logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Us Election 2024: ಅಮೆರಿಕಾ ಅಧ್ಯಕ್ಷೀಯ ಚುನಾವಣೆ; ಯಾರಿಗೆ ಸಿಕ್ಕಿದೆ ಆರಂಭಿಕ ಮುನ್ನಡೆ, ಸದ್ಯದ ಟ್ರೆಂಡ್‌ ಹೇಗಿದೆ

US Election 2024: ಅಮೆರಿಕಾ ಅಧ್ಯಕ್ಷೀಯ ಚುನಾವಣೆ; ಯಾರಿಗೆ ಸಿಕ್ಕಿದೆ ಆರಂಭಿಕ ಮುನ್ನಡೆ, ಸದ್ಯದ ಟ್ರೆಂಡ್‌ ಹೇಗಿದೆ

Umesha Bhatta P H HT Kannada

Nov 06, 2024 04:45 PM IST

google News

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು. ಡೊನಾಲ್ಡ್‌ ಟ್ರಂಪ್‌ ಆರಂಭಿಕ ಮುನ್ನಡೆಯನ್ನು ಕಮಲಾ ಹ್ಯಾರಿಸ್‌ ಎದುರು ಪಡೆದುಕೊಂಡಿದ್ದಾರೆ.

    • us election 2024: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಈಗಾಗಲೇ ಶುರುವಾಗಿದೆ. ಒಟ್ಟು 538 ಎಲೆಕ್ಟ್ರೋಲ್‌ ಸ್ಥಾನಗಳಿಗೆ ಮತ ಎಣಿಕೆ ನಡಯಲಿದ್ದು 270 ಎಲೆಕ್ಟ್ರೋಲ್ ಮತ ಪಡೆದವರು ಗೆಲುವು ಸಾಧಿಸಲಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು. ಡೊನಾಲ್ಡ್‌ ಟ್ರಂಪ್‌ ಆರಂಭಿಕ ಮುನ್ನಡೆಯನ್ನು ಕಮಲಾ ಹ್ಯಾರಿಸ್‌ ಎದುರು ಪಡೆದುಕೊಂಡಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು. ಡೊನಾಲ್ಡ್‌ ಟ್ರಂಪ್‌ ಆರಂಭಿಕ ಮುನ್ನಡೆಯನ್ನು ಕಮಲಾ ಹ್ಯಾರಿಸ್‌ ಎದುರು ಪಡೆದುಕೊಂಡಿದ್ದಾರೆ.

us election 2024: ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ 2024ರ ಮತ ಎಣಿಕೆ ಚಟುವಟಿಕೆ ಬುಧವಾರ ಬೆಳಿಗ್ಗೆಯಿಂದಲೇ ಚುರುಕುಗೊಂಡಿದೆ. ಆರಂಭಿಕ ಹಂತದಲ್ಲಿ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಮುನ್ನಡೆ ಸಾಧಿಸಿದ್ದಾರೆ. ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯೂ ಆಗಿರುವ ಭಾರತೀಯ ಹಿನ್ನೆಲೆಯ ಕಮಲಾ ಹ್ಯಾರಿಸ್‌ ಹಿನ್ನಡೆಯಲ್ಲಿದ್ಧಾರೆ. ಟ್ರಂಪ್‌ 9 ರಾಜ್ಯಗಳಲ್ಲಿ ಹಾಗೂ ಕಮಲಾ ಹ್ಯಾರಿಸ್‌ ಅವರು 5 ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಬುಧವಾರ ರಾತ್ರಿವರೆಗೂ ಮುಂದುವರಿಯಲಿದೆ. ಮುಂದಿನ ನಾಲ್ಕು ವರ್ಷದ ಅವಧಿಗೆ ಅಮೆರಿಕಾದ ಪ್ರತಿಷ್ಠಿತ ಶ್ವೇತಭವನವನ್ನು ಯಾರು ಅಲಂಕರಿಸಲಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ಸಂಜೆ ಹೊತ್ತಿಗೆ ಸಿಗಬಹುದು.

ಹೇಗಿದೆ ಮತ ಎಣಿಕೆ ಕಾರ್ಯ

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಎರಡು ತಿಂಗಳಿನಿಂದಲೂ ವಿವಿಧ ಭಾಗಗಳಲ್ಲಿ ಮತದಾನ ನಡೆದಿದೆ. ಅದರ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಡೊನಾಲ್ಡ್‌ ಟ್ರಂಪ್‌ ಅವರೇ ಸತತ ಮುನ್ನಡೆಯನ್ನು ಕಾಯ್ದುಕೊಂಡಿದ್ದರೆ, ಕಮಲಾ ಹ್ಯಾರಿಸ್‌ ಆರಂಭಿಕ ಹಿನ್ನಡೆ ಅನುಭವಿಸಿದ್ದಾರೆ. ಅಮೆರಿಕಾದಲ್ಲಿ ಒಟ್ಟು 538 ಎಲೆಕ್ಟ್ರೋಲ್‌ ಸ್ಥಾನಗಳಿಗೆ ಮತ ಎಣಿಕೆ ನಡೆಯಲಿದ್ದು, ಇದರಲ್ಲಿ 270 ಸಂಖ್ಯೆ ತಲುಪಿದವರು ಗೆದ್ದಂತೆ. ಸದ್ಯದ ಮಾಹಿತಿ ಪ್ರಕಾರ ಟ್ರಂಪ್‌ 230 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡರೆ, ಕಮಲಾ ಹ್ಯಾರಿಸ್‌ ಅವರಿಗೆ 187 ಸ್ಥಾನಗಳಲ್ಲಿ ಮುನ್ನಡೆಯಿದೆ.

ಟ್ರಂಪ್‌ ನಿರಂತರ ಮುನ್ನಡೆ

ಆರಂಭದಿಂದಲೂ ಟ್ರಂಪ್‌ ಅವರೇ ಮುನ್ನಡೆಯನ್ನು ಕಾಯ್ದುಕೊಂಡು ಬಂದಿದ್ದು, ಅದೇ ಟ್ರೆಂಡ್‌ ಮುಂದುವರಿದಿದೆ. ಬೆಳಿಗ್ಗೆ ಟ್ರೆಂಡ್ ಪ್ರಕಾರ ಟ್ರಂಪ್ 177 ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದರೆ, ಹ್ಯಾರಿಸ್ 99 ಮತಗಳನ್ನು ಪಡೆದಿದ್ದರು. ಈ ಅಂತರ ಕಡಿಮೆಯಾಗಿದ್ದರೂ ಟ್ರಂಪ್‌ ಸದ್ಯ ಮುನ್ನಡೆಯಲಿದ್ದಾರೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಪ್ರಮುಖ ರಾಜ್ಯಗಳನ್ನು ಅಂದು ಅಲ್ಲಿ ಸ್ವಿಂಗ್‌ ರಾಜ್ಯಗಳು ಎಂದು ಕರೆಯಲಾಗುತ್ತದೆ. ಸ್ವಿಂಗ್ ರಾಜ್ಯಗಳು ಅಲ್ಲಿನ ಚುನಾವಣೆಯಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ರಾಜ್ಯಗಳು ಡೆಮೋಕ್ರಾಟ್ ಮತ್ತು ರಿಪಬ್ಲಿಕನ್ ಎರಡಕ್ಕೂ ಸರಿಸುಮಾರು ಸಮಾನ ಮಟ್ಟದ ಬೆಂಬಲವನ್ನು ಹೊಂದಿವೆ. ಈ ಚುನಾವಣೆಯಲ್ಲಿ ಸ್ವಿಂಗ್ ರಾಜ್ಯಗಳ ಪಟ್ಟಿಯಲ್ಲಿ ಪೆನ್ಸಿಲ್ವೇನಿಯಾ, 19 ಎಲೆಕ್ಟೋರಲ್ ಕಾಲೇಜು ಮತಗಳನ್ನು ಹೊಂದಿದ್ದರೆ, ಮಿಚಿಗನ್ (10), ಜಾರ್ಜಿಯಾ (16), ವಿಸ್ಕಾನ್ಸಿನ್ (10), ಉತ್ತರ ಕೆರೊಲಿನಾ (16), ನೆವಾಡಾ (6) ಮತ್ತು ಅರಿಜೋನಾ (11) ಮತ ಹೊಂದಿವೆ.

ಅಲ್ಲಿ ಮತದಾನ ಹೇಗೆ

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಜಗತ್ತಿನಲ್ಲಿ ಮಹತ್ವವನ್ನು ಪಡೆದಿದೆ. ಭಾರತದಲ್ಲಿ ಲೋಕಸಭೆಗಳ ಫಲಿತಾಂಶವೇ ಪ್ರಮುಖ. ಅಮೆರಿಕಾದಲ್ಲಿ ಆಯಾ ರಾಜ್ಯಗಳ ಎಲೆಕ್ಟ್ರೋಲ್‌ ವೋಟ್‌ ಮುಖ್ಯ.

ಭಾರತದಲ್ಲಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ, ಕರ್ನಾಟಕದಲ್ಲಿ ಯಾವ ಪಕ್ಷ ಗೆಲ್ಲುತ್ತದೆಮ ಹೆಚ್ಚು ಸ್ಥಾನ ಪಡೆಯಲಿದೆ ಎನ್ನುವುದನ್ನು ಇಡೀ ಚುನಾವಣೆ ಫಲಿತಾಂಶ ನಿರ್ಧಾರ ಮಾಡುತ್ತದೆ. ಹಾಗೆ ಅಮೇರಿಕಾದಲ್ಲಿ ಸ್ವಿಂಗ್ ಸ್ಟೇಟ್ಸ್ ಎಂದು ಕೆಲವು ರಾಜ್ಯಗಳನ್ನು ಗುರುತಿಸಲಾಗಿದೆ. ಅಲ್ಲಿ ಹೆಚ್ಚು ಮತ ಪಡೆದವರು ಗೆಲುವಿನ ದಡ ತಲುಪುತ್ತಾರೆ.

ಒಟ್ಟಾರೆಯಾಗಿ ಅಮೆರಿಕಾ ಅಧ್ಯಕ್ಷರಾಗಲು ಒಟ್ಟು 270 ಎಲೆಕ್ಟ್ರೋಲ್ ಮತಗಳ ಅವಶ್ಯಕತೆ ಇದೆ. ಅಷ್ಟು ಸಿಕ್ಕರೆ ಸಾಕು. ಯಾವ ರಾಜ್ಯ ಯಾರು ಗೆದ್ದರು, ಎಷ್ಟು ಅಂತರದಲ್ಲಿ ಗೆದ್ದರು ಎನ್ನುವುದು ಇಲ್ಲಿ ಮಾನ್ಯತೆ ಪಡೆಯುವುದಿಲ್ಲ. ಒಂದು ದೇಶವಾಗಿ ಇಲ್ಲಿ ಚುನಾವಣೆ ನಡೆಯುವುದು ವಿಶೇಷ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ