logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Trans Couple Gave Birth: ಮಗುವಿಗೆ ಜನ್ಮಕೊಟ್ಟ ಲಿಂಗಪರಿವರ್ತಿತ ಪುರುಷ; ಸಂಭ್ರಮದಲ್ಲಿದ್ದಾರೆ ಕೇರಳದ ತೃತೀಯಲಿಂಗಿ ದಂಪತಿ

Trans couple gave birth: ಮಗುವಿಗೆ ಜನ್ಮಕೊಟ್ಟ ಲಿಂಗಪರಿವರ್ತಿತ ಪುರುಷ; ಸಂಭ್ರಮದಲ್ಲಿದ್ದಾರೆ ಕೇರಳದ ತೃತೀಯಲಿಂಗಿ ದಂಪತಿ

HT Kannada Desk HT Kannada

Feb 09, 2023 09:48 AM IST

ಮಗುವಿಗೆ ಜನ್ಮ ಕೊಟ್ಟ ಕೋಝಿಕ್ಕೋಡ್‌ನ ತೃತೀಯ ಲಿಂಗಿ ಜಿಯಾ ಪಾವಲ್‌ - ಜಹಾದ್‌ ದಂಪತಿ

  • Trans couple gave birth: ಕೋಝಿಕ್ಕೋಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ತೃತೀಯಲಿಂಗಿ ದಂಪತಿ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗು ʻಲಿಂಗʼವನ್ನು ಅವರು ಬಹಿರಂಗಪಡಿಸಿಲ್ಲ. ಜಹಾದ್‌ ಎಂಬ ಲಿಂಗ ಪರಿವರ್ತಿತ ಪುರುಷ ಈ ರೀತಿ ಗರ್ಭ ಧರಿಸಿ ಜನ್ಮ ನೀಡಿರುವಂಥದ್ದು.

ಮಗುವಿಗೆ ಜನ್ಮ ಕೊಟ್ಟ ಕೋಝಿಕ್ಕೋಡ್‌ನ ತೃತೀಯ ಲಿಂಗಿ ಜಿಯಾ ಪಾವಲ್‌ - ಜಹಾದ್‌ ದಂಪತಿ
ಮಗುವಿಗೆ ಜನ್ಮ ಕೊಟ್ಟ ಕೋಝಿಕ್ಕೋಡ್‌ನ ತೃತೀಯ ಲಿಂಗಿ ಜಿಯಾ ಪಾವಲ್‌ - ಜಹಾದ್‌ ದಂಪತಿ (PTI)

ತಿರುವನಂತಪುರ: ಲಿಂಗಪರಿವರ್ತಿತ ವ್ಯಕ್ತಿಯೊಬ್ಬರು ಮಗುವಿಗೆ ಜನ್ಮ ನೀಡಿದ ವಿರಳ ವಿದ್ಯಮಾನ ಕೇರಳದ ಕೋಝಿಕ್ಕೋಡ್‌ನಿಂದ ವರದಿಯಾಗಿದೆ. ಭಾರತದ ಮಟ್ಟಿಗೆ ಇದು ಮೊದಲನೇಯದು ಎಂದು ವರದಿ ಹೇಳಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್‌ ದೇಶ ಬಿಟ್ಟು ಹೋಗಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರವೇ ಕಾರಣ, ಇಂತವರ ಪರ ಸಹನೆ ಬೇಕಿಲ್ಲ: ಪ್ರಧಾನಿ ಮೋದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

ಕೋಝಿಕ್ಕೋಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ತೃತೀಯಲಿಂಗಿ ದಂಪತಿ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗು ʻಲಿಂಗʼವನ್ನು ಅವರು ಬಹಿರಂಗಪಡಿಸಿಲ್ಲ.

ಜಹಾದ್‌ ಎಂಬ ಲಿಂಗ ಪರಿವರ್ತಿತ ಪುರುಷ ಈ ರೀತಿ ಗರ್ಭ ಧರಿಸಿ ಜನ್ಮ ನೀಡಿರುವಂಥದ್ದು.

"ಇದು ನನ್ನ ಜೀವನದ ಅತ್ಯಂತ ಸಂತೋಷದ ದಿನ. ನನಗೆ ನೋವುಂಟು ಮಾಡುವ ಹಲವಾರು ಸಂದೇಶಗಳು ನನಗೆ ಬಂದಿವೆ. ನಮ್ಮ ಮಗುವಿನ ಜನನವು ಅವರಿಗೆ ನಮ್ಮ ಉತ್ತರವಾಗಿದೆ. ನಮಗೆ ಬೆಂಬಲ ನೀಡಿದ ಎಲ್ಲರಿಗೂ ನಾನು ಧನ್ಯವಾದಗಳು" ಎಂದು ಜಹಾದ್ ಅವರ ಸಂಗಾತಿ ಜಿಯಾ ಪಾವಲ್‌ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದರು.

ಮಗು ಮತ್ತು ಮಗುವಿಗೆ ಜನ್ಮ ನೀಡಿದ ಸಂಗಾತಿ ಜಹಾದ್ ಇಬ್ಬರೂ ಕ್ಷೇಮವಾಗಿದ್ದಾರೆ. ಸರ್ಕಾರಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಸಿಸೇರಿಯನ್‌ ಸೆಕ್ಷನ್‌ ನಡೆಸಿ ಜಹಾದ್‌ನ ಪ್ರಸವ ಮಾಡಿಸಲಾಗಿದೆ. ಬುಧವಾರ ಬೆಳಗ್ಗೆ 9.30ಕ್ಕೆ ಪ್ರಸವವಾಗಿದೆ. ಪ್ರಸವದ ಸಂದರ್ಭದಲ್ಲಿ ಜಹಾದ್‌ನ ಶರೀರದ ಶುಗರ್‌ ಲೆವೆಲ್‌ ತುಸು ಹೆಚ್ಚಾಗಿತ್ತು ಎಂದು ಜಿಯಾ ಹೇಳಿದರು.

ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರು ಮಗುವಿಗೆ ಜನ್ಮ ನೀಡಿದ ಈ ತೃತೀಯ ಲಿಂಗಿ ದಂಪತಿಗೆ ಶುಭ ಕೋರಿದ್ದಾರೆ. ಕೋಝಿಕ್ಕೋಡ್‌ಗೆ ಬಂದಾಗ ಮುಖತಃ ಭೇಟಿಯಾಗುವ ಇಚ್ಛೆಯನ್ನೂ ಸಚಿವರು ವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.

ಕೋಝಿಕ್ಕೋಡ್‌ ಮೆಡಿಕಲ್‌ ಕಾಲೇಜಿನ ಇನ್‌ಸ್ಟಿಟ್ಯೂಟ್‌ ಆಫ್‌ ಮೆಟರ್ನಲ್‌ ಆಂಡ್‌ ಚೈಲ್ಡ್‌ ಹೆಲ್ತ್‌ನ ಸುಪರಿಂಟೆಂಡೆಂಟ್‌ ಜತೆ ಮಾತನಾಡಿದ ಸಚಿವರು, ತೃತೀಯ ಲಿಂಗಿ ದಂಪತಿಗೆ ಎಲ್ಲ ಅಗತ್ಯ ಚಿಕಿತ್ಸೆಗಳನ್ನು ಉಚಿತವಾಗಿ ಒದಗಿಸುವಂತೆ ನಿರ್ದೇಶನ ನೀಡಿದ್ದಾರೆ.

ಸದ್ಯ ಜಹಾದ್‌ ಕೋಝಿಕ್ಕೋಡ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಪ್ರಸವಾನಂತರದ ಚಿಕಿತ್ಸೆಗೆ ಒಳಗಾಗಿದ್ದಾರೆ.

ಗಮನಿಸಬಹುದಾದ ಇತರೆ ಸುದ್ದಿಗಳು

ಕುಟುಂಬ ಕಚೇರಿ ಎಂದರೇನು? ಯಾರಿಗೆ ಉಪಯೋಗ ಮತ್ತು ಇತರೆ ವಿವರ

Wealth management: ಸಿಂಗಾಪುರವು ಕುಟುಂಬ ಕಚೇರಿ ಮಾರುಕಟ್ಟೆಯ ದೊಡ್ಡ ಭಾಗವನ್ನು ಹೊಂದುವಲ್ಲಿ ಯಶಸ್ವಿಯಾಗಿದೆ. ಸಿಂಗಾಪುರದಲ್ಲಿ ಇಂತಹ ಕುಟುಂಬ ಕಚೇರಿಗಳ ಸ್ಥಾಪನೆ ಇತ್ತೀಚೆಗೆ ಹೆಚ್ಚಾಗಿದೆ. ಭಾರತದ ಅನೇಕ ಉದ್ಯಮಿಗಳು, ಸೆಲೆಬ್ರಿಟಿಗಳು ಇಂತಹ ಕುಟುಂಬ ಕಚೇರಿಗಳನ್ನು ಸ್ಥಾಪಿಸಿ, ಸಂಪತ್ತು ನಿರ್ವಹಣೆ ಹೊಣೆಗಾರಿಕೆ ಒಪ್ಪಿಸುತ್ತಿರುವುದು ಹೊಸ ಟ್ರೆಂಡ್‌. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Coin vending machine: ಕ್ಯೂಆರ್‌ ಕೋಡ್‌ ಆಧಾರಿತ ನಾಣ್ಯ ವಿತರಣಾ ಯಂತ್ರ; ಇದರ ಕಾರ್ಯನಿರ್ವಹಣೆ ಹೇಗೆ?

Coin vending machine: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಕ್ಯೂಆರ್ ಕೋಡ್ ಆಧಾರಿತ ನಾಣ್ಯ ವಿತರಣಾ ಯಂತ್ರಗಳನ್ನು ಸ್ಥಾಪಿಸುವ ಪ್ರಾಯೋಗಿಕ ಯೋಜನೆಯನ್ನು ಕೇಂದ್ರೀಯ ಬ್ಯಾಂಕ್ ಪ್ರಾರಂಭಿಸಲಿದೆ ಎಂದು ಬುಧವಾರ ಹೇಳಿದರು. ಈ ನಾಣ್ಯ ವಿತರಣಾ ಯಂತ್ರ ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ನಮಗೆ ತಿಳಿದಿರುವ ವಿವರ.

India No.1: ಹಾಲು ಉತ್ಪಾದನೆಯಲ್ಲಿ ಭಾರತವೇ ಈಗ ನಂ.1; ಲೋಕಸಭೆಗೆ ವಿವರ ನೀಡಿದ ಕೇಂದ್ರ ಸರ್ಕಾರ

ಜಾಗತಿಕ ಹಾಲು ಉತ್ಪಾದನೆಯಲ್ಲಿ ಭಾರತವೇ ಈಗ ನಂಬರ್‌ 1. ಕಳೆದ ಆರ್ಥಿಕ ವರ್ಷ (2021-22)ದಲ್ಲಿ ಒಟ್ಟು ಜಾಗತಿಕ ಹಾಲು ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡ 24 ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ಸಚಿವ ಪುರುಷೋತ್ತಮ ರೂಪಾಲಾ ಲೋಕಸಭೆಗೆ ತಿಳಿಸಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು