ ಬಳಕೆದಾರರು ವಿವಿಧ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಇದು ಸಂಪೂರ್ಣವಾಗಿ ಹೊಸ ರೀಚಾರ್ಜ್ ಯೋಜನೆ ಅಲ್ಲದಿದ್ದರೂ, ಜಿಯೋ ಸೀಮಿತ ಅವಧಿಗೆ ಗಣರಾಜ್ಯೋತ್ಸವದ ಕೊಡುಗೆಯಾಗಿ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ. ಹೆಚ್ಚುವರಿ ಪ್ರಯೋಜನವಾಗಿ ದಿನಕ್ಕೆ 100 ಎಸ್‌ಎಂಎಸ್‌ ಮತ್ತು ಜಿಯೋ ಸಿನೆಮಾದ ಮೂಲ ಚಂದಾದಾರಿಕೆ ಸಿಗುತ್ತದೆ.

ಇನ್ನು, ರಿಲಯನ್ಸ್ ಡಿಜಿಟಲ್‌ನಲ್ಲಿ ಆಯ್ದ ಉತ್ಪನ್ನಗಳನ್ನು ಖರೀದಿಸುವಾಗ ಶೇಕಡಾ 10 ರಷ್ಟು ರಿಯಾಯಿತಿಯನ್ನು ಜಿಯೋ ನೀಡುತ್ತದೆ. ಅಲ್ಲಿ ಕನಿಷ್ಠ ಖರೀದಿ ಮೌಲ್ಯವು 5,000 ರೂಪಾಯಿಗಿಂತ ಹೆಚ್ಚಿರಬೇಕು ಮತ್ತು ಗರಿಷ್ಠ ರಿಯಾಯಿತಿಯು 10,000 ರೂಪಾಯಿ ಇರಲಿದೆ. ಇದರರ್ಥ, ಈ ಪ್ಲಾನ್‌ನಲ್ಲಿ ರೀಚಾರ್ಜ್‌ ಮಾಡಿದ ಗ್ರಾಹಕರು 1,00,000 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಗ್ಯಾಜೆಟ್ ಅನ್ನು ಖರೀದಿಸುವಾಗ ಫ್ಲಾಟ್ 10,000 ರೂಪಾಯಿ ರಿಯಾಯಿತಿಯನ್ನು ಪಡೆಯಬಹುದು.

ಹಾಗೆಯೇ, ಜಿಯೋ ಈ ಪ್ಲಾನ್ ಮೂಲಕ ಸ್ವಿಗ್ಗಿಯ 2 ಕೂಪನ್‌ಗಳನ್ನೂ ನೀಡುತ್ತಿದೆ. ಇದನ್ನು 299 ರೂಪಾಯಿಗಿಂತ ಹೆಚ್ಚು ಮೌಲ್ಯದ ಆರ್ಡರ್‌ಗಳಲ್ಲಿ ರಿಡೀಮ್ ಮಾಡಬಹುದು. ಕಂಪನಿಯು ಇಕ್ಸಿಗೋ ಕೂಪನ್ ಅನ್ನು ಸಹ ನೀಡುತ್ತಿದ್ದು, ವಿಮಾನ ಟಿಕೆಟ್ ದರವನ್ನು ಮೂವರಿಗಾದರೆ 1,500 ರೂಪಾಯಿಯಷ್ಟು ಕಡಿಮೆ ಮಾಡಬಹುದು. ಇಬ್ಬರಿಗಾದರೆ 1,000 ರೂ. ಮತ್ತು ಒಂದೇ ಟಿಕೆಟ್‌ಗಾದರೆ 500 ರೂಪಾಯಿ ರಿಯಾಯಿತಿ ಒದಗಿಸಬಹುದು.

ಜಿಯೋದ ಗಣರಾಜ್ಯೋತ್ಸವದ ಕೊಡುಗೆಯು 2,499 ರೂಪಾಯಿಗಿಂತ ಹೆಚ್ಚು ಮೌಲ್ಯದ ಸರಕುಗಳನ್ನು ಖರೀದಿಸುವಾಗ 500 ರೂಪಾಯಿ ಮೌಲ್ಯದ ಫ್ಲಾಟ್ ಅಜಿಯೋ ರಿಯಾಯಿತಿ ಕೂಪನ್ ಅನ್ನು ಕೂಡ ಒದಗಿಸುತ್ತದೆ. ಕೊನೆಯದಾಗಿ, ಈ ಯೋಜನೆಯು ಟಿರಾದಲ್ಲಿ 999 ರೂಪಾಯಿಗಿಂತ ಹೆಚ್ಚು ಮೌಲ್ಯದ ಆಯ್ದ ಉತ್ಪನ್ನಗಳ ಖರೀದಿ ಮೇಲೆ ಶೇಕಡಾ 30 ರಷ್ಟು ರಿಯಾಯಿತಿಯನ್ನು ನೀಡುತ್ತದೆ. ಈ ರಿಯಾಯಿತಿಯು 1,000 ರೂಪಾಯಿಗೆ ಸೀಮಿತವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ