logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗೋಧಿ, ಕಡಲೆ, ಸೂರ್ಯಕಾಂತಿ ಸೇರಿ 6 ಹಿಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಅನುಮೋದಿಸಿದ ಕೇಂದ್ರ ಸಚಿವ ಸಂಪುಟ

ಗೋಧಿ, ಕಡಲೆ, ಸೂರ್ಯಕಾಂತಿ ಸೇರಿ 6 ಹಿಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಅನುಮೋದಿಸಿದ ಕೇಂದ್ರ ಸಚಿವ ಸಂಪುಟ

Umesh Kumar S HT Kannada

Oct 17, 2024 07:14 AM IST

google News

ಗೋಧಿ, ಕಡಲೆ, ಸೂರ್ಯಕಾಂತಿ ಸೇರಿ 6 ಹಿಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.

  • ಕೇಂದ್ರ ಸರ್ಕಾರ ರೈತರ ಆದಾಯ ದುಪ್ಪಟ್ಟು ಮಾಡುವ ಉಪಕ್ರಮದ ಭಾಗವಾಗಿ ಹಿಂಗಾರು ಬೆಳೆಗಳಿಗೆ ಪರಿಷ್ಕೃತ ಕನಿಷ್ಠ ಬೆಂಬಲ ಬೆಲೆಯ ಪ್ರಸ್ತಾವನೆಯನ್ನು ಅಂಗೀಕರಿಸಿದೆ. ಗೋಧಿ, ಕಡಲೆ, ಸೂರ್ಯಕಾಂತಿ ಸೇರಿ 6 ಹಿಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಕಳೆದ ವರ್ಷ ಎಷ್ಟಿತ್ತು ಮತ್ತುಇತರೆ ವಿವರ ಈ ವರದಿಯಲ್ಲಿದೆ. 

ಗೋಧಿ, ಕಡಲೆ, ಸೂರ್ಯಕಾಂತಿ ಸೇರಿ 6 ಹಿಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.
ಗೋಧಿ, ಕಡಲೆ, ಸೂರ್ಯಕಾಂತಿ ಸೇರಿ 6 ಹಿಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.

ನವದೆಹಲಿ: ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆ ಈ ಸಂಬಂಧದ ಪ್ರಸ್ತಾವನೆಗೆ ಬುಧವಾರ (ಅಕ್ಟೋಬರ್ 16) ಒಪ್ಪಿಗೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್‌ ಸಮಿತಿ ಸಭೆಯಲ್ಲಿ ಈ ಪ್ರಸ್ತಾವನೆಯ ಪರಿಶೀಲನೆ ಮತ್ತು ಚರ್ಚೆ ನಡೆದಿತ್ತು. ಪ್ರಸ್ತಾವನೆಯಲ್ಲಿ ರಬಿ ಬೆಳೆ ಅಥವಾ ಹಿಂಗಾರು ಬೆಳೆಗಳಾದ ಗೋಧಿ, ಬಾರ್ಲಿ, ಕಡಲೆ, ಮಸೂರ್, ಸಾಸಿವೆ ಮತ್ತು ಕುಸುಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ದರಗಳನ್ನು ಅನುಮೋದಿಸಲಾಗಿದೆ. ಕೇಂದ್ರ ಸಚಿವ ಸಂಪುಟದ ಈ ನಿರ್ಧಾರ, ಸದ್ಯದಲ್ಲೇ ನಡೆಯಲಿರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.

ಆರು ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)

ಕೇಂದ್ರ ಸಚಿವ ಸಂಪುಟ 2025-26ನೇ ಸಾಲಿಗೆ ಅನ್ವಯವಾಗುವಂತೆ ಹಿಂಗಾರು ಬೆಳೆಗಳಿಗೆ ಹೊಸ ಬೆಂಬಲ ಬೆಲೆಯನ್ನು ಪ್ರಕಟಿಸಿರುವಂಥದ್ದು. ಈ ಪ್ರಸ್ತಾವನೆಯಂತೆ, ಸಾಸಿವೆಗೆ ಪ್ರತಿ ಕ್ವಿಂಟಾಲ್‌ಗೆ 300 ರೂಪಾಯಿ, ಮಸೂರ್‌ ಬೇಳೆಗೆ ಪ್ರತಿ ಕ್ವಿಂಟಲ್‌ಗೆ 275 ರೂಪಾಯಿ, ಉದ್ದಿನಬೇಳೆಗೆ ಕ್ವಿಂಟಲ್ ಗೆ 210 ರೂಪಾಯಿ, ಗೋಧಿಗೆ 150 ರೂಪಾಯಿ, ಕುಸುಬೆಗೆ 140 ರೂಪಾಯಿ, ಬಾರ್ಲಿ ಕ್ವಿಂಟಾಲ್‌ಗೆ 130 ರೂಪಾಯಿ ಏರಿಕೆಯಾಗಿದೆ. ರೈತರ ಬೆಳೆಗಳಿಗೆ ಖರ್ಚಿಗಿಂತ ಒಂದೂವರೆ ಪಟ್ಟು ಹೆಚ್ಚು ಎಂಎಸ್‌ಪಿ ನೀಡಬೇಕು ಎನ್ನುವ ನೀತಿಯಂತೆ ದರ ನಿಗದಿಯಾಗಿದೆ.

ಹಿಂಗಾರು ಬೆಳೆಹೊಸ ಎಂಎಸ್‌ಪಿ ಕ್ವಿಂಟಾಲ್‌ಗೆ (ರೂ)ಕಳೆದ ವರ್ಷದ ಎಂಎಸ್‌ಪಿ ಕ್ವಿಂಟಾಲ್‌ಗೆ (ರೂಪಾಯಿ)
ಗೋಧಿ24252275
ಸಾಸಿವೆ59505650
ಕುಸುಬಿ59405800
ಮಸೂರ್‌67006425
ಕಡಲೆ56505440
ಬಾರ್ಲಿ19801850

ರೈತರ ಆದಾಯ ಹೆಚ್ಚಳದ ಉಪಕ್ರಮ

ಕೃಷಿಕರ ಆದಾಯ ಹೆಚ್ಚಳ ಮಾಡುವ ಉಪ್ರಕಮದ ಭಾಗವಾಗಿ ಹಿಂಗಾರು ಹಂಗಾಮಿನಲ್ಲಿ ರೈತರ ಆದಾಯವನ್ನು ಹೆಚ್ಚಳ ಮಾಡುವುದಕ್ಕಾಗಿ ಈ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಉತ್ತರ ಮತ್ತು ಮಧ್ಯ ಭಾರತದ ಬಹುಭಾಗಗಳಲ್ಲಿ ಗೋಧಿ ಮುಖ್ಯ ಬೆಳೆಯಾಗಿದೆ. ಮಾರುಕಟ್ಟೆಯ ಬೆಲೆ ಅಸ್ಥಿರ ಸನ್ನಿವೇಶವನ್ನು ನಿಯಂತ್ರಿಸುವಲ್ಲಿ ಮತ್ತು ಕೃಷಿಕರಿಗೆ ಉತ್ತಮ ಬೆಲೆ ಒದಗಿಸುವಲ್ಲಿ ಕನಿಷ್ಠ ಬೆಂಬಲ ಬೆಲೆ ಹೆಚ್ಚು ಸಹಕಾರಿ. ಗೋಧಿಯ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ 150 ರೂ. ಹೆಚ್ಚಳ ಮಾಡಿದ್ದರಿಂದಾಗಿ ಹೊಸ ಬೆಲೆ 2425 ರೂಪಾಯಿ ಆಗಿದೆ ಎಂದು ಸರ್ಕಾರದ ಮೂಲಗಳು ವಿವರಿಸಿವೆ.

ಸಾಸಿವೆ ಬೆಲೆಯನ್ನು ಕ್ವಿಂಟಲ್‌ಗೆ 300 ರೂ. ಏರಿಸಲಾಗಿದ್ದು, ಇದರ ಬೆಲೆ 5650 ರೂ.ನಿಂದ 5950 ರೂ.ಗೆ ಏರಿಕೆಯಾಗಿದೆ. ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಸಿವೆ ಬೆಳೆಯಲಾಗುತ್ತದೆ. ಕಡೆಲೆ ಕಾಳಿನ ಬೆಂಬಲ ಬೆಲೆಯನ್ನು 210 ರೂ. ಹೆಚ್ಚಿಸಲಾಗಿದ್ದು, ಪ್ರತಿ ಕ್ವಿಂಟಲ್ ಬೆಲೆ 5650 ರೂಪಾಯಿಗೆ ಏರಿದೆ. ಸೂರ್ಯಕಾಂತಿ ಬೆಲೆಯನ್ನು 140 ರೂ. ಹೆಚ್ಚಿಸಲಾಗಿದ್ದು, ಇದರ ಬೆಲೆ 5940ಕ್ಕೇರಿದೆ. ಬಾರ್ಲಿ ಬೆಲೆಯನ್ನು 130 ರೂ. ಹೆಚ್ಚಳ ಮಾಡಲಾಗಿದೆ. ತನ್ಮೂಲಕ ಇದಕ್ಕೆ ಪ್ರತಿ ಕ್ವಿಂಟಲ್‌ಗೆ 1850 ರೂ. ದೊರೆಯಲಿದೆ. ಕಡಲೆ ಬೇಳೆಯ ಬೆಂಬಲ ಬೆಲೆಯನ್ನು 210 ರೂ. ಹೆಚ್ಚಿಸಲಾಗಿದ್ದು ಪ್ರತಿ ಕ್ವಿಂಟಲ್ ಬೆಲೆ 5650 ರೂಪಾಯಿಗೇರಿದೆ.

ಪಿಎಂ ಅನ್ನದಾತ ಯೋಜನೆಗೆ 35 ಸಾವಿರ ಕೋಟಿ ರೂ.

ರೈತರಿಗೆ ಲಾಭ ಒದಗಿಸುವುದರೊಂದಿಗೆ ಮಾರುಕಟ್ಟೆ ದರವನ್ನು ನಿಯಂತ್ರಿಸುವ ಪ್ರಧಾನಮಂತ್ರಿ ಅನ್ನದಾತ ಅಯಾ ಸಂರಕ್ಷಣಾ ಅಭಿಯಾನ ಯೋಜನೆಗೆ 35000 ಕೋಟಿ ರೂಪಾಯಿ ಒದಗಿಸುವ ಪಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸುಗ್ಗಿ ಸಂದರ್ಭದಲ್ಲಿ ಬೆಲೆ ಕುಸಿತದಿಂದ ರೈತರು ನಷ್ಟಕ್ಕೀಡಾಗುವುದು ಇದರಿಂದ ತಪ್ಪಲಿದೆ ಎಂದು ಕೇ೦ದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ