ಅಮೆರಿಕ ಚುನಾವಣೆಗೆ ಅಮೆರಿಕನ್ನರು ಮತ ಹೇಗೆ ಚಲಾಯಿಸ್ತಾರೆ, ಮತಗಟ್ಟೆ ಚಿತ್ರಣ ಹೇಗಿದೆ- ಇಲ್ಲಿದೆ ಚಿತ್ರನೋಟ
ಭಾರತದ ಚುನಾವಣೆ ವ್ಯವಸ್ಥೆ ನೋಡಿದ್ದೇವೆ. ಮತಗಟ್ಟೆ, ಇವಿಎಂನಲ್ಲಿ ಮತಚಲಾವಣೆ ಇತ್ತು. ಆದರೆ ಅಮೆರಿಕದಲ್ಲಿ ಹಾಗಲ್ಲ. ಭಾರತದ ಹಳೆಯ ಮತದಾನ ಪದ್ಧತಿಯಂತೆ ಅಲ್ಲಿ ಇನ್ನೂ ಮತಪೆಟ್ಟಿಗೆ, ಮತಪತ್ರವನ್ನೇ ಬಳಸಲಾಗುತ್ತಿದೆ. ಅಮೆರಿಕ ಚುನಾವಣೆಗೆ ಅಮೆರಿಕನ್ನರು ಮತ ಹೇಗೆ ಚಲಾಯಿಸ್ತಾರೆ ಎಂಬ ಕುತೂಹಲ ತಣಿಸುವಂತೆ ಮತಗಟ್ಟೆಯ ಚಿತ್ರಣ ಹೀಗಿದೆ ನೋಡಿ- ಚಿತ್ರನೋಟ.
(1 / 12)
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಇಂದು (ನವೆಂಬರ್ 5 ) ಅಲ್ಲಿನ ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ಶುರುವಾಗಿದೆ. ಪೆನ್ಸಿಲ್ವೇನಿಯಾದ ಐರ್ ಎಂಬಲ್ಲಿನ ಚರ್ಚ್ ಒಂದರ ಬಳಿ ಮತದಾನ ದಿನ ಎಂಬುದನ್ನು ಬಿಂಬಿಸುವ ಇಲೆಕ್ಟ್ರಾನಿಕ್ ಸೈನ್ ಬೋರ್ಡ್ ಕಂಡು ಬಂದುದು ಹೀಗೆ.(REUTERS)
(3 / 12)
ಉತ್ತರ ಕಾರ್ಲೋನಿಯಾದ ರಾಲೇಘ್‌ನ ಚಾವಿಸ್ ಕಮ್ಯೂನಿಟಿ ಸೆಂಟರ್‌ನಲ್ಲಿ ಚುನಾವಣಾ ಸಿದ್ಧತೆಯಲ್ಲಿರುವ ಸಿಬ್ಬಂದಿ.(REUTERS)
(4 / 12)
ಉತ್ತರ ಕಾರ್ಲೋನಿಯಾದ ಆಶ್ವೆಲ್ಲಿ ಎಂಬಲ್ಲಿ ಎಲಿಮೆಂಟರಿ ಸ್ಕೂಲ್‌ನ ಬಾಸ್ಕೆಟ್ ಬಾಲ್ ಕೋರ್ಟ್‌ನಲ್ಲಿದ್ದ ಮತಗಟ್ಟೆಯ ದೃಶ್ಯ. ಶಸ್ತ್ರ ಕೊಂಡೊಯ್ಯಲು ಅವಕಾಶ ಇಲ್ಲ ಎಂಬ ಅಂಶ ಗಮನಸೆಳೆದಿದೆ.(REUTERS)
(5 / 12)
ಓಹಿಯೋದಲ್ಲಿ ಮತಗಟ್ಟೆ ಪ್ರವೇಶಿದಿ ಮತದಾರರು ತಮ್ಮ ಮತದಾನ ಪ್ರಕ್ರಿಯೆಯ ಆರಂಭಿಕ ಹಂತದ ಅಗತ್ಯಗಳನ್ನು ಪೂರೈಸುತ್ತಿದ್ದ ದೃಶ್ಯ,(REUTERS)
(6 / 12)
ಮತದಾನ ನೋಂದಣಿ ಪ್ರಕ್ರಿಯೆ ಕೂಡ ಸ್ಥಳದಲ್ಲೇ ಇತ್ತು. ಹೆಸರು ಬದಲಾವಣೆ ಮತ್ತು ವಿಳಾಸ ಬದಲಾವಣೆ ಕೆಲಸನವನ್ನೂ ಅಲ್ಲೇ ಪೂರೈಸುತ್ತಿದ್ದ ದೃಶ್ಯ ಲೂಯಿಸ್ಟನ್‌ನಲ್ಲಿ ಕಂಡುಬಂತು. (REUTERS)
(7 / 12)
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮಾದರಿ ಮತಪತ್ರದ ಒಂದು ನೋಟ. ಇದು ಮಿಷಿಗನ್‌ನಲ್ಲಿ ಮತದಾರರಿಗೆ ಕೊಟ್ಟಿದ್ದ ಮತಪತ್ರದ ಮಾದರಿ.(REUTERS)
(9 / 12)
ಮತದಾರರು ತಮ್ಮ ಬ್ಯಾಲೆಟ್ ಪತ್ರವನ್ನು ಹಿಡಿದು ಮತದಾನಕ್ಕಾಗಿ ಸರದಿ ನಿಂತ ದೃಶ್ಯ ಲೂಯಿಸ್ಟನ್‌ನಲ್ಲಿ ಕಾಣಸಿಕ್ಕಿತು.(REUTERS)
ಇತರ ಗ್ಯಾಲರಿಗಳು