US Election 2024: ಅಮೆರಿಕದಲ್ಲಿ ಟ್ರಂಪ್ ವಿಜಯ; ಕರ್ನಾಟಕದಲ್ಲಿ ವಾದ, ಸಂವಾದ, ಪ್ರತಿವಾದದ ಪ್ರತಿಧ್ವನಿ -ಜಾಲತಾಣದಲ್ಲಿ ಹೀಗಿದೆ ಸದ್ದು
Nov 06, 2024 06:36 PM IST
ಅಮೆರಿಕದಲ್ಲಿ ಟ್ರಂಪ್ ವಿಜಯ: ಕರ್ನಾಟಕದಲ್ಲಿ ವಾದ, ಸಂವಾದ, ಪ್ರತಿವಾದದ ಪ್ರತಿಧ್ವನಿ
- ಅಮೆರಿಕಾದ 47ನೇ ಅಧ್ಯಕ್ಷರಾಗಿ ಟ್ರಂಪ್ ಪುನರಾಯ್ಕೆಯಾಗುತ್ತಿದ್ದಂತೆ, ಇತ್ತ ಸೋಷಿಯಲ್ ಮೀಡಿಯಾದಲ್ಲಿ ವಾದ, ಸಂವಾದ, ಪ್ರತಿವಾದದ ಪ್ರತಿಧ್ವನಿ ಕೇಳಿಬರುತ್ತಿದೆ. ಹಾಗಾದರೆ ಟ್ರಂಪ್ ಗೆಲುವಿಗೆ ಜನರ ಪ್ರತಿಕ್ರಿಯೆ ಹೇಗಿತ್ತು? ಅಭಿಪ್ರಾಯ, ಅನಿಸಿಕೆಗಳೇನು? ಇಲ್ಲಿದೆ ನೋಡಿ ಆಯ್ದ ಕೆಲ ಫೇಸ್‌ಬುಕ್ ಮತ್ತು ಟ್ವಿಟರ್ ಪೋಸ್ಟ್‌ಗಳು.
US Election 2024: ವಿಶ್ವದ ದೊಡ್ಡಣ್ಣ ಅಮೆರಿಕಾದ ಮತದಾರ ಎದುರು ನೋಡುತ್ತಿದ್ದ ಕುತೂಹಲ ಕೊನೆಗೂ ತಣಿದಿದೆ. ಚುನಾವಣೆ ಗೆಲ್ಲುವ ಮೂಲಕ ಅಮೆರಿಕಾದ 47ನೇ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ಭಾರತೀಯ ಹಿನ್ನೆಲೆಯವರಾದ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಮಣಿಸುವ ಮೂಲಕ ಮತ್ತೊಮ್ಮೆ ಶ್ವೇತ ಭವನ ಪ್ರವೇಶಿಸಿದ್ದಾರೆ. ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ 538 ಎಲೆಕ್ಟ್ರೋಲ್ ಮತಗಳಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ 277 ಮತ ಪಡೆದರೆ, ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ 226 ಸ್ಥಾನಗಳಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ಸುಲಭ ಜಯಕ್ಕೆ ಟ್ರಂಪ್ ಮುತ್ತಿಕ್ಕಿದರು.
ಒಂದು ಸೋಲಿನ ಬಳಿಕ ಮತ್ತೆ ಗೆದ್ದ ಟ್ರಂಪ್‌ಗೆ ಇಡೀ ವಿಶ್ವದ ಗಣ್ಯರು ಶುಭಾಶಯ ಸಂದೇಶ ರವಾನಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಇದೇ ಚುನಾವಣೆ ಮತ್ತು ಫಲಿತಾಂಶದ ಮೇಲೆ ಎಲ್ಲರ ಕಣ್ಣಿತ್ತು. ಟ್ರಂಪ್ ಗೆಲುತ್ತಿದ್ದಂತೆ, ಜಾಲತಾಣದಲ್ಲಿಯೂ ಬಗೆಬಗೆ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. ಅದರಲ್ಲೂ ಟ್ರಂಪ್ ಗೆಲ್ಲುತ್ತಿದ್ದಂತೆ ವಾದ, ಸಂವಾದ, ಪ್ರತಿವಾದದ ಪ್ರತಿಧ್ವನಿ ಕೇಳಿಬರುತ್ತಿದೆ. ಹಾಗಾದರೆ ಈ ಗೆಲುವಿಗೆ ಜನರ ಪ್ರತಿಕ್ರಿಯೆ ಹೇಗಿತ್ತು? ಅಭಿಪ್ರಾಯ, ಅನಿಸಿಕೆಗಳೇನು? ಇಲ್ಲಿದೆ ನೋಡಿ ಆಯ್ದ ಕೆಲ ಫೇಸ್‌ಬುಕ್ ಮತ್ತು ಟ್ವಿಟರ್ ಪೋಸ್ಟ್‌ಗಳು.
ಸೋಷಿಯಲ್ ಮೀಡಿಯಾದಲ್ಲಿ ಟ್ರಂಪ್ ಕಾರ್ಡ್
- ಭಾರತದಲ್ಲಿ ಅರಳಿದ ಕಮಲ ಅಮೇರಿಕಾದಲ್ಲಿ ಅರಳಲಿಲ್ಲ.ಮತ್ತೊಮ್ಮೆ ಟ್ರಂಪ್ ಶಕೆ ಆರಂಭ (ರಂಗಸ್ವಾಮಿ ಮೂಕನಹಳ್ಳಿ)
- ನಾವು ಬೆಂಗಳೂರಿನಲ್ಲಿ, ಎಂಭತ್ತರ ದಶಕದಲ್ಲಿಯೇ ಮಗ, ಮಗ ಅಂಥ ಮಾತಾಡುತ್ತಿದ್ದೆವು. ಆ ಟ್ರಂಪ್ ಅದನ್ನು ಕಾಪಿ ಮಾಡಿ, ಎರಡು ಬಾರಿ ಗೆದ್ದರು ಅಷ್ಟೇ (ಕಿರಣ್ ಕೆಎಸ್)
- 1975-78 ರ ಅವಧಿಯಲ್ಲಿ ನಾವು ಬಿಎ ಪಠ್ಯಕ್ರಮದ ಭಾಗವಾಗಿ ನೂರು ಅಂಕಗಳ "ಅಮೆರಿಕೆಯ ಇತಿಹಾಸ"ಅಭ್ಯಾಸ ಪತ್ರಿಕೆಯನ್ನು ಅಭ್ಯಸಿಸುತ್ತಿದ್ದಾಗ ಪ್ರತಿಪಕ್ಷದ ಕುರಿತು, ತಮ್ಮ ಸರಕಾರದ ನೀತಿಗಳ ಕುರಿತು ಅಲ್ಲಿಯ ಅಧ್ಯಕ್ಷರುಗಳು ಮಾಡುತ್ತಿದ್ದ ಭಾಷಣಗಳಲ್ಲಿರುತ್ತಿದ್ದ ( ವ್ಯಂಗ್ಯ, ಕಟಕಿ ಎನ್ನಲಾಗದ) ನವಿರು ಹಾಸ್ಯಪ್ರಜ್ಞೆಯ ಜಾಣ ಮಾತುಗಳನ್ನು ಮೆಚ್ಚುತ್ತಿದ್ದುದು ನೆನಪಿದೆ. ಈಗ ಅಲ್ಲಿಯ ರಾಜಕಾರಣದ ರಿವಾಜು ಮತ್ತು ಚುನಾವಣಾ ಪ್ರಚಾರಗಳೂ ನಮ್ಮದೇ ದೇಶದ ಇಲೆಕ್ಶನ್ ತಮಾಷಾ ಥರ ಕಾಣುತ್ತಿವೆ. ಇಲೆಕ್ಶನ್ ಪ್ರಕ್ರಿಯೆಯಲ್ಲಿ ಭಾನಗಡಿಯ ಆರೋಪಗಳು, ವೈಯಕ್ತಿಕ ದಾಳಿಗಳು, ಚುನಾವಣೋತ್ತರ ದೊಂಬಿ ಇತ್ಯಾದಿ ಅಮೆರಿಕೆಯ ಪ್ರಜಾಪ್ರಭುತ್ವದ ಹೊಸ ರೂಪವನ್ನು ತೋರುತ್ತಿವೆ. ಟ್ರಂಪೋ ಕಮಲಳೋ ಯಾರು ಬಂದರೂ ಅಮೆರಿಕದ ಜಾಗತಿಕ ಸ್ಟ್ರ್ಯಾಜೆಟಿಕ್ ಹಿತಾಸಕ್ತಿಗಳ ಮೇಲಿನ ಫೋಕಸ್ ಏನೂ ಬದಲಾಗುವದಿಲ್ಕ. ನನಗೆ ಬೈಡನ್ ಟ್ರಂಪ್ ರನ್ನು ಕಂಡರಾಗುವದಿಲ್ಲ. ಕಮಲಾ ಹ್ಯಾರಿಸ್ ಳನ್ನು ಕಂಡರಾಗುತ್ತದೆ. Is she gonna be the first woman President of the US? (ಅಶೋಕ್ ಶೆಟ್ಟಿರ್)
- ಅಮೆರಿಕಾಕ್ಕೆ ಟ್ರಂಪ್ ಕಾರ್ಡ್ (ಪವನಜಾ)
- ಸಣ್ಣ ಅತಿ ಸಣ್ಣ ಮಟ್ಟದ ವಿವೇಚನೆಯನ್ನು ಬಳಸದೆ ಇಸ್ರೇಲ್ ನಡೆಸಿದ ಯುದ್ಧಕ್ಕೆ ಮತ್ತು war crimeಗಳಿಗೆ ಬೈಡನ್ ಕೊಟ್ಟ ಅಪರಿಮಿತ ಬೆಂಬಲವನ್ನು ನೋಡಿದ ಮೇಲೆ Does it really matter ಅನ್ನಿಸಿದ್ದು ಖಂಡಿತಾ ನಿಜ.. ಈ ವಿಷಯದಲ್ಲಿ ನಾನೂ ಚೂರು ಶಿವಸುಂದರ್ ಸಾರ್ ವಾದಿಯಾಗಿಬಿಟ್ಟೆ.. ಸರ್ರು ಹ್ಯಾರಿಸ್ ಆದರೇನು ಟ್ರಂಪ್ ಆದರೇನು ಅಂತ ಇನ್ನೊಂದು ಪದ್ಯ ಬರೀತಾರೆ ಅನ್ಸತ್ತೆ.. (ಗುರುವೇ ಹೆಜ್ಜಾಜಿ)
- ಟ್ರಂಪ್ ಅಂದೇ ಗೆದ್ದಿದ್ದರು.! ಜನ ದೌರ್ಜನ್ಯವನ್ನು ಎಂದಿಗೂ ಸಹಿಸುವುದಿಲ್ಲ. ರೈತರ ಮೇಲಿನ ವಕ್ಫ್ ದೌರ್ಜನ್ಯಕ್ಕೆ ಉಪ ಚುನಾವಣೆಯಲ್ಲಿ ಉತ್ತರ ಕೊಡಲಿದ್ದಾರೆ ನಮ್ಮ ಜನ. (ಮಧುಕುಮಾರ್)
ಇದನ್ನೂ ಓದಿ: ನೀವು ಕೊಟ್ಟ ಪ್ರೀತಿಯನ್ನು ವಾಪಸ್ ನೀಡುತ್ತೇನೆ; ಅಮೆರಿಕನ್ನರಿಗೆ ಡೊನಾಲ್ಡ್ ಟ್ರಂಪ್ ಧನ್ಯವಾದ
- ಸಿದ್ಧಾಂತಗಳು ಪಕ್ಕಕ್ಕಿಟ್ಟು ನೋಡಿದರೆ - ಟ್ರಂಪ್ ಗೆಲುವು ಸ್ಟಾಕ್ ಮಾರುಕಟ್ಟೆಗೆ ಒಳ್ಳೆಯದು. ಮುಂದಿನ 4 ವರ್ಷಗಳು ಮಾರುಕಟ್ಟೆ ಒಳ್ಳೆಯ ಬೆಳವಣಿಗೆ ಕಾಣಬಹುದು ಅನ್ನುವುದು ನನ್ನ ವಯಕ್ತಿಕ ನಂಬಿಕೆ. ಒಂದಷ್ಟು ಯುದ್ಧಗಳಿಗೆ ಕಡಿವಾಣ, ರಕ್ತಪಾತಕ್ಕೆ ಪೋಲಾಗುತ್ತಿರುವ ಹಣದ ಹೊಳೆ ನಿಲ್ಲಬಹುದು. ಎಲ್ಲರಿಗೂ ಒಳ್ಳೆಯದಾಗಲಿ - ಅಮರನಾಥ್ ಶಿವಶಂಕರ್
- ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದಿದ್ದಕ್ಕೆ, ಅತಿಸಾರ ಭೇದಿಯಿಂದ ನರಳುತ್ತಿರುವ ಭಾರತದ ಜೀವ ಪರಪರ ವ್ಯಕ್ತಿಗಳಿಗೆ ಸಾಂತ್ವನದ ನುಡಿ ನಮನಗಳು (ಜಾನ್ ಪಿ)
- ಎಡಪಂಥೀಯರಿಗೆ ಎಳ್ಳು ನೀರು ಬಿಟ್ಟ ಡೊನಾಲ್ಡ್ ಟ್ರಂಪ್ (ಶ್ರೀಕಾಂತ್ ಶೆಟ್ಟಿ)
- ನರೇಂದ್ರ ಮೋದಿ ಅಣ್ಣ ಗುಲಾಮರ ದೊಡ್ಡಪ್ಪ ಜಿಹಾದಿಗಳ ಅಪ್ಪ ಡೊನಾಲ್ಡ್ ಟ್ರಂಪ್ ಮತ್ತೆ ಅಮೇರಿಕಾ ಅಧ್ಯಕ್ಷ